Relationship Tips: ಲೈಂಗಿಕ ಬಯಕೆಯಾದಾಗ ಬರುವ ಪತಿ, ಇನ್ನೊಬ್ಬನ ಪ್ರೀತಿಗೆ ಬಿದ್ದ ಪತ್ನಿ
ಪತಿ – ಪತ್ನಿ ಮಧ್ಯೆ ಪ್ರೀತಿ, ಗೌರವ ಎಲ್ಲವೂ ಸಮನಾಗಿರಬೇಕು. ಪತ್ನಿಯನ್ನು ಭೋಗದ ವಸ್ತು ರೀತಿಯಲ್ಲಿ ನೋಡಿದ್ರೆ ಸಂಬಂಧ ಹಾಳಾಗುತ್ತೆ. ಪತಿಗೆ ಮೋಸ ಮಾಡಲು ಮನಸ್ಸು ಆಲೋಚಿಸುತ್ತದೆ. ಅನೇಕರು ಮನಸ್ಸನ್ನು ಹಿಡಿತದಲ್ಲಿಡಲು ಸಾಧ್ಯವಾಗದೆ ದಾರಿ ತಪ್ಪಿದ್ದಾರೆ.
ಹೆಂಡತಿ (Wife) ಕೇವಲ ಅವಶ್ಯಕತೆಯಾಗ್ಬಾರದು. ಬೇಕಾದಾಗ ಮಾತ್ರ ಪತ್ನಿ ಬೇಕು ಎಂಬ ದಾಂಪತ್ಯ (Marriage) ತುಂಬಾ ದಿನ ನಡೆಯಲು ಸಾಧ್ಯವಿಲ್ಲ. ಲೈಂಗಿಕ ಬಯಕೆಯಾದಾಗ ಮಾತ್ರ ಪತ್ನಿ ಬಳಿ ಬರುವ ಪತಿಯನ್ನು ಕಳೆದ 17 ವರ್ಷಗಳಿಂದ ಸಹಿಸಿಕೊಂಡ ಪತ್ನಿ ಈಗ ಬೇರೆ ದಾರಿ ನೋಡಿಕೊಂಡಿದ್ದಾಳೆ. ಪ್ರೀತಿ ಅರಸಿ ಹೊರಟವಳಿಗೆ ಪ್ರೀತಿಯೇನೋ ಸಿಕ್ಕಿದೆ. ಆದ್ರೆ ಮುಂದಿನ ದಾರಿ ಕಾಣ್ತಿಲ್ಲ. ಅಷ್ಟಕ್ಕೂ ಆಕೆ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.
ಉಳಿದ ಸಮಯದಲ್ಲಿ ತಿರುಗಿ ನೋಡದ ಪತಿ : ಆಕೆ ವಿವಾಹಿತೆ. ಮದುವೆಯಾಗಿ 17 ವರ್ಷ ಕಳೆದಿದೆ. ಪತಿ ಒಳ್ಳೆಯವನು. ಆದ್ರೆ ಪತ್ನಿ ಮೇಲೆ ಕಿಂಚಿತ್ತೂ ಪ್ರೀತಿ, ಗೌರವವಿಲ್ಲ. ಪತ್ನಿ ಜೊತೆ ಅತಿ ಕಡಿಮೆ ಮಾತನಾಡುವ ಪತಿ ಲೈಂಗಿಕ ಬಯಕೆಯಾದಾಗ ಮಾತ್ರ ಆಕೆ ಬಳಿ ಬರ್ತಾನೆ. ಬರೀ ಒಂದೋ ಎರಡೋ ಬಾರಿ ನಡೆದಿದ್ದನ್ನು ಗಮನಿಸಿ ಆಕೆ ಹೇಳ್ತಿಲ್ಲ. ಪ್ರತಿ ಬಾರಿಯೂ ಇದೆ ಆಗಿದೆ. ಆಕೆಗೆ ಮಗನಿದ್ದಾನೆ.
ಇದನ್ನೂ ಓದಿ: ಮಾತೇ ಆಡೋಲ್ವಾ ವೈಫು, ಹೀಗ್ ಮಾಡಿದ್ರೆ ಕಮ್ಯೂನಿಕೇಷನ್ ಸೇಫ್
ಇನ್ನೊಬ್ಬನ ಮೇಲೆ ಪ್ರೀತಿ : ಪ್ರೀತಿ, ಪ್ರೀತಿಯ ಮಾತು, ಒಂದಿಷ್ಟು ಸರಸ ಬಯಸಿದ್ದ ಮಹಿಳೆಗೆ ಪತಿ ವರ್ತನೆ ಬೇಸರತರಿಸಿದೆ. ಸಾಮಾನ್ಯವೆಂಬಂತೆ ಆಕೆ ಬೇರೆ ಕಡೆ ಕಣ್ಣು ಹೊರಳಿಸಿದ್ದಾಳೆ. ಆಕೆಗೆ ಸಹೋದ್ಯೋಗಿ ಜೊತೆ ಸಂಬಂಧ ಬೆಳೆದಿದೆ. ಆತ ಈಕೆಗಿಂತ 10 ವರ್ಷ ಚಿಕ್ಕವನು. ಆತ ತನ್ನನ್ನು ತುಂಬಾ ಪ್ರೀತಿ ಮಾಡ್ತಾನೆ ಎನ್ನುವ ಮಹಿಳೆ ಆತನ ಜೊತೆಗಿದ್ದರೆ ನಾನೂ ಸಂತೋಷವಾಗಿರ್ತೇನೆ ಎನ್ನುತ್ತಾಳೆ. ಆತನಿಲ್ಲದೆ ನಾನಿಲ್ಲ ಎನ್ನುತ್ತಿರುವ ಮಹಿಳೆ, ಮುಂದಿನ ಜೀವನವನ್ನು ಪ್ರೇಮಿ ಜೊತೆ ಕಳೆಯಲು ನಿರ್ಧರಿಸಿದ್ದಾಳೆ. ಆದ್ರೆ ತನ್ನ ನಿರ್ಧಾರ ಸರಿಯೇ ಎಂಬ ಪ್ರಶ್ನೆ ಆಕೆಯನ್ನು ಕಾಡ್ತಿದೆ. ಮಗ ದೊಡ್ಡವನಾಗಿದ್ದು, ತನ್ನ ನಿರ್ಧಾರ ಆತನ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಭಯ ಆಕೆಯನ್ನು ಕಾಡ್ತಿದೆ. ಸಮಾಜ ಏನು ಹೇಳ್ಬಹುದು? ವಿಚ್ಛೇದನ ಪಡೆದು ಇನ್ನೊಂದು ಮದುವೆಯಾಗುವ ವಯಸ್ಸು ಇದಲ್ಲ ಎನ್ನುತ್ತಿದ್ದಾಳೆ ಆಕೆ. ಮುಂದೇನು ಮಾಡ್ಬೇಕು ಎಂದು ತಜ್ಞರನ್ನು ಕೇಳಿದ್ದಾಳೆ.
