Asianet Suvarna News Asianet Suvarna News

ಅಪ್ಪಂದಿರನ್ನು ಮದುವೆಯಾಗುವ ಹೆಣ್ಣು ಮಕ್ಕಳು: ಹೀಗೊಂದು ಸಂಪ್ರದಾಯ!

ಬಾಂಗ್ಲಾ- ಭಾರತ ಗಡಿಪ್ರದೇಶದಲ್ಲಿರುವ ಒಂದು ಬುಡಕಟ್ಟಿನಲ್ಲಿ ಮಗಳೇ ಅಪ್ಪನನ್ನು ಮದುವೆಯಾಗುವ ವಿಲಕ್ಷಣ ಸಂಪ್ರದಾಯವಿದೆ.

Weird marriage tradition in Bangla tribe
Author
Bengaluru, First Published May 29, 2021, 3:31 PM IST

ಇಂಥದೊಂದು ವಿಚಿತ್ರ ಸಂಪ್ರದಾಯದ ಬಗ್ಗೆ ನೀವು ಜಗತ್ತಿನಲ್ಲಿ ಎಲ್ಲೂ ಕೇಳಿರಲಾರಿರಿ. ಮಗಳು ಅಪ್ಪನನ್ನು ಮದುವೆಯಾಗುವ ಈ ವಿಲಕ್ಷಣ ರೂಢಿ, ಬಾಂಗ್ಲಾ- ಭಾರತ ಗಡಿಪ್ರದೇಶದ ಒಂದು ಬುಡಕಟ್ಟಿನಲ್ಲಿದೆ.

ಈ ಬುಡಕಟ್ಟಿಗೆ ಬಾಂಗ್ಲಾದಲ್ಲಿ ಮಂಡಿ ಅಂತಲೂ, ಭಾರತ ಭಾಗದಲ್ಲಿ ಗ್ಯಾರೋ ಅಂತಲೂ ಕರೆಯುತ್ತಾರೆ. ಇವರ ಸಂಖ್ಯೆ ಸುಮಾರು ೧೬ ಲಕ್ಷದಷ್ಟಿದೆ. ಇವರಲ್ಲಿ ಹೆಚ್ಚಿನವರು ಈಗಾಗಲೇ ಕ್ರಿಶ್ಚಿಯನೀಕರಣಗೊಂಡಿದ್ದಾರೆ. ಆದರೆ ತಮ್ಮ ಬುಡಕಟ್ಟು ಸಂಪ್ರದಾಯಗಳನ್ನು ಪಾಲಿಸುತ್ತಾರೆ.

ಇವರಲ್ಲಿರುವ ಒಂದು ರೂಢಿ ಎಂದರೆ ಮಲತಂದೆ ಮಗಳನ್ನು ಮದುವೆಯಾಗುವಿಕೆ. ಇವರಲ್ಲಿ ಹೆಣ್ಣು ತನ್ನ ಗಂಡನನ್ನು ಕಳೆದುಕೊಂಡರೆ, ಇನ್ನೊಂದು ಮದುವೆ ಆಗಬಹುದು. ಹಾಗೆ ಮದುವೆಯಾಗುವಾಗ, ತನ್ನ ಹೆಣ್ಣು ಮಕ್ಕಳನ್ನೂ ಸೇರಿಸಿಕೊಂಡೇ ಮದುವೆಯಾಗುತ್ತಾಳೆ. ಅಂದರೆ ಈಕೆಯ ಮಗಳು ತನ್ನ ತಾಯಿಯ ಹೊಸ ಗಂಡನ ಪತ್ನಿಯೂ ಆಗುತ್ತಾಳೆ.

#Feelfree: ಕೊರೋನಾ ಕಾಲದ ಎಫೆಕ್ಟ್‌, ಸೆಕ್ಸ್ ಅಂದರೆ ಭಯ! ...

ಆ ಮಗಳು ಪ್ರಾಯಕ್ಕೆ ಬಂದ ಮೇಲೆ, ತಂದೆಯ ಸ್ಥಾನದಲ್ಲಿರುವ ಗಂಡಸು ಇವಳನ್ನು ಪತ್ನಿಯಂತೆಯೇ ನೋಡಿಕೊಳ್ಳುತ್ತಾನೆ. ಒರೊಲಾ ಎಂಬ ಹೆಣ್ಣು ಹೀಗೆ ಮದುವೆಯಾದವಳು. ಆಕೆಗೆ ಮೂರು ವರ್ಷವಿದ್ದಾಗ, ಆಕೆಯ ತಂದೆ ತೀರಿಕೊಂಡ. ಮನೆಯನ್ನು ನಿಭಾಯಿಸಲು ಒಂದು ಗಂಡು ಬೇಕಲ್ಲ? ಹೀಗಾಗಿ ಆಕೆಯ ತಾಯಿ ನೊಟೆನ್‌ ಎಂಬಾತನನ್ನು ಮದುವೆಯಾದಳು. ಒರೊಲಾ ವಯಸ್ಸಿಗೆ ಬರುವವರೆಗೂ ಆಕೆ ನೊಟೆನ್‌ನನ್ನು ತನ್ನ ತಂದೆ ಎಂದೇ ತಿಳಿದಿದ್ದಳು. ಆದರೆ ಆಕೆ ಪ್ರೌಢಳಾದಾಗ ಆಕೆಗೆ ಗೊತ್ತಾಯಿತು- ನೊಟೆನ್‌ ತನ್ನ ಗಂಡನೂ ಕೂಡ ಎಂದು. ಅಂದರೆ, ಆಕೆಯ ತಾಯಿ ಮರುಮದುವೆ ಮಾಡಿಕೊಂಡಾಗ, ಒರೊಲಾ ಕೂಡ ಅವಳಿಗರಿಯದಂತೆಯೇ ಆತನ ವಧುವೇ ಆಗಿದ್ದಳು.

