ಪುಟ್ಟ ಪಕ್ಷಿಯೊಂದಿಗೆ ಆನೆ ಮರಿಯ ಕಿತ್ತಾಟ ವಿಡಿಯೋ ವೈರಲ್‌

ಆನೆಮರಿಯೊಂದು ಸುಮ್ಮನಿರುವ ಪಕ್ಷಿಯನ್ನು ಕೆಣಕಲು ಹೋಗಿ ಅದರಿಂದ ಕುಕ್ಕಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Baby Elephant fighting with birds  adorable video goes viral akb

ಆನೆಮರಿಗಳು ತುಂಟಾಟ ಆಡುವುದರಲ್ಲಿ ಬಲು ಹುಷಾರು ಇತ್ತೀಚೆಗೆ ಆನೆಮರಿಯೊಂದು ಮಲಗುವ ಹಾಸಿಗೆಗಾಗಿ ತನ್ನ ನೋಡಿಕೊಳ್ಳುವವನೊಂದಿಗೆ ಕಿತ್ತಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಈಗ  ಮರಿಯಾನೆಯೊಂದು ಪಕ್ಷಿಯೊಂದಿಗೆ ಕಿತ್ತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಸದಾ ಕಾಲ ಇಂಟರ್‌ನೆಟ್‌ನಲ್ಲಿ ಮನೋರಂಜನೆಗೆ ಸ್ಕ್ರೋಲ್‌ ಮಾಡುವವರು ನೀವಾಗಿದ್ದರೆ ಇದಂತಹ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ನಾಯಿ ಆನೆ ಬೆಕ್ಕು ಮುಂತಾದ ಪ್ರಾಣಿಗಳು ಮನುಷ್ಯರಂತೆ ವರ್ತಿಸುವ ಬುದ್ಧಿವಂತಿಕೆಗೆ ತಾವೇನು ಕಮ್ಮಿ ಇಲ್ಲ ಎಂಬುದನ್ನು ತೋರಿಸುವ ಹಲವು ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದೇ ರೀತಿ ಇಲ್ಲಿ ವಿಡಿಯೋದಲ್ಲಿ ಕಾಣಿಸುವಂತೆ ಆನೆ ಮರಿ ಹಾಗೂ ಕೊಕ್ಕರೆ ಜಾತಿಯ ದೊಡ್ಡ ಪಕ್ಷಯೊಂದು ಕೊಳದಂತಿರುವ ನೀರಿರುವ ಜಾಗಕ್ಕೆ ಬಂದಿದ್ದು, ಕೊಕ್ಕರೆಯನ್ನು ನೋಡಿದ ಆನೆ ಅದನ್ನು ಓಡಿಸಲು ನೋಡುತ್ತದೆ.

 

ಕಲ್ಲಿನಲ್ಲಿ ಕುಳಿತ ಕೊಕ್ಕರೆಗೆ ಕೊಂಬಿನಲ್ಲಿ ನೀರು ಎರಚುವ ಆನೆ ಅದನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತದೆ. ಆದರೆ ಕೊಕ್ಕರೆ ಏನು ಸುಮ್ಮನೆ ಕುಳಿತ್ತಿಲ್ಲ. ಸುಮ್ಮನಿರುವ ನನ್ನನ್ನೇ ಈ ಧಡೂತಿ ಪ್ರಾಣಿ ಕೆಣಕುತ್ತಿದೆ ಇದಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಭಾವಿಸಿದ ಕೊಕ್ಕರೆ ತನ್ನ ಕೊಕ್ಕಿನಿಂದ ಕುಕ್ಕಿ ಅದನ್ನು ಓಡಿಸಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲದೇ ಆನೆಯ ಬೆನ್ನ ಮೇಲೆ ಹೋಗಿ ಕುಳಿತು ಕುಕ್ಕಲು ಆರಂಭಿಸುತ್ತದೆ. ಇದರಿಂದ ಗಾಬರಿಯಾದ ಆನೆ ತನ್ನ ದೇಹವನ್ನೆಲ್ಲಾ ಕುಲುಕಿಸಿ ಕೊಕ್ಕರೆ ತನ್ನ ದೇಹ ಬಿಟ್ಟು ಹೋಗುವಂತೆ ಮಾಡುತ್ತದೆ.

