ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ, ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳಲು ಇಲ್ಲಿವೆ ಟಿಪ್ಸ್
ಪ್ರೀತಿಯಲ್ಲಿ ನಿರಾಶೆ, ಮೋಸ, ಬ್ರೇಕಪ್ ಆದಾಗ ಯುವಕ, ಯುವತಿಯರು ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಅಥವಾ ಇನ್ನೊಬ್ಬರಿಂದ ತೊಂದರೆಯಾದಾಗಲೂ ಪರಿಹಾರ ತಿಳಿಯದೆ ಕೆಲವರು ಸ್ವಯಂ ಹಾನಿ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆಯ ನಿರ್ಧಾರ ಮಾಡುತ್ತಾರೆ. ಹಾಗಿದ್ರೆ ಬ್ರೇಕಪ್ ಆದಾಗ ಅದನ್ನು ಪಾಸಿಟಿವ್ ಮೈಂಡ್‌ನಲ್ಲಿ ನೋಡುವುದು ಹೇಗೆ?
ಮಾಜಿ ಪ್ರಿಯಕರನ ಸೈಬರ್ ದಾಳಿಯಿಂದ ಇತ್ತೀಚಿಗೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿತ್ತು. ಇಲ್ಲಿನ ಕೊಟ್ಟಾಯಂನ ಕಾಡುತುರುತಿಯಲ್ಲಿ ಅರುಣ್ ವಿದ್ಯಾಧರನ್ ಎಂಬ ಯುವಕ ಯುವತಿ ಅತಿರಾ ತನ್ನ ಸ್ನೇಹವನ್ನು ಕೊನೆಗೊಳಿಸಿದ್ದಕ್ಕಾಗಿ ಯುವತಿಯ ವಿರುದ್ಧ ಫೇಸ್‌ಬುಕ್‌ನಲ್ಲಿ ಸೈಬರ್ ದಾಳಿ ನಡೆಸುತ್ತಿದ್ದ. ಯುವತಿಯ ಮದುವೆಯಲ್ಲಿ ಬೇರೆ ಮದುವೆಗೆ ತಯಾರಿ ನಡೆಸುತ್ತಿರುವಾಗಲೇ ಅರುಣ್ ವಿದ್ಯಾಧರನ್ ಹೀಗೆ ಮಾಡಿದ್ದಾನೆ. ಇದರಿಂದ ಮನನೊಂದು ಅತಿರಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅರುಣ್ ವಿದ್ಯಾಧರನ್ ಸೈಬರ್ ದಾಳಿಯ ವಿರುದ್ಧ ಅತಿರಾ ಸಾಯುವ ಮುನ್ನ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪ್ರೀತಿ (Love)ಯಲ್ಲಿ ನಿರಾಶೆ, ಮೋಸ, ಬ್ರೇಕಪ್ ಆದಾಗ ಯುವಕ, ಯುವತಿಯರು ಕೆಟ್ಟ ನಿರ್ಧಾರ (Decision) ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಅಥವಾ ಇನ್ನೊಬ್ಬರಿಂದ ತೊಂದರೆಯಾದಾಗಲೂ ಪರಿಹಾರ ತಿಳಿಯದೆ ಕೆಲವರು ಸ್ವಯಂ ಹಾನಿ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆಯ (Sucide) ನಿರ್ಧಾರ ಮಾಡುತ್ತಾರೆ. ಹಾಗಿದ್ರೆ ಬ್ರೇಕಪ್ ಆದಾಗ ಅದನ್ನು ಪಾಸಿಟಿವ್ ಮೈಂಡ್‌ನಲ್ಲಿ ನೋಡುವುದು ಹೇಗೆ?
Relationship Tips: ಪ್ರೇಮಿಯಿಂದ ದೂರವಾಗಿದ್ದೀರಾ? ನಿಮ್ಮ ಮಾಜಿ ಹೀಗೆಲ್ಲ ಸತಾಯಿಸ್ಬೋದು
ಬ್ರೇಕಪ್‌ಗಳನ್ನು ಧನಾತ್ಮಕವಾಗಿ ನಿಭಾಯಿಸುವುದು ಹೇಗೆ?
