Asianet Suvarna News Asianet Suvarna News

ಪಾಠ ಮಾಡೋ ಪ್ರೊಫೆಸರ್ ಮೇಲೆ ಹುಚ್ಚು ಪ್ರೀತಿ ಇವಳಿಗೆ, ನಿದ್ರೆ, ಊಟ ಎಲ್ಲವೂ ಬಿಟ್ಟಾಗಿದೆ!

ಯೌವನದಲ್ಲಿ ಆಕರ್ಷಣೆ ಸಹಜ. ಒಬ್ಬರು ಒಂದು ಕಾರಣಕ್ಕೆ ಆಕರ್ಷಿಸಿದ್ರೆ ಇನ್ನೊಬ್ಬರು ಇನ್ನೊಂದು ಕಾರಣಕ್ಕೆ ಆಕರ್ಷಿತರಾಗ್ತಾರೆ. ಹಾಗಂತ ಇದನ್ನೇ ಪ್ರೀತಿ ಅಂತಾ ನಂಬಿ ಕುಳಿತ್ರೆ ಮುಂದಿನ ಭವಿಷ್ಯ ಕಷ್ಟವಾಗುತ್ತೆ. 
 

Medical Student Love Story
Author
First Published Nov 18, 2022, 4:41 PM IST

 ಪ್ರೀತಿ, ಯಾವಾಗ, ಯಾರಿಗೆ ಬೇಕಾದ್ರೂ ಹುಟ್ಟಬಹುದು ನಿಜ. ಪ್ರೀತಿಗೆ ವಯಸ್ಸಿನ ಅಂತರ ಕೂಡ ಇಲ್ಲ. ಪ್ರೀತಿ ಮತ್ತೆ ಆಕರ್ಷಣೆ ಮಧ್ಯೆ ವ್ಯತ್ಯಾಸವಿದೆ. ಅದು ಅನೇಕರಿಗೆ ತಿಳಿದಿಲ್ಲ. ಆಕರ್ಷಣೆಯನ್ನೇ ಪ್ರೀತಿ ಅಂದ್ಕೊಂಡು ಅದೇ ಗುಂಗಿನಲ್ಲಿ ಇಡೀ ಜೀವನ ಹಾಳು ಮಾಡಿಕೊಳ್ತಾರೆ. ಓದುವ ವಯಸ್ಸಿನಲ್ಲಿ ಈ ಆಕರ್ಷಣೆ ಸಹಜ. ವಿದ್ಯಾರ್ಥಿಗಳು ಅದನ್ನು ಅರಿತು ಮುನ್ನಡೆದ್ರೆ ಅವರ ಭವಿಷ್ಯ ಭದ್ರವಾಗಿರುತ್ತದೆ. ಈ ಹುಡುಗಿ ಕೂಡ ಪ್ರೀತಿಯ ತೊಳಲಾಟದಲ್ಲಿದ್ದಾಳೆ. ಓದಿಗಿಂತ ವ್ಯಕ್ತಿ ಮುಖ್ಯವಾಗಿದ್ದು, ಏನು ಮಾಡ್ಬೇಕು ಎಂಬುದು ತಿಳಿಯುತ್ತಿಲ್ಲವಂತೆ.

ಆಕೆಗೆ ಈಗ 20 ವರ್ಷ. ಮೆಡಿಕಲ್ (Medical) ಓದುತ್ತಿದ್ದಾಳೆ. ವೈದ್ಯೆ (Doctor) ಯಾಗ್ಬೇಕೆಂಬ ಆಕೆ ಕನಸು ಯಾಕೋ ಈಗ ಹಾದಿ ತಪ್ಪುತ್ತಿದೆ. ತನಗೆ ಪಾಠ ಹೇಳುವ ಪ್ರೊಫೆಸರ್ (Professor) ಮೇಲೆ ಹುಡುಗಿಗೆ ಮನಸ್ಸಾಗಿದೆ. ಮೊದಲ ನೋಟದಲ್ಲಿಯೇ ಅವರು ನನ್ನನ್ನು ಸೆಳೆದ್ರು ಎನ್ನುತ್ತಾಳೆ ಹುಡುಗಿ.

