ದ್ಧಾಪ್ಯದ ಕೊನೆಯವರೆಗೂ ಖುಷಿ ಖುಷಿಯಾಗಿ ಇರುವ ಜೋಡಿಗಳು ನಮ್ಮ ಸಮಾಜದಲ್ಲಿ ತುಂಬಾ ವಿರಳ. ಹೀಗಾಗಿಯೇ ವೃದ್ಧ ದಂಪತಿ ಜೊತೆಯಾಗಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದು ಹೇಳಿ ಕೇಳಿ ನಿಜವಾದ ಪ್ರೀತಿಯನ್ನು ಹುಡುಕುವುದು ಒಂದು ದೊಡ್ಡ ಸಾಹಸವೆಂದು ಹೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರೀತಿಯ ಹೆಸರಲ್ಲಿ ನೂರೆಂಟು ಮೋಸ ವಂಚನೆಗಳು ನಡೆಯುವ ಈ ಕಾಲದಲ್ಲಿ ಒಂದು ಸುಂದರ ದಾಂಪತ್ಯಕ್ಕೆ ಸಾಕ್ಷಿ ಎಂಬಂತಿರುವ ವೃದ್ಧ ಜೋಡಿಯ ಫೋಟೋ ವೈರಲ್ ಆಗಿದೆ. ಯೌವ್ವನದಲ್ಲಿ ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಜೊತೆ ಜೊತೆ ಇರುವುದು. ಕಷ್ಟ ಸುಖಕ್ಕೆ ಜೊತೆಯಾಗಿ ಇರುವುದ ದೊಡ್ಡ ವಿಷಯವಲ್ಲ. ಆದರೆ ವೃದ್ಧಾಪ್ಯದಲ್ಲೂ ಕೂಡ ಇದೇ ಪ್ರೀತಿ ಇದೇ ಹೊಂದಾಣಿಕೆ ಇದ್ದರೆ ಅದಕ್ಕಿಂತ ದೊಡ್ಡ ಖುಷಿಯ ವಿಚಾರ ಮತ್ತೊಂದಿಲ್ಲ. 

ಇಂದಿನ ಕಾಲದಲ್ಲಿ ದಾಂಪತ್ಯ ಜೀವನ ಸಾಯುವವರೆಗೆ ಉಳಿಯುವ ಬಂಧವಾಗಿ ಉಳಿದಿಲ್ಲ. ಅದಾಗ್ಯೂ ಜೊತೆಯಲ್ಲೇ ಹೊಂದಿಕೊಂಡು ಇರುವ ಅನೇಕರು ನಮ್ಮ ಜೊತೆ ಇದ್ದಾರೆ. ಅದಾಗ್ಯೂ ಜೊತೆ ಇರುವವರೆಲ್ಲಾ ಚೆನ್ನಾಗಿಯೇ ಇದ್ದಾರೆ ಎಂಬ ಅರ್ಥವೂ ಅಲ್ಲ. ಬಹುತೇಕ ಸಂಬಂಧಗಳು ತೋರಿಕೆಗಷ್ಟೇ ಚೆನ್ನಾಗಿರುತ್ತವೆ. ಒಳಗೆ ಹಳಸಿದ ಹೂರಣದಂತೆ ಮೆಲ್ನೋಟಕ್ಕೆ ಸಿಹಿಯಾದ ಹೋಳಿಗೆಯಂತೆ ಅನೇಕರ ಬದುಕಿದೆ. ಬದುಕಿನ ಬಂಡಿಯಲ್ಲಿ ಕಷ್ಟ ಇಲ್ಲದವರಿಲ್ಲ. ಹಾಗೆಯೇ ತಮ್ಮ ವೃದ್ಧಾಪ್ಯದ ಕೊನೆಯವರೆಗೂ ಖುಷಿ ಖುಷಿಯಾಗಿ ಇರುವ ಜೋಡಿಗಳು ನಮ್ಮ ಸಮಾಜದಲ್ಲಿ ತುಂಬಾ ವಿರಳ. ಹೀಗಾಗಿಯೇ ವೃದ್ಧ ದಂಪತಿ ಜೊತೆಯಾಗಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

