ಮಾತೇ ಆಡೋಲ್ವಾ ವೈಫು, ಹೀಗ್ ಮಾಡಿದ್ರೆ ಕಮ್ಯೂನಿಕೇಷನ್ ಸೇಫ್

ಅನೇಕ ಬಾರಿ ಪತಿ – ಪತ್ನಿ ಇಬ್ಬರೂ ಮನೆಯಲ್ಲಿರ್ತಾರೆ. ಆದ್ರೆ ಮನೆಯಲ್ಲಿ ನೀರವ ಮೌನವಿರುತ್ತದೆ. ಸಂಗಾತಿ ಜೊತೆ ಮಾತನಾಡಲು ಮನಸ್ಸಿರೋದಿಲ್ಲ. ಇದು ಪದೇ ಪದೇ ಆಗ್ತಿದ್ದರೆ ದಾಂಪತ್ಯ ಮುರಿದು ಬೀಳುತ್ತದೆ. ಎಲ್ಲ ಮೊದಲಿನಿಂತಾಗ್ಬೇಕೆಂದ್ರೆ ಸರಳ ಟ್ರಿಕ್ ಪಾಲಿಸ್ಬೇಕು.
 

How To Improve Communication Between Husband And Wife

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಮಾತು (Speech ) ಕಡಿಮೆಯಾದರೆ ಚಿಂತಿಸಬೇಡಿ. ಅನೇಕ ದಂಪತಿ (Couple) ಅತಿ ಕಡಿಮೆ ಮಾತನಾಡ್ತಾರೆ. ಇದರಿಂದಾಗಿ ಅವರ ಸಂಬಂಧದಲ್ಲಿ ಅಂತರ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಗಂಡ ಹೆಂಡತಿಗೆ ಪರಸ್ಪರ ಮಾತನಾಡಲು ಇಷ್ಟವಿಲ್ಲ ಎಂದಾದ್ರೆ ಇದರ ಹಿಂದೆ ಅನೇಕ ಕಾರಣಗಳಿರುತ್ತವೆ. ನೀವು ಒಬ್ಬರನ್ನೊಬ್ಬರು ಗೌರವಿ (Respect) ಸದಿದ್ದರೆ, ಪರಸ್ಪರ ಸಮಯ (Time) ಕಳೆಯಲು ಮನಸ್ಸು ಮಾಡಿಲ್ಲವಾದ್ರೆ ಇಬ್ಬರ ಮಧ್ಯೆ ಅಂತರ  ಹೆಚ್ಚಾಗಲು ಕಾರಣವಾಗುತ್ತದೆ. ಇದ್ರಿಂದ ದಾಂಪತ್ಯ ಮುರಿದು ಬೀಳಬಹುದು. ದಾಂಪತ್ಯ ಮತ್ತೆ ಸರಿ ದಾರಿಗೆ ಬರಬೇಕು, ಇಬ್ಬರು ಕುಳಿತು ಗಂಟೆಗಟ್ಟಲೆ ಮಾತನಾಡ್ಬೇಕು ಅಂದಾದ್ರೆ ಕೆಲವು ಟಿಪ್ಸ್ (Tips) ಬಳಸಿ. ಇದ್ರಿಂದ ಸಂಬಂಧ ಗಟ್ಟಿಯಾಗುವು ಜೊತೆಗೆ ಇಬ್ಬರ ಮಧ್ಯೆ ಮಾತು ಮತ್ತೆ ಶುರುವಾಗುತ್ತದೆ.

