Asianet Suvarna News Asianet Suvarna News

ಮೃತ ಮರಿಯನ್ನು ಹೋದಲೆಲ್ಲಾ ಎತ್ತಿಕೊಂಡು ಹೋಗುತ್ತಿರುವ ತಾಯಿ ಆನೆ: ವಿಡಿಯೋ

ತಾಯಿ ಆನೆಯೊಂದು ಮೃತಪಟ್ಟ ತನ್ನ ಮರಿಯ ಮೃತದೇಹವನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸೊಂಡಿಲಿನಲ್ಲಿ ಎತ್ತಿಕೊಂಡು ಸಾಗಿಸುತ್ತಿರುವ ದೃಶ್ಯವೊಂದು ಸೆರೆಯಾಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ.
 

Mother Elephant Carries Carcass Of Her Dead Calf In Bengal akb
Author
West Bengal, First Published May 30, 2022, 12:27 PM IST

ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು ಇದಕ್ಕೆ ನಮ್ಮಲ್ಲಿ ಸಾಕಷ್ಟು ಘಟನೆಗಳು ಗತಿಸಿ ಹೋಗಿವೆ. ಪ್ರಾಣಿಗಳು ಇದಕ್ಕೆ ಹೊರತಲ್ಲ. ಅದೇ ರೀತಿ ತಾಯಿ ಆನೆಯೊಂದು ಮೃತಪಟ್ಟ ತನ್ನ ಮರಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸೊಂಡಿಲಿನಲ್ಲಿ ಹೊತ್ತೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ಘಟನೆ ಪಶ್ಚಿಮ ಬಂಗಾಳದ ಜಲಫೈಗುರಿಯಲ್ಲಿ ನಡೆದಿದೆ. ತಾಯಿ ಆನೆಯೊಂದು ತನ್ನ ಮರಿಯ ಮೃತದೇಹವನ್ನು ತನ್ನ ಸೊಂಡಿಲಿನಲ್ಲಿ ಎತ್ತಿಕೊಂಡು ಶುಕ್ರವಾರವಿಡೀ ದಿನ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಹಲವು ಚಹಾ ತೋಟಗಳಲ್ಲಿ ಅಡ್ಡಾಡಿದೆ. ಈ ಕಣ್ಣೀರು ತರಿಸುವ ದೃಶ್ಯ ಎಲ್ಲರನ್ನು ಮೂಕರನ್ನಾಗಿಸಿದೆ. ಜಲ್ಪೈಗುರಿಯ ಅಂಬಾರಿ ಟೀ ಎಸ್ಟೇಟ್‌ನಲ್ಲಿ ತಾಯಿ ತನ್ನ ಮೃತಪಟ್ಟ ಮರಿಯನ್ನುಸೊಂಡಿಲಿನಿಂದ ಎತ್ತಲು ಹೆಣಗಾಡುತ್ತಿರುವುದನ್ನು ವಿಡಿಯೋ ತೋರಿಸಿದೆ.

ಅರಣ್ಯ ಅಧಿಕಾರಿಗಳ ಪ್ರಕಾರ, ಬನಾರ್ಹತ್ ಬ್ಲಾಕ್‌ನಲ್ಲಿರುವ (Banarhat block) ಡೋರ್ಸ್ ಪ್ರದೇಶದ (Dooars region) ಚುನಾಭಟಿ ಚಹಾ ತೋಟದಲ್ಲಿ (Chunabhati tea garden) ಶುಕ್ರವಾರ ಬೆಳಗ್ಗೆ ಮರಿ ಸಾವನ್ನಪ್ಪಿದೆ. ತಾಯಿ ಆನೆಯು ತನ್ನ ಸೊಂಡಿಲಿನಿಂದ ಮರಿಯ ಮೃತದೇಹವನ್ನು ಎತ್ತಿಕೊಂಡು ಸುಮಾರು 30-35 ಆನೆಗಳ ಹಿಂಡಿನೊಂದಿಗೆ ಒಂದು ಚಹಾ ತೋಟದಿಂದ ಇನ್ನೊಂದು ಚಹಾ ತೋಟಕ್ಕೆ ತಿರುಗಾಡಿದೆ.

