Manage Stress: ಒತ್ತಡ ನಿಭಾಯಿಸಿ ಯೌವನದಿಂದ ಕಂಗೊಳಿಸಿ

ಒತ್ತಡದಿಂದಾಗಿ ವಯಸ್ಸಾಗುವ ಪ್ರಕ್ರಿಯೆ ಚುರುಕಾಗುತ್ತದೆ. ಇದಕ್ಕೆ ನಮ್ಮ ದೇಹದಲ್ಲಾಗುವ ಚಟುವಟಿಕೆಯೇ ಕಾರಣ. ಆದರೆ, ಒತ್ತಡವನ್ನು ನಿಭಾಯಿಸುವುದನ್ನು ಕಲಿತುಕೊಂಡಾಗ ವಯಸ್ಸಾಗುವಿಕೆಯನ್ನೂ ಮುಂದೂಡಬಹುದು. 
 

Manage stress and be young for long time

ಜೀವನದಲ್ಲಿ ಎಲ್ಲರಿಗೂ ಸಣ್ಣ ಒತ್ತಡ (Stress) ಇರಲೇಬೇಕು, ಇಲ್ಲವಾದಲ್ಲಿ ಬದುಕಿಗೊಂದು ಧಾವಂತ ದಕ್ಕುವುದಿಲ್ಲ. ಕಿರು ಒತ್ತಡ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಬೇಕಾಗುತ್ತದೆ. ಆದರೆ, ಅತಿಯಾದ ಒತ್ತಡವಿದ್ದರೆ ಉದ್ವೇಗ, ಖಿನ್ನತೆ (Dipression) ಕಾಡಬಹುದು. ಅಷ್ಟೇ ಅಲ್ಲ, ಮಿತಿಮೀರಿದ ಒತ್ತಡದಿಂದ ವಯಸ್ಸಾಗುವ ಪ್ರಕ್ರಿಯೆ (Ageing) ವೇಗವಾಗಿ ಆಗುತ್ತದೆ. ಹೀಗಾಗಿ, ಒತ್ತಡ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಮುಖ್ಯ. 
 
ಒತ್ತಡ ಹೇಗೆಲ್ಲ ಪರಿಣಾಮ ಬೀರುತ್ತೆ ಗೊತ್ತೇ?
ಅಧ್ಯಯನಗಳು ಈಗಾಗಲೇ ಸಾಬೀತುಪಡಿಸಿರುವಂತೆ, ತಮ್ಮ ಒತ್ತಡವನ್ನು ಯಾರು ಸರಿಯಾಗಿ ನಿಭಾಯಿಸುವುದಿಲ್ಲವೋ ಅವರು ಚಿಕ್ಕ ವಯಸ್ಸಿನಲ್ಲೇ ಸಾವಿಗೀಡಾಗುವ ಪ್ರಮಾಣ ಶೇ.43ರಷ್ಟು ಹೆಚ್ಚು. ಸಾವು ಸಂಭವಿಸುವುದಕ್ಕೆ ಡಿಎನ್ಎ (DNA) ಮೇಲೆ ಒತ್ತಡ ಕಾರಣವಾಗಬಹುದು. 
ಕೆಂಪುರಕ್ತಕಣಗಳನ್ನು ಹೊರತುಪಡಿಸಿ ನಮ್ಮ ದೇಹದ ಎಲ್ಲ ಕೋಶ(Cell)ಗಳಲ್ಲೂ ಡಿಎನ್ಎ ಇರುತ್ತದೆ. ಎರಡು ಎಳೆಗಳ ಸುರುಳಿಯಾಕಾರದ ಡಿಎನ್ಎದಲ್ಲಿರುವ ವಂಶವಾಹಿ(Gene)ಗಳಿಂದ ನಮ್ಮ ಕೋಶಗಳು ನಿರಂತರವಾಗಿ ನಕಲಿನಂತೆ ಅಭಿವೃದ್ಧಿಯಾಗುತ್ತಿರುತ್ತವೆ. ಕೋಶಗಳು ಬೇರ್ಪಟ್ಟಾಗ ಎರಡು ಎಳೆಗಳು ಯಥಾವತ್ ಮರುಸೃಷ್ಟಿಯಾಗುತ್ತವೆ. 