ಸಂಗಾತಿ ದೃಷ್ಟಿಕೋನಕ್ಕೆ ಗಮನ ನೀಡಿ : ನಿಮ್ಮ ಸಂಗಾತಿಯ ದೃಷ್ಟಿಕೋನಕ್ಕೆ ನೀವು ಗಮನ ಕೊಡಬೇಕು. ಅವರು ಏನು ಹೇಳ್ತಿದ್ದಾರೆ ಅಥವಾ ಅವರು ಯಾವ ಉದ್ದೇಶವನ್ನು ಹೊಂದಿದ್ದಾರೆ ಎಂಬುದನ್ನು ಎಚ್ಚರಿಕೆಯಿಂದ ಆಲಿಸಬೇಕು.  ಹಾಗೆಯೇ ಅವರ ದೃಷ್ಟಿಕೋನಕ್ಕೆ ನೀವು ಪ್ರಾಮುಖ್ಯತೆ ನೀಡಬೇಕು. ಪಾಲುದಾರರೊಂದಿಗೆ ಆದಷ್ಟು ಸಮಯ ಕಳೆಯಬೇಕು. ನಿಮಗೆ ಅವರು ವಿಶೇಷ ವ್ಯಕ್ತಿ ಎಂಬ ಭಾವನೆ ಬರುವಂತೆ ಮಾಡ್ಬೇಕು. ನೀವು ಅವರ ಜೊತೆ ಹೆಚ್ಚು ಸಮಯ ಕಳೆದ್ರೆ ತಾನಾಗಿಯೇ ಮಾತುಕತೆ ಹೆಚ್ಚಾಗುತ್ತದೆ. 

Relationship Tips : ನಿಮ್ಮ ಹುಡುಗ ವರ್ಜಿನ್ನಾ? ಹೀಗೆ ಪರೀಕ್ಷೆ ಮಾಡಿ

ಸಂಗಾತಿ ನನ್ನ ಮನಸ್ಸು ಅರ್ಥ ಮಾಡಿಕೊಳ್ಳಲಿ ಎಂಬ ನಿರೀಕ್ಷೆ ಬೇಡ : ನಿಮ್ಮ ಸಂಗಾತಿ ನಿಮ್ಮ ಮನಸ್ಸನ್ನು ಓದಬೇಕೆಂದು ನೀವು ನಿರೀಕ್ಷಿಸಬಾರದು. ಅನೇಕ ಸಂಬಂಧಗಳಲ್ಲಿ ಮಾತುಕತೆಯ ಅಂತ್ಯಕ್ಕೆ ಕಾರಣವೆಂದರೆ ನಿಮ್ಮ ಸಂಗಾತಿಯು ನೀವು ಮನಸ್ಸನ್ನು ಓದಬೇಕೆಂದು ನಿರೀಕ್ಷಿಸಲು ಪ್ರಾರಂಭಿಸುವುದು. ಮನಸ್ಸನ್ನು ಓದುವ ನಿರೀಕ್ಷೆಯು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಅನೇಕರಿಗೆ ಮನಸ್ಸು ಓದಲು ಸಾಧ್ಯವಾಗುವುದಿಲ್ಲ. ಸಂಗಾತಿ ನಾನು ಹೇಳದೆ ನನ್ನನ್ನು ಅರ್ಥಮಾಡಿಕೊಳ್ಳಬೇಕೆಂದು ಜನರು ನಿರೀಕ್ಷಿಸುತ್ತಾರೆ. ಆದರೆ ಸಂಗಾತಿ ಹಾಗೆ ಮಾಡದೆ ಹೋದಾಗ ಬಿರುಕು ಹೆಚ್ಚಾಗುತ್ತೆ. ಅದರ ಬದಲು ನಿಮ್ಮ ಭಾವನೆಯನ್ನು ನೀವು ಸಂಗಾತಿ ಮುಂದೆ ವ್ಯಕ್ತಪಡಿಸುವುದು ಒಳ್ಳೆಯದು. 

