ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಕೇರಳ: ವಧುವಿಗೂ ಮಸೀದಿ ಪ್ರವೇಶಕ್ಕೆ ಅವಕಾಶ

ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಮಸೀದಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಜೊತೆಗೆ ಇತರ ಸಮುದಾಯದ ಮದುವೆಗಳಲ್ಲಿ ಇರುವಂತೆ ಮುಸ್ಲಿಂ ಸಮುದಾಯದಲ್ಲಿ ಮದುವೆ ದಿನ ಹೆಣ್ಣು ಗಂಡಿನ ಜೊತೆ ನಿಂತು ಅತಿಥಿ ಸತ್ಕಾರ ಸ್ವೀಕರಿಸುವ ಅವಕಾಶವಿಲ್ಲ. ಆದರೆ ಈ ಸಂಪ್ರದಾಯಕ್ಕೆ ಈಗ ಕೇರಳದ ಮುಸ್ಲಿಂ ಕುಟುಂಬವೊಂದು ಬ್ರೇಕ್ ಹಾಕಿದೆ.

Bride presence inside mosque in her wedding kerala sets new trend in muslim marriage rituals akb

ಸಾಮಾನ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಮಸೀದಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಜೊತೆಗೆ ಇತರ ಸಮುದಾಯದ ಮದುವೆಗಳಲ್ಲಿ ಇರುವಂತೆ ಮುಸ್ಲಿಂ ಸಮುದಾಯದಲ್ಲಿ ಮದುವೆ ದಿನ ಹೆಣ್ಣು ಗಂಡಿನ ಜೊತೆ ನಿಂತು ಅತಿಥಿ ಸತ್ಕಾರ ಸ್ವೀಕರಿಸುವ ಅವಕಾಶವಿಲ್ಲ. ಆದರೆ ಈ ಸಂಪ್ರದಾಯಕ್ಕೆ ಈಗ ಕೇರಳದ ಮುಸ್ಲಿಂ ಕುಟುಂಬವೊಂದು ಬ್ರೇಕ್ ಹಾಕಿದೆ. ಜೊತೆಗೆ ಇದಕ್ಕೆ ಮುಸ್ಲಿಂ ಧರ್ಮಗುರುಗಳ ಅನುಮತಿಯೂ ಸಿಕ್ಕಿದೆ.

ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಮದುವೆಗಳಲ್ಲಿ ಮದುವೆ ಸಮಾರಂಭದಲ್ಲಿ ಹೆಣ್ಣು ಭಾಗವಹಿಸುವುದಿಲ್ಲ. ಭಾಗವಹಿಸುವುದಕ್ಕೆ ಅವಕಾಶವೂ ಇಲ್ಲ. ಇದೊಂದು ವಧುವಿನ ತಂದೆ ಹಾಗೂ ವರನ ನಡುವಿನ ಒಪ್ಪಂದವಾಗಿರುತ್ತದೆ. ಆದಾಗ್ಯೂ ಕೇರಳದ ಪರಕಡವು ನಿವಾಸಿಯಾದ ಕೆ.ಎಸ್‌. ಉಮ್ಮರ್ ತಮ್ಮ ಮಗಳ ಮದುವೆಯಲ್ಲಿ ಈ ಸಂಪ್ರದಾಯವನ್ನು ಮುರಿಯಲು ಸಿದ್ದರಾದರು. ಸಮುದಾಯದ ಪ್ರಗತಿ, ಮುಸ್ಲಿಂ ಸ್ತ್ರೀಯರ ಸ್ಥಾನಮಾನದ ಉನ್ನತಿಗಾಗಿ ವಿಭಿನ್ನವಾಗಿ ಯೋಚಿಸಿದರು. ಗಂಡು ಹಾಗೂ ನಮ್ಮ ಈ ಎರಡೂ ಕುಟುಂಬಗಳು ನನ್ನ ಪುತ್ರಿ ಬಹಜಾ ತನ್ನ ಮದುವೆಯ ಸಮಾರಂಭವನ್ನು ನೋಡಬೇಕು ಎಂದು ಬಯಸಿದರು. ಆಕೆಯ ಸಮ್ಮುಖದಲ್ಲೇ ನಮ್ಮ ಜೊತೆಯೇ ಮಸೀದಿಯಲ್ಲಿ ಆಕೆಯ ವಿವಾಹ ನಡೆಯಬೇಕು ಎಂದು ಬಯಸಿದ್ದೆವು ಎಂದು ವಧು ಬಹಜಾ ತಂದೆ ಉಮ್ಮರ್ ಹೇಳಿದರು.

