Asianet Suvarna News Asianet Suvarna News

ರಾತ್ರಿ ಪಾರ್ಟಿ ನಂತರ ಅಪರಿಚಿತನ ಜೊತೆ ಒಂದು ರಾತ್ರಿಯ ಸೆಕ್ಸ್ ನಡೀತು, ಆದರೆ...!

ಮಧ್ಯರಾತ್ರಿಯರೆಗೂ ಗುಂಡು ಪಾರ್ಟಿ ನಡೆಯುತ್ತದೆ. ನಂತರ ಅಪರಿಚಿತ ಗಂಡು ಹೆಣ್ಣುಗಳು ಪರಸ್ಪರ ಅಂಟಿಕೊಂಡು ಬೆಡ್‌ರೂಂಗೆ ಹೋಗುತ್ತಾರೆ. ಮರುದಿನ ಬೆಳಗ್ಗೆ ಅವಳ್ಯಾರೋ, ಅವನ್ಯಾರೋ. ಇಂಥ ಸಂಬಂಧಗಳು ಹೆಚ್ಚುತ್ತಿವೆ. ಆದರೆ..

one night stand in Indian society and its complexities know about culture bni
Author
First Published Aug 9, 2024, 11:57 AM IST | Last Updated Aug 9, 2024, 11:57 AM IST

ಪ್ರಶ್ನೆ: ನಾನು ಇಪ್ಪತ್ತು ವರ್ಷದ ಅವಿವಾಹಿತೆ. ನನಗೊಬ್ಬಳು ಗೆಳತಿ ಇದ್ದಾಳೆ. ಶ್ರೀಮಂತೆ. ಆಕೆ ನನ್ನನ್ನು ಪಾರ್ಟಿಗಳಿಗೆ ಆಹ್ವಾನಿಸುತ್ತಾಳೆ. ಈ ಪಾರ್ಟಿಗಳು ಹೇಗಿರುತ್ತವೆ ಎಂದರೆ, ರಾತ್ರಿಯಿಡೀ ನಡೆಯುತ್ತವೆ. ಅಲ್ಲಿ ನಮಗೆ ಗುರುತು ಪರಿಚಯವೇ ಇಲ್ಲದೆ ಸುಮಾರು ಮಂದಿ ಬರುತ್ತಾರೆ. ಆದರೆ ಅವರ್ಯಾರೂ ಬೀದಿ ಹೋಕರಲ್ಲ. ಇಲ್ಲಿನ ಪ್ರತಿಷ್ಠಿತ ಮನೆತನಗಳ ತರುಣರು, ಮಧ್ಯವಯಸ್ಕರು, ಶ್ರೀಮಂತರು. ಮಧ್ಯರಾತ್ರಿಯವರೆಗೂ ಮದ್ಯ ಸೇವನೆ ಹಾಗೂ ಡ್ಯಾನ್ಸ್ ನಡೆಯುತ್ತದೆ. ಮಧ್ಯರಾತ್ರಿಯ ಬಳಿಕ, ನಮಗೆ ಇಷ್ಟವಿದ್ದರೆ ಬಂದವರಲ್ಲಿಯೇ ಒಬ್ಬರನ್ನು ಆಯ್ದುಕೊಂಡು ಅವರ ಜೊತೆ ಖಾಸಗಿಯಾಗಿ ಕಳೆಯಬಹುದು. ಆಕೆಯ ಮನೆಯಲ್ಲಿ ಸಾಕಷ್ಟು ಪ್ರೈವೇಸಿ ಹಾಗೂ ಬೆಡ್‌ರೂಮುಗಳಿವೆ. ನಾನೂ ಹೀಗೆ ಎರಡು ಪಾರ್ಟಿಗಳಿಗೆ ಹೋಗಿದ್ದೆ ಹಾಗೂ ಇಬ್ಬರೊಂದಿಗೆ ರಾತ್ರಿ ಕಳೆದಿದ್ದೇನೆ. ಆ ಅನುಭವ ತೀರಾ ಕೆಟ್ಟದಾಗಿಯೇನೂ ಇರಲಿಲ್ಲ. ಇಬ್ಬರಿಗೂ ಸುಖವಾಗಿತ್ತು. ಆದರೆ ಆ ಇಬ್ಬರಿಗೂ ನನಗೂ ಈಗಲೂ ಪರಿಚಯವಿಲ್ಲ. ಈಗಲೂ ಅವರು ಎದುರು ಸಿಕ್ಕಿದರೆ ಗುರುತಿಸಲಾರೆ, ಅವರೂ ನನ್ನನ್ನು ಗುರುತಿಸಲಾರರೋ ಏನೋ. ಆದರೂ ಮನಸ್ಸಿನ ಮೂಲೆಯಲ್ಲಿ ಸಣ್ಣದೊಂದು ಅಳುಕು. ಇಂಥ ಸಂಬಂಧಗಳು ಸರಿಯಾ? ಇದರಿಂದ ಮುಂದೆ ಭವಿಷ್ಯದಲ್ಲಿ ನನಗೆ ಏನಾದರೂ ತೊಂದರೆ ಆಗಬಹುದಾ?

