Sex Health : ಸೆಕ್ಸ್ ವೇಳೆ ಬೆವರುತ್ತಾ? ಯಾವೆಲ್ಲಾ ಕಾರಣಗಳಿರಬಹುದು?

ಸೆಕ್ಸ್ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಸಂಭೋಗದ ವೇಳೆ ಬೆವರು ಏಕೆ ಬರುತ್ತೆ, ಅದ್ರಿಂದ ಲಾಭವಿದ್ಯಾ? ನಷ್ಟವಿದ್ಯಾ ಎಂಬುದನ್ನೆಲ್ಲ ತಿಳಿಯಬೇಕು. ಆಗ್ಲೇ ಸೆಕ್ಸ್ ಆರೋಗ್ಯ ಕಾಪಾಡಿಕೊಳ್ಳೋದು ಸುಲಭವಾಗುತ್ತದೆ.
 

Know Why You And Your Partner Sweat During Sex

ಲೈಂಗಿಕತೆ ಬರೀ ದೈಹಿಕ ಸುಖವನ್ನು ಮಾತ್ರ ನೀಡೋದಿಲ್ಲ. ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಹಾಗೆಯೇ ಸೆಕ್ಸ್, ದೇಹಕ್ಕೆ ವ್ಯಾಯಾಮ ನೀಡುತ್ತದೆ. ಸಂಭೋಗದ ವೇಳೆ ದೇಹದ ಎಲ್ಲ ಭಾಗಗಳಿಗೆ ವ್ಯಾಯಾಮ ಸಿಗುತ್ತದೆ. ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಕ್ಯಾಲೋರಿ ಬರ್ನ್ ಆಗುತ್ತದೆ. ತೂಕ ಇಳಿಸಲು ಇದು ಬೆಸ್ಟ್ ಎಂದು ಪರಿಗಣಿಸಲಾಗುತ್ತದೆ. ಸೆಕ್ಸ್ ವೇಳೆ, ಅದ್ರಲ್ಲೂ ಪರಾಕಾಷ್ಠೆ ತಲುಪುವ ಸಮಯದಲ್ಲಿ ಸಂಗಾತಿಗಳಿಬ್ಬರೂ ವಿಪರೀತ ಬೆವರುತ್ತಾರೆ. ನಾವಿಂದು ಸೆಕ್ಸ್ ಹಾಗೂ ಬೆವರಿನ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಬೆವರಲು ಕಾರಣವೇನು ?: ವ್ಯಾಯಾಮ (Exercise) ಮಾಡಿದಾಗ ಬೆವರುವುದು ಸಾಮಾನ್ಯ. ಸೆಕ್ಸ್ (Sex) ಕೂಡ ಹಾಗೆ. ಇದು ದೈಹಿಕ ಚಟುವಟಿಕೆ, ವ್ಯಾಯಾಮದಂತೆ. ಸಂಭೋಗ ಬೆಳೆಸುವುದ್ರಿಂದ ಹೃದಯ ಬಡಿತದಲ್ಲಿ ಏರಿಕೆ ಕಾಣಿಸುತ್ತದೆ. ದೇಹದಲ್ಲಿ ಉಷ್ಣತೆ (warmth) ಏರಿಕೆಯಾಗುತ್ತದೆ. ಇದೇ ಕಾರಣಕ್ಕೆ ನೀವು ಸೆಕ್ಸ್ ವೇಳೆ ಬೆವರುತ್ತೀರಿ. ಜಿಮ್ ಗೆ ಹೋಗಲು ಬೇಸರ, ಪ್ರತಿ ನಿತ್ಯ ವ್ಯಾಯಾಮ ಅಸಾಧ್ಯ ಎನ್ನುವವರು ಶಾರೀರಿಕ ಸಂಬಂಧ ಬೆಳೆಸಿ, ದೇಹಕ್ಕೆ ವ್ಯಾಯಾಮ ನೀಡಬಹುದು. ಆದ್ರೆ 40 ವರ್ಷ ದಾಟುತ್ತಿದ್ದಂತೆ ಸೆಕ್ಸ್ ಮೇಲೆ ಹಿಡಿತ ಸಾಧಿಸುವುದು ಮುಖ್ಯ. ವಾರದಲ್ಲಿ ಎರಡರಿಂದ ಮೂರು ದಿನಕ್ಕಿಂತ ಹೆಚ್ಚು ಬಾರಿ ಸಂಭೋಗ ಬೆಳೆಸಿದ್ರೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ, ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳಲು ಇಲ್ಲಿವೆ ಟಿಪ್ಸ್

ಜರ್ನಲ್ ಆಫ್ ಫಿಸಿಯೋಲಾಜಿಕಲ್ ಆಂಥ್ರೊಪಾಲಜಿ ಸಂಶೋಧನೆ ಪ್ರಕಾರ, ಸೆಕ್ಸ್ ವೇಳೆ ಪುರುಷರು ಮತ್ತು ಮಹಿಳೆಯರಲ್ಲಿ ಸ್ಟೀರಾಯ್ಡ್ ಹೆಚ್ಚಾಗುತ್ತದೆ. ಇದ್ರಿಂದ ಸ್ಟೀಮಿಂಗ್ ಸೆಕ್ಸ್ ಬಲಗೊಳ್ಳುತ್ತದೆ. ಸ್ಟೀಮಿಂಗ್ ಮಟ್ಟ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸಂಭೋಗದ ವೇಳೆ ಬೆವರುವುದು ಹೆಚ್ಚು ಆಹ್ಲಾದಕರವಾಗಿರುತ್ತದೆ ಎಂದು ತಜ್ಞರು (Experts) ಹೇಳಿದ್ದಾರೆ. ಸಂಭೋಗದ ವೇಳೆ ಸಂಗಾತಿ ಬೆವರಲು ಶುರು ಮಾಡಿದ್ರೆ ಇಲ್ಲಿಗೆ ಶಾರೀರಿಕ ಸಂಬಂಧ ಬೆಳೆಸೋದನ್ನು ನಿಲ್ಲಿಸಬೇಕು ಎಂದೋ ಅಥವಾ ಸಂಗಾತಿ ಸುಸ್ತಾಗಿದ್ದಾರೆ ಎಂದೋ ಸಂಗಾತಿ ಭಾವಿಸುತ್ತಾರೆ. ಆದ್ರೆ ಇದು ತಪ್ಪು. ಸಂಭೋಗದ ವೇಳೆ ಬೆವರುವುದು ಉತ್ತಮ ಸಂಕೇತವಾಗಿದೆ.

