Asianet Suvarna News Asianet Suvarna News

ಈ ಯುವಕನಿಗೆ ತನ್ನಹೆಂಡ್ತಿ ಬೇರೊಬ್ಬನ ಜೊತೆ ಹಾಸಿಗೆ ಹಂಚಿಕೊಂಡ್ರೆ ಪರವಾಗಿಲ್ಲವಂತೆ!

ಜಪಾನಿನ ಯುವಕನೊಬ್ಬ ವಿಶಿಷ್ಟ ಕಾರಣಕ್ಕಾಗಿ ಸುದ್ದಿಯಾಗಿದ್ದಾನೆ. ಆತನಿಗೆ ತನ್ನ ಪತ್ನಿ ಆಕೆಯ ಬೇರೆ ಗೆಳೆಯರ ಜೊತೆಗೆ ಹೊಂದಿರುವ ದೇಹ ಸಂಬಂಧದ ಬಗ್ಗೆ ಯಾವುದೇ ತಕರಾರು ಇಲ್ಲವಂತೆ. ಏನಿವರ ಸಂಬಂಧದ ಹಕೀಕತ್ತು?

 

Man Unique Relationship with his Wife who Loves To Acquire Boyfriends without issues bni
Author
First Published Aug 10, 2024, 12:50 PM IST | Last Updated Aug 10, 2024, 12:50 PM IST

ಇದು ಜಪಾನಿನ ಪ್ರಿನ್ಸ್ ಸೋಯ್ ಎಂಬ ಯುವಕ ಮತ್ತು ಆತನ ಪತ್ನಿ ಸೀರಾ ಕಥೆ. ಈತನೇ ಸೋಶಿಯಲ್ ಮಿಡಿಯಾದಲ್ಲಿ ಹೇಳಿಕೊಂಡಿರುವ ಸಂಗತಿ ಕೂಡ. ಹೇಳಿಕೊಂಡಿರುವುದು ಮಾತ್ರವಲ್ಲ, ತನ್ನ ಪತ್ನಿ ಹಾಗೂ ಆಕೆಯ ಹೊಸ ಗೆಳೆಯನ ಜೊತೆಗಿರುವ ಫೋಟೋ ವಿಡಿಯೋ ಕೂಡ ತೆಗೆದುಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪಬ್ಲಿಶ್ ಮಾಡಿದಾನೆ. ಮೂಲತಃ ಈ ಪ್ರಿನ್ಸ್ ಸೋಯ್ ಬಾಣಸಿಗ. ಇವನ ವಿಡಿಯೋಗಳು ಇದೀಗ ವೈರಲ್ ಆಗಿವೆ.

ಪ್ರಿನ್ಸ್ ಸೋಯ್ ಮತ್ತು ಪತ್ನಿ ಸೀರಾ, ಮೂರು ವರ್ಷಗಳ ಹಿಂದೆ ಮದುವೆಯಾದರು. ಅದಕ್ಕೆ ಮೊದಲು ಎರಡು ವರ್ಷಗಳ ಕಾಲ ಲಿವ್ ಇನ್ ಮಾಡುತ್ತಿದ್ದರು. ಕಳೆದ ವರ್ಷ ಅಧ್ಯಯನಕ್ಕಾಗಿ ಇವಳು ಆಸ್ಟ್ರೇಲಿಯಾಕ್ಕೆ ತೆರಳಿದ್ದಳು. ಅಲ್ಲಿ ಅವಳು ಜಪಾನಿನ ಇನ್ನೊಬ್ಬ ವಿದ್ಯಾರ್ಥಿಯನ್ನು ಭೇಟಿಯಾದಳು. ಅವಳೂ ಅವನೂ ಪ್ರೇಮಿಗಳಾದರು. ಈ ಹೊಸ ಸಂಬಂಧದ ಬಗ್ಗೆ ಸೀರಾ ತನ್ನ ಪತಿಗೆ ತಿಳಿಸಿದಳು. ಪ್ರಿನ್ಸ್ ಸೋಯ್ ಅದನ್ನು ಪೂರ್ಣ ಹೃದಯದಿಂದ ಒಪ್ಪಿಕೊಂಡ! 