ಇದು ಗೊತ್ತಾದ ಬಳಿಕ, ಆಕೆ ನೊಟೆನ್‌ನ ಪತ್ನಿಯ ಪಾತ್ರವನ್ನೂ ನಿರ್ವಹಿಸಬೇಕಾಗಿ ಬಂತು. ಅದಕ್ಕೆ ಬುಡಕಟ್ಟಿನ ಹಿರಿಯರ ಒತ್ತಡವೂ ಕಾರಣವಾಗಿತ್ತು. ಕಡೆಗೂ ಆಕೆ ನೊಟೆನ್‌ ಜೊತೆ ಮಲಗಬೇಕಾಗಿ ಬಂತು.

ಆದರೆ ಇದು ಆಕೆಯ ಕುಟುಂಬದಲ್ಲಿ ಒಂದು ಕಿರಿಕಿರಿಯನ್ನೂ ತಂದಿತು. ಒರೊಲಾ ಇನ್ನೂ ಯವ್ವನ ತುಂಬಿದ ಹೆಣ್ಣು. ನೊಟೆನ್‌ ಆಕೆಯ ತಾಯಿಯನ್ನು ಬಿಟ್ಟು, ಇವಳ ಜೊತೆಗೇ ಹೆಚ್ಚಾಗಿ ಇರತೊಡಗಿದ. ಇದರಿಂದ ಒರೊನಾಳ ತಾಯಿಗೆ ಹೊಟ್ಟೆ ಕಿಚ್ಚಾಯಿತು. ಆಕೆ ಒರೊಲಾಳ ಅಡುಗೆಯಲ್ಲಿ ವಿಷದ ಎಲೆಗಳನ್ನು ಹಾಕಿ ಆಕೆಗೆ ಹೊಟ್ಟೆನೋವು ಉಂಟಾಗುವಂತೆ ಮಾಡಿ, ಆಕೆ ಅಸ್ವಸ್ಥಳಾಗಿದ್ದಾಗ ನೊಟೆನ್‌ ತನ್ನ ಜೊತೆಗೇ ಮಲಗುವಂತೆ ಮಾಡುತ್ತಿದ್ದಳು!

ಇದು ಒಂದು ಮನೆಯ ಕತೆಯಲ್ಲಿ, ಈ ಬುಡಕಟ್ಟಿನಲ್ಲಿ ಹಲವು ಮನೆಗಳ ಕತೆಯಿದು. ಕೆಲವು ಕಡೆ ಹೆಣ್ಣು ಮಕ್ಕಳು ತಮಗರಿಯದಂತೆಯೇ ಸಣ್ಣ ಪ್ರಾಯದಲ್ಲಿಯೇ ಮಲತಂದೆಯ ಜೊತೆಗೆ ಮದುವೆ ಆದವರು. ಇನ್ನು ಕೆಲವರು, ಪ್ರಾಯಕ್ಕೆ ಬಂದ ಬಳಿಕ, ತಾಯಿ ಒಂಟಿಯಾದಾಗ, ಆಕೆ ಮರುಮದುವೆಯಾದಾಗ, ಆಕೆಯ ಜೊತೆಗೇ ಮದುವೆಯಾದವರು.   

ಬೇಕಾಬಿಟ್ಟಿ ಫುಡ್ ಬೇಡ: ಕೊರೊನಾ ಬಂದು ಹೋದ್ಮೇಲೆ ನಿಮ್ಮ ಡಯಟ್ ಹೀಗಿರಲಿ ...

