15 ವರ್ಷದ ಹುಡುಗನ ಜತೆ 2 ಮಕ್ಕಳ ತಾಯಿಗೆ ಸಂಬಂಧ, ಲೈಂಗಿಕ ಕ್ರಿಯೆವೇಳೆ ಗಂಡನಿಗೆ ಸಿಕ್ಕಿಬಿದ್ದ ಪ್ರೇಮಿಗಳು

ಬಿಹಾರದಲ್ಲಿ ಮಹಿಳೆಯೊಬ್ಬಳು ತಲೆತಗ್ಗಿಸುವ ಕೆಲಸ ಮಾಡಿದ್ದಾಳೆ. ಪ್ರೀತಿ ಹೆಸರಿನಲ್ಲಿ 15 ವರ್ಷದ ಹುಡುಗನ ಜೊತೆ ಸಂಬಂಧ ಬೆಳೆಸಿದ್ದಾಳೆ. ಆತನನ್ನು ಮನೆಗೆ ಕರೆಯಿಸಿಕೊಂಡ ಮಹಿಳೆಯ ಬಣ್ಣ ಪತಿಯ ಮುಂದೆ ಬಯಲಾಗಿದೆ.
 

Mother Of Two Children Fell In Love With 15 Year Old Boy On Facebook

ಈಗಿನ ಜನರು ಅತೀ ಬುದ್ಧಿವಂತರು. ಡಿಜಿಟಲ್ ಮಾಧ್ಯಮಗಳ ಬಳಕೆ ಅವರಿಗೆ ತಿಳಿದಿದೆ. ಆದ್ರೆ ಗಂಟೆಗಟ್ಟಲೆ ಸಾಮಾಜಿಕ ಜಾಲತಾಣಗಳನ್ನು ಬಳಸುವ ಜನರಿಗೆ ನಾವು ಮಾಡುವ ಕೆಲಸದಲ್ಲಿ ಎಷ್ಟು ಸರಿಯಿದೆ, ಎಷ್ಟು ತಪ್ಪಿದೆ ಎಂಬುದನ್ನು ಅರಿಯಲು ಸಾಧ್ಯವಾಗ್ತಿಲ್ಲ. ಪ್ರೀತಿ ಕುರುಡು ಎಂದು ದೊಡ್ಡವರು ಹೇಳ್ತಾರೆ ನಿಜ. ಆದ್ರೆ ಪ್ರೀತಿಸುವ ಮೊದಲು ಭವಿಷ್ಯದಲ್ಲಿ ಅದ್ರ ಪರಿಣಾಮ ಏನಾಗ್ಬಹುದು ಎಂಬ ಬಗ್ಗೆ ಸ್ವಲ್ಪ ಆಲೋಚನೆ ಮಾಡ್ಲೇಬೇಕು. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅನೇಕ ಕೆಲಸಕ್ಕೆ ಬಳಕೆಯಾಗ್ತಿವೆ. ಪ್ರೇಮಿಗಳನ್ನು ಒಂದು ಮಾಡುವ ಕೆಲಸವೂ ಸಾಮಾಜಿಕ ಜಾಲತಾಣದಿಂದಾಗ್ತಿದೆ. ಹಾಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಸಿ ಯಡವಟ್ಟು ಮಾಡಿಕೊಂಡವರೂ ಅನೇಕರಿದ್ದಾರೆ. ಎರಡು ಮಕ್ಕಳ ತಾಯಿಯೊಬ್ಬಳು ನಾಚಿಕೆ ಕೆಲಸ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ 15 ವರ್ಷದ ಹುಡುಗ ಸ್ನೇಹ ಬೆಳೆಸಿ, ಪ್ರೀತಿಯ ಜಾಲಕ್ಕೆ  ಬೀಳಿಸಿ, ಆತನನ್ನು ಮನೆಗೆ ಕರೆಸಿಕೊಂಡಿದ್ದಲ್ಲದೆ ಆತನಿಗೆ ಒದೆ ಬೀಳಲು ಕಾರಣವಾಗಿದ್ದಾಳೆ. ಮಹಿಳೆ ಹಾಗೂ ಹುಡುಗನಿಗೆ ಗ್ರಾಮಸ್ಥರು ಥಳಿಸಿದ್ದಾರೆ.ಅದ್ರ ವಿಡಿಯೋ ಈಗ ವೈರಲ್ ಆಗಿದೆ. ಅಷ್ಟಕ್ಕೂ ಈ ಪ್ರೇಮ ಕಥೆ ಏನು ಅನ್ನೋದನ್ನು ನಾವಿಂದು ಹೇಳ್ತೇವೆ.