ಉತ್ತರ: ಪ್ರತಿಷ್ಠಿತರು ಎನಿಸಿಕೊಂಡವರ ಮನೆಗಳಲ್ಲಿ, ಪಾರ್ಟಿಗಳಲ್ಲಿ ನಡೆಯುವ ಸಂಗತಿಗಳ ಬಂಡವಾಳವನ್ನು ಬಿಚ್ಚಿಟ್ಟಿದ್ದೀರಿ. ನಿಮ್ಮ ಪತ್ರದಲ್ಲಿ ಎಲ್ಲೂ ನನಗೆ ಪಶ್ಚಾತ್ತಾಪದ ಛಾಯೆ ಕಾಣಿಸಲಿಲ್ಲ. ಕಾನೂನಿನ ದೃಷ್ಟಿಯಿಂದ ನೀವು ಮಾಡಿದ್ದು ಅಂತಾ ಸಮಾಜಬಾಹಿರ ಕೃತ್ಯವೇನೂ ಅಲ್ಲ. ಹೀಗಾಗಿ ಇದನ್ನು ಮುಂದವರಿಸುವ ಬಗ್ಗೆ ಕೂಡ ನಿಮಗೆ ಅಂಥಾ ಭಯ ಆತಂಕ ಇದ್ದ ಹಾಗಿಲ್ಲ. ಇನ್ನೊಂದು ಅವಕಾಶ ಸಿಕ್ಕಿದರೆ ಅದನ್ನು ಬಳಸಿಕೊಳ್ಳಲು ನೀವು ಮುಂದಾಗುವವರೇ ಎಂಬುದು ಸ್ಪಷ್ಟ. ಎಲ್ಲಿಯವರೆಗೆ ನಿಮ್ಮ ಈ ಕೆಲಸದಿಂದ ನಿಮಗೆ ತೀರಾ ಪಶ್ಚಾತ್ತಾಪ, ಮಾನಸಿಕ ವೇದನೆ ಕಾಡಿಸುವುದಿಲ್ಲವೋ, ನಿಮ್ಮ ಕುಟುಂಬಕ್ಕೆ ಆತಂಕ ಹಾಗೂ ಅವಮಾನ ಉಂಟುಮಾಡುವುದಿಲ್ಲವೋ, ಹಾಗೂ ನಿಮ್ಮೊಡನೆ ಸುಖಿಸುವವರ ಕುಟುಂಬದಲ್ಲೂ ಯಾವುದೇ ಬಾಧಕ ಉಂಟಾಗುವದಿಲ್ಲವೋ, ಮತ್ತು ಸಾಮಾಜಿಕವಾಗಿ ಸಮಸ್ಯೆ ಅನ್ನಿಸಿಕೊಳ್ಳುವುದಿಲ್ಲವೋ- ಅಲ್ಲಿಯವರೆಗೂ ಯಾವ ತೊಂದರೆಯೂ ಇಲ್ಲ. ಯಾಕೆಂದರೆ ಇದು ಕಾನೂನು ಸುವ್ಯವಸ್ಥೆ ಸಮಸ್ಯೆ ಅಲ್ಲ. 

ಆದರೆ ನಿಮಗೆ ಯಾವಾಗ ಪಶ್ಚಾತ್ತಾಪ, ಅಂಜಿಕೆ ಇತ್ಯಾದಿ ಭಾವಗಳು ಕಾಡಲಾರಂಭಿಸುತ್ತವೋ ಆಗ ಸಮಸ್ಯೆ ಶುರುವಾಗುತ್ತದೆ. ಆಗ ಮುಂದೆ ಇಂಥದೇ ಇನ್ನೊಂದು ಇನ್ ನೈಟ್ ಸ್ಟಾಂಡ್‌ (In NIght Stand) ಅನ್ನು ಅನುಭವಿಸಲು ಆಗುವುದಿಲ್ಲ. ಪ್ರತಿಷ್ಠಿತರ ಸಮಾಜಕ್ಕೂ ಮಧ್ಯಮ ವರ್ಗದ ನಿಮ್ಮಂಥವರಿಗೂ ಇರುವ ಅಂತರ ಇದೇನೇ. ನೀವು, ತಾನು ಮಾಡಿದ್ದು ತಪ್ಪೇನೋ ಎಂದು ಚಿಂತಿಸಿ ಕೊರಗಲು ಆರಂಭಿಸುತ್ತೀರಿ. ಹಾಗೆ ಕೊರಗಬೇಡಿ. ಅದರಿಂದ ನಿಮಗೆ ವರ್ತಮಾನದಲ್ಲೂ ಯಾವುದೇ ಸುಖ ಸಂತೋಷವನ್ನು ನೆಮ್ಮದಿಯಾಗಿ ಅನುಭವಿಸಲು ಆಗುವುದಿಲ್ಲ.

