Asianet Suvarna News Asianet Suvarna News

Relationship Tips : ಈ ರೀತಿ ಮನೆಯ ವೃದ್ಧರನ್ನು ಶಾಂತಗೊಳಿಸಿ

ನಿಮಗೆ ಗೊತ್ತಾಗಲ್ಲ, ನೀವು ಸುಮ್ಮನಿರಿ.. ನಿಮಗೆ ಅರ್ಥವಾಗಲ್ಲ ಮಧ್ಯ ಬರ್ಬೇಡಿ…ಹೀಗೆ ಹಿರಿಯನ್ನು (Elders) ನಾವು ಎಲ್ಲ ವಿಷ್ಯದಲ್ಲೂ ದೂರ ಮಾಡ್ತೇವೆ. ನಮ್ಮ ಈ ನಿರ್ಲಕ್ಷ್ಯ ವೃದ್ಧರನ್ನು ಕೆರಳಿಸುತ್ತೆ. ಅನೇಕ ಸಮಸ್ಯೆಯಿಂದ ಬಳಲುವ ಅವರು ಕಿರಿಕಿರಿ ಜಾಸ್ತಿ ಮಾಡ್ತಾರೆ. ಮನೆಯಲ್ಲಿರುವ ವೃದ್ಧರನ್ನು ಖುಷಿ (Happy)ಯಾಗಿಟ್ಟುಕೊಳ್ಳೋದು ಮಕ್ಕಳಿಗೆ ತಿಳಿದಿರಬೇಕು. ಅದು ಹೇಗೆ ?

In Old Age Anger And Stubbornness Common In Elder, How To Keep Them Happy
Author
Bangalore, First Published Apr 13, 2022, 7:14 PM IST

ವೃದ್ಧಾಪ್ಯ (Senescence)ವನ್ನು ಬಾಲ್ಯ (Childhood)ಕ್ಕೆ ಹೋಲಿಕೆ ಮಾಡಲಾಗುತ್ತದೆ. ಬಾಲ್ಯ,ಯೌವನದ ನಂತ್ರ ಜೀವನ (Life)ದ ಜವಾಬ್ದಾರಿ (Responsibility)ಗಳು ಹೆಚ್ಚಾದಂತೆ ಜನರು ಗಂಭೀರವಾಗ್ತಾರೆ. ದುಡಿಮೆ,ಮಕ್ಕಳು, ಮನೆ ಹೊಣೆಗಾರಿಕೆಯಲ್ಲಿ ಮುಳುಗಿ ಹೋಗ್ತಾರೆ. ಆದ್ರೆ ವಯಸ್ಸು 70ರ ಗಡಿ ದಾಟುತ್ತಿದ್ದಂತೆ ಜನರಲ್ಲಿ ಬದಲಾವಣೆ ಶುರುವಾಗುತ್ತದೆ. ಗಂಭೀರತೆಯು ಕೋಪ, ಮೊಂಡು ಹಠವಾಗಿ ಬದಲಾಗುತ್ತದೆ. ಅನೇಕರು ನೆನಪಿನ ಶಕ್ತಿ ಕಳೆದುಕೊಂಡರೆ ಮತ್ತೆ ಕೆಲವರಿಗೆ ಕಿವಿ ಸರಿಯಾಗಿ ಕೇಳುವುದಿಲ್ಲ. ಈ ಸಂದರ್ಭದಲ್ಲಿ ಪಾಲಕರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಆದ್ರೆ ಮಕ್ಕಳು, ಪೋಷಕರಿಗೆ ವಿಧೇಯರಾಗುವ ಬದಲು ಅವರಿಂದ ದೂರವಾಗಲು ಪ್ರಾರಂಭಿಸುತ್ತಾರೆ. ಕಿವಿ ಕೇಳಿಸ್ತಿಲ್ಲ, ಮರೆವು ಹೆಚ್ಚಾಗ್ತಿದೆ ಎನ್ನುವ ಕಾರಣಕ್ಕೆ ಕೆಲ ವಿಷ್ಯಗಳನ್ನು ಹಿರಿಯರಿಗೆ ಹೇಳುವುದೇ ಇಲ್ಲ.