ಪ್ರೊಫೆಸರ್ ಹುಡುಗಿಗಿಂತ 10- 12 ವರ್ಷ ದೊಡ್ಡವರಂತೆ. ಇಡೀ ದಿನ ಅವರ ಬಗ್ಗೆ ಆಲೋಚನೆ ಮಾಡುವ ಹುಡುಗಿಗೆ ವಿದ್ಯಾಭ್ಯಾಸ (Education) ದ ಮೇಲೆ ಆಸಕ್ತಿ ಹೋಗಿದೆಯಂತೆ. ಗಮನ ಕೇಂದ್ರೀಕರಿಸಲು ಸಾಧ್ಯವಾಗ್ತಿಲ್ಲ ಎನ್ನುತ್ತಾಳೆ ಆಕೆ. ಸೋಷಿಯಲ್ ಮೀಡಿಯಾದಲ್ಲೂ ಅವರನ್ನು ಫಾಲೋ ಮಾಡ್ತಿದ್ದಾಳೆ. ಪ್ರೊಫೆಸರ್ ಗೆ ಕೆಲ ದಿನಗಳ ಹಿಂದಷ್ಟೆ ಮದುವೆಯಾಗಿದೆಯಂತೆ. ಹಾಗಾಗಿ ಅವರು ಮತ್ತಷ್ಟು ಗಂಭೀರವಾಗಿದ್ದಾರಂತೆ. ಆದ್ರೆ ನನ್ನ ಮೇಲೆ ನನಗೆ ನಿಯಂತ್ರಣವಿಲ್ಲ ಎನ್ನುತ್ತಾಳೆ ಹುಡುಗಿ. ಪ್ರೊಫೆಸರನ್ನು ಕದ್ದುಮುಚ್ಚಿ ನೋಡುವ ನಾನು ಸದಾ ಅವರ ಬಳಿ ಇರಲು ಇಷ್ಟಪಡ್ತೇನೆ. ಆದ್ರೆ ಅವರಿಗೆ ಇದು ಇಷ್ಟವಾಗೋದಿಲ್ಲ. ನನ್ನಿಂದ ದೂರವಿರ್ತಾರೆ. ನನಗೆ ಗೊತ್ತು, ವಿವಾಹಿತ ಹಾಗೂ ನನಗಿಂತ ದೊಡ್ಡ ವ್ಯಕ್ತಿಯನ್ನು ನಾನು ಬಯಸುವುದು ಸರಿಯಲ್ಲ ಎಂದು. ಆದ್ರೆ ಅವರ ವಿಷ್ಯದಲ್ಲಿ ನಾನು ಹುಚ್ಚಿಯಾಗಿದ್ದೇನೆ. ನನಗೆ ಅವರನ್ನು ಮರೆಯಲು ಸಾಧ್ಯವಾಗ್ತಿಲ್ಲ ಎನ್ನುತ್ತಾಳೆ ಆಕೆ.  

