Asianet Suvarna News Asianet Suvarna News

116 ಶ್ವಾನ ಸಾಕಿ,45 ಕೋಟಿ ಆಸ್ತಿ ಮೀಸಲಿಟ್ಟ ಬಾಲಿವುಡ್ ಡ್ಯಾನ್ಸಿಂಗ್ ಸ್ಟಾರ್ ಮಿಥುನ್ ಚಕ್ರವರ್ತಿ!

ನಾಯಿ ಮೇಲೆ ಅನೇಕರಿಗೆ ಅಪಾಯ ಪ್ರೀತಿ ಇರುತ್ತೆ. ಪ್ರೀತಿಯ ನಾಯಿ ಸತ್ತಾಗ ಡಿಪ್ರೆಶನ್ ಗೆ ಹೋಗುವ ಜನರಿದ್ದಾರೆ. ಮನೆಯಲ್ಲಿ ಒಂದೋ ಎರಡೋ ನಾಯಿ ಸಾಕೋದು ಸಹಜ. ಆದ್ರೆ ಈ ನಟನ ನಾಯಿ ಪ್ರೀತಿ ಒಂದು ಲೆವಲ್ ಮೇಲಿದೆ. 
 

Mithun Chakraborty The Star Who Rescues and Loves Dogs roo
Author
First Published Jun 19, 2024, 12:07 PM IST

ಬಾಲಿವುಡ್ ನಲ್ಲಿ ಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಿದೆ (Pet Lovers in Bollywood). ಅನೇಕ ಕಲಾವಿದರು ತಮ್ಮ ಬಳಿ ಸುಂದರ ನಾಯಿಗಳನ್ನು ಇಟ್ಕೊಂಡಿದ್ದಾರೆ. ನಾಯಿಗಳು ಒತ್ತಡ ಕಡಿಮೆ ಮಾಡುತ್ವೆ ಎನ್ನುವ ಮಾತಿದೆ. ಈಗಿನ ದಿನಗಳಲ್ಲಿ ನಾಯಿ ಸಾಕದವರಿಲ್ಲ ಅಂದ್ರೆ ತಪ್ಪಾಗೋದಿಲ್ಲ. ಮನೆಯಲ್ಲಿ ಒಂದೋ ಎರಡೋ ನಾಯಿ ಇರುತ್ತೆ. ಆದ್ರೆ ಈ ನಟನ ಬಳಿ ಒಂದು ಎರಡು ನಾಯಿಯಲ್ಲ ಬರೋಬ್ಬರಿ 116 ನಾಯಿಗಳಿವೆ. ಬರೀ ಈ ನಾಯಿಗಳನ್ನು ಸಾಕಿಲ್ಲ. ಅವುಗಳಿಗೆ ಅಗತ್ಯವಿರುವ ಎಲ್ಲ ಐಷಾರಾಮಿ ವ್ಯವಸ್ಥೆಯನ್ನು ಮಾಡಿದ್ದಾರೆ. ಅದಕ್ಕಾಗಿ 45 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಬಂಗಲೆಯನ್ನೇ ಮೀಸಲಿಟ್ಟಿದ್ದಾನೆ. ಇಷ್ಟಕ್ಕೂ ನಾವು ಹೇಳ್ತಿರೋ ಈ ನಾಯಿ ಪ್ರೇಮಿ ಮತ್ತ್ಯಾರೂ ಅಲ್ಲ ಬಾಲಿವುಡ್ ನ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ. 

ಮಿಥುನ್ ಚಕ್ರವರ್ತಿ (Mithun Chakraborty) ನಾಯಿ ಪ್ರೇಮ: ನಟ ಮಿಥುನ್ ಚಕ್ರವರ್ತಿ, ಬಾಲಿವುಡ್‌ (Bollywood) ನ ದೊಡ್ಡ ಶ್ವಾನ (Dog) ಪ್ರೇಮಿ. ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ತನ್ನ ವಿವಿಧ ಆಸ್ತಿಗಳಲ್ಲಿ ನಟ 116 ನಾಯಿಗಳನ್ನು ಸಾಕಿದ್ದಾರೆ. ವರದಿ ಪ್ರಕಾರ, ಮುಂಬೈ ಬಳಿಯ ಮಡ್ ಐಲ್ಯಾಂಡ್‌ನಲ್ಲಿರುವ ತಮ್ಮ 1.5 ಎಕರೆ ಜಾಗದಲ್ಲಿ ನಟ 76 ನಾಯಿಗಳಿವೆಯಂತೆ. Housing.com ಪ್ರಕಾರ, ಈ ಆಸ್ತಿ ಸುಮಾರು 45 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದರಲ್ಲಿ ಅವರ ವೈಯಕ್ತಿಕ ನಿವಾಸವೂ ಒಂದು. ಆದರೆ, ಜಾಗದ ಹೆಚ್ಚಿನ ಭಾಗವನ್ನು ನಾಯಿಗಳಿಗೆ ಮೀಸಲಿಟ್ಟಿದ್ದಾರೆ ಮಿಥುನ್ ಚಕ್ರವರ್ತಿ. ತನ್ನ ಸ್ನೇಹಿತ ನಾಯಿಗಳಿಗಾಗಿ ಕೆನಲ್‌ಗಳು ಮತ್ತು ಆಟದ ಮೈದಾನಗಳ ವ್ಯವಸ್ಥೆ ಮಾಡಿದ್ದಾರೆ ಮಿಥುನ್.  ನಾಯಿಗಳಿಗೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಈ ಕೆನಲ್ ಹೊಂದಿದೆ. 

