ನನ್ನ ಟೀ-ಶರ್ಟ್‌ ಅವ್ರಿಗೆ ನೈಟಿ ತರ ಆಗುತ್ತಂತೆ...ಅವ್ರು ಚಿಕ್ಕ ಇರೋದು; ದಿವ್ಯಾ ದೊಡ್ಡ ಹೆಂಗಸು ಅಂತ ಆರೋಪ ಮಾಡಿದ ಜಿಜಿ

ಮದುವೆಯಲ್ಲಿ ಹೈಟ್ ಮ್ಯಾಟರ್ ಆಗುತ್ತಾ? ಡಿಫರೆಂಟ್ ಕಾಂಬಿನೇಷನ್‌ ಈ ಜೋಡಿ ನೋಡಿ ಎಲ್ಲರೂ ಶಾಕ್.... 

Colors Kannada Raja Rani 3 Gg and Divya makes fun of their height vcs

ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡ ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳು ಆಗಿರುವ ಗೋವಿಂದೇ ಗೌಡ ಮತ್ತು ದಿವ್ಯಾ ರಾಜಾ ರಾಣಿ ಸೀಸನ್ 3 ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ತಮ್ಮ ಅಫ್‌ಸ್ಕ್ರೀನ್ ಕಾಮಿಡಿ ಲೈಫ್ ಹೇಗಿದೆ ಎಂದು ನಿರೂಪಕಿ ಅನುಪಮಾ ಗೌಡ ಪ್ರಶ್ನೆ ಮಾಡಿದಾಗ ಜಿಜಿ ಮತ್ತು ದಿವ್ಯಾ ಹಾಸ್ಯ ಮಾಡಿದ್ದು ಹೀಗೆ.....

ಮದುವೆ ಮೊದಲು ನಾನು ಜಿಜಿ ಆಗಿದ್ದೆ ಆದರೆ ಮದ್ವೆ ಆದ್ಮೇಲೆ ಡಿಜಿ ಆಗಿದ್ದೀನಿ ಅಂದ್ರೆ ದಿವ್ಯಾ ಗಂಡ ಅಂತ. ಮದುವ ಜೀವನ ಹೇಗಿದೆ ಅಂತ ಹೆಂಡ್ತಿ ಮುಂದೆ ಹೇಳಬೇಕು ಅಂದ್ರೆ ಚೆನ್ನಾಗಿದೆ ಅಂತಾನೇ ಹೇಳಬೇಕು ಎಂದು ಗೋವಿಂದೇ ಗೌಡ ರಾಜಾ ರಾಣಿ ಓಪನಿಂಗ್ ದಿನ ವೇದಿಕೆ ಮೇಲೆ ಮಾತನಾಡಿದ್ದಾರೆ.

ಯಾರೋ ಬಂದು ಏನೇ ಹೇಳಿಕೊಟ್ರು ಕಲಿಯುತ್ತಿದ್ದಾನೆ ಅನ್ನೋ ಭಯ ಶುರುವಾಗಿತ್ತು:ಮಗನ ಬಗ್ಗೆ ಮೇಘನಾ ರಾಜ್

