ವಿಚ್ಛೇದಿತ ವ್ಯಕ್ತಿ ಜೊತೆ Date ಮಾಡೋವಾಗ ಈ ತಪ್ಪು ಮಾಡ್ಬೇಡಿ

ವಿಚ್ಛೇದನ ಪಡೆಯೋದು ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ವಿಚ್ಛೇದನ ನಂತ್ರ ಇನ್ನೊಬ್ಬರ ಪ್ರೀತಿಯಲ್ಲಿ ಬೀಳ್ಬಾರದು ಎಂದೇನಿಲ್ಲ. ಆದ್ರೆ ಪ್ರೀತಿಸಿದ ವ್ಯಕ್ತಿ ವಿಚ್ಛೇದಿನ ಎಂಬುದು ಗೊತ್ತಾದಾಗ ಸಂಗಾತಿ ಸ್ವಲ್ಪ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ನೊಂದ ಮನಸ್ಸಿಗೆ ಮತ್ತಷ್ಟು ನೋವು ನೀಡುವ ಕೆಲಸ ಮಾಡಬಾರದು.
 

Tips To Keep In Mind When Dating A Divorcee

ಪ್ರೀತಿ ಎಲ್ಲಿ, ಯಾವಾಗ, ಯಾರಿಗೆ ಬೇಕಾದ್ರೂ ಹುಟ್ಟಬಹುದು. ನೀವು ಪ್ರೀತಿಸುವ ವ್ಯಕ್ತಿ ವಿಚ್ಛೇದನ ಪಡೆದಿರಬಹುದು. ಅದು ನಿಮಗೆ ಗಂಭೀರ ವಿಷ್ಯವಲ್ಲ ನಿಜ. ಆದ್ರೆ ವಿಚ್ಛೇದಿತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವಾಗ  ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ವಿಚ್ಛೇದಿತ ವ್ಯಕ್ತಿ, ಕೋರ್ಟ್‌ಗೆ ಅಲೆಯುತ್ತಿರಬಹುದು, ಮಕ್ಕಳ ಕಸ್ಟಡಿ ವಿವಾದಗಳನ್ನು ಎದುರಿಸುತ್ತಿರಬಹುದು, ಹಿಂದಿನ ಜೀವನವನ್ನು ಮರೆಯಬೇಕು, ಸಮಾಜದ ನಿಂದನೆಗಳನ್ನು ಎದುರಿಸಬೇಕು. ಈ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ದುರ್ಬಲಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ನೀವು ಅವರ ಜೊತೆ ಡೇಟ್ ಮಾಡ್ತಿದ್ದರೆ ಎಚ್ಚರಿಕೆ ಹೆಜ್ಜೆ ಇಡಬೇಕು. ಅವರ ಮನಸ್ಸು ಮತ್ತಷ್ಟು ನೋಯುವ ಕೆಲಸ ಮಾಡಬಾರದು. ವಿಚ್ಛೇದಿತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವಾಗ ನೀವು ಏನೆಲ್ಲ ನೆನಪಿಟ್ಟುಕೊಳ್ಳಬೇಕು ಎಂಬುದನ್ನು ನಾವು ಹೇಳ್ತೇವೆ.

ಪರ್ಸನಲ್ ಸ್ಪೇಸ್ (Personal  Space) : ಪ್ರತಿಯೊಬ್ಬರೂ ಪರ್ಸನಲ್ ಸ್ಪೇಸ್ ಬಯಸ್ತಾರೆ.  ನೀವು ವಿಚ್ಛೇದಿತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೂ ಸಹ, ನೀವು ಅವರಿಗೆ ಸ್ವಲ್ಪ ವೈಯಕ್ತಿಕ ಜಾಗವನ್ನು ನೀಡಬೇಕು. ಅವರು  ಮಕ್ಕಳನ್ನು ಹೊಂದಿದ್ದರೆ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆಯಲು ಬಯಸ್ತಾರೆ. ಆಗ ನೀವು ಅವರ ಭಾವನೆಗಳನ್ನು ಗೌರವಿಸಬೇಕು ಮತ್ತು ಅವರಿಗೆ ವೈಯಕ್ತಿಕ ಜಾಗವನ್ನು ನೀಡಬೇಕು.

ಇದನ್ನೂ ಓದಿ: ಹನಿಮೂನ್‌ ಅಂದ್ರೆ ರೋಮ್ಯಾನ್ಸ್ ಮಾತ್ರವಲ್ಲ, ಕಾಯಿಲೆನೂ ಕಾಡ್ಬೋದು !

ಮಕ್ಕಳನ್ನೂ ಪ್ರೀತಿಸಿ : ಈಗಾಗಲೇ ಮಕ್ಕಳನ್ನು ಹೊಂದಿರುವ ವಿಚ್ಛೇದಿತ ವ್ಯಕ್ತಿಯೊಂದಿಗೆ ನೀವು ಡೇಟಿಂಗ್ ಮಾಡುತ್ತಿದ್ದರೆ ಅವರ ಮಕ್ಕಳೊಂದಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕು. ವಿಚ್ಛೇದಿತ ವ್ಯಕ್ತಿಯು ಯಾವಾಗಲೂ ತನ್ನ ಸಂಗಾತಿಯು ತನಗೆ ಮತ್ತು ತನ್ನ ಮಕ್ಕಳಿಗೆ ಪ್ರೀತಿ ನೀಡಬೇಕು ಎಂದು ಬಯಸುತ್ತಾನೆ. ಆದ್ದರಿಂದ ನೀವು ನಿಜವಾಗಿಯೂ ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಅವರ ಪ್ರತಿಯೊಂದು ಸಂತೋಷ (happiness) ಕ್ಕೂ ಗಮನ ನೀಡಬೇಕಾಗುತ್ತದೆ. ಅವರ ಮಕ್ಕಳೊಂದಿಗೆ ಉತ್ತಮ ಸಂಬಂಧ ಹೊಂದಬೇಕಾಗುತ್ತದೆ. ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. 

ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆ  (Expectation) ಬೇಡ : ಪ್ರೀತಿಸುವ ವ್ಯಕ್ತಿಯಿಂದ ಸಾಕಷ್ಟು ನಿರೀಕ್ಷೆ ಮಾಡೋದು ಸಾಮಾನ್ಯ. ಆದ್ರೆ ಪ್ರೀತಿಸುವ ವ್ಯಕ್ತಿ ವಿಚ್ಛೇದನ ಪಡೆದಿದ್ದರೆ ಅವರಿಂದ ಹೆಚ್ಚು ನಿರೀಕ್ಷೆ ಮಾಡುವುದು ಮೂರ್ಖತನವಾಗುತ್ತದೆ. ಈಗಾಗಲೇ ನೋವಿನಲ್ಲಿರುವ ಜನರು ಏಕಾಏಕಿ ಎಲ್ಲವನ್ನೂ ಮರೆತು, ನಿಮ್ಮ ಜೊತೆ ಸಾಮಾನ್ಯರಂತೆ ಪ್ರೀತಿ ಮಾಡಲು ಸಾಧ್ಯವಿಲ್ಲ ಎಂಬುದು ನಿಮಗೆ ತಿಳಿದಿರಬೇಕು. 

ಇದನ್ನೂ ಓದಿ: Chatting Etiquette: ಆ ಕಡೆಯವರ ಟೈಮ್‌ಗಿರಲಿ ಬೆಲೆ!

ಸಂಗಾತಿಗೆ ಕರುಣೆ (Mercy) ತೋರಿಸುವ ಅಗತ್ಯವಿಲ್ಲ : ಯಸ್,ನಿಮ್ಮ ಸಂಗಾತಿ  ಅವರ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಸಂಗಾತಿ ವಿಚ್ಛೇದನ ಪಡೆದಿದ್ದಾರೆ ಎಂದ ಮಾತ್ರಕ್ಕೆ ನೀವು ಅವರ ಮೇಲೆ ಅನುಕಂಪ ತೋರಿಸಬೇಕಾಗಿಲ್ಲ. ಇಲ್ಲಿ ಅನುಕಂಪದ ಅಗತ್ಯವಿರುವುದಿಲ್ಲ. ಸಂಗಾತಿ ಹಾಗೂ ಅವರ ಮಾಜಿ ಪಾಲುದಾರರ ಬಗ್ಗೆ ವಿಷಾದ ವ್ಯಕ್ತಪಡಿಸುವ ಅಗತ್ಯವೂ ಇಲ್ಲ. ಕೆಟ್ಟ ಸಂಬಂಧದಿಂದ ಹೊರಬರಲು ನೀವು ಸಹಾಯ ಮಾಡಬೇಕು. ಪ್ರೀತಿಯಲ್ಲಿ ನಂಬಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಹಾಗೆ ಸಂಗಾತಿಯ ಕೆಲಸಕ್ಕೆ, ಧೈರ್ಯಕ್ಕೆ ಅವರನ್ನು  ಪ್ರಶಂಸಿಸಬೇಕು. 

ಸಂಗಾತಿಯನ್ನು ಇದ್ದಂತೆ ಸ್ವೀಕರಿಸಿ : ಪ್ರತಿಯೊಬ್ಬರೂ ತಾವು ಇದ್ದಂತೆ ತಮ್ಮನ್ನು ಸಂಗಾತಿ ಒಪ್ಪಿಕೊಳ್ಳಬೇಕೆಂದು ಬಯಸ್ತಾರೆ. ವಿಚ್ಛೇದಿತ ವ್ಯಕ್ತಿಗಳೂ ಇದನ್ನೇ ಬಯಸ್ತಾರೆ. ಒಬ್ಬ ವ್ಯಕ್ತಿಯನ್ನು ಅವನು ಇದ್ದ ಹಾಗೆಯೇ ಸ್ವೀಕರಿಸಿದಾಗ ಆ ವ್ಯಕ್ತಿಯ ವಿಶ್ವಾಸವನ್ನು ಗಳಿಸಲು ಸಾಧ್ಯ. ಸಂಗಾತಿ ಆಯ್ಕೆ, ನಡವಳಿಕೆ, ಅಭ್ಯಾಸಕ್ಕೆ ಕೋಪಗೊಳ್ಳುವ ಬದಲು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನೀವು ಇಷ್ಟಪಡದ ಕೆಲವು ವಿಷಯಗಳನ್ನು ಅವರು ಇಷ್ಟಪಡಬಹುದು, ಆದರೆ ಅದರ ಬಗ್ಗೆ ಅಸಮಾಧಾನ ಅಥವಾ ಜಗಳ ಬೇಕಾಗಿಲ್ಲ.  

Latest Videos
Follow Us:
Download App:
  • android
  • ios