ಮಿಲನಕ್ಕೂ ಮುನ್ನ ಸಂಗಾತಿಯನ್ನುಮೂಡ್‌ಗೆ ತರಲು ಪುರುಷರು ಮಾಡಬೇಕಾಗಿದ್ದು ಇದು!

ಆದರೆ ಇಂಥ ಒಂದು ರಾತ್ರಿಯ ಸುಖದ ವೇಳೆ, ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೀರಾ ಎಂದು ಗಮನಿಸಿಕೊಳ್ಳಿ. ನೀವು ಗರ್ಭಿಣಿಯಾಗದ ಹಾಗೆ ಸುರಕ್ಷತೆ ವ್ಯವಸ್ಥೆ ಮಾಡಿಕೊಂಡಿದ್ದೀರಾ? ಅಕಸ್ಮಾತ್ ನೀವು ಜತೆಗೆ ಮಲಗಿದ ಆ ಗಂಡಸಿಗೆ ಯಾವುದಾದರೂ ಲೈಂಗಿಕ ರೋಗ ಇದ್ದರೆ, ಆಗೇನು ಮಾಡುತ್ತೀರಿ? ಅದು ನಿಮಗೆ ಹರಡದಂತೆ ತಡೆಯಲು ಯಾವುದಾದರೂ ಕ್ರಮ ತೆಗೆದುಕೊಂಡಿದ್ದೀರಾ? ನಿಮ್ಮ ಪಾರ್ಟಿಗಳು ಅಕ್ಕಪ್ಕದ ಮನೆಗಳವರಿಗೆ ತೊಂದರೆ ನೀಡುತ್ತಿದೆಯೇ? ಇಂಥ ಪಾರ್ಟಿಗಳು ನಿಮಗೆ ಅಪರೂಪದ ಹವ್ಯಾಸ ಆಗಿ ಉಳಿದಿದೆಯೋ ಅಥವಾ ಆಗಾಗ ಹೋಗಬೇಕು ಎಂವ ಚಟವಾಗಿ ಪರಿವರ್ತನೆ ಆಗಿದೆಯೋ? ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ. 

ಭಾರತೀಯರಾದ ನಮಗೆ ಸೆಕ್ಸ್ ಎಂಬುದು ಎಂದೂ ಕ್ಯಾಶುಯಲ್ ಸಂಬಂಧವಾಗಿ ಉಳಿಯುವುದಿಲ್ಲ (Sex significance in Indian Society). ಕೆಲವು ಆಧುನಿಕ ಸಮಾಜಗಳಲ್ಲಿ ಹಾಗೆ ಆಗಿರಬಹುದು. ಅಪರಿಚಿತರ ಜೊತೆ ಒನ್ ನೈಟ್ ಸ್ಟಾಂಡ್ ಎಂಬುದು ಅವರ ಬದುಕಿನಲ್ಲಿ ಸಾಮಾನ್ಯ ಎಂಬಂತೆ ಆಗಿರಬಹುದು. ಆದರೆ ನಮಗೆ ಹಾಗಿಲ್ಲ. ಅದು ಜೀವಮಾನವಿಡೀ ಕಾಡುತ್ತದೆ. ಆದ್ದರಿಂದಲೇ ಇಂಥ ಸನ್ನಿವೇಶಗಳಲ್ಲಿ ಹುಶಾರಾಗಿರಿ. 

ಬೇರೆ ಜನಾಂಗದ ಗಂಡಸ್ರ ಕಣ್ಣು ಬೀಳದಿರಲು ಈ ಬುಡಕಟ್ಟು ಮಹಿಳೆ ಕುತ್ತಿಗೆಗೆ ಬಿತ್ತು ರಿಂಗ್
 

Latest Videos
Follow Us:
Download App:
  • android
  • ios