ತಜ್ಞರ ಸಲಹೆ : ಮಹಿಳೆ ಕಥೆ ಆಲಿಸಿದ ತಜ್ಞರು ಸೂಕ್ತ ಸಲಹೆ ನೀಡಿದ್ದಾರೆ. ಪ್ರೀತಿಯಿಲ್ಲದ ದಾಂಪತ್ಯ ಮುಂದುವರೆಸಲು ಸಾಧ್ಯವಿಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಪತಿ ಕೇವಲ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಬರ್ತಾನೆ ಅಂದಾಗ ನಿಮ್ಮ ಮನಸ್ಸು ಘಾಸಿಗೊಂಡಿರುತ್ತದೆ ಎಂಬುದೂ ನಮಗೆ ಅರ್ಥವಾಗುತ್ತದೆ. ಆದ್ರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅನೇಕ ಪ್ರಶ್ನೆಗಳಿಗೆ ನೀವೇ ಉತ್ತರ ಕಂಡುಕೊಳ್ಳಬೇಕೆನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಸೆಕ್ಸ್ ನಂತರ ಮಹಿಳೆ ಇವಿಷ್ಟನ್ನು ಮಾಡದಿದ್ರೆ ತೊಂದ್ರೆ ತಪ್ಪಿದ್ದಲ್ಲ
ಪತಿ ಜೊತೆ ಜೀವನ ಸಾಧ್ಯವೇ ಇಲ್ಲವೆಂದ್ರೆ ಉಸಿರುಗಟ್ಟಿಸುವ ಪರಿಸರದಲ್ಲಿ ಇರ್ಬೇಡಿ. ವಿಚ್ಛೇದನ ಪಡೆದು ಹೊರಗೆ ಬನ್ನಿ. ಆದ್ರೆ ಪ್ರೇಮಿ ಜೊತೆ ಇನ್ನೊಂದು ಮದುವೆಯಾಗುವ ನಿರ್ಧಾರದ ಬಗ್ಗೆ ನೂರಾರು ಸಲ ಆಲೋಚನೆ ಮಾಡಿ ಎನ್ನುತ್ತಿದ್ದಾರೆ ತಜ್ಞರು. ಆತ ನಿಮಗಿಂತ 10 ವರ್ಷ ಚಿಕ್ಕವನು. ಈಗ ಆತನಿಗೆ ನಿಮ್ಮ ಮೇಲೆ ಪ್ರೀತಿ ಇರ್ಬಹುದು. ಮುಂದೆ ಅದೇ ಪ್ರೀತಿ ಇರುತ್ತೆ ಎನ್ನಲು ಸಾಧ್ಯವಿಲ್ಲ. ಹಾಗೆಯೇ ನಿಮ್ಮಿಬ್ಬರ ಪ್ರೀತಿಗೆ ಅವನ ತಂದೆ – ತಾಯಿ ಅಡ್ಡಿಯಾಗ್ಬಹುದು ಎನ್ನುತ್ತಾರೆ ತಜ್ಞರು.
ಮಗ ಇರುವ ಕಾರಣ ಪತಿ ಜೊತೆ ಹೊಂದಾಣಿಕೆ ಮುಖ್ಯವಾಗುತ್ತದೆ. ಮಗನಿಗಾಗಿ ಇದೇ ಸಂಸಾರದಲ್ಲಿ ಇರ್ತೀರಿ ಎನ್ನುವುದಾದ್ರೆ ಪ್ರೇಮಿ ಸಹವಾಸ ಬಿಡಿ. ಹಾಗೆಯೇ ಪತಿ ಜೊತೆ ಕುಳಿತು ಮಾತನಾಡಿ. ಸಾಧ್ಯವಾದ್ರೆ ನಿಮ್ಮ ಆಪ್ತರು ಅಥವಾ ಕುಟುಂಬಸ್ಥರ ಜೊತೆ ಸಹಾಯ ಮಾಡುವಂತೆ ಕೇಳಿ ಎಂದಿದ್ದಾರೆ ತಜ್ಞರು.