Asianet Suvarna News Asianet Suvarna News

Real Story : ಸಂಬಂಧಿಕರಿಂದ ಗೊತ್ತಾಯ್ತು ಪತಿ ಸತ್ಯ.. ದಂಗಾದ ಪತ್ನಿ

ಮಾನಸಿಕ ಖಾಯಿಲೆಗೂ ಚಿಕಿತ್ಸೆಯಿದೆ. ಈ ಸತ್ಯವನ್ನು ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅನೇಕ ಬಾರಿ ಇದೇ ಸಮಸ್ಯೆ ಮದುವೆ ಮುರಿದುಬೀಳಲು ಕಾರಣವಾಗುತ್ತದೆ. ಪತಿಗಿರುವ ಮಾನಸಿಕ ಖಾಯಿಲೆ ಪತ್ನಿಗೆ ಭಯ ಹುಟ್ಟಿಸಿದ್ದು, ದೂರವಾಗುವ ಆಲೋಚನೆ ಮಾಡ್ತಿದ್ದಾಳೆ.
 

Bipolar Personality Disorder
Author
First Published Nov 16, 2022, 4:35 PM IST

ಮಾನಸಿಕ ರೋಗವನ್ನು ನಮ್ಮ ಸಮಾಜ ಈಗ್ಲೂ ದೂರವಿಟ್ಟಿದೆ. ಮಾನಸಿಕ ಸಮಸ್ಯೆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವವರು ಬಹಳ ಕಡಿಮೆ. ಮನಸ್ಸಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಂಡ್ರೂ ವೈದ್ಯರ ಬಳಿ ಹೋಗೋದಿಲ್ಲ. ರೋಗಿ ಕೂಡ ತನಗೆ ಸಮಸ್ಯೆಯಿದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬ ಗಾದೆಯಿದೆ. ಆದ್ರೆ ಅನಾರೋಗ್ಯದ ವಿಷ್ಯವನ್ನು ಮುಚ್ಚಿಟ್ಟರೆ ಅದು ಮುಂದೆ ಸಮಸ್ಯೆಯಾಗುತ್ತದೆ. ಈ ಮಹಿಳೆಗೂ ಮದುವೆ ಮುನ್ನ ಗಂಡನ ಯಾವುದೇ ಸಮಸ್ಯೆ ಗೊತ್ತಿರಲಿಲ್ಲ. ವಿಷ್ಯ ಗೊತ್ತಾದ ಮಹಿಳೆ ಉಭಯ ಸಂಕಟದಲ್ಲಿದ್ದಾಳೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬ ಗೊಂದಲ ಕಾಡ್ತಿದೆ.

ಆಕೆಗೆ 33 ವರ್ಷ. ಆಕೆ ಪತಿಗೆ 40 ವರ್ಷ. ಮುದ್ದಾದ ಒಂದು ಗಂಡು ಮಗುವಿದೆ. ಮನೆಯಲ್ಲಿ ಬೇರೆ ಯಾವುದೇ ಸಮಸ್ಯೆಯಿಲ್ಲ. ಗಂಡನ ಅತಿ ಕೋಪ (Anger) ವೇ ಇವಳಿಗೆ ಭಯ (Fear) ಹುಟ್ಟಿಸಿದೆ. ಚಿಕ್ಕಪುಟ್ಟ ವಿಚಾರಕ್ಕೂ ಗಂಡ ಕೋಪ ಮಾಡಿಕೊಳ್ತಾನಂತೆ. 37 ವರ್ಷಗಳ ಕಾಲ ಒಂಟಿಯಾಗಿ ಜೀವನ ನಡೆಸಿದ್ದ ಕಾರಣ ಪತಿ ಹೀಗೆ ಆಡ್ತಿದ್ದಾನೆಂದು ಪತ್ನಿ ಭಾವಿಸಿದ್ದಳಂತೆ. ಆದ್ರೆ ಎರಡು ತಿಂಗಳ ಗರ್ಭಿಣಿ (Pregnant) ಯಾದಾಗ ಸತ್ಯ ಗೊತ್ತಾಗಿದೆ.

SHRADDHA MURDER CASE: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು

ಪತಿ ಕಡೆಯ ಸಂಬಂಧಿಕರು ಬಾಂಬ್ ಸಿಡಿಸಿದ್ದಾರೆ. ಮದುವೆ (Marriage) ಗೆ ಐದು ವರ್ಷ ಮೊದಲು, ಆತನಿಗೆ ಬೈಪೋಲಾರ್ ಸಮಸ್ಯೆಯಿದೆ ಎಂದು ವೈದ್ಯರು ಹೇಳಿದ್ದರಂತೆ. ಆದ್ರೆ ಈ ವಿಷ್ಯವನ್ನು ಆಕೆ ಪತಿಯಾಗ್ಲಿ, ಅತ್ತೆ – ಮಾವನಾಗ್ಲಿ ಹೇಳಿಲ್ಲ. ಮದುವೆ ನಿಶ್ಚಿತವಾದ್ಮೇಲೆ ಬರೀ 7 ತಿಂಗಳು ನಮ್ಮಿಬ್ಬರಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಆಗ ಕೂಡ ಯಾರೂ ವಿಷ್ಯ ಹೇಳಿರಲಿಲ್ಲ. ಮದುವೆಯಾದ್ಮೇಲೂ ಎಲ್ಲವನ್ನೂ ಮುಚ್ಚಿಟ್ಟಿದ್ದರು ಎನ್ನುತ್ತಾಳೆ ಮಹಿಳೆ. ಪತಿಯ ಕೋಪ ನನಗೆ ಭಯ ಹುಟ್ಟಿಸಿದೆ. ಎರಡುವರೆ ವರ್ಷದ ಮಗನನ್ನು ಪತಿ ಕೋಪದಲ್ಲಿ ಸಾಯಿಸಿದ್ರೆ ಎಂಬ ಆತಂಕವಿದೆ ಎನ್ನುತ್ತಾಳೆ ಮಹಿಳೆ. ಕೆಲ ತಿಂಗಳ ಹಿಂದೆ ಮಗುವಿಗೆ ಕೋಪದಲ್ಲಿ ಪತಿ ಕಪಾಳಮೋಕ್ಷ ಮಾಡಿದ್ದನಂತೆ. ವಿಚ್ಛೇದನ ತೆಗೆದುಕೊಳ್ಳುವ ಆಲೋಚನೆ ಮಾಡ್ತಿದ್ದೇನೆ. ಆದ್ರೆ ಇದು ಮಗುವಿನ ಮೇಲೆ ಪರಿಣಾಮ ಬೀರಬಹುದು ಎಂಬ ಭಯವಿದೆ ಎನ್ನುತ್ತಾಳೆ ಮಹಿಳೆ.