ಹಿರಿಯರಿಗೆ ಎಷ್ಟೇ ಅನುಭವವಿರಲಿ,ಅವರ ಮಾತನ್ನು ಕೇಳುವ ಬದಲು ಮಕ್ಕಳು ಅವರನ್ನು ನಿರ್ಲಕ್ಷ್ಯ ಮಾಡ್ತಾರೆ. ಇದ್ರಿಂದ ಮೊಂಡು ಹಠ ಹೆಚ್ಚಾಗುತ್ತದೆ. ವೃದ್ಧರನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಮನೆ ಶಾಂತವಾಗಿರಲು ಸಾಧ್ಯ. ಇಂದು ನಾವು ವೃದ್ಧರನ್ನು ಹೇಗೆ ಸಂಭಾಳಿಸಬೇಕು ಎಂಬುದನ್ನು ಹೇಳ್ತೇವೆ.ಒಂದೇ ಸಮನೆ ಕೆಲಸ ಮಾಡಿದ ಜನರಿಗೆ ವೃದ್ಧಾಪ್ಯದಲ್ಲಿ ವಿಶ್ರಾಂತಿ ಸಿಗುತ್ತದೆ. ಆದ್ರೆ ಈ ವಿಶ್ರಾಂತಿಯನ್ನು ಖುಷಿಯಾಗಿ ಕಳೆಯಲು ಸಾಧ್ಯವಾಗುವುದಿಲ್ಲ. ಮಕ್ಕಳು ಬ್ಯುಸಿಯಿರುವ ಕಾರಣ ಪಾಲಕರು ಒಂಟಿಯಾಗ್ತಾರೆ. ಒಂಟಿತನದಿಂದಾಗಿ, ವಯಸ್ಸಾದವರು ಖಿನ್ನತೆ, ಒತ್ತಡ, ಕಿರಿಕಿರಿ, ಕೋಪಕ್ಕೊಳಗಾಗ್ತಾರೆ.  ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ, ನೀವು ಅವರ ಸಂತೋಷಕ್ಕೆ ಕಾರಣರಾಗಬಹುದು.

ವೃದ್ಧರು ಮನೆಯಲ್ಲಿದ್ದರೆ ಈ ವಿಷ್ಯವನ್ನು ನಿರ್ಲಕ್ಷ್ಯಿಸಬೇಡಿ : ಅನೇಕ ಬಾರಿ, ಬಿಡುವಿಲ್ಲದ ದಿನಚರಿಯಿಂದಾಗಿ, ನಾವು ಮನೆಯ ಹಿರಿಯರೊಂದಿಗೆ ಕುಳಿತುಕೊಳ್ಳಲು ಸಮಯ ನೀಡುವುದಿಲ್ಲ.  ಆದ್ರೆ ಅವರಿಗೆ ನಿಮ್ಮ ಹೆಚ್ಚಿನ ಸಮಯ ಬೇಕಾಗುತ್ತದೆ. ಅವರೊಂದಿಗೆ ಕುಳಿತು ಮಾತನಾಡಲು ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡಿ.  ಅವರ ಮಾತುಗಳನ್ನು ನಿರ್ಲಕ್ಷಿಸುವ ಬದಲು ಎಚ್ಚರಿಕೆಯಿಂದ ಆಲಿಸಿ. ಇದು ಅವರಿಗೆ ಬಹಳಷ್ಟು ಸಂತೋಷವನ್ನು ನೀಡುತ್ತದೆ ಮತ್ತು ಅವರ ಒಂಟಿತನ ಕಡಿಮೆಯಾಗುತ್ತದೆ.  

