Shraddha Murder Case: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು
ಪ್ರೀತಿ ಕುರುಡು ನಿಜ. ಹಾಗಂತ ಪ್ರೀತಿಸಿದ ವ್ಯಕ್ತಿಗಳನ್ನು ಕುರುಡಾಗಿ ನಂಬಬಾರದು. ಅವರ ವ್ಯಕ್ತಿತ್ವವನ್ನು ಪ್ರತಿ ದಿನ ಸ್ಟಡಿ ಮಾಡ್ಬೇಕು. ಇಲ್ಲವೆಂದ್ರೆ ಯಾವಾಗ ಅಪಾಯ ಬರುತ್ತೆ ತಿಳಿಯೋದಿಲ್ಲ. ಒಂದು ದಿನ ಶ್ರದ್ಧಾ ಸ್ಥಾನದಲ್ಲಿ ನಾಳೆ ನೀವಿರ್ತೀರಿ.
ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಶ್ರದ್ಧಾ ಪ್ರೇಮಿ ಅಫ್ತಾಬ್ ಶ್ರದ್ಧಾಳನ್ನು 35 ತುಂಡುಗಳಾಗಿ ಕತ್ತರಿಸಿದ್ದ. ಪ್ರೀತಿಸುತ್ತಿದ್ದ ವ್ಯಕ್ತಿ ಇಷ್ಟು ಕ್ರೂರನಾಗ್ತಾನಾ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ. ನಾವು ನಂಬುವ ವ್ಯಕ್ತಿಗಳ ಸ್ವಭಾವದ ಬಗ್ಗೆ ನಮಗೆ ಸ್ವಲ್ಪವೂ ಅರಿವಿಲ್ಲದೆ ಹೋದ್ರೆ ಇಂಥ ಘಟನೆಗಳು ಪದೇ ಪದೇ ನಡೆಯುತ್ತವೆ.ಇಂಥ ಘಟನೆಗಳು ಬೆಳಕಿಗೆ ಬಂದಾಗ ಅವರ ವ್ಯಕ್ತಿತ್ವದ ಬಗ್ಗೆ ಚರ್ಚೆಗಳಾಗುತ್ತವೆ. ಒಬ್ಬ ವ್ಯಕ್ತಿಯ ಮುಖ ನೋಡಿದ್ರೆ ಆತನ ಸ್ವಭಾವ (Nature ) ಪತ್ತೆ ಹಚ್ಚಲು ಸಾಧ್ಯವಿಲ್ಲ. ಕ್ರೂರ ಸ್ವಭಾವದ ವ್ಯಕ್ತಿಗಳು ಮೊದಲಿನಿಂದಲೇ ಭಿನ್ನವಾಗಿರುತ್ತಾರೆ. ಅವರ ಬಾಲ್ಯ (childhood) ಸಾಮಾನ್ಯ ಮಕ್ಕಳಂತಿರುವುದಿಲ್ಲ. ಬಾಲ್ಯದಿಂದಲೂ ನಡವಳಿಕೆ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಇದು ಮುಂದುವರಿದಂತೆ ಆಂಟಿ ಸೋಶಿಯಲ್ ವ್ಯಕ್ತಿತ್ವದ ಬೆಳೆಯುತ್ತದೆ ಎನ್ನುತ್ತಾರೆ ತಜ್ಞರು.