ತಜ್ಞರ ಸಲಹೆ : ಯಾವ ಸಂಬಂಧಕ್ಕೆ (Relationship) ಭವಿಷ್ಯವಿಲ್ಲವೋ ಆ ಸಂಬಂಧದ ಬಗ್ಗೆ ಆಲೋಚನೆ ಮಾಡುವುದು ಸಂಪೂರ್ಣ ತಪ್ಪು ಎನ್ನುತ್ತಾರೆ ತಜ್ಞರು. ಪ್ರೊಫೆಸರ್ ಮೇಲೆ ನಿಮಗೆ ಈ ಭಾವನೆ ಬಂದಿರುವುದು ವಿಶೇಷವಲ್ಲ. ಅನೇಕರು ಶಿಕ್ಷಕರಿಗೆ ಆಕರ್ಷಿತರಾಗಿರುತ್ತಾರೆ. ಆದ್ರೆ ಅವರು ಶಿಕ್ಷಕರು ಎಂಬುದನ್ನು ಮರೆಯಬಾರದು. ಅದು ಬರೀ ಆಕರ್ಷಣೆ ಮಾತ್ರ. ಹಾಗಾಗಿ ಭಾವನೆಗಳನ್ನು ನಿಯಂತ್ರಿಸಲು ಕಲಿಯಬೇಕು ಎಂಬುದು ತಜ್ಞರ ಮಾತು. ನಿಮಗೆ ನಿಮ್ಮಿಷ್ಟದ ಹುಡುಗ ಸಿಕ್ಕಿದ ನಂತ್ರ ನೀವು ಪ್ರೊಫೆಸರ್ ಮರೆಯುತ್ತೀರಿ. ಶಿಕ್ಷಕರ ಮೇಲಿರುವ ಪ್ರೀತಿ, ಆಕರ್ಷಣೆ (Attraction) ಎಲ್ಲವೂ ಹೊರಟು ಹೋಗುತ್ತದೆ. ಈಗ ವಿದ್ಯಾರ್ಥಿನಿಯಂತೆ ನಡೆದುಕೊಳ್ಳುವ ಅವಶ್ಯಕತೆಯಿದೆ. ನಿಮ್ಮ ವರ್ತನೆ, ಪ್ರೊಫೆಸರ್ ಗೆ ಮುಜುಗರ ತರಬಹುದು. ಸಹಪಾಠಿಗಳಿಗೆ (Classmates) ವಿಷ್ಯ ತಿಳಿದ್ರೆ ನೀವು ನಗೆಪಾಟಲಿಗೀಡಾಗಬಹುದು. ಹಾಗೆಯೇ ನಿಮ್ಮ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದು. ನಿಮ್ಮ ಗುರಿ ಓದಿನ ಕಡೆಗಿರಬೇಕು ಎನ್ನುತ್ತಾರೆ ತಜ್ಞರು.

Real Story : ಸಂಬಂಧಿಕರಿಂದ ಗೊತ್ತಾಯ್ತು ಪತಿ ಸತ್ಯ.. ದಂಗಾದ ಪತ್ನಿ

ಮೆಡಿಕಲ್ ಅಭ್ಯಾಸ (Medical Education) ಮಾಡುವವರು ಅನೇಕ ವಿಷ್ಯದಲ್ಲಿ ಪರಿಣಿತಿ ಹೊಂದಿರಬೇಕು. ನೀವಿಗ ಅಭ್ಯಾಸ ಬಗ್ಗೆ ಹೆಚ್ಚು ಗಮನ ನೀಡಿದ್ರೆ ನಿಧಾನವಾಗಿ ನಿಮ್ಮ ಪ್ರೀತಿ ಹುಚ್ಚು ಕಡಿಮೆಯಾಗುತ್ತದೆ. ಸಾಮಾಜಿಕ ಜಾಲತಾಣವನ್ನು (Social Media) ಹೆಚ್ಚೆಚ್ಚು ನೋಡುವುದು ಕೂಡ ಒಳ್ಳೆಯದಲ್ಲ. ಇವೆರಡರಿಂದ ಹೊರಬಂದು ಗುರಿ ಸಾಧನೆಗೆ ಮಹತ್ವ ನೀಡಿ ಎಂದಿದ್ದಾರೆ ತಜ್ಞರು.

Shraddha Murder Case: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು

ಪ್ರೊಫೆಸರ್ ಬಗ್ಗೆ ಆಲೋಚನೆ ಬರ್ತಿದ್ದಂತೆ ನೀವು ನಿಮ್ಮ ಗಮನವನ್ನು ಬೇರೆಡೆ ತಿರುಗಿಸಬೇಕು. ಅವರಿಂದ ಆದಷ್ಟು ದೂರ ಉಳಿಯಲು ಪ್ರಯತ್ನಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಅನ್ಫಾಲೋ ಮಾಡಿದ್ರೆ ಒಳ್ಳೆಯದು. ಈ ಎಲ್ಲ ಉಪಾಯದಿಂದಲೂ ನಿಮ್ಮ ಮನಸ್ಸು ತಿಳಿಯಾಗ್ಲಿಲ್ಲವೆಂದ್ರೆ ನೀವು ತಜ್ಞರನ್ನು ಮುಖಾಮುಖಿ ಭೇಟಿಯಾಗುವುದು ಒಳ್ಳೆಯದು.  
 

Follow Us:
Download App:
  • android
  • ios