ಜುಲೈ 12ರಂದು, ಸೀರಾ ತನ್ನ ಗೆಳೆಯನನ್ನು ಮನೆಗೆ ಕರೆತಂದಳು. ಪ್ರಿನ್ಸ್ ಸೋಯ್ ಅವರಿಬ್ಬರನ್ನೂ ಪ್ರೀತಿಯಿಂದ ಸ್ವಾಗತಿಸಿದ. ಒಂದು ವಾರ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸಿದರು. ಗೆಳೆಯ ಸೋಫಾದಲ್ಲಿ ಮಲಗಿದ. ದಂಪತಿಗಳು ತಮ್ಮ ಮಲಗುವ ಕೋಣೆಯಲ್ಲಿ. ಒಟ್ಟಿಗೆ ಊಟ ಮಾಡಿದರು. ಮನೆಕೆಲಸಗಳನ್ನು ಒಟ್ಟಾಗಿ ನಿರ್ವಹಿಸಿದರು. ಸೀರಾ ತನ್ನ ಪ್ರೇಮಿಯೊಂದಿಗೆ ಜಗಳವಾಡಿದಾಗ ಪ್ರಿನ್ಸ್ ಸೋಯ್ ಮಧ್ಯಸ್ಥಿಕೆ ವಹಿಸಿದ. ಗೆಳೆಯ ಹೊರಟುಹೋದ ನಂತರ ಪ್ರಿನ್ಸ್ ಸೋಯ್‌ಗೆ ಬೇಸರವಾಯಿತಂತೆ. ಯಾವುದೇ ಸಮಯದಲ್ಲಿ ವಾಪಸ್ ಬರಬೇಕನಿಸಿದರೆ ಬಾ ಎಂದು ಅವನನ್ನು ಆಹ್ವಾನಿಸಿದ. 

ಮಾತಾಡೋದಕ್ಕೂ, ಸೆಕ್ಸ್‌ಗೂ ಹಣ ಕೇಳ್ತಿದ್ದ ಪತ್ನಿಗೆ ಪತಿ ವಿಚ್ಛೇದನ

ಇದೆಲ್ಲ ಹಲವರಿಗೆ ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದು ಅವರಿಗೆ ಸಹಜವಾಗಿದೆಯಂತೆ. ಇವರ ಈ ಸ್ವೀಕಾರ ಸಂಬಂಧ ಆನ್‌ಲೈನ್‌ನಲ್ಲಿ ಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ. ಎಕ್ಸ್‌ನಲ್ಲಿ ಪ್ರಿನ್ಸ್ ಸೋಯ್ ಪೋಸ್ಟ್‌ಗಳಲ್ಲಿ ಒಂದಕ್ಕೆ 100,000 ಲೈಕ್‌ಗಳು ಮತ್ತು 8,000 ಮರುಪೋಸ್ಟ್‌ಗಳು ಬಂದಿವೆ. "ದಂಪತಿಗಳು ಇದನ್ನು ಒಪ್ಪುವವರೆಗೆ ಮತ್ತು ಪ್ರಾಮಾಣಿಕವಾಗಿರುವವರೆಗೆ ಇದು ನಡೆಯುತ್ತದೆ" ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಿನ್ಸ್ ಸೋಯ್ ಮತ್ತು ಸೀರಾ ತಮ್ಮ ಡೇಟಿಂಗ್ ಅವಧಿಯಿಂದಲೂ ಮುಕ್ತ ಸಂಬಂಧವನ್ನು ಒಪ್ಪಿಕೊಂಡಿದ್ದಾರಂತೆ. ಅವರು ಆಗಲೂ ಏಕಕಾಲಕ್ಕೆ ಹಲವು ಗೆಳೆಯ/ಗೆಳತಿಯರನ್ನು ಹೊಂದಿದ್ದರಂತೆ. ಅದರ ಬಗ್ಗೆ ಯಾವಾಗಲೂ ಪ್ರಾಮಾಣಿಕರಾಗಿ ಹೇಳಿಕೊಳ್ಳುತ್ತಿದ್ದರಂತೆ. "ನನ್ನ ಹೆಂಡತಿ ವಿದೇಶದಲ್ಲಿ ಕಷ್ಟದಲ್ಲಿರುವಾಗ ಬೆಂಬಲಿಸಿದ್ದಕ್ಕಾಗಿ ನಾನು ಅವನಿಗೆ ಪೂರ್ಣ ಹೃದಯದಿಂದ ಧನ್ಯವಾದ ಹೇಳುತ್ತೇನೆ" ಎಂದು ಸೋಯ್ ಹೇಳಿದ್ದಾನೆ. ಗೆಳೆಯರನ್ನು ಹೊಂದುವುದು ತನ್ನ ಹೆಂಡತಿಯ ಹವ್ಯಾಸ. ಏಕೆಂದರೆ ಅದು ಅವಳನ್ನು ಸಂತೋಷಪಡಿಸುತ್ತದೆ ಎಂದು ಸೋಯ್ ಹೇಳುತ್ತಾನೆ. 