ನನ್ನ ಟೀ-ಶರ್ಟ್‌ ಅವ್ರಿಗೆ ನೈಟಿ ತರ ಆಗುತ್ತಂತೆ...ಅವ್ರು ಚಿಕ್ಕ ಇರೋದು; ದಿವ್ಯಾ ದೊಡ್ಡ ಹೆಂಗಸು ಅಂತ ಆರೋಪ ಮಾಡಿದ ಜಿಜಿ

ಹಿಂದಿನ ವರ್ಷ ಸಂದರ್ಶನವೊಂದರಲ್ಲಿ ಮಿಥುನ್ ಚಕ್ರವರ್ತಿ ಸೊಸೆ ನಟಿ ಮದಾಲ್ಸಾ ಶರ್ಮಾ ನಾಯಿಗಳ ಬಗ್ಗೆ ಮಾತನಾಡಿದ್ದರು. ನಾಯಿಗಳಿಗೆ ಪ್ರತ್ಯೇಕ ಕೊಠಡಿಗಳಿವೆ. ನಾಯಿಗಳನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ನಾಯಿಯನ್ನು ಮಕ್ಕಳಂತೆ ನೋಡಿಕೊಳ್ಬೇಕು. ಅವರನ್ನು ಆರೈಕೆ ಮಾಡ್ಬೇಕು. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ನೀಡ್ಬೇಕು. ನಾಯಿಯನ್ನು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಿಗಳನ್ನು ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುತ್ತದೆ ಎಂದು ಅವರು ಹೇಳಿದ್ದರು. 

ಮಿಥುನ್ ಚಕ್ರವರ್ತಿ ಬಳಿ ಇದೆ ಇಷ್ಟೊಂದು ಹಣ : 70ರ ದಶಕದ ಮಧ್ಯಭಾಗದಲ್ಲಿ ಬಾಲಿವುಡ್ ಗೆ ಕಾಲಿಟ್ಟ ನಟ ಮಿಥುನ್ ಚಕ್ರವರ್ತಿ. ಆರಂಭದಲ್ಲಿ ಅವರ ಕೈನಲ್ಲಿ ಇಷ್ಟೊಂದು ಹಣವಿರಲಿಲ್ಲ. ಸರಿಯಾಗಿ ತಲೆ ಮೇಲೊಂದು ಸೂರೂ ಇರಲಿಲ್ಲ. ಮಿಥುನ್ ಚಕ್ರವರ್ತಿ ರೈಲ್ವೆ ನಿಲ್ದಾಣ, ಫುಟ್ಬಾತ್‌ನಲ್ಲಿ ಮಲಗಿದ್ದಿದೆ. ಆದ್ರೆ ಕಾಲ ಹಾಗೇ ಇರಲಿಲ್ಲ. ಒಂದಾದ್ಮೇಲೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ ಮಿಥುನ್ ಚಕ್ರವರ್ತಿ ಈಗ ಕೋಟ್ಯಾಧಿಪತಿ. ಮಿಥುನ್ ಬಳಿ ಸುಮಾರು 400 ಕೋಟಿ ಮೌಲ್ಯದ ಆಸ್ತಿ ಇದೆ. ಭಾರತದಾದ್ಯಂತ ಸುಮಾರು ನೂರು ಡಜನ್ ಆಸ್ತಿಯನ್ನು ಮಿಥುನ್ ಹೊಂದಿದ್ದಾರೆ. ಮಡ್ ಐಲ್ಯಾಂಡ್, ಊಟಿಯಲ್ಲೂ ಮಿಥುನ್ ಮನೆ ಹೊಂದಿದ್ದಾರೆ. ಅಲ್ಲದೆ ಹಲವಾರು ಹೊಟೇಲ್, ಕಾಟೇಜ್ ಮಾಲೀಕ. ಮುಂಬೈ ಬಳಿ ಫಾರ್ಮ್ ಹೌಸ್ ಹೊಂದಿರುವ ಮಿಥುನ್ ಚಕ್ರವರ್ತಿ, ಮೈಸೂರಿನಲ್ಲೂ ಆಸ್ತಿ ಹೊಂದಿದ್ದಾರೆ.  

ಅಮ್ಮನಿಗಿಂತ ಮಗ ಕೇವಲ 12 ವರ್ಷ ಚಿಕ್ಕವ! ಆಹಾ... ಇಲ್ಲಿ ಎಲ್ಲಾ ಸಾಧ್ಯ ಅಂತಿರೋ ನೆಟ್ಟಿಗರು

ಯೋಗಿತಾ ಬಾಲಿಯವರನ್ನು ಮದುವೆಯಾದ ಮಿಥುನ್ ಚಕ್ರವರ್ತಿ ನಾಲ್ಕು ಮಕ್ಕಳ ತಂದೆಯೂ ಹೌದು. ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಮಗುವನ್ನು ದತ್ತು ಪಡೆದು ಸಾಕಿರುವ ಮಿಥುನ್ ನಟನೆಯಿಂದ ಮಾತ್ರವಲ್ಲ ವೈಯಕ್ತಿಕ ಜೀವನದ ಮೂಲಕವೂ ಗಮನ ಸೆಳೆಯುತ್ತಾರೆ.  

Latest Videos
Follow Us:
Download App:
  • android
  • ios