Asianet Suvarna News Asianet Suvarna News

Relationship Tips : 40 ವರ್ಷವಾದ್ಮೇಲೆ ಮದುವೆಯಾದ ಫರಾ ಖಾನ್ ಅನುಭವಿಸಿದ ನೋವು ನಿಮ್ಮನ್ನೂ ಕಾಡ್ಬಹುದು..

ಹೆಣ್ಮಕ್ಕಳು ಹುಟ್ಟುತ್ತಿದ್ದಂತೆ ಅವರ ಮದುವೆ ಬಗ್ಗೆ ಪಾಲಕರು ಆಲೋಚನೆ ಮಾಡ್ತಾರೆ. ಮದುವೆ ವಯಸ್ಸು ದಾಟಿದ್ರೆ ಟೆನ್ಷನ್ ಹೆಚ್ಚಾಗುತ್ತದೆ. ಈಗಿನ ಹುಡುಗಿಯರು ವೃತ್ತಿಗೆ ಹೆಚ್ಚು ಆದ್ಯತೆ ನೀಡೋದ್ರಿಂದ ಮದುವೆ ಲೇಟ್ ಆಗ್ತಿದೆ. ಈ ಸಂದರ್ಭದಲ್ಲಿ ಹುಡುಗಿಯರು ನಾನಾ ಸಮಸ್ಯೆ ಎದುರಿಸ್ತಾರೆ.
 

Farah Khan Recalls Being Trolled For Her Late Marriage After Seeing Samantha Ruth Prabhu Ad
Author
First Published May 6, 2023, 12:13 PM IST | Last Updated May 6, 2023, 12:13 PM IST

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಹಾಗೂ ನಿರ್ದೇಶಕಿ ಫರಾ ಖಾನ್ ಯಾವಾಗ್ಲೂ ತಮ್ಮ ಅಭಿಪ್ರಾಯವನ್ನು ನೇರವಾಗಿ ಎಲ್ಲರ ಮುಂದೆ ಇಡ್ತಾರೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೆಪ್ಸಿ ಜಾಹೀರಾತೊಂದನ್ನು ಮೆಚ್ಚಿ ಕಮೆಂಟ್ ಮಾಡಿದ್ದರು. ಈ ಜಾಹೀರಾತಿನಲ್ಲಿ ಇಬ್ಬರು ಹುಡುಗಿಯರು ಪೆಪ್ಸಿ ಕುಡಿಯುತ್ತ ಮದುವೆ ಬಗ್ಗೆ ಮಾತನಾಡ್ತಾರೆ. ಒಬ್ಬಳು, ಹುಡುಗಿಯರು ಸಮಯಕ್ಕೆ ಸರಿಯಾಗಿ ಮದುವೆಯಾಗ್ಬೇಕು ಎನ್ನುತ್ತಾಳೆ. ಇದಕ್ಕೆ ನಟಿ ಸಮಂತಾ, ಮದುವೆ ನಿಗದಿತ ಸಮಯಕ್ಕೆ ಆಗುವುದಕ್ಕಿಂತ ಇಚ್ಛೆಯ ಮೇರೆಗೆ ಆಗೋದು ಮುಖ್ಯ ಎನ್ನುತ್ತಾರೆ.