ಅಂತಹವರನ್ನು ಮನೋರೋಗಿ (Psychopath) ಎಂದು ಕರೆಯಲಾಗುತ್ತದೆ. ಆದ್ರೆ ಅದನ್ನು ಗುರುತಿಸುವುದು ಕಷ್ಟ. ಸರಿಯಾಗಿ ಅವರನ್ನು ಸ್ಟಡಿ ಮಾಡಿದಾಗ ಮಾತ್ರ ಪತ್ತೆ ಹಚ್ಚಬಹುದು. ಇದು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಬಾಲ್ಯದಿಂದ 16 ವರ್ಷ ವಯಸ್ಸಿನವರೆಗೆ ಅವರ ಮನಸ್ಥಿತಿ ಬೆಳವಣಿಗೆಯಾಗುತ್ತಲೇ ಇರುತ್ತದೆ. 16ರ ನಂತ್ರ ಮತ್ತೊಂದಿಷ್ಟು ಸ್ವಭಾವ ಸೇರಿಕೊಳ್ಳುತ್ತದೆ. ಇಂತಹವರ ಬಾಲ್ಯ ತುಂಬಾ ಕೆಟ್ಟದ್ದಾಗಿರುತ್ತದೆ. ಬಹುಶಃ ಅಫ್ತಾಬ್ ಕೂಡ ತನ್ನ ಬಾಲ್ಯದಲ್ಲಿ ಸಾಕಷ್ಟು ಹೊಡೆತಗಳನ್ನು, ನಿಂದನೆಗಳನ್ನು ನೋಡಿರಬಹುದು. ಇದರಿಂದ ಅವನ ಸ್ವಭಾವ ಹೀಗಿದೆ. ಪಾಲಕರಿಂದ ಸದಾ ನಿಂದನೆಗೊಳಗಾಗಿದ್ದರೆ ಅಥವಾ ಅವನಿಗೆ ಮಾತನಾಡಲು ಅವಕಾಶ ನೀಡದಿದ್ದರೆ ಇಂಥ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಮಗು ಬೆಳೆಯುತ್ತಿದ್ದಂತೆ ಜನರೊಂದಿಗಿನ ಭಾವನಾತ್ಮಕ ಬಾಂಧವ್ಯ ಸಾಯುತ್ತದೆ. ಕೋಪ ಮತ್ತು ಆಕ್ರಮಣಶೀಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಅವರಿಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ತಜ್ಞರು.
Games for Couple: ದೊಡ್ಡೊರು ಆಟ ಆಡ್ಬಾರ್ದು ಅಂತೇನಿಲ್ಲ, ಪತಿ-ಪತ್ನಿ ಆಟವಾಡಿ ಬಾಂಡಿಂಗ್ ಹೆಚ್ಚಿಸಿಕೊಳ್ಳಿ
ಮಗುವನ್ನು ಬೆಳೆಸುವಾಗ್ಲೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಮಗುವನ್ನು ಅತಿಯಾಗಿ ಮುದ್ದಿಸುತ್ತಿದ್ದರೆ, ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನು ಹೇಳದೆ ಇದ್ದರೆ ಇದು ಕೂಡ ತಪ್ಪು. ಮಗು ಕೇಳಿದ ತಕ್ಷಣ ಪಾಲಕರು ವಸ್ತುಗಳನ್ನು ನೀಡ್ತಿದ್ದರೆ ಅದು ಮಗುವಿಗೆ ಅಭ್ಯಾಸವಾಗುತ್ತದೆ. ದೊಡ್ಡದಾದ್ಮೇಲೆ ಕೇಳಿದ್ದು ತಕ್ಷಣ ಸಿಕ್ಕಿಲ್ಲವೆಂದ್ರೆ ಆತ ಆಕ್ರಮಣ ಮಾಡಲು ಶುರುಮಾಡ್ತಾನೆ. ಹಾಗಾಗಿ ಕೇಳಿದ ತಕ್ಷಣ ಮಕ್ಕಳಿಗೆ ಏನನ್ನೂ ನೀಡಬೇಡಿ. ಕೆಲವೊಮ್ಮೆ ನಿರಾಕರಿಸಬೇಕು. ನೀವು ಇಲ್ಲ ಎಂದಾಗ ಮಗು ಹೇಗೆ ವರ್ತಿಸುತ್ತದೆ ಎಂಬುದನ್ನು ಪರೀಕ್ಷಿಸಬೇಕು ಎನ್ನುತ್ತಾರೆ ತಜ್ಞರು.
