Relationship Tips : ಕಲವೊಂದು ಲಕ್ಷಣಗಳು ಪ್ರೀತಿ ಅಭದ್ರತೆಯನ್ನು ತೋರಿಸತ್ತೆ, ಯಾವುದವು?
ಯಾವುದೇ ಸ್ವಾರ್ಥವಿಲ್ಲದೆ ಅಂತರಾಳದಿಂದ ಒಬ್ಬರನ್ನು ನಂಬುವುದೇ ಪ್ರೀತಿ. ಆದ್ರೆ ಪ್ರೀತಿಸುವ ವ್ಯಕ್ತಿ ಬಗ್ಗೆ ಅನುಮಾನ, ಅಭದ್ರತೆ ಶುರುವಾದ್ರೆ ಸಂಬಂಧ ಹಾಳಾಗುತ್ತದೆ. ನಿಮ್ಮ ಸಂಗಾತಿಯೂ ನಿಮ್ಮ ಮೇಲೆ ಅಭದ್ರತೆ ಭಾವ ಹೊಂದಿದ್ದಾನಾ ಎಂಬುದನ್ನು ಸುಲಭವಾಗಿ ತಿಳಿಯಬಹುದು.
ಜೀವನ (Life) ದಲ್ಲಿ ಪ್ರೀತಿ (Love) ಬಹಳ ಮುಖ್ಯ. ಸಂಗಾತಿ (Partner) ಮಧ್ಯೆ ಪ್ರೀತಿಯಿದ್ದಾಗಲೇ ಜೀವನ ಸುಖವಾಗಿ ಸಾಗಲು ಸಾಧ್ಯ. ಪ್ರೀತಿ ಅತ್ಯಂತ ಸುಂದರವಾದ ಭಾವನೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರತಿ ಕ್ಷಣವನ್ನು ಸಂಗಾತಿಯೊಂದಿಗೆ ಸಂತೋಷದಿಂದ ಕಳೆಯಲು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ಪ್ರೀತಿ ಜೊತೆ ಅಭದ್ರತೆ ಭಾವನೆ ಕಾಡೋದು ಸಾಮಾನ್ಯ ಸಂಗತಿಯೇನಲ್ಲ. ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರ ಜೊತೆ ಸುರಕ್ಷಿತ ಮತ್ತು ಆಳವಾದ ಸಂಬಂಧ ಹೊಂದಲು ಬಯಸುತ್ತಾರೆ. ಆದರೆ ಅನುಮಾನ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಜೀವನದುದ್ದಕ್ಕೂ ಅಭದ್ರತೆಯ ಭಾವನೆ ಹೊಂದುತ್ತಾರೆ. ಇದ್ರಿಂದ ಜೀವನ ಸುಖಮಯ ಸಮಯ ವ್ಯರ್ಥವಾಗುತ್ತದೆ. ಸಂಗಾತಿ ತನ್ನನ್ನು ಬಿಟ್ಟು ಹೋಗಬಹುದೆಂಬ ಭಯ ಅವರನ್ನು ಸದಾ ಕಾಡ್ತಿರುತ್ತದೆ. ಹೊರಗಿನಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದ್ರೂ ಅನುಮಾನ, ಅಭದ್ರತೆಯಿಂದ ಮನಸ್ಸು ನರಳಾಡುತ್ತದೆ. ನಿಮ್ಮ ಸಂಗಾತಿ ಕೂಡ ನಿಮ್ಮ ಬಗ್ಗೆ ಅಸುರಕ್ಷಿತ ಭಾವನೆ ಹೊಂದಿದ್ದಾರೆ ಎಂಬುದನ್ನು ಹೇಗೆ ಕಂಡು ಹಿಡಿಯುವುದು. ಈ ಪ್ರಶ್ನೆ ಬಹುತೇಕರನ್ನು ಕಾಡ್ಬಹುದು. ಇಂದು ನಾವು ಅಭದ್ರತೆ ಹೊಂದಿರುವ ವ್ಯಕ್ತಿ ವರ್ತನೆ ಬಗ್ಗೆ ಹೇಳ್ತೇವೆ.
ಇತರರ ಜೊತೆ ಸಂಗಾತಿ : ಗರ್ಲ್ ಫ್ರೆಂಡ್ ಅಥವಾ ಪತ್ನಿ, ಬೇರೆ ಹುಡುಗರನ್ನು ಹೊಗಳಿದ್ರೆ ಪುರುಷ ಸಂಗಾತಿ ಇದನ್ನು ಸಹಿಸುವುದಿಲ್ಲ. ಪುರುಷರು ಕೂಡ ಅಸುರಕ್ಷಿತ ಭಾವನೆ ಎದುರಿಸುತ್ತಾರೆ. ಸಂಗಾತಿಯ ಕೇಂದ್ರ ಬಿಂದುವಾಗಲು ಬಯಸ್ತಾರೆ. ಹಾಗೆಯೇ ಅವರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಆದರೆ ಸಂಗಾತಿ ಇದನ್ನು ಮಾಡದಿದ್ದಾಗ, ಅಸುರಕ್ಷಿತ ಭಾವನೆ ಅವರಲ್ಲಿ ಹೆಚ್ಚಾಗುತ್ತದೆ. ಇದ್ರಿಂದ ಸಂಬಂಧ ದುರ್ಬಲಗೊಳ್ಳುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಪುರುಷರು ತಮ್ಮ ಸಂಗಾತಿಯ ಸ್ನೇಹಿತರನ್ನು ಇಷ್ಟಪಡುವುದಿಲ್ಲ. ಅವರನ್ನು ದೂರವಿಡಲು ಪ್ರಯತ್ನಿಸುತ್ತಾರೆ. ನಿಮ್ಮ ಸಂಗಾತಿ ಕೂಡ ಹೀಗೆ ಮಾಡ್ತಿದ್ದರೆ ಅವರ ಜೊತೆ ಮಾತನಾಡಿ. ನಿಮಗೆ ಅವರ ಪ್ರೀತಿ ಎಷ್ಟು ಮುಖ್ಯ ಎಂಬುದನ್ನು ವಿವರಿಸಿ.