Relationship Tips : 40 ವರ್ಷವಾದ್ಮೇಲೆ ಮದುವೆಯಾದ ಫರಾ ಖಾನ್ ಅನುಭವಿಸಿದ ನೋವು ನಿಮ್ಮನ್ನೂ ಕಾಡ್ಬಹುದು..

ಬೆವರುವ ಸಮಯದಲ್ಲಿ ಬಿಡುಗಡೆಯಾಗುವ ಫೆರೋಮೋನ್ ಹಾರ್ಮೋನಿನ ನೈಸರ್ಗಿಕ ವಾಸನೆಯು ಸಂಗಾತಿಯನ್ನು ಉತ್ತೇಜಿಸುತ್ತದೆ. ಫೆರೋಮೋನ್ ಹಾರ್ಮೋನುಗಳು ನೈಸರ್ಗಿಕ ಕಾಮೋತ್ತೇಜಕಗಳಾಗಿವೆ. ಬೆವರುವುದ್ರಿಂದ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಕಾರ್ಟಿಸೋಲ್ ಮಟ್ಟ ಹೆಚ್ಚಾಗುವುದು ಆರೋಗ್ಯಕ್ಕೆ ಒಳ್ಳೆಯದು.  ಪುರುಷರಲ್ಲಿ ಹೆಚ್ಚು ಬೆವರು ಕಾಣಿಸಿಕೊಳ್ಳಲು ಟೆಸ್ಟೋಸ್ಟೆರಾನ್ ಕಾರಣ. ಒಸಾಕಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ಮತ್ತು ಕೋಬ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ, ಕ್ರೀಡೆ ಅಥವಾ ಲೈಂಗಿಕ ಸಮಯದಲ್ಲಿ ಮಹಿಳೆ ಹಾಗೂ ಪುರುಷರಿಬ್ಬರೂ ಬೆವರುತ್ತಾರೆ. ಆದ್ರೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಬಿಡುಗಡೆಯಾಗ್ತಿದ್ದಂತೆ ಹೆಚ್ಚು ಬೆವರು ಬರುತ್ತದೆ. ಇನ್ನು ಮಹಿಳೆಯರಲ್ಲಿ ಈಸ್ಟ್ರೋಜೆನ್ ಬೆವರಲು ಕಾರಣವಾಗುತ್ತದೆ. ಮಹಿಳೆಯರ ಉಷ್ಣತೆ ಹೆಚ್ಚಾದಂತೆ ಅವರು ಬೆವರುತ್ತಾರೆ. ಪುರುಷರು, ಮಹಿಳೆಯರಿಗಿಂತ ಹೆಚ್ಚು ಬೆವರಲು ಅವರ ದೇಹ ಕೂಡ ಕಾರಣ. ದೊಡ್ಡ ದೇಹವಿದ್ದರೆ ಬೆವರು ಹೆಚ್ಚು. ದೇಹದ ಗಾತ್ರ ದೊಡ್ಡದಿದ್ದರೆ ಉಷ್ಣತೆ ಹಾಗೂ ಬೆವರು ಹೆಚ್ಚಾಗಿ ಬರುತ್ತದೆ.

ಸೆಕ್ಸ್ ವೇಳೆ ಬೆವರುವುದು ಲೈಂಗಿಕ ಕ್ರಿಯೆಗೆ ಉತ್ತೇಜನ ನೀಡುತ್ತದೆ ನಿಜ. ಆದ್ರೆ ಸೋಂಕಿಗೂ ಇದು ಕಾರಣವಾಗುತ್ತದೆ. ಸೋಂಕು ಪುರುಷರ ತೊಡೆ ಸಂದಿಯಲ್ಲಿ ಬೆಳೆಯುತ್ತದೆ. ತೇವಾಂಶ ಹೆಚ್ಚಿರುವ ಸ್ಥಳದಲ್ಲಿ ಬೆಳೆಯುವ ಸೋಂಕು, ಆರೋಗ್ಯ ಸಮಸ್ಯೆಯುಂಟು ಮಾಡುತ್ತದೆ. ಪುರುಷರಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮಹಿಳಾ ಸಂಗಾತಿ ಮೇಲೂ ಪ್ರಭಾವ ಬೀರಬಹುದು. ಒಂದ್ವೇಳೆ ಪುರುಷ ಸಂಗಾತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದರೆ ಅದು ಗುಣವಾಗುವವರೆಗೆ ಸೆಕ್ಸ್ ನಿಂದ ದೂರವಿರಬೇಕು ಎನ್ನುತ್ತಾರೆ ತಜ್ಞರು.

Latest Videos
Follow Us:
Download App:
  • android
  • ios