ವಯೋಮಿತಿ ಏರಿಕೆ ಭೀತಿ: ತುರ್ತು ಮದುವೆಗೆ ಮುಗಿಬಿದ್ದ ಮುಸ್ಲಿಮರು!

ಇಸ್ಲಾಂನಲ್ಲಿ ಇಲ್ಲದ ಕೆಲವು ಸಂಪ್ರದಾಯಗಳ ಆಚರಣೆಯನ್ನು ಬಿಡುವುದಕ್ಕೆ ಇದು ಒಳ್ಳೆಯ ಸಮಯ, ನನ್ನ ಪುತ್ರಿ ಸೇರಿದಂತೆ ಸಮುದಾಯದ ಎಲ್ಲಾ ವಧುಗಳು ತಮ್ಮ ಮದುವೆಯನ್ನು ನೋಡುವ ಅದಕ್ಕೆ ಸಾಕ್ಷಿಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಉಮ್ಮರ್ ಹೇಳಿದರು. ಹೀಗಾಗಿ ಮಹಿಳೆಗೂ ತನ್ನ ಮದುವೆ ನೋಡುವ ಅವಕಾಶ ನೀಡಬೇಕು ಎಂಬ ಬಗ್ಗೆ ಯೋಚನೆ ಮಾಡಿದ ನಾವು ಮಸೀದಿ ಸಮಿತಿಯೊಂದಿಗೆ ಈ ಬಗ್ಗೆ ಚರ್ಚಿಸಿದೆವು. ಅವರು ನಮ್ಮ ಮನವಿಯನ್ನು ಒಪ್ಪಿಕೊಂಡು ವಿಭಿನ್ನವಾಗಿ ಯೋಚಿಸಿದ್ದಕ್ಕೆ ನಮಗೆ ಅಭಿನಂದನೆ ಸಲ್ಲಿಸಿದರು ಎಂದು ಉಮ್ಮರ್ ಹೇಳಿದರು. 

ಪರಕಡವಿನಲ್ಲಿ ಕಳೆದ ವಾರ ನಡೆದ ಮದುವೆಯೊಂದರಲ್ಲೂ ವಧು ತಮ್ಮ ಮದುವೆಗೆ ಸಾಕ್ಷಿಯಾಗಿದ್ದರು. ಆದರೆ ಮದುವೆ ಮಸೀದಿಯ ಆವರಣದಲ್ಲಿ ನಡೆದಿತ್ತು. ಮಸೀದಿಯ ಒಳಗೆ ನಡೆದಿರಲಿಲ್ಲ. ಹೀಗಾಗಿ ಬಹಜಾ ಅವರ ವಿವಾಹವೂ ಮಸೀದಿಯೊಳಗೆ ವಧುವಿನ ಉಪಸ್ಥಿತಿಯಲ್ಲಿ ನಡೆದ ಮೊದಲ ಮದುವೆಯಾಗಿದೆ. ಇಲ್ಲಿ ವಧು ತನ್ನ ಮದುವೆಗೆ ಸಾಕ್ಷಿಯಾಗಿದ್ದರು ಎಂದು ಉಮ್ಮರ್ ಹೇಳಿದರು.