ಚುಂಬನ ದೇಹದಲ್ಲಿ ರೋಮಾಂಚನ ಉಂಟು ಮಾಡುವುದು ಯಾಕೆ ? ಇಲ್ಲಿದೆ ಯಾರೂ ಹೇಳಿರದ ಸೀಕ್ರೆಟ್
ಹಿಂದಿನ ಕೆಟ್ಟ ಅನುಭವ : ಅನೇಕ ಹುಡುಗರು ತಮ್ಮ ಸಂಬಂಧದ ಬಗ್ಗೆ ಅಸುರಕ್ಷಿತರಾಗಿರೋದಕ್ಕೆ ಅವರ ಹಿಂದಿನ ಕೆಟ್ಟ ಅನುಭವ ಕೂಡ ಕಾರಣವಾಗಿರುತ್ತದೆ. ಇದೇ ಕಾರಣಕ್ಕೆ ಅವರು ಸಣ್ಣ ಸಣ್ಣ ವಿಷ್ಯಕ್ಕೂ ಅನುಮಾನಪಡ್ತಾರೆ. ಸಂಗಾತಿ ಬಿಟ್ಟು ಹೋದ್ರೆ ಎಂಬ ಭಯ ಅವರಿಗಿರುತ್ತದೆ. ಅವರಿಗೆ ಈ ಸಂದರ್ಭದಲ್ಲಿ ಎಲ್ಲ ಮಹಿಳೆಯರು ಒಂದೇ ರೀತಿಯಲ್ಲ ಎಂಬುದನ್ನು ಅರ್ಥ ಮಾಡಿಸಬೇಕಾಗುತ್ತದೆ. ಅರ್ಥಹೀನ ವಿಷಯಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬ ಭರವಸೆ ನೀಡಬೇಕಾಗುತ್ತದೆ.
ನಿಮ್ಮ ಸುತ್ತಮುತ್ತ ಇರುವ ಸುಂದರ ಹಾಗೂ ಸ್ಮಾರ್ಟ್ ಜನ : ಬುದ್ಧಿವಂತ ಮತ್ತು ಸುಂದರವಾದ ಜನರು ನಿಮ್ಮ ಸುತ್ತಮುತ್ತ ಇದ್ದಾಗ ಅದನ್ನು ಸಂಗಾತಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಅವರೆಲ್ಲರನ್ನೂ ಆತ ಒಪ್ಪಿಕೊಂಡಿದ್ದರೂ, ಸಂಗಾತಿ ತನ್ನನ್ನು ಬಿಟ್ಟು ಹೋದ್ರೆ ಎಂಬ ಭಯ ಮನಸ್ಸಿನಲ್ಲಿರುತ್ತದೆ. ಆಗ ತನ್ನ ಸಂಗಾತಿಯ ಪ್ರತಿ ನಡೆಯ ಮೇಲೆ ನಿಗಾ ಇಡುತ್ತಾನೆ. ಹಾಗೆ ಸಂಗಾತಿ, ಸುತ್ತಲಿನ ಜನರ ಜೊತೆ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿದ್ದರೆ ಮೊದಲು ಸಂಗಾತಿ ಜೊತೆ ಮಾತನಾಡಿ. ಯಾವ ವಿಷ್ಯ ಅವರಿಗೆ ಇಷ್ಟವಾಗ್ತಿಲ್ಲ ಎಂಬುದನ್ನು ತಿಳಿದುಕೊಳ್ಳಿ. ನಂತ್ರ ಅದನ್ನು ಬಗೆಹರಿಸುವ ಪ್ರಯತ್ನ ನಡೆಸಿ.
ಇಂಟಿಮೇಟ್ ಆಗೋ ಮುನ್ನ ನೀವು ಕೇಳಲೇ ಬೇಕಾದ ಪ್ರಶ್ನೆಗಳು
ಯಾವುದೇ ವಿಷ್ಯವನ್ನು ಗುಟ್ಟಾಗಿಡ್ಬೇಡಿ : ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಾಮಾಣಿಕತೆ ಮುಖ್ಯ. ಸಂಗಾತಿ ಜೊತೆ ಮಾತನಾಡ್ತಿರಬೇಕು. ಮನಸ್ಸಿನ ಭಾವನೆ ಅರ್ಥವಾಗುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ಅದು ತಪ್ಪು. ಮನಸ್ಸು ಬಿಚ್ಚಿ ಮಾತನಾಡುವ ಅಗತ್ಯವಿರುತ್ತದೆ. ಆಗ ನಿಮ್ಮನ್ನು ನಿಮ್ಮ ಸಂಗಾತಿ ಇನ್ನಷ್ಟು ಅರಿಯಲು ಸಹಾಯವಾಗುತ್ತದೆ. ಸಂಗಾತಿ ಮಧ್ಯೆ ರಹಸ್ಯವಿದ್ರೆ ಅದು ಜಗಳಕ್ಕೆ ಕಾರಣವಾಗುತ್ತದೆ. ಸಂಬಂಧ ಇದ್ರಿಂದ ಹಾಳಾಗುತ್ತದೆ.