ತಜ್ಞರ ಸಲಹೆ : ಪದೇ ಪದೇ ಮೂಡ್ ಸ್ವಿಂಗ್ ಆಗುವು ಮೂಲಕ ತಮ್ಮನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ಬೈಪೋಲಾರ್ (Bipolar Disorder) ಎಂದು ಕರೆಯಲಾಗುತ್ತದೆ. ಇದು ಜೀವನ ಪರ್ಯಂತ ಕಾಡುವ ಖಾಯಿಲೆ. ಮದುವೆಗೆ ಮುನ್ನ ಮಾನಸಿಕ ಸಮಸ್ಯೆಯಿರುವ ವಿಷ್ಯವನ್ನು ಮುಚ್ಚಿಟ್ಟಿದ್ದು ತಪ್ಪು. ಹಾಗಂತ ದಾಂಪತ್ಯ ಮುರಿದುಕೊಳ್ಳುವುದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. ಮದುವೆಯಾಗಿ ಒಂದು ಮಗುವಿದೆ. ವಿಚ್ಛೇದನ ಮಗುವಿನ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ಬೆಸ್ಟ್ ಫ್ರೆಂಡನ್ನ ಮದ್ವೆ ಆದ್ರೆ ಜೀವನ ಪೂರ್ತಿ ಖುಷಿಯೋ ಖುಷಿ

ಸಮಸ್ಯೆ ಬಂದಾಗ ವಿಚ್ಛೇದನ ಪಡೆಯುವ ಬದಲು ಹೊಂದಾಣಿಕೆ ಮುಖ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. ಪತಿಯ ಈ ಸಮಸ್ಯೆಗೆ ಇಬ್ಬರು ಕುಳಿತು ಪರಿಹಾರ ಕಂಡುಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ. ಪತಿಗೆ ಸಮಸ್ಯೆ ಏನಾಗ್ತಿದೆ ಎಂಬುದನ್ನು ವಿವರಿಸಬೇಕು. ಅವರ ವರ್ತನೆಯಿಂದ ಮಗ ಹಾಗೂ ನಿಮ್ಮಲ್ಲಿ ಯಾವ ಭಯವಿದೆ ಎಂಬುದನ್ನು ತಿಳಿಸಿ ಹೇಳಬೇಕು. ಪತಿ ಬಳಿ ಮುಕ್ತವಾಗಿ ಮಾತನಾಡುವ ಅವಶ್ಯಕತೆಯಿದೆ. ಅವಶ್ಯವೆನಿಸಿದ್ರೆ ತಜ್ಞರ ಸಹಾಯ ಪಡೆಯಬಹುದು. ಮಾನಸಿಕ ಖಾಯಿಲೆಯಿದೆ ಎಂಬುದನ್ನು ಬಹುತೇಕರು ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಪತಿ ಕೂಡ ಒಪ್ಪಿಕೊಳ್ಳದೆ ಇರಬಹುದು. ಆ ಸಂದರ್ಭದಲ್ಲಿ ನೀವು ಅವರ ಬೆನ್ನೆಲುಬಾಗಿ ನಿಲ್ಲಬೇಕು. ಅವರಿಗೆ ಸಹಾಯ ಮಾಡಬೇಕು. ಅವರಿಗೆ ಚಿಕಿತ್ಸೆ ಕೊಡಿಸುವ ಬದಲು ಅವರಿಂದ ದೂರವಾದ್ರೆ ಸಮಸ್ಯೆ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು. ಬೈಪೋಲಾರ್ ಸಮಸ್ಯೆಗೆ ಜೀವನ ಶೈಲಿ ಬದಲಿಸುವ ಮೂಲಕ ಚಿಕಿತ್ಸೆ ಪಡೆಯಬಹುದು. ನೀವು ನಿಮ್ಮ ಪತಿಯ ಜೀವನ ಶೈಲಿ ಬದಲಿಸಿ, ಸಾಕಷ್ಟು ವ್ಯಾಯಾಮ, ನಿದ್ರೆಗೆ ಅವಕಾಶ ನೀಡಿ, ಆಹಾರದಲ್ಲಿ ಬದಲಾವಣೆ ತಂದು ಅವರನ್ನು ಸುಧಾರಿಸಬಹುದು ಎನ್ನುತ್ತಾರೆ ತಜ್ಞರು.

Follow Us:
Download App:
  • android
  • ios