Marriage Age Law : ಮಧ್ಯಪ್ರದೇಶದಲ್ಲಿ ಮುಸ್ಲಿಂ ಮದುವೆ ಪ್ರಮಾಣ ಶೇ. 700ರಷ್ಟು ಏರಿಕೆ!

ಈ ಬಗ್ಗೆ ಮಾತನಾಡಿದ ಮಸೀದಿ ಕಮಿಟಿ ಕಾರ್ಯದರ್ಶಿ, ಇ.ಜೆ ನಿಯಾಸ್‌, ಕುಟುಂಬವೊಂದು ಬಂದು ವಧುವನ್ನು ಕೂಡ ಮದುವೆಗೆ ಸಾಕ್ಷಿಯಾಗಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಾಗ ಕಮಿಟಿ ಸದಸ್ಯರಲ್ಲಿ ಯಾವುದೇ ವಿಭಿನ್ನ ಅಭಿಪ್ರಾಯವಿರಲಿಲ್ಲ. ಎಲ್ಲರೂ ಒಕ್ಕೊರಲಿನಿಂದ ಇದಕ್ಕೆ ಒಪ್ಪಿಗೆ ಸೂಚಿಸಿದರು. ಭವಿಷ್ಯದಲ್ಲಿಯೂ ಕುಟುಂಬಗಳು ಬಯಸಿದಲ್ಲಿ, ನಾವು ಮದುವೆಯಾಗಲಿರುವ ಹೆಣ್ಣು ಮಕ್ಕಳಿಗೆ ಮಸೀದಿಯೊಳಗೆ ತಮ್ಮ ಮದುವೆಯಲ್ಲಿ ಭಾಗಿಯಾಗಲು ಅವಕಾಶ ನೀಡುತ್ತೇವೆ ಎಂದರು.

ಆದರೆ ಸುಧಾರಣಾವಾದಿ, ಮುಸ್ಲಿಂ ಸ್ಕಾಲರ್ ಸಿ.ಹೆಚ್‌. ಮುಸ್ತಫಾ ಮೌಲವಿ, ಹೇಳುವಂತೆ ಕಳೆದ ಒಂದು ವರ್ಷದಿಂದಲೂ ಮಲಬಾರ್ ಭಾಗದಲ್ಲಿ ಇಂತಹ ಮದುವೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು. ನಾನು ಹೀಗೆ ವಧು ಹಾಗೂ ಕುಟುಂಬದ ಇತರ ಹೆಣ್ಣು ಮಕ್ಕಳ ಸಮ್ಮುಖದಲ್ಲಿ ಮದುವೆ ಮಾಡಲು ಮುಂದಾದ ಆರಂಭದಲ್ಲಿ ಇದಕ್ಕೆ ಜನ ವಿರೋಧ ವ್ಯಕ್ತಪಡಿಸಿದ್ದರು ಎಂದು ಮೌಲವಿ ಹೇಳಿದರು. 

ಇದಕ್ಕೆ ಓರ್ವ ಮುಸ್ಲಿಂ ಧರ್ಮ ಪ್ರಚಾರಕ, ವಿವಾಹದ ವ್ಯಭಿಚಾರ ಎಂದು ಕರೆದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ ನಂತರ ಮುಸ್ಲಿಂ ಧರ್ಮ ಪ್ರಚಾರಕ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದರು ಎಂದು ಮೌಲವಿ ಹೇಳಿದರು. ಇಂತಹ ಆಚರಣೆಗಳ ವಿರುದ್ಧ ಸಮುದಾಯದ ಕೆಲ ಹೆಣ್ಣುಮಕ್ಕಳು ಮುಂದೆ ಬಂದಿರುವುದರಿಂದ ಬದಲಾವಣೆಗಳಾಗಿವೆ. ಆದರೆ, ಬಹುಸಂಖ್ಯೆಯ ಮುಸ್ಲಿಮರ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
 

Latest Videos
Follow Us:
Download App:
  • android
  • ios