 

ಆನೆಗಳ ಹಿಂಡು 7 ಕಿಲೋಮೀಟರ್‌ಗೂ ಹೆಚ್ಚು ಕ್ರಮಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚುನಾಭಟಿಯಿಂದ ಆನೆಗಳು ಅಂಬಾರಿ ಟೀ ಗಾರ್ಡನ್ (Ambari tea garden), ಡಯಾನಾ ಟೀ ಗಾರ್ಡನ್ (Diana tea garden) ಮತ್ತು ನ್ಯೂಡೋರ್ಸ್ ಟೀ ಗಾರ್ಡನ್‌ಗೆ (Newdooars tea garden) ತೆರಳಿ ಆನೆ ಮರಿಯ ಮೃತದೇಹವನ್ನು ರೆಡ್‌ಬ್ಯಾಂಕ್ ಟೀ ಗಾರ್ಡನ್‌ನ (Redbank tea garden) ಪೊದೆಯ ಬಳಿ ಇಟ್ಟಿದೆ.

ಹಾಸಿಗೆಗಾಗಿ ಮಾವುತನೊಂದಿಗೆ ಆನೆ ಮರಿಯ ಕಿತ್ತಾಟ: ವಿಡಿಯೋ ವೈರಲ್

ರಾಜ್ಯ ಅರಣ್ಯ ಇಲಾಖೆಯ ಹಲವಾರು ತಂಡಗಳು ಸ್ಥಳಕ್ಕೆ ತಲುಪಿದವು, ಆದಾಗ್ಯೂ, ಶುಕ್ರವಾರ ಸಂಜೆಯವರೆಗೂ ಅವರು ಮೃತದೇಹವನ್ನು ಪಡೆದುಕೊಳ್ಳಲು ಅಥವಾ ದುಃಖಿತ ತಾಯಿ ಆನೆಯನ್ನು ಕಾಡಿಗೆ ಸಾಗಿಸಲು ಸಾಧ್ಯವಾಗಲಿಲ್ಲ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಸದ್ಯಕ್ಕೆ ಅರಣ್ಯ ಸಿಬ್ಬಂದಿಗಳು ಆ ಪ್ರದೇಶದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಟ್ಟ ಪಕ್ಷಿಯೊಂದಿಗೆ ಆನೆ ಮರಿಯ ಕಿತ್ತಾಟ ವಿಡಿಯೋ ವೈರಲ್‌
 

ವಿಶ್ವ ವನ್ಯಜೀವಿ ನಿಧಿಯ (World Wildlife Fund) ಪ್ರಕಾರ, ಉತ್ತರ ಬಂಗಾಳವು ಸುಮಾರು 400 ನಿವಾಸಿ ಆನೆಗಳನ್ನು ಹೊಂದಿರುವ ಆನೆಗಳ ಪ್ರಮುಖ ಆವಾಸ ಸ್ಥಾನವಾಗಿದೆ. ಈ ಪ್ರದೇಶವು ದೇಶದಲ್ಲಿ ಆನೆಗಳಿಂದ ಉಂಟಾಗುವ ಒಟ್ಟು ಮಾನವ ಸಾವು ನೋವುಗಳ ಶೇ. 20% ರಷ್ಟು ಈ ಪ್ರದೇಶದಲ್ಲಾಗುತ್ತಿದೆ. ಆನೆಗಳು ಹೆಚ್ಚು  ಸಂವೇದನಾಶೀಲ ಪ್ರಾಣಿಗಳಾಗಿದ್ದು, ಭಾವನೆಗಳಿಗೆ ಸ್ಪಂದಿಸುತ್ತವೆ. ನಿರ್ದಿಷ್ಟವಾಗಿ ಏಷ್ಯಾದ ಆನೆಗಳು ಇತರ ತೊಂದರೆಗೊಳಗಾದವರಿಗೆ ಸಹಾನುಭೂತಿ ತೋರಿಸುತ್ತಿವೆ ಮತ್ತು ಸಾಯುವ ಹಂತದಲ್ಲಿರುವ ಮರಿಗಳಿಗೆ ದೈಹಿಕವಾಗಿ ಸಹಾಯ ಮಾಡುತ್ತವೆ ಎಂದು ಅಧ್ಯಯನವು ಕಂಡು ಹಿಡಿದಿದೆ.
 

Follow Us:
Download App:
  • android
  • ios