Saree in Winter: ಚಳಿಗಾಲದಲ್ಲಿ ವಿಭಿನ್ನವಾಗಿ ಸೀರೆ ಧರಿಸಿ ಟ್ರೆಂಡಿಯಾಗಿ ಕಾಣಿ

ಆದರೆ, ಕೆಲವೊಂದು ಬಾರಿ ಪ್ರತಿಕೃತಿಗಳ ಈ ನಿರ್ಮಾಣ ಕಾರ್ಯದಲ್ಲಿ ಏರುಪೇರಾಗುತ್ತದೆ. ಮುಖ್ಯವಾಗಿ ಡಿಎನ್ಎ ಎಳೆಗಳ ಕೊನೆಯ ಭಾಗದಲ್ಲಿ ತಪ್ಪಾಗುತ್ತದೆ. ಆಗ ನಕಲಾದ ಡಿಎನ್ಎದಲ್ಲಿ ರೂಪಾಂತರವಾಗಬಲ್ಲದು. ಆಗಲೇ ಕೋಶವು ಕ್ಯಾನ್ಸರ್ ಕಾರಕವಾಗುತ್ತದೆ. ಅದೃಷ್ಟವಶಾತ್, ಟೆಲೊಮಿಯರ್ ಎನ್ನುವ ರಕ್ಷಣಾತ್ಮಕ ಬಿರಡೆಯೊಂದು ಕೋಶಗಳಲ್ಲಿದೆ. ಅದು ಡಿಎನ್ಎ ಎಳೆಗಳ ತುದಿಯಲ್ಲಿರುತ್ತದೆ ಹಾಗೂ ಸಾಮಾನ್ಯವಾಗಿ ಇಂತಹ ತಪ್ಪು ಆಗಲು ಬಿಡುವುದಿಲ್ಲ. 

ಈ ಟೆಲೋಮಿಯರ್ (Telomere) ಬಿರಡೆಗಳು ಮಣಿಗಳ ಅನುಕ್ರಮದಲ್ಲಿರುವಂತೆ ಇರುತ್ತವೆ. ಈ ಕ್ರಿಯೆಯನ್ನು ಟೆಲೋಮೆರಿಕ್ ರಿಪೀಟ್ಸ್ ಎನ್ನಲಾಗುತ್ತದೆ. ಪ್ರತಿಬಾರಿ ಕೋಶ ಪ್ರತ್ಯೇಕವಾದಾಗ ಮುಂದಿನ ತಲೆಮಾರಿನ ಕೋಶ ಒಂದು ಮಣಿಯನ್ನು ಕಳೆದುಕೊಳ್ಳುತ್ತದೆ. ದುರದೃಷ್ಟವಶಾತ್, ಪ್ರತಿ ಕೋಶವು ಈ ಪ್ರಕ್ರಿಯೆಗೆ ಗರಿಷ್ಠ ಮಿತಿಯನ್ನು ಹೊಂದಿದೆ. ಇದನ್ನು ಹೇಫ್ಲಿಕ್ (Heyflick) ಲಿಮಿಟ್ (Limit) ಎಂದು ಕರೆಯಲಾಗಿದೆ. ಕೋಶವೊಂದು ಈ ಮಿತಿ ತಲುಪಿದಾಗ ರಕ್ಷಣಾತ್ಮಕ ಅಂಶ ನಾಶವಾಗಿ ಸ್ವವಿನಾಶಕ್ಕೆ ಮುಂದಾಗುತ್ತದೆ. ಇಲ್ಲೇ ವಯಸ್ಸಾಗುವ ಪ್ರಕ್ರಿಯೆಯ ಮೂಲ ಅಸ್ತಿತ್ವವಿದೆ.

Personality Development: ನೀವು ನಿಂತುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ

ದೇಹದ ಕೆಲವು ಕೋಶಗಳು, ಮುಖ್ಯವಾಗಿ ರೋಗನಿರೋಧಕ ಶಕ್ತಿಯ ಕೋಶಗಳು ಟೆಲೋಮೆರಾಸ್ (Telomerase) ಎನ್ನುವ ಮಾಲೆಕ್ಯೂಲ್ (Molecule)ಗಳನ್ನು ಹೊಂದಿರುತ್ತವೆ. ಇವು ಟೆಲೋಮೆರಿಕ್ ಪುನರಾವರ್ತನೆಯಲ್ಲಾಗುವ ಕ್ರಿಯೆಯನ್ನು ಮರಳಿಸಬಲ್ಲವು. ಅಂದರೆ, ವಯಸ್ಸಾಗುವ ಕ್ರಿಯೆಯನ್ನು ಹಿಮ್ಮುಖವಾಗಿಸಬಲ್ಲವು. ಆದರೆ, ನಮಗೆ 80 ವರ್ಷ ವಯಸ್ಸಾಗುತ್ತಿರುವ ಹಾಗೆ ಟೆಲೋಮೆರಾಸ್ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ. 