ಬೇಲಿ ದಾಟಲು ಮರಿಗೆ ಸಹಾಯ ಮಾಡುತ್ತಿರುವ ಆನೆಗಳ ಹಿಂಡು: ವಿಡಿಯೋ ವೈರಲ್
ನಂತರ ಕೊಕ್ಕರೆ ಆನೆಯ ದೇಹದಿಂದ ಇಳಿಯುತ್ತದೆ. ಆದರೆ ಆದರೂ ಸುಮ್ಮನಿರದ ಆನೆಮರಿ ಕೊಕ್ಕರೆಯನ್ನು ಸೊಂಡಿನಿಂದ ನೀರಿಗೆ ತಳ್ಳುವುದು ಕಾಲಿನಿಂದ ಒದೆಯುವುದು ಮುಂತಾದ ಕೀಟಲಯನ್ನು ಮಾಡುತ್ತಲೇ ಇದೆ. ಇದರಿಂದ ಮತ್ತೆ ಸಿಟ್ಟಿಗೆದ್ದ ಕೊಕ್ಕರೆ ವಾಪಸ್ ಅನೆಯನ್ನು ಬೆನ್ನಟ್ಟಲು ನೋಡುತ್ತದೆ. 

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಇದನ್ನು 18 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡುವ ವೇಳೆ ಯಾರನ್ನಾದರೂ ಚಿಕ್ಕವರೆಂದು ಪರಿಗಣಿಸಿ ಕೀಟಲೆ ಮಾಡುವುದು ಮೂರ್ಖತನ. ಏಕೆಂದರೆ ಸಣ್ಣ ಹಕ್ಕಿ ಕೂಡ ಆನೆಯನ್ನು ಕುಣಿಸುತ್ತಿದೆ ಎಂದು ಅವರು ಬರೆದಿದ್ದಾರೆ.

ಹಾಸಿಗೆಗಾಗಿ ಮಾವುತನೊಂದಿಗೆ ಆನೆ ಮರಿಯ ಕಿತ್ತಾಟ: ವಿಡಿಯೋ ವೈರಲ್
 

ಮುದ್ದಾದ ಮರಿ ಆನೆಯೊಂದು ತನ್ನ ಸ್ವಂತ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಹಕ್ಕಿಯನ್ನು ಕೀಟಲೆ ಮಾಡುವ ಮೂಲಕ ತುಂಟತನ ತೋರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆನೆಯು ತಮಾಷೆಯಾಗಿ ಹಕ್ಕಿಯ ಮೇಲೆ ಕೆಲವು ಬಾರಿ ನೀರನ್ನು ಚಿಮುಕಿಸುತ್ತದೆ, ಅದು ಪಕ್ಷಿಯನ್ನು ಕೆರಳಿಸುತ್ತದೆ. ಕೋಪಗೊಂಡ ಹಕ್ಕಿ ನಂತರ ಆನೆಗೆ ಪಾಠ ಕಲಿಸಲು ನೀರಿನ ಮೇಲೆ ಹಾರುತ್ತದೆ. ಪಕ್ಷಿಯು ಆನೆಯ ಬೆನ್ನಿನ ಮೇಲೆ ಹತ್ತಿ ಅದನ್ನು ಕುಕ್ಕುತ್ತದೆ . ಒಟ್ಟಿನಲ್ಲಿ ಈ ವಿಡಿಯೋ ಸಣ್ಣವರೆಂದು ತಾತ್ಸಾರ ತೋರಬೇಡಿ ಎಂಬುದನ್ನು ಹೇಳುತ್ತಿದೆ.  

ಕೆಲದಿನಗಳ ಹಿಂದೆ ಪುಟ್ಟ ಮರಿಯಾನೆಯೊಂದು ತನ್ನ ಮಲಗುವ ಮ್ಯಾಟ್‌ಗಾಗಿ ತನ್ನನ್ನು ನೋಡಿಕೊಳ್ಳುವವನೊಡನೆ ಕಿತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
 

Latest Videos
Follow Us:
Download App:
  • android
  • ios