ಇಂಟಿಮೇಟ್ ಆಗೋ ಮುನ್ನ ನೀವು ಕೇಳಲೇ ಬೇಕಾದ ಪ್ರಶ್ನೆಗಳು
ಇಂಟಿಮೆಸಿ ಪ್ರತಿಯೊಬ್ಬರ ಜೀವನದ ಒಂದು ಮುಖ್ಯ ಭಾಗಗಳಲ್ಲಿ ಒಂದಾಗಿದೆ. ಆದರೆ ಕೆಲವೊಮ್ಮೆ ಇಂಟಿಮೇಟ್ (intimate) ಆಗಬೇಕೆ ಎಂಬ ಯೋಚನೆಯಲ್ಲಿದ್ದರೆ, ಅಥವಾ ಇಂಟಿಮೇಟ್ ಆಗಲು ಇಷ್ಟವಿಲ್ಲದಿದ್ದರೆ ನೀವು ಯೋಚನೆ ಮಾಡಬೇಕು? ಇಂಟಿಮೇಟ್ ಆಗುವ ಮೊದಲು, ನೀವು ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಕೆಲವು ಪ್ರಶ್ನೆಗಳನ್ನು ಕೇಳುವುದು ತುಂಬಾ ಮುಖ್ಯ, ಇದರಿಂದ ನೀವು ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆ ಅನುಭವಿಸಬೇಕಾಗಿರೋದಿಲ್ಲ.
ಚಲನಚಿತ್ರಗಳಲ್ಲಿ, ಸೀರಿಯಲ್‌ನಲ್ಲಿ ರೋಮ್ಯಾಂಟಿಕ್ ಸೀನ್ (romantic scene) ತುಂಬಾ ರೀತಿಯಲ್ಲಿ ತೋರಿಸಬಹುದು, ಆದರೆ ಸಾಮಾನ್ಯ ಜೀವನದಲ್ಲಿ ಸಂಗಾತಿ ಜೊತೆ ಇಂಟಿಮೆಸಿ ಆಗುವುದು ಎಂದರೆ ದೈಹಿಕವಾಗಿ ಸಂಪರ್ಕ ಹೊಂದುವುದು ಮಾತ್ರವಲ್ಲ, ಆದರೆ ಈ ಸಮಯದಲ್ಲಿ, ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪರ್ಕ (Emotionally Connected) ಹೊಂದುತ್ತಾನೆ. ನಿಮಗೆ ಇದ್ಯಾವುದೂ ಇಷ್ಟವಿಲ್ಲ ಎಂದಾದರೆ , ಇಂಟಿಮೆಸಿಗೂ ಮುನ್ನ ನೀವು ನಿಮ್ಮನ್ನು ಮತ್ತು ಸಂಗಾತಿಯ ಬಳಿ ಕೆಲವು ಪ್ರಶ್ನೆಗಳನ್ನು ಕೇಳಬೇಕು? ಆ ಪ್ರಶ್ನೆಗಳು ಯಾವುವು ನೋಡೋಣ…
ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ.
ಇದು ಸರಿಯಾದ ಸಮಯವೇ?
ನೀವು ಯಾರೊಂದಿಗಾದರೂ ಇಂಟಿಮೇಟ್ ಆದಾಗ, ನೀವು ಆ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ (emotional) ತುಂಬಾನೆ ಹತ್ರ ಆಗ್ತೀರಿ. ನೀವು ಯಾರೊಂದಿಗೂ ಹತ್ತಿರವಾಗಲು ಬಯಸದಿದ್ದರೆ, ಇಂಟಿಮೇಟ್ ಆಗೋದನ್ನು ತಪ್ಪಿಸಿ. ನೀವು ಯಾರೊಂದಿಗಾದರೂ ಇಂಟಿಮೇಟ್ ಆಗೋ ಮೊದಲು ನಿಮ್ಮ ಮುಂದಿರುವ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದು ತುಂಬಾನೆ ಮುಖ್ಯ.