ಎರಡು ಮಕ್ಕಳ ತಾಯಿಗೆ 15 ವರ್ಷದ ಹುಡುಗನ ಮೇಲೆ ಕಣ್ಣು : ಬಿಹಾರದ ಜಮುಯಿಯಲ್ಲಿ ಘಟನೆ ನಡೆದಿದೆ. ಎರಡು ಮಕ್ಕಳ ತಾಯಿ, 35 ವರ್ಷದ ಮಹಿಳೆ, ಫೇಸ್ಬುಕ್ ಮೆಸ್ಸೆಂಜರ್ ನಲ್ಲಿ 15 ವರ್ಷದ ಹುಡುಗನ ಸ್ನೇಹ ಬೆಳೆಸಿದ್ದಾಳೆ. ಜೆಹಾನಾಬಾದ್‌ ನ 15 ವರ್ಷದ ಹುಡುಗ, ಪ್ರತಿ ದಿನ ಮಹಿಳೆ ಜೊತೆ ಮಾತನಾಡಿದ್ದಾನೆ. ಇಬ್ಬರೂ ಪ್ರತಿ ದಿನ ಗಂಟೆಗಟ್ಟಲೆ ಮೆಸ್ಸೆಂಜರ್ ನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಬಿಟ್ಟಿರಲಾರದಷ್ಟು ಪ್ರೀತಿ ಮಾಡ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ.

ಹುಡುಗನನ್ನು ಮನೆಗೆ ಕರೆಸಿಕೊಂಡ ಮಹಿಳೆ : ಇವರಿಬ್ಬರ ಪ್ರೀತಿ ವಿಡಿಯೋ ಕಾಲ್ ಗೆ ಸೀಮಿತವಾಗಿರಲಿಲ್ಲ. ಮಹಿಳೆ, ಹುಡುಗನನ್ನು ತನ್ನ ಊರಿಗೆ ಕರೆಯಿಸಿಕೊಂಡಿದ್ದಾಳೆ. ಹುಡುಗ ಜಮುಯಿಗೆ ಬಂದಿದ್ದಾನೆ. ಮನೆಗೆ ಬಂದ ಪ್ರೇಮಿಯನ್ನು ತನ್ನ ತವರಿನ ಕಡೆಯವರೆಂದು ಮಹಿಳೆ ಪರಿಚಯ ಮಾಡಿಕೊಟ್ಟಿದ್ದಾಳೆ. ಮಹಿಳೆ ಮನೆಯಲ್ಲಿ ವಾಸವಾಗಿದ್ದ ಹುಡುಗನ ಬಣ್ಣ ಕೊನೆಗೆ ಪತಿಗೆ ಗೊತ್ತಾಗಿದೆ.

ತಡರಾತ್ರಿ ಮಹಡಿ ಮೇಲೆ ಸೆಕ್ಸ್ : 15 ವರ್ಷದ ಹುಡುಗನನ್ನು ಮನೆಗೆ ಕರೆಸಿಕೊಂಡ ಮಹಿಳೆ ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ಒಂದು ರಾತ್ರಿ ಸಂಬಂಧ ಬೆಳೆಸುವ ವೇಳೆ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 

ಇದನ್ನೂ ಓದಿ: ಶಕ್ತಿಯಿಲ್ಲದ ವ್ಯಕ್ತಿ ಮದುವೆಯಾಗಿ ಬಾಳು ಹಾಳ್ಮಾಡ್ಕೊಂಡ ಮಹಿಳೆ

ಕೋಪಗೊಂಡ ಪತಿಯಿಂದ ಏಟು : ಪತ್ನಿಯ ರಾಸಲೀಲೆ ನೋಡಿದ ಪತಿಯ ಕೋಪ ನೆತ್ತಿಗೇರಿದೆ. ಇಬ್ಬರಿಗೂ ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ.

ಗ್ರಾಮಸ್ಥರಿಂದಲೂ ಶಿಕ್ಷೆ : ವಿಷ್ಯ ಇಡೀ ಗ್ರಾಮಕ್ಕೆ ಗೊತ್ತಾಗಿದೆ. ಗ್ರಾಮಸ್ಥರು ಮಹಿಳೆ ಹಾಗೂ ಹುಡುಗನಿಗೆ ಶಿಕ್ಷೆ ನೀಡಿದ್ದಾರೆ. ಗ್ರಾಮದ ದೇವಸ್ಥಾನದ ಬಳಿ ಇಬ್ಬರಿಗೂ ಏಟು ಬಿದ್ದಿದೆ. ನಂತ್ರ ಗ್ರಾಮದ ಮುಖ್ಯಸ್ಥರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಆದ್ರೆ ಮಹಿಳೆ ಹಾಗೂ ಆಕೆ ಪ್ರೇಮಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ: ವಿಚ್ಛೇದಿತ ವ್ಯಕ್ತಿ ಜೊತೆ Date ಮಾಡೋವಾಗ ಈ ತಪ್ಪು ಮಾಡ್ಬೇಡಿ

ವಿಡಿಯೋ ವೈರಲ್ : ಈಗ ವೈರಲ್ ಆದ ವಿಡಿಯೋದಲ್ಲಿ ಮಹಿಳೆ, ಹುಡುಗನನ್ನು ಅಪ್ಪಿ ಹಿಡಿದಿದ್ದಾಳೆ. ಆತನಿಗೆ ಒದೆ ನೀಡದಂತೆ ರಕ್ಷಿಸುತ್ತಿದ್ದಾಳೆ. ಆಕೆ ಪತಿ, ದೊಣ್ಣೆಯಿಂದ ಹುಡುಗನಿಗೆ ಥಳಿಸ್ತಿದ್ದಾನೆ. ಹುಡುಗನ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.   

Latest Videos
Follow Us:
Download App:
  • android
  • ios