ಈ ಮಾತನ್ನು ಮೆಚ್ಚಿದ ಫರಾ ಖಾನ್ (Farah Khan), ಇನ್ಸ್ಟಾಗ್ರಾಮ್ ನಲ್ಲಿ ಜಾಹೀರಾತನ್ನು ಪೋಸ್ಟ್ (Post) ಮಾಡಿದ್ದಾರೆ. ಈ ಜಾಹೀರಾತು ನನ್ನ ಹಳೆ ದಿನಗಳನ್ನು ನೆನಪಿಸುತ್ತದೆ ಎಂದುವರು ಬರೆದಿದ್ದಾರೆ. ಒಂದು ಸಮಯದಲ್ಲಿ ನನ್ನ ನೃತ್ಯ ಸಂಯೋಜನೆ, ನಿರ್ದೇಶನದ ಬಗ್ಗೆ ಮಾತ್ರವಲ್ಲ ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ಅಶ್ಲೀಲ ಕಮೆಂಟ್ ಮಾಡ್ತಿದ್ದರು ಎಂದು ಫರಾ ಬರೆದಿದ್ದಾರೆ. ನೀವು ನೃತ್ಯ ಸಂಯೋಜಕಿಯಂತೆ ಬಟ್ಟೆ ಧರಿಸೋದಿಲ್ಲ, ಹೆಣ್ಣು ಮಕ್ಕಳು ಆಕ್ಷನ್ ಚಿತ್ರ ಮಾಡಲು ಸೂಕ್ತವಲ್ಲ, ಈ ಕ್ಷೇತ್ರದಲ್ಲಿರಲು ನೀವು ಚಿಕ್ಕವರು, ಮದುವೆಯಾಗಲು, ಮಕ್ಕಳನ್ನು ಪಡೆಯಲು ನಿಮ್ಮ ವಯಸ್ಸು ಮೀರಿದೆ ಹೀಗೆ ಅನೇಕ ಕಮೆಂಟ್ ಗಳನ್ನು ಮಾಡ್ತಿದ್ದರಂತೆ.

HEALTH TIPS: ಅತಿ ಕೋಪ ಅಪಾಯಕಾರಿ, ಕಂಟ್ರೋಲ್ ಮಾಡೋದು ಹೇಗೆ ಗೊತ್ತು ಮಾಡ್ಕೊಳ್ಳಿ!

ಫರಾ ತಮ್ಮ 40ನೇ ವಯಸ್ಸಿನಲ್ಲಿ 8 ವರ್ಷ ಚಿಕ್ಕ ವಯಸ್ಸಿನ ಚಲನಚಿತ್ರ ನಿರ್ಮಾಪಕ ಶಿರಿಶ್ ಕುಂದರ್ ಕೈ ಹಿಡಿದಿದ್ದರು. 43ನೇ ವಯಸ್ಸಿನಲ್ಲಿ ಫರಾ 3 ತ್ರಿವಳಿ ಮಕ್ಕಳ ತಾಯಿಯಾಗಿದ್ದಾರೆ. ಈಗ ಯಶಸ್ಸಿನ ಶಿಖರದಲ್ಲಿರುವ ಫರಾ, ಸಂತೋಷವಾಗಿದ್ದಾರೆ. ಫರಾ ಮಾತ್ರವಲ್ಲ ಮದುವೆ ಹಾಗೂ ವಯಸ್ಸಿನ ವಿಷ್ಯದಲ್ಲಿ ಮಹಿಳೆಯರು ಸದಾ ಚರ್ಚೆಯಲ್ಲಿರುತ್ತಾರೆ. ತಡವಾಗಿ ಮದುವೆ (Marriage) ಯಾಗುವ ಹುಡುಗಿಯರು ಏನೆಲ್ಲ ಸಮಸ್ಯೆ ಅನುಭವಿಸ್ತಾರೆ ಎಂಬುದನ್ನು ನಾವು ಹೇಳ್ತೇವೆ.

ತಡವಾದ ಮದುವೆ ಅಂದ್ರೇನು? : ಹುಡುಗಿಗೆ 20 ವರ್ಷ ದಾಟುತ್ತಿದ್ದಂತೆ ಮನೆಯಲ್ಲಿ ಮದುವೆ ಬಗ್ಗೆ ಚಿಂತೆ ಶುರುವಾಗುತ್ತದೆ. ಆದ್ರೆ 25 ರಿಂದ 30 ವರ್ಷ ವಯಸ್ಸು ಮದುವೆಯಾಗಲು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ವಯಸ್ಸಿನ ಮಿತಿ ಸ್ಥಳ ಮತ್ತು ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಬದಲಾಗುತ್ತದೆ. ಮಹಿಳೆಯ ವಯಸ್ಸು 30ರ ಗಡಿ ದಾಟುತ್ತಿದ್ದಂತೆ ಅಥವಾ 30ರ ನಂತ್ರ ಆಕೆ ಮದುವೆಯಾದ್ರೆ ಅದನ್ನು ತಡವಾದ ಮದುವೆ ಎನ್ನಲಾಗುತ್ತದೆ. ಪುರುಷರ ಈ ತಡವಾದ ವಯಸ್ಸು 35 ವರ್ಷ. 

