ಕೇರಳದ ಮುನ್ನಾರ್‌ನಲ್ಲಿ ಭೂಕುಸಿತದಲ್ಲಿ ಕಾಣೆಯ ಮಾಲೀಕನ ಮೃತದೇಹ ಪತ್ತೆ ಹಚ್ಚಿದ ನಾಯಿಯನ್ನು ಯಾರಿಗೆ ತಾನೇ ಗೊತ್ತಿಲ್ಲ, ಇದೀಗ ಅದೇ ನಾಯಿ ಮತ್ತೆ ಸುದ್ದಿಯಾಗಿದೆ.

ಕೇರಳದ ಮುನ್ನಾರ್‌ನಲ್ಲಿ ಸುರಿದ ಭಾರೀ ಮಳೆಗೆ ಭೂಕುಸಿತವಾಗಿ 81 ಜನರ ಮನೆ ನಾಶವಾಗಿ ಹೋಗಿತ್ತು. ಆದರೆ ಊರಿನ ತಳಿಯ ಕುವಿ ನಾಯಿ ಮಾತ್ರ ಕಾಣೆಯಾದ ತನ್ನ ಮಾಲೀಕನಿಗಾಗಿ ಹುಡುಕುತ್ತಲೇ ಇತ್ತು. ಕೊನೆಗೂ ತನ್ನ ಮಾಲೀಕನನ್ನು ಹುಡುಕುವಲ್ಲಿ ಸಫಲವಾಗಿತ್ತು ಕುವಿ.

ವೃದ್ಧ ಯಜಮಾನನ ಜೀವ ಉಳಿಸಿದ ನಾಯಿ

ಭೂಕುಸಿತವಾಗಿ 8 ದಿನಗಳ ನಂತರ ಕಳೆದ ವಾರ ಕುವಿ ನಾಯಿ ತನಿಖಾ ಮತ್ತು ರಕ್ಷಣಾ ತಂಡವನ್ನು ಕರೆದೊಯ್ದಿತ್ತು. 2ವರೆ ವರ್ಷದ ಹೆಣ್ಣು ಮಗುವಿನ ದೇಹವನ್ನು ನಾಯಿ ಪತ್ತೆ ಹಚ್ಚಿತ್ತು.

ತನ್ನ ಮಾಲೀಕನ ಮನೆಯ ಧನುಷ್ಕಾ ಎಂಬ ಪುಟ್ಟ ಬಾಲಕಿಯ ದೇಹವನ್ನು ನಾಯಿ ಪತ್ತೆ ಹಚ್ಚಿತ್ತು. ಭೂಕುಸಿತವಾದ ಜಾಗದಿಂದ ಬಹಳ ದೂರ ನದಿ ಬದಿಯಲ್ಲಿ ದೇಹ ಸಿಕ್ಕಿ ಹಾಕಿಕೊಂಡಿತ್ತು.

ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..!

ರಕ್ಷಣಾ ತಂಡವನ್ನು ಬಾಲಕಿಯ ಮೃತದೇಹದ ತನಕ ತಲುಪಿಸಿದ ನಾಯಿ ಮಾತ್ರ ಮೃತದೇಹ ನೋಡುತ್ತಲೇ ಪ್ರಜ್ಞೆ ತಪ್ಪಿ ಬಿದ್ದಿತ್ತು. ಅ ನಂತರ ಕುವಿ ಸಂಪೂರ್ಣ ಬೇಸರದಲ್ಲಿದ್ದು, ಅನ್ನ ಆಹಾರ ಸೇವಿಸುವುದಕ್ಕೂ ನಿರಾಕರಿಸುತ್ತಿದೆ.

ಇದೀಗ ಕೇರಳ ಪೊಲೀಸ್ ಡಾಗ್ ಸ್ಕ್ವಾಡ್‌ನ ಟ್ರೈನರ್ ಮಾಧವನ್ ಇದೀಗ ನಾಯಿಯ ವಿಶ್ವಾಸ ಗಳಿಸಿಕೊಂಡಿದ್ದು, ಮಾಧವನ್ ಜೊತೆ ಹೊಂದಿಕೊಂಡಿದೆ. ಇದೀಗ ಮಾಧವನ್ ನಾಯಿಯನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ.

ಹ್ಯುಂಡೈ ಶೋರೂಂ ಸೇಲ್ಸ್‌ಮೆನ್ ಆಗಿ ಬೀದಿ ನಾಯಿ ನೇಮಕ; ಸಂಚಲನ ಮೂಡಿಸಿದೆ ಹೃದಯ ಸ್ಪರ್ಶಿ ಘಟನೆ

ಕುಟುಂಬದ ಹಿರಿಯ ಅಜ್ಜಿಯೊಬ್ಬರನ್ನು ಬಿಟ್ಟು ಕುವಿಯನ್ನು ಸಾಕುತ್ತಿದ್ದ ಕುಟುಂಬದವರೆಲ್ಲ ಮೃತಪಟ್ಟಿದ್ದು, ಕುವಿ ಅನಾಥವಾಗಿತ್ತು. ಇದೀಗ ಕುವಿಯನ್ನು ಮನೆಗೆ ಕರೆದೊಯ್ಯಲು ಮಾಧವನ್ ಅಧಿಕಾರಿಗಳ ಅನುಮತಿ ಕೋರಿದ್ದು, ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.