ಸಂಗಾತಿಯನ್ನು (Partner) ಟೀಕಿಸಿಬೇಡಿ : ಸಂಗಾತಿಯೊಂದಿಗೆ ನೀವು ಉತ್ತಮ ಪದಗಳನ್ನು ಬಳಸಬೇಕು. ನಿಮ್ಮ ಸಂಗಾತಿಯೊಂದಿಗೆ ಜೋರಾಗಿ ಮಾತನಾಡುವುದನ್ನು ಅಥವಾ ತಪ್ಪು ಮತ್ತು ಕೆಟ್ಟದಾಗಿ ಮಾತನಾಡುವುದನ್ನು  ತಪ್ಪಿಸಬೇಕು. ಎಲ್ಲಾ ಸಮಯದಲ್ಲೂ ಸಂಗಾತಿ ಮಾಡುವ ಟೀಕೆಗಳು  ಸಂಬಂಧಕ್ಕೆ ಹಾನಿಕಾರಕವಾಗಬಹುದು. ಸಂಗಾತಿ ಅಭ್ಯಾಸ ಕೆಟ್ಟದಾಗಿದೆ ಎಂದನಿಸಿದ್ರೆ ಅದರ ಬಗ್ಗೆ ಸಂಗಾತಿ ಜೊತೆ ಮಾತನಾಡಬಹುದು. ಪ್ರತ್ಯೇಕವಾಗಿ ಚರ್ಚಿಸಬಹುದು. ಆದರೆ ಸಂಗಾತಿ ಜೊತೆ ಯಾವಾಗ್ಲೂ ಅನುಚಿತವಾಗಿ ವರ್ತಿಸುವುದು ಒಳ್ಳೆಯದಲ್ಲ.  

ಸಂಗಾತಿಗೆ ಗೌರವ (Respect your Partner) ನೀಡಿ : ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಕಡಿಮೆ ಮಾತುಕತೆ ಇದ್ದರೆ  ನಿಮ್ಮ ಸಂಗಾತಿಗೆ ನೀವು ಸಮಾನ ಗೌರವವನ್ನು ನೀಡದಿರುವುದು ಒಂದು ಕಾರಣವಾಗಿರಬಹುದು. ನಿಮ್ಮ ಸಂಗಾತಿ ಮಾತಿಗೆ ಅಥವಾ ಭಾವನೆಗೆ ನೀವು ಪ್ರತಿಕ್ರಿಯಿಸದಿದ್ದರೂ ಸಹ, ನಿಮ್ಮಿಬ್ಬರ ನಡುವೆ ಸಂವಹನ ಕಡಿಮೆಯಾಗುತ್ತದೆ. ಆದ್ದರಿಂದ ನೀವು ನಿಮ್ಮ ಸಂಗಾತಿಯ ಆಯ್ಕೆಗೆ ಪ್ರತಿಕ್ರಿಯಿಸಿ ಮತ್ತು ಅವನಿಗೆ ಸಮಾನವಾದ ಪ್ರತಿಕ್ರಿಯೆಯನ್ನು ನೀಡಲು ಪ್ರಯತ್ನಿಸಿದರೆ. 

ಹನಿಮೂನ್ ಅಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನ್ಕೋಬೇಡಿ!

ಒಟ್ಟಿಗೆ ಭೋಜನ : ಗಂಡ ಮತ್ತು ಹೆಂಡತಿಯ ನಡುವೆ ಸಂಭಾಷಣೆಯನ್ನು ಹೆಚ್ಚಿಸಲು ಬಯಸಿದರೆ  ಒಟ್ಟಿಗೆ ಊಟ ಮಾಡ್ಬೇಕು. ಮನೆಯಲ್ಲಿ ಮಾತನಾಡದಿರಲು ನೀರಸ ದಿನಚರಿ ಕಾರಣವಾಗಿರಬಹುದು. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಸಂಭಾಷಣೆ ಕಡಿಮೆಯಾಗಿದೆ ಎಂದು ನೀವು ಭಾವಿಸಿದರೆ  ನೀವು ನಿಮ್ಮ ಸಂಗಾತಿಯೊಂದಿಗೆ ರಾತ್ರಿಯ ಊಟಕ್ಕೆ ಹೊರಗೆ ಹೋಗಬೇಕು. ಅಲ್ಲಿ ಇಬ್ಬರೇ ಕುಳಿತು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.

Latest Videos
Follow Us:
Download App:
  • android
  • ios