ಫಸ್ಟ್ ಟೈಮ್ ಸೆಕ್ಸ್‌ಗೆ ಸಂಬಂಧಿಸಿದ ಈ ವಿಷಯಗಳನ್ನು ನಂಬಬಹುದಾ?

ಜನರ ಬಾಯಲ್ಲಿ ಕೇಳುತ್ತೆ ಏನೆಲ್ಲ ಮಾತು? : ತಡವಾಗಿ ಮದುವೆಯಾದ ಹುಡುಗಿಯರು ಸಮಾಜದ ಬಾಯಿಗೆ ಆಹಾರವಾಗ್ತಾರೆ. ಜನರು ನಾನಾ ಮಾತುಗಳನ್ನು ಆಡ್ತಾರೆ. ಕಡಿಮೆ ವಯಸ್ಸಿನಲ್ಲಿ ಇಷ್ಟವಿಲ್ಲದ ಮದುವೆಯಾಗಿ ನಂತ್ರ ಸಮಸ್ಯೆ ಎದುರಿಸುವ ಬದಲು, ನಿಮಗೆ ಸೂಕ್ತವೆನ್ನಿಸುವ ವ್ಯಕ್ತಿ ಸಿಕ್ಕ ನಂತ್ರ ತಡವಾಗಿ ಮದುವೆಯಾದ್ರೂ ಸಮಸ್ಯೆಯೇನಿಲ್ಲ. ಆದ್ರೆ ನೀವು ಸಮಾಜದ ಮಾತುಗಳನ್ನು ಎದುರಿಸಲು ಸಿದ್ಧವಿರಬೇಕು. ಯಾವುದೇ ಒತ್ತಡ, ಖಿನ್ನತೆಗೆ ಒಳಗಾಗಬಾರದು.

ಕಾಡ್ಬಹುದು ಈ ಸಮಸ್ಯೆ : ಮಹಿಳೆಗೆ ವಯಸ್ಸಾದಂತೆ ಗರ್ಭ ಧರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹಾಗಾಗಿ ಮಕ್ಕಳನ್ನು ಪಡೆಯುವುದು ಕಷ್ಟವಾಗಬಹುದು. ಮಕ್ಕಳನ್ನು ಪಡೆಯುವ ಒತ್ತಡ, ಮತ್ತಷ್ಟು ಹಿನ್ನಡೆಯುಂಟು ಮಾಡುತ್ತದೆ. ವಂಶಾಭಿವೃದ್ಧಿಗಾಗಿ ದುಬಾರಿ ಹಣ ತೆತ್ತುವ, ವೆಚ್ಚದ ಚಿಕಿತ್ಸೆಗೊಳಗಾಗುವ ಅಪಾಯ ಹೆಚ್ಚು.

ಹೊಂದಾಣಿಕೆಯಲ್ಲಿ ಬರಬಹುದು ಅಪಸ್ವರ : ಪರಸ್ಪರ ಹೊಂದಾಣಿಕೆ ದಾಂಪತ್ಯದಲ್ಲಿ ಮುಖ್ಯವಾಗುತ್ತದೆ. 30 ವರ್ಷಗಳ ಕಾಲ ತಂದೆ – ತಾಯಿ ಜೊತೆ ಅಥವಾ ಏಕಾಂಗಿಯಾಗಿ ತಮ್ಮಿಷ್ಟದಂತೆ ಬದುಕಿದ ಜನರಿಗೆ ಏಕಾಏಕಿ ಇನ್ನೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಕಷ್ಟವಾಗುತ್ತದೆ. ತಡವಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರೆ ನೀವು ಹೊಂದಾಣಿಕೆ ಕಲಿಯುವುದು ಮುಖ್ಯ. 
 

Latest Videos
Follow Us:
Download App:
  • android
  • ios