ದಾರಿ ತಪ್ಪುತ್ತಿದ್ದಾರೆ ಯುವ ಜನತೆ : ಅಫ್ತಾಬ್, ಸೈಕಾಲಜಿ ಥ್ರಿಲ್ಲರ್ ಸರಣಿ ನೋಡಿ ನಂತ್ರ ಕೊಲೆ ಮಾಡಿರೋದಾಗಿ ಹೇಳಿದ್ದಾನೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ಹೀರೋ ಹಾಗೂ ವಿಲನ್ ಗೆ ವ್ಯತ್ಯಾಸವಿಲ್ಲದಂತಾಗಿದೆ. ವಿಲನ್ ಮಾಡುವ ಕೆಲಸವನ್ನೇ ಸರಿ ಎನ್ನುವ ರೀತಿಯಲ್ಲಿ ತೋರಿಸಲಾಗುತ್ತಿದೆ. ಇವು ಯುವಜನತೆ ಮೇಲೆ ಪ್ರಭಾವ ಬೀರುತ್ತಿದೆ. ಹಾಗಾಗಿ ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ಕೂಡ ಅಲ್ಲಿ ಹೇಳುವ ಅವಶ್ಯಕತೆಯಿದೆ. ಇಷ್ಟೇ ಅಲ್ಲ ಅಳು, ನಗು, ಸಂತೋಷ ಎಲ್ಲವೂ ಮನುಷ್ಯನ ಸಹಜ ಸ್ವಭಾವ. ಆದ್ರೆ ಫೈಟಿಂಗ್ ನೋಡಿದಾಗ ಸಂತೋಷವಾಗ್ತಿದ್ದರೆ ನೋವಿನ ಸಂದರ್ಭದಲ್ಲಿ ಅಳು ಬರದೆ ಇದ್ದರೆ ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂದೇ ಅರ್ಥ. ಮನೋವೈದ್ಯರನ್ನು ಭೇಟಿಯಾಗುವುದು ಸೂಕ್ತ. ಆಪ್ತರು ಸತ್ತಾಗಲೂ ನೋವಾಗ್ತಿಲ್ಲ, ಅಳು ಬರ್ತಿಲ್ಲವೆಂದ್ರೆ ಇದು ಸಮಸ್ಯೆಯ ವಿಷ್ಯ ಎನ್ನುತ್ತಾರೆ ಮನೋವೈದ್ಯರು.
ದಾಂಪತ್ಯದಲ್ಲಿ ಜಗಳ ಇಲ್ಲವೆಂದರೆ ಎಂಥ ಸ್ವಾರಸ್ಯ? ಆದರೆ ಪ್ಯಾಚ್ ಅಪ್ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್
ಪ್ರೀತಿಪಾತ್ರರ ನಡವಳಿಕೆ ಗಮನಿಸಿ : ಪ್ರೀತಿಸುವ ವ್ಯಕ್ತಿ (Person) ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ತಿಳಿಯುವುದು ಮುಖ್ಯ ಎನ್ನುತಾರೆ ತಜ್ಞರು. ಸಂಗಾತಿಯನ್ನು ತುಂಬಾ ನಿಯಂತ್ರಿಸುತ್ತಿದ್ದರೆ, ಯಾವುದೇ ಗಲಾಟೆಯ ಕೊನೆಯೂ ತಾನು ಹೇಳಿದಂತೆ ಅಂತ್ಯವಾಗಬೇಕೆಂಬ ಸ್ವಭಾವ ಹೊಂದಿದ್ದರೆ ಅದು ಅಪಾಯಕಾರಿ. ಅಫ್ತಾಬ್ ಮತ್ತು ಶ್ರದ್ಧಾ ವಿಷ್ಯದಲ್ಲೂ ಇದೆ ಆಗಿದೆ. ಅನೇಕ ಬಾರಿ ಇಬ್ಬರು ಜಗಳವಾಡಿರಬಹುದು. ಆದ್ರೆ ಅಫ್ತಾಬ್ ಮಾತಿನ ಮೂಲಕ ಆಕೆಯನ್ನು ನಿಯಂತ್ರಿಸಿ, ದೆಹಲಿಗೆ ಕರೆತಂದಿದ್ದಾನೆ. ಇಂಥ ವ್ಯಕ್ತಿಗಳು ಹೆಚ್ಚು ಅಪಾಯಕಾರಿ.