ನಮ್ಮ ಪಯಣ ಮೊದಲು ಸ್ನೇಹಿತರಾಗಿ ಆರಂಭವಾಗಿ ಅಲ್ಲಿಂದ ಕೊಲೀಗ್‌ ಆಮೇಲೆ ಮದುವೆ ಹೀಗಾಗಿ ಜಿಜಿ ನನಗೆ ಪಾರ್ಷ್ಯಲಿ ಫ್ರೆಂಡ್‌ ಪಾರ್ಷ್ಯಲಿ ಗಂಡ. ಎಂಟರ್ಟೈನ್‌ ಮಾಡಿಕೊಂಡು ಬಂದಿರುವ ಜೋಡಿ ನಾವು ಆದರೆ ಮದುವೆ ಆದ ಮೇಲೆ ಎಂಟರ್ಟೈನ್ ಎಂದು ಹೇಳಬೇಕೋ ಗೋಳು ಎಂದು ಹೇಳಬೇಕೋ ಖುಷಿ ಎಂದು ಹೇಳಬೇಕೋ ಗೊತ್ತಿಲ್ಲ. ನಮ್ ಯಜಮಾನ್ರು ಮಾತಿಗೆ ಮುಂಚೆ ನನ್ನನ್ನು ದೊಡ್ಡ ಹೆಂಗಸು ಅಂತಾರೆ ಅಲ್ಲ ಅವ್ರು ಇರುವೆ ರೀತಿ ಇರುವುದಕ್ಕೆ ನನ್ನನ್ನು ಯಾಕೆ ಆನೆ ಎಂದು ಕರೆಯಬೇಕು. ನಾನು ದೊಡ್ಡ ಹೆಂಗಸು ಅವರ ಅಡ್ಡ ನಿಂತುಕೊಂಡರೆ ಕಾಣೋದೇ ಇಲ್ಲ ಅಂತಾರೆ. ಅದು ಅಷ್ಟೇ ಅಲ್ಲ ಜಿಜಿ ಲಾಜಿಕ್ ಎಷ್ಟು ಅಂದ್ರೆ ನನ್ನ ಟೀ-ಶರ್ಟ್‌ ಇವ್ರರಿಗೆ ನೈಟಿ ಆಗುತ್ತೆ ಅಂತ ಅಂದ್ರೆ ಚಿಕ್ಕದಾಗಿ ಇರ್ಬೇಕು? ನಾನು ಫಸ್ಟ್‌ ಫ್ಲೋರ್‌ನಿಂದ ಕೈ ಹಿಡಿದು ಇವರನ್ನು ಕರೆದುಕೊಂಡರೆ ಅದು ಲಿಫ್ಟ್ ಅಂತೆ. ನಾನು ಸ್ಪೂನ್ ಹಿಡಿದುಕೊಂಡರೆ ಅದು ಅವರಿಗೆ ಸೈಟ್‌ ಅಂತೆ. ನನ್ನ ಕೈಯಲ್ಲಿ ನಿಂಬೆ ಹಣ್ಣು ಇದ್ದರೆ ಅವರ ಕೈಯಲ್ಲಿ ವಾಟರ್‌ ಮೆಲನ್ ಅಂತೆ ಎಂದು ದಿವ್ಯಾ ಹೇಳಿದ್ದಾರೆ.

ಮನಸ್ಸಿಗೆ ಹತ್ತಿರದವರು ಕಷ್ಟ ಅನುಭವಿಸುತ್ತಿದ್ದಾರೆ, ಮುಂದಿನ ವರ್ಷದೊಳಗೆ ಏನಾದ್ರೂ ಸಾಧನೆ ಮಾಡ್ತೀನಿ: ರಕ್ಷಕ್ ಬುಲೆಟ್

ದಿವ್ಯಾ ಹಿಂದೆ ಜಿಜಿಯನ್ನು ನಿಲ್ಲಿಸಿದ ತೀರ್ಪುಗಾರರು ಹೌದು ಹೌದು ದಿವ್ಯಾ ದೊಡ್ಡ ಹೆಂಗಸು ಎಂದು ಒಪ್ಪಿಕೊಂಡಿದ್ದಾರೆ. ದಿವ್ಯಾ ಕಾಮಿಡಿಗೆ ಅದಿತಿ ಪ್ರಭುದೇವ, ಸೃಜನ್ ಲೋಕೇಶ್ ಮತ್ತು ತಾರಾ ಅನುರಾಧ ಬಿದ್ದು ಬಿದ್ದು ನಕ್ಕಿದ್ದಾರೆ. 

 

Latest Videos
Follow Us:
Download App:
  • android
  • ios