ಅನೇಕ ಬಾರಿ ಜನರು ತಮ್ಮ ಮುಂದಿರುವ ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳದೆ ಆಪ್ತರಾಗುತ್ತಾರೆ, ಇದು ಭವಿಷ್ಯದಲ್ಲಿ ತುಂಬಾ ಸಮಸ್ಯೆಗಳನ್ನು ತಂದೊಡ್ಡಬಹುದು. ಅನೇಕ ಬಾರಿ ಫಿಸಿಕಲ್ ರಿಲೇಶನ್ ಶಿಪ್ ಬಳಿಕ ಇವರ ಜೊತೆ ಇಂಟಿಮೇಟ್ ಆಗಿರಬಹುದೇ? ಅನ್ನೋ ಪ್ರಶ್ನೆ ತಲೆಯನ್ನು ಕಾಡುತ್ತೆ. ಅದಕ್ಕಾಗಿಯೇ ಇಂಟಿಮೇಟ್ ಆಗುವ ಮುನ್ನವೇ ಈ ಬಗ್ಗೆ ಯೋಚನೆ ಮಾಡಿದರೆ ಉತ್ತಮ.
ಈ ವ್ಯಕ್ತಿ ನನ್ನ ಸರಿಯಾದ ಆಯ್ಕೆಯೇ?
ನೀವು ಯಾರೊಂದಿಗಾದರೂ ಇಂಟಿಮೇಟ್ (intimate) ಆಗುವ ಮುನ್ನ, ಆ ವ್ಯಕ್ತಿಯು ನಿಮಗೆ ಸೂಕ್ತ ಆಯ್ಕೆಯೇ ಎಂದು ನಿಮ್ಮನ್ನು ನೀವು ಕೇಳೋದು ಮುಖ್ಯ. ಅನೇಕ ಬಾರಿ, ಮಹಿಳೆಯರು ಪುರುಷರ ಒಂದು ನೋಟಕ್ಕೆ ಆಕರ್ಷಿತರಾಗಿ ಅವರೊಂದಿಗೆ ಇಂಟಿಮೆಟ್ ಆಗಲು ಬಯಸುತ್ತಾರೆ. ಆದರೆ ಆ ವ್ಯಕ್ತಿ ಹಲವು ಕೆಟ್ಟ ಅಭ್ಯಾಸಗಳನ್ನು ಹೊಂದಿರಬಹುದು. ನಿಮ್ಮೊಂದಿಗೆ ಮುಂದೆ ಅವರು ಕೆಟ್ಟದಾಗಿ ಸಹ ವರ್ತಿಸಬಹುದು. ಆದುದರಿಂದ ಅವರ ಬಗ್ಗೆ ತಿಳಿದು ಮುಂದುವರೆದರೆ ಚೆನ್ನಾಗಿರುತ್ತೆ.
ಯಾವುದೇ ವ್ಯಕ್ತಿಯೊಂದಿಗೆ ಇಂಟಿಮೇಟ್ ಆಗೋದು ನಿಮಗೆ ಸ್ವಲ್ಪ ಸಮಯದವರೆಗೆ ಒಳ್ಳೆಯ ಭಾವನೆಯನ್ನು ಉಂಟುಮಾಡಬಹುದು, ಆದರೆ ಬಳಿಕ ಅವರ ಕ್ಯಾರೆಕ್ಟರ್ (character) ನಿಮಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ಅವರ ಜೊತೆ ಇಂಟಿಮೇಟ್ ಆಗಿರೋದು ಮುಂದೆ ನಿಮಗೆ ಯಾಕಾದ್ರು ಇವ್ರ ಜೊತೆ ಇದ್ದೇನೆ ಅನಿಸಬಹುದು. ಇದ್ಯಾವುದು ಬೇಡ ಎಂದಾದರೆ ಇದೆಲ್ಲಾ ಆಗೋ ಮುನ್ನ, ಆ ವ್ಯಕ್ತಿಯು ನಿಮಗೆ ಸೂಕ್ತವಾಗಿದ್ದಾನೆಯೇ ಅಥವಾ ಇಲ್ಲವೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ.
ಸೆಕ್ಸ್ ಮಾಡೋದು ಸರಿಯೇ?
