- Home
- Entertainment
- Sandalwood
- ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
ರಶ್ಮಿಕಾ ಮಂದಣ್ಣ ಅವರ ಮದುವೆಯ ಚರ್ಚೆಯ ನಡುವೆ ರಕ್ಷಿತ್ ಶೆಟ್ಟಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ, ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ವ್ಯಕ್ತಪಡಿಸಿದ ದೃಷ್ಟಿಕೋನದ ಬದಲಾವಣೆಯನ್ನು ಅಭಿಮಾನಿಗಳು ಅವರ ಮುರಿದುಬಿದ್ದ ಸಂಬಂಧಕ್ಕೆ ಹೋಲಿಸುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಮುನ್ನೆಲೆಗೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಯ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಹೆಚ್ಚು ಸದ್ದು ಮಾಡ್ತಿರೋ ಹೆಸರು ರಕ್ಷಿತ್ ಶೆಟ್ಟಿ ಅವರದ್ದು (Rakshit Shetty).
ಮುರಿದು ಬಿದ್ದ ಮದುವೆ
ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಆಗಿದ್ದರು. ಶೆಟ್ಟರ ಫ್ಯಾಮಿಲಿ ಜೊತೆ ರಶ್ಮಿಕಾ ಹಲವಾರು ಕಡೆ ಟೂರ್ ಕೂಡ ಮಾಡಿದ್ದರು. ಆ ಬಳಿಕ ರಶ್ಮಿಕಾಗೆ ಅವಕಾಶಗಳ ಮಹಾಪೂರವೇ ಹರಿದು ಬಂತು. ಈ ಮಧ್ಯೆ ಇಬ್ಬರ ನಡುವೆ ಏನಾಯ್ತೋ ಗೊತ್ತಿಲ್ಲ. ಮದುವೆ ಮುರಿದು ಬಿತ್ತು.
ಕಾರಣ ಕೊಡದ ಜೋಡಿ
ಇದರ ಬಗ್ಗೆ ರಶ್ಮಿಕಾ ಆಗಲೀ, ರಕ್ಷಿತ್ ಆಗಲಿ ಇದುವರೆಗೂ ನೇರವಾಗಿ ಎಲ್ಲಿಯೂ ಕಾರಣ ಕೊಟ್ಟಿಲ್ಲ. ಈಚೆಗೆ ರಿಷಬ್ ಶೆಟ್ಟಿ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗಲೂ, ಅದಕ್ಕೆ ಉತ್ತರಿಸಿದೇ ಥ್ಯಾಂಕ್ಯೂ ಎಂದು ಹೇಳಿ ಹೊರಟೇ ಬಿಟ್ಟರು.
ರಕ್ಷಿತ್ ಶೆಟ್ಟಿ ಹಳೆಯ ವಿಡಿಯೋ
ಇದರ ನಡುವೆಯೇ, ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಅವುಗಳಲ್ಲಿ ಅವರು ಆಡಿದ ಮಾತುಗಳನ್ನು ಈ ಮದುವೆ ಮುರಿದಿರುವುದಕ್ಕೆ ಕನೆಕ್ಟ್ ಮಾಡುತ್ತಿದ್ದಾರೆ ಅವರ ಅಭಿಮಾನಿಗಳು.
ಸಿನಿಮಾದ ಕುರಿತು ರಕ್ಷಿತ್
metrosaga ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಅವರ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಅವರು, ತಮ್ಮ ಸಿನಿಮಾದ ಕುರಿತು ಮಾತನಾಡಿದ್ದಾರೆ. ಆದರೆ ಅದರಲ್ಲಿ ನಿಗೂಢ ಅರ್ಥವೇ ಇದೆ ಎನ್ನುವುದು ಅವರ ಅಭಿಮಾನಿಗಳ ಮಾತು.
ನಟ ಹೇಳಿದ್ದೇನು?
'ಉಳಿದವರು ಕಂಡಂತೆ' ಸಿನಿಮಾ ಬರೆಯುವಾಗ, ನಾನು ಜಗತ್ತಿನಲ್ಲಿ ಯಾರೂ ಸರಿ, ಯಾರೂ ತಪ್ಪಲ್ಲ. ಎಲ್ಲರೂ ಅವರವರ ದೃಷ್ಟಿಕೋನದಲದ್ಲಿ ಸರಿ ಎಂದುಕೊಂಡುಬಿಟ್ಟಿದ್ದೆ. ಅದನ್ನೇ ನಾನು ಚಿತ್ರದಲ್ಲಿಯೂ ತೋರಿಸಿದೆ. ಆದರೆ ರಿಚರ್ಡ್ ಸಿನಿಮಾ ಮಾಡುವಾಗ ನನ್ನ ದೃಷ್ಟಿಕೋನ ಬದಲಾಯಿತು. ಎಲ್ಲರ ದೃಷ್ಟಿಕೋನದಲ್ಲಿಯೂ ಅವರು ಸರೀನೇ. ಆದರೆ, ಅವರ ದೃಷ್ಟಿಕೋನವೇ ಸರಿ ಇಲ್ಲದೇ ಇರಬಹುದಲ್ವಾ ಎನ್ನಿಸಿತು. ತಮ್ಮ ದ್ವೇಷ, ಅಸೂಹೆ, ಮೋಸ ಇಂಥ ಯೋಚನೆಯೊಂದಿಗೆ ಅವರು ಅಂದುಕೊಂಡಿರಬಹುದಲ್ಲವೆ ಎನ್ನಿಸಿತು. ಅದು ಆಮೇಲೆ ನನ್ನ ಸಿನಿಮಾದಲ್ಲಿ ಬಂತು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