ಮಗಳ ಮದುವೆಯಲ್ಲಿ ಊ ಅಂಟಾವಾ ಮಾವ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಅಪ್ಪ

ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ : ವೃದ್ಧಾಪ್ಯದಲ್ಲಿ ದೇಹದಲ್ಲಿ ಶಕ್ತಿ ಇರುವುದಿಲ್ಲ.  ವಯಸ್ಸಾದ ಜನರು ಹೆಚ್ಚಾಗಿ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ಇದರಿಂದ  ಅವರ ದೈಹಿಕ ಚಟುವಟಿಕೆಗಳು ಅತ್ಯಲ್ಪವಾಗಿರುತ್ತವೆ.  ಹಾಗಾಗಿ ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮತ್ತು ಯೋಗ ಮಾಡಲು ವಯಸ್ಸಾದವರಿಗೆ ಸಲಹೆ ನೀಡಿ. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಕ್ರಿಯಾಶೀಲರಾಗ್ತಾರೆ.

ಜವಾಬ್ದಾರಿ ನೀಡಿ : ವಯಸ್ಸಾದವರನ್ನು ಸಂತೋಷವಾಗಿಡಲು ಅವರಿಗೆ ವಿಶ್ರಾಂತಿ ನೀಡುವುದಲ್ಲ, ಕೆಲಸ ನೀಡಬೇಕು.  ಪಡಿತರ, ತರಕಾರಿಗಳು ಮತ್ತು ಹಾಲು ತರುವಂತಹ ಸಣ್ಣ ಮನೆಕೆಲಸಗಳ ಜವಾಬ್ದಾರಿಯನ್ನು ಅವರಿಗೆ ವಹಿಸಬಹುದು. ಅವರ ಜೊತೆ ಮಕ್ಕಳನ್ನು ಕಳುಹಿಸಬಹುದು. ಆಗ ಅವರು ತಾವೂ ಮನೆಯ ಭಾಗವೆಂದು ಭಾವಿಸ್ತಾರೆ. ಅವರಲ್ಲಿ ಪ್ರೀತಿ ಭಾವ ಹೆಚ್ಚಾಗುತ್ತದೆ. 

ಸಂಗಾತಿ ಜೊತೆ ಮುಂಜಾನೆ ಈ ಕೆಲಸ ಮಾಡಿದ್ರೆ, ದಿನವಿಡೀ ರೊಮ್ಯಾಂಟಿಕ್ ಮೂಡ್ ನಿಮ್ಮದಾಗುತ್ತೆ

ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ : ವೃದ್ಧಾಪ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕಾಲಕಾಲಕ್ಕೆ ವಯಸ್ಸಾದವರ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ನಡೆದುಕೊಳ್ಳಲು ಅವರಿಗೆ ಹೇಳಬೇಕು. ಅವರು ಅದನ್ನು ಪಾಲಿಸ್ತಿದ್ದಾರಾ ಎಂದು ನೀವು ಪರಿಶೀಲಿಸಬೇಕು. 

ತುರ್ತು ವಿಷಯಗಳಲ್ಲಿ ಸಲಹೆ ಪಡೆಯಿರಿ : ಮನೆಯ ಸಣ್ಣ ಮತ್ತು ದೊಡ್ಡ ನಿರ್ಧಾರಗಳಲ್ಲಿ ಹಿರಿಯರ ಅಭಿಪ್ರಾಯವನ್ನು ತೆಗೆದುಕೊಳ್ಳಲು ಮರೆಯದಿರಿ. ಮನೆಯ ಲೆಕ್ಕಪತ್ರದಿಂದ ಹಿಡಿದು  ಹೂಡಿಕೆ ವಿಧಾನಗಳವರೆಗೆ  ಅವರ ಅನುಭವವು ನಿಮಗೆ ಹೆಚ್ಚು ಉಪಯುಕ್ತವಾಗಿರುತ್ತದೆ. ನೀವು ಅವರಿಂದ ಅಮೂಲ್ಯ ಸಲಹೆ ಪಡೆದಾಗ ಹಾಗೂ ಅವರ ಸಲಹೆಯನ್ನು ಪಾಲಿಸಿದಾಗ ಅವರಿಗೆ ಖುಷಿಯಾಗುತ್ತದೆ.

Follow Us:
Download App:
  • android
  • ios