'ನನ್ನ ಹೆಂಡತಿ ಎಲ್ಲಿಯವರೆಗೆ ಸಂತೋಷವಾಗಿರುತ್ತಾಳೋ ಅಲ್ಲಿಯವರೆಗೆ ನಾನು ಸಂತೋಷವಾಗಿರುತ್ತೇನೆ,' ಎನ್ನುತ್ತಾನೆ. ಆಕೆಯ ಇತರ ಗೆಳೆಯರ ಜೊತೆಗಿನ ಸಂಬಂಧದ ಮುಕ್ತ ಸ್ವಭಾವದ ಹೊರತಾಗಿಯೂ, ಸೀರಾ ಪತಿಯಾಗಿ ಬೇರೆ ಯಾರೂ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾನೆ ಆತ. 

ಇವರ ಕಥೆ ಅನೇಕ ಆನ್‌ಲೈನ್ ಬಳಕೆದಾರರಿಗೆ ಕುತೂಹಲ ಉಂಟುಮಾಡಿದೆ. ಇಂತಹ ತಿಳುವಳಿಕೆಯುಳ್ಳ ಪತಿ ಎಲ್ಲಿ ಸಿಗುತ್ತಾರೆ ಎಂದು ಕೆಲವರು ಕೇಳಿದ್ದಾರೆ. ದಂಪತಿ ಪ್ರಾಮಾಣಿಕತೆ ಮತ್ತು ಪರಸ್ಪರ ಒಪ್ಪಂದ ಅವರ ಅನನ್ಯ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಅಂಶಗಳು. ಈ ಅಸಾಮಾನ್ಯ ವ್ಯವಸ್ಥೆಯು ಎಲ್ಲರಿಗೂ ಆಗಿಬರದು. ಪ್ರಿನ್ಸ್ ಸೋಯಾ ಮತ್ತು ಸೀರಾ ಅವರಿಬ್ಬರ ಒಪ್ಪಿಗೆಯಿಂದ ಇದು ಕಾರ್ಯನಿರ್ವಹಿಸುತ್ತದೆ. ಸಾಂಪ್ರದಾಯಿಕ ಏಕಪತ್ನಿ ಸಂಬಂಧಗಳಿಗಿಂತ ಇದು ತುಂಬಾ ಭಿನ್ನ. ಭಾರತೀಯ ಕೌಟುಂಬಿಕ ಪರಿಸರದಲ್ಲಿ ಇದು ಕೆಲಸ ಮಾಡುವುದು ಕಷ್ಟ. ಅದರಲ್ಲೂ ಮಕ್ಕಳಿದ್ದರೆ ಇನ್ನೂ ಕಷ್ಟ. ಪರಸ್ಪರ ಅರ್ಥ ಮಾಡಿಕೊಳ್ಳಬಲ್ಲ ಯುವ ಜೋಡಿಗಳು ಮಾತ್ರ ಇಂಥ ಪ್ರಯೋಗ ಮಾಡಬಹುದು. 

ರಾತ್ರಿ ಪಾರ್ಟಿ ನಂತರ ಅಪರಿಚಿತನ ಜೊತೆ ಒಂದು ರಾತ್ರಿಯ ಸೆಕ್ಸ್ ನಡೀತು, ಆದರೆ...!
 

Latest Videos
Follow Us:
Download App:
  • android
  • ios