View post on Instagram

ಸುರಿಯುತ್ತಿರುವ ಮಳೆಯಲ್ಲಿ ಒಂದೇ ಛತ್ರಿಯ ಕೆಳಗೆ ವೃದ್ಧ ದಂಪತಿ ಜೊತೆಯಾಗಿ ಸಾಗುತ್ತಿದ್ದಾರೆ. ಈ ವಿಡಿಯೋವನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ. ಈ ವಿಡಿಯೋದ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಹಾಡೊಂದು ಕೇಳಿ ಬರುತ್ತಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ಮತ್ತು ಅದು ನಿನನಗೆ ತಿಳಿದಿದೆ ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ಕೊನೆಯವರೆಗೂ ನಾನು ನಿನ್ನನ್ನೇ ಪ್ರೀತಿಸುತ್ತೇನೆ. ನಾನು ನನ್ನ ಮನಸ್ಸನ್ನು ಬದಲಿಸುವುದಿಲ್ಲ ಎಂಬ ಅರ್ಥ ನೀಡುವ ಹಾಡು ಇದಾಗಿದೆ. 

Relationship Tips : ಈ ರೀತಿ ಮನೆಯ ವೃದ್ಧರನ್ನು ಶಾಂತಗೊಳಿಸಿ

ವೃದ್ಧ ದಂಪತಿಯಲ್ಲಿ ಪತ್ನಿ ಕಷ್ಟಪಟ್ಟ ಹೆಜ್ಜೆ ಹಾಕುತ್ತಿದ್ದರೆ, ಪತಿ ಆಕೆಗೆ ಕೊಡೆ ಹಿಡಿಯುತ್ತಾ ಸಾಗುತ್ತಿದ್ದಾರೆ. ಪಟಪಟನೇ ಸುರಿಯುತ್ತಿರುವ ಮಳೆಯ ನಡುವೆ ನಗರದ ರಸ್ತೆಗಳಲ್ಲಿ ಟ್ರಾಫಿಕ್‌ನ್ನು ಹಾದು ಈ ಜೋಡಿ ಸಾಗುತ್ತಿದೆ. ಏನೂ ಉಳಿಯದ ಜಗತ್ತಿನಲ್ಲಿ ಶಾಶ್ವತ ಪ್ರೀತಿಯ ಕಲ್ಪನೆ ಮೋಡಿ ಮಾಡುತ್ತದೆಯೇ ಎಂದು ಈ ಬರೆದು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಕೆಲವು ಭರವಸೆಗಳು ಕೊನೆಯವರೆಗೆ ಉಳಿಯುತ್ತವೆ. ಈ ವಿಡಿಯೋ ಮನಸ್ಸಿಗೆ ನಾಟಿತು ಎಂದು ಬರೆದಿದ್ದಾರೆ. ನಿಜವಾದ ಪ್ರೀತಿ ಏನು ಎಂಬುದು ವಿವರಿಸಲ್ಪಟ್ಟಿದೆ. ನಿಮ್ಮಂತಹ ಜನರು ಬದುಕಲು ಸ್ಪೂರ್ತಿ ತುಂಬುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

Manage Stress: ಒತ್ತಡ ನಿಭಾಯಿಸಿ ಯೌವನದಿಂದ ಕಂಗೊಳಿಸಿ

ಇನ್ನು ಈ ಸುಂದರ ವಿಡಿಯೋವನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸೆರೆ ಹಿಡಿಯಲಾಗಿದೆ. ಈ ವೃದ್ಧ ಜೋಡಿಯ ಪ್ರೀತಿಗೆ ಅನೇಕರು ಮನಸೋತಿದ್ದಾರೆ. ಸಂಬಂಧವನ್ನು ಭದ್ರಗೊಳಿಸಿ ಕೊನೆಯವರೆಗೂ ಉಳಿಸಿಕೊಂಡಿರುವ ಈ ಜೋಡಿ ನಿಜಕ್ಕೂ ಗ್ರೇಟ್‌ ಎಂದು ಕಾಮೆಂಟ್ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ಜೊತೆಯಾಗಿ ದೀರ್ಘಕಾಲದವರೆಗೆ ಬದುಕುವ ಜೋಡಿ ಸಿಗುವುದು ಬಲು ಅಪರೂಪ. ಏಕೆಂದರೆ ಸಣ್ಣ ಹಾಗೂ ದೊಡ್ಡ ಕಾರಣಕ್ಕೆ ನೂತನವಾಗಿ ವಿವಾಹವಾದ ಜೋಡಿಗಳು ದೂರ ಆಗುತ್ತಿದ್ದಾರೆ. ಹೀಗಾಗಿ ಈ ಜೋಡಿಯ ಈ ಪ್ರೀತಿ ಸಾರುವ ಈ ಅನುರೂಪದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.