ಯಾರೊಂದಿಗಾದರೂ ನಿಕಟವಾಗುವ ಮೊದಲು, ಹಾಗೆ ಮಾಡುವುದು ನಿಮ್ಮ ನೈತಿಕತೆ ಮತ್ತು ಮೌಲ್ಯಗಳಿಗೆ (values) ಸರಿಯಾಗಿದೆಯೇ? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಂಗಾತಿಯು ಬೇರೆ ಯಾರೊಂದಿಗಾದರೂ ಸಂಪರ್ಕದಲ್ಲಿದ್ದಾರೆಯೇ ಎಂದು ಸಹ ತಿಳಿದುಕೊಳ್ಳೋದು ಮುಖ್ಯ? ಸಂಗಾತಿಯ ಸ್ವಭಾವ ಸರಿ ಇಲ್ಲ ಎಂದು ನಿಮಗೆ ಅನಿಸಿದರೆ ಇಂಟಿಮೇಟ್ ಆಗೋದನ್ನು ನಿಲ್ಲಿಸಿ. ಯಾರೊಂದಿಗಾದರೂ ಇಂಟಿಮೇಟ್ ಆಗೋದು ಎಂದರೆ ನೀವು ನಿಮ್ಮ ಮೌಲ್ಯಗಳನ್ನು ಕಡೆಗಣಿಸೋದು ಎಂದರ್ಥವಲ್ಲ. ನಿಮ್ಮ ಮೌಲ್ಯಗಳೊಂದಿಗೆ ನೀವು ರಾಜಿ ಮಾಡಿಕೊಳ್ಳದಿರುವುದು ಬಹಳ ಮುಖ್ಯ.
ಸೆಕ್ಸ್ ಮಾಡೋದು ಸರಿಯೇ?
ಯಾರೊಂದಿಗಾದರೂ ಇಂಟಿಮೇಟ್ ಆಗೋ ಮೊದಲು, ನೀವಿಬ್ಬರೂ ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೀರೋ ಇಲ್ಲವೋ ಎಂದು ತಿಳಿದುಕೊಳ್ಳೋದು ಮುಖ್ಯ. ಇದಕ್ಕಾಗಿ, ನೀವು ನಿಮ್ಮ ಸಂಗಾತಿಯ ಬಗ್ಗೆ ಸರಿಯಾಗಿ ಮಾಹಿತಿ ಸಂಗ್ರಹಿಸಬೇಕಾಗುತ್ತೆ. ನಿಮಗೆ ಯಾವುದೇ ಸಂಶಯವಿದ್ದರೆ ಅದನ್ನು ಇಂಟಿಮೇಟ್ ಆಗೋ ಮುನ್ನ ಎಲ್ಲವನ್ನೂ ಪರಿಹರಿಸಿ.
ಎಸ್ ಟಿಡಿ ಮತ್ತು HIV ಟೆಸ್ಟ್ ಮಾಡಲಾಗಿದೆಯೇ?
ಈ ಪ್ರಶ್ನೆಗಳು ಸ್ವಲ್ಪ ವಿಚಿತ್ರ ಅನಿಸಬಹುದು, ಆದರೆ ಯಾವುದೇ ರೀತಿಯ ದೈಹಿಕ ಅಪಾಯವನ್ನು (physical problem)ತಪ್ಪಿಸಲು, ನಿಮ್ಮ ಸಂಗಾತಿಯು ತಮ್ಮ ಎಸ್ಟಿಐ ಮತ್ತು ಎಚ್ಐವಿ ಪರೀಕ್ಷೆ ಮಾಡಿಸಿರುವ ಬಗ್ಗೆ ಕೇಳೊದು ಮುಖ್ಯವಾಗುತ್ತೆ. ಇಲ್ಲವಾದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ.
ಜನನ ನಿಯಂತ್ರಣಕ್ಕಾಗಿ ಏನನ್ನು ಬಳಸುತ್ತೇವೆ?
ಇಂಟಿಮೇಟ್ ಆಗಿರೋವಾಗ, ಅನಗತ್ಯ ಗರ್ಭಧಾರಣೆ ಅಥವಾ ನಂತರ ಯಾವುದೇ ರೋಗದ ಅಪಾಯವನ್ನು ತಡೆಗಟ್ಟಲು,ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸೋದು ತುಂಬಾನೆ ಮುಖ್ಯ. ಅನೇಕ ಹುಡುಗರು ಇಂಟಿಮೇಟ್ ಆಗಿರೋವಾಗ ಪ್ರೊಟೆಕ್ಷನ್ (protection) ಬಳಸಲು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಈ ಬಗ್ಗೆ ಮೊದಲೇ ಮಾತುಕತೆ ನಡೆಸೋದು ಉತ್ತಮ.