ಇವೆಲ್ಲ ತನ್ನಿಂತಾನೇ ಆಗುವ ಕ್ರಿಯೆ, ನಾವೇನು ಮಾಡಬಲ್ಲೆವು ಎಂದುಕೊಳ್ಳುವಂತಿಲ್ಲ. ಏಕೆಂದರೆ, ಇವು ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿಲ್ಲ ಎನ್ನುವಂತಿಲ್ಲ. ಧೂಮಪಾನ(Smoking), ಮದ್ಯಪಾನ(Alcohol), ಬೊಜ್ಜು (Obesity) ಹಾಗೂ ಒತ್ತಡಗಳಿಂದಾಗಿ ಟೆಲೋಮಿಯರ್ ನಷ್ಟವಾಗುತ್ತದೆ. ಅತಿಯಾದ ಒತ್ತಡ ಅನುಭವಿಸುವ ವ್ಯಕ್ತಿಯಲ್ಲಿ ಟೆಲೋಮೆರಾಸ್ ಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವುದಿಲ್ಲ. ಆಗ ಅವಧಿಗೂ ಮುನ್ನ ವಯಸ್ಸಾಗುವ ಪ್ರಕ್ರಿಯೆ ಆರಂಭವಾಗುತ್ತದೆ.     

ಧನಾತ್ಮಕ (Possitive) ಒತ್ತಡವಿರಲಿ
ಆರೋಗ್ಯಕರ ಜೀವನಶೈಲಿ, ಸಸ್ಯಾಹಾರದಿಂದಾಗಿ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸಬಹುದು. ದೈಹಿಕ ಚಟುವಟಿಕೆಯೂ ಅತಿ ಅಗತ್ಯ. ಇದರಿಂದ ಟೆಲೋಮೆರಾಸ್ ಚಟುವಟಿಕೆ ಸಕ್ರಿಯವಾಗುತ್ತದೆ. ಆರೋಗ್ಯಕರ ಜೀವನಶೈಲಿಯಿಂದಾಗಿ ವಯಸ್ಸಾಗುವಿಕೆಯ ವೇಗವನ್ನು ಕುಗ್ಗಿಸಬಹುದು. ಇದಕ್ಕೆ ಒತ್ತಡವನ್ನು ನಿಭಾಯಿಸುವುದು ಅತ್ಯಂತ ಮುಖ್ಯ. 

ನಿಮಗೆ ತಿಳಿದಿರಲಿ, ಎಲ್ಲ ಒತ್ತಡಗಳೂ ಹಾನಿಕಾರಕವಲ್ಲ. ಇಲ್ಲೂ ಧನಾತ್ಮಕ ಒತ್ತಡ, ಋಣಾತ್ಮಕ (Nagetive) ಒತ್ತಡಗಳಿವೆ. ಕ್ರೀಡೆ, ಉದ್ಯೋಗ, ಉದ್ಯಮದಲ್ಲಿ ಯಶಸ್ಸು ಕಾಣಬೇಕಾದರೆ ಧನಾತ್ಮಕ ಒತ್ತಡವಿರಬೇಕು. ಆದರೆ, ಒತ್ತಡ ಯಾತನೆಯಾಗಬಾರದು. 

ಹೀಗಾಗಿ, ಎಲ್ಲ ರೀತಿಯ ಒತ್ತಡದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ಒತ್ತಡವೇ ಬದುಕಾಗದಂತೆ, ಯಾತನೆಯಾಗಿ ಕಾಡದಂತೆ ನೋಡಿಕೊಂಡರೆ ಸಾಕು. ಇಲ್ಲಿ ವ್ಯಕ್ತಿಯ ಚಾಕಚಕ್ಯತೆ ಮುಖ್ಯವಾಗುತ್ತದೆ. ದೈನಂದಿನ ಒತ್ತಡಗಳಿಗೆ ನಿರೋಧಕ ಗುಣ ಬೆಳೆಸಿಕೊಳ್ಳಬೇಕು. ಸಮಸ್ಯೆಯನ್ನು ಏಕಾಏಕಿ ಪರಿಹಾರ ಮಾಡಿಕೊಳ್ಳುವ ಬದಲು ಸಾಮಾಜಿಕ ಬೆಂಬಲ, ಸಾವಧಾನ(Mindfulness)ದ ಮನಸ್ಥಿತಿಯಿಂದ ಇದನ್ನು ಸಾಧಿಸಬಹುದು.
 

Latest Videos
Follow Us:
Download App:
  • android
  • ios