ಮಂಡಿ ಬುಡಕಟ್ಟು ಅಳಿಯಕಟ್ಟು ಸಂಪ್ರದಾಯದ್ದು. ಅಂದರೆ ಇಲ್ಲಿ ಮಹಿಳೆಯೇ ಪ್ರಧಾನ. ಇಲ್ಲಿ ಆಸ್ತಿಯ ಯಜಮಾನಿಕೆಯನ್ನು ಹೆಣ್ಣೇ ಹೊಂದಿರುವವಳು. ಹೀಗಾಗಿ ಕುಟುಂಬದ ಆಗುಹೋಗುಗಳನ್ನು ಅವಳೇ ನೋಡಿಕೊಳ್ಳಬೇಕು. ಗಂಡಸು ಮದುವೆಯಾಗಿ ಹೆಣ್ಣಿನ ಮನೆಗೆ ಬಂದು ಇರುತ್ತಾನೆ. ಕೆಲಸ ಮಾಡುತ್ತಾನೆ. ಹೀಗಾಗಿ ಆಸ್ತಿ, ಹೊಲ. ಹಣಕಾಸಿಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳೂ ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡೇ ಆಗುತ್ತವೆ. ಈ ರೂಢಿಯನ್ನೂ ಅದೇ ದೃಷ್ಟಿಯಲ್ಲೇ ನೋಡಬಹುದು.

ಮಗಳು ಬೇರೊಬ್ಬನನ್ನು ಮದುವೆಯಾದರೆ, ತಾಯಿಯ ಆಸ್ತಿ ಪಾಲಾಗುತ್ತದೆ. ಸಣ್ಣಪುಟ್ಟ ಚಿಲ್ಲರೆ ಆಸ್ತಿಗಳನ್ನು ಹೊಂದಿರುವ ಈ ಬುಡಕಟ್ಟಿನಲ್ಲಿ ಪಾಲಾಗುವುದು ಎಂದರೆ ಆರ್ಥಿಕವಾಗಿ ನಾಶವಾದಂತೆಯೇ. ಇದನ್ನು ತಡೆಯುವುದಕ್ಕಾಗಿಯೇ ಈ ಪದ್ಧತಿ ರೂಢಿಯಲ್ಲಿ ಬಂದಿರಬಹುದು. ಆದರೆ ಈ ಬುಡಕಟ್ಟು ಈ ಕ್ರಿಶ್ಚಿಯನೀಕರಣಗೊಂಡಿದೆ. ಈ ರೂಢಿಯನ್ನು ಕೂಡ ಈಗ ವಿದ್ಯಾವಂತ ಮಂದಿ ಅಸಹ್ಯ, ಅನಾಗರಿಕ ಎಂದು ತಿರಸ್ಕರಿಸುತ್ತಿದ್ದಾರೆ. ಎಲ್ಲೋ ಕೆಲವು ಹಳೆಯ ತಲೆಗಳು ಮಾತ್ರ ಇದನ್ನು ಆಚರಿಸುತ್ತಾರೆ.

ಮುಟ್ಟಿನ ಬಗ್ಗೆ ನಿಮಗೇನು ಗೊತ್ತು? ಇಂದು ಋತುಸ್ರಾವ ಶುಚಿತ್ವ ದಿನ ...

ಇವರಲ್ಲಿ ಇನ್ನೂ ಒಂದು ರಿವಾಜು ಇತ್ತು. ಅದೇನೆಂದರೆ, ಮದುವೆ ಹೆಣ್ಣು, ತನ್ನ ಗೆಳತಿಯರ ಜೊತೆಗೂಡಿ ಮದುವೆ ಗಂಡನ್ನು ಅಪಹರಿಸಿ, ಮದುವೆಯ ದಿನದವರೆಗೂ ಬಚ್ಚಿಟ್ಟುಕೊಂಡಿರುವುದು. ಮದುವೆ ದಿನವೇ ಆತನನ್ನು ಮದುವೆ ಮಂಟಪಕ್ಕೆ ಆಕೆ ಕರೆತರುವುದು. ಇದು ಆತ ಇನ್ನೊಬ್ಬ ಹೆಣ್ಣಿನ ಪಾಲಾಗದಿರಲಿ ಎಂಬ ದೂರದೃಷ್ಟಿಯಿಂದ ಮಾಡಿದ ರಿವಾಜು ಇರಬಹುದು. ಈ ರೂಢಿ ಕೂಡ ಈಗ ಇಲ್ಲ.

ಈ ಎರಡೂ ಪದ್ಧತಿಗಳೂ ಶತಮಾನಗಳ ಹಿಂದೆ ರೂಪಿಸಿದ್ದಿರಬಹುದು. ಅಂದು ಬಹುಶಃ ಈ ಬುಡಕಟ್ಟಿನಲ್ಲಿ ಗಂಡಸರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಇಂಥ ಸಂಪ್ರದಾಯಗಳು ಹುಟ್ಟಿರಬೇಕು. ಇಲ್ಲಿನ ಆಸ್ತಿ ಹಕ್ಕು ಕೂಡ ಇದರಿಂದಲೇ ಪ್ರೇರಿತವಾದುದು.

Follow Us:
Download App:
  • android
  • ios