ಎಲ್ಲಾ ಲವ್ ಸ್ಟೋರೀಸ್ ಹ್ಯಾಪಿ ಎಂಡಿಂಗ್ ಆಗಿರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮನಸ್ತಾಪ ಮೂಡಿ ಬ್ರೇಕಪ್ ಆಗಿಬಿಡುತ್ತದೆ. ಹಲವಾರು ವರ್ಷಗಳ ಕಾಲ ಅಥವಾ ತಿಂಗಳುಗಳ ಕಾಲ ಜೊತೆಗಿದ್ದು ಸಡನ್ ಬ್ರೇಕಪ್ ಆದರೆ ಸಹಿಸಿಕೊಳ್ಳುವುದು ಕಷ್ಟವಾಗುವುದು ಸಹಜ. ಹೀಗಾಗಿಯೇ ಬ್ರೇಕಪ್ ಬಳಿಕ ಕೆಲವರು ಖಿನ್ನತೆಗೆ (Anxiety) ಜಾರುತ್ತಾರೆ. ಇನ್ನು ಕೆಲವರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಸಮಸ್ಯೆಗಳು ಬಂದಾಗ ಎಲ್ಲರೂ ಆತ್ಮಹತ್ಯೆಯ ಬಗ್ಗೆ ಯೋಚಿಸುವುದಿಲ್ಲ. ಕೆಲವೊಬ್ಬರು ಮಾತ್ರ ಕುಗ್ಗಿ ಹೋಗುತ್ತಾರೆ. ಇನ್ನು ಉಳಿದವರು ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆಯಲ್ಲಿರುತ್ತಾರೆ.ಹಾಗಿದ್ರೆ ಬ್ರೇಕಪ್ ಆದಾಗ ಕೆಟ್ಟ ಆಲೋಚನೆಗಳನ್ನು (Bad thinkings) ತಡೆಯುವುದು ಹೇಗೆ?
ಚಿಕ್ಕಂದಿನಲ್ಲೇ ಮನಸ್ಸಿಗೆ ಧನಾತ್ಮಕತೆ ತುಂಬಿಸಿ: ಪಾಸಿಟಿವ್ ಮೈಂಡ್‌ನ್ನು ಸಡನ್ನಾಗಿ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಚಿಕ್ಕಂದಿನಲ್ಲಿ ಮನಸ್ಸಿಗೆ ಧನಾತ್ಮಕ ವಿಷಯಗಳನ್ನು ತುಂಬುತ್ತಾ ಹೋಗಬೇಕು. ಚಿಕ್ಕಂದಿನಲ್ಲೇ ಮಕ್ಕಳು ತಪ್ಪು (Mistake) ಮಾಡಿದರೆ ಅಥವಾ ಅವರು ತಮ್ಮ ಅಧ್ಯಯನದಲ್ಲಿ ಅಂಕಗಳನ್ನು ಗಳಿಸಲು ವಿಫಲವಾದರೆ ಅವರನ್ನು ಹೀಯಾಳಿಸುವ ಬದಲು ಅವರಿಗೆ ಹೀಗೆಲ್ಲಾ ಆಗುವುದು ಸಹಜ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಮಕ್ಕಳನ್ನು ಜೀವನದ (Life) ಹಿನ್ನಡೆಗಳನ್ನು ಎದುರಿಸಲು ಸಾಧ್ಯವಾಗುವಂತೆ ಬೆಳೆಸಬೇಕು.
3 Month Rule: ಈ ಫಾರ್ಮುಲಾ ಬಗ್ಗೆ ತಿಳ್ಕೊಂಡ್ರೆ ಬ್ರೇಕಪ್ ಬಳಿಕ ಮುಂದೇನು ಅನ್ನೋದು ತಿಳಿಯುತ್ತೆ!
ಹಠಾತ್ ಪ್ರತಿಕ್ರಿಯೆ ಒಳ್ಳೆಯದಲ್ಲ: ಹಠಾತ್ ಪ್ರವೃತ್ತಿಯ ನಡವಳಿಕೆಯನ್ನು ಹಲವರಲ್ಲಿ ಗಮನಿಸಬಹುದು. ಯಾವುದೇ ಸಮಸ್ಯೆಯಾದಾಗ ಹಠಾತ್ ಪ್ರತಿಕ್ರಿಯೆ ಸಂಪೂರ್ಣವಾಗಿ ತಪ್ಪು. ಇದು ಯಾವಾಗಲೂ ತಪ್ಪಾಗಿರಬಹುದು. ಸಮಸ್ಯೆಗಳನ್ನು ನಿಭಾಯಿಸುವುದು ತಮ್ಮ ಸಾಮರ್ಥ್ಯವನ್ನು ಮೀರಿದೆ ಎಂದು ಅಂದುಕೊಂಡವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇದು ಪಾಸಿಟಿವ್ ಮೈಂಡ್ ಇಲ್ಲದ ಕಾರಣವಾಗಿರಬಹುದು.ಕೌಟುಂಬಿಕ ಪರಿಸ್ಥಿತಿಗಳು, ಅವರು ಹೇಗೆ ಬೆಳೆದರು, ಸಮಾಜದಲ್ಲಿ ಅವರು ಎದುರಿಸಿದ ಹಲವಾರು ಸವಾಲುಗಳು ಮತ್ತು ಶಾಲೆ ಮತ್ತು ಕಾಲೇಜಿನಲ್ಲಿನ ಅನುಭವಗಳಿಂದಾಗಿ ಈ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಅವರು ಸಾಂದರ್ಭಿಕವಾಗಿ ಹೊಂದಿರುವುದಿಲ್ಲ.
ಆಂತರಿಕ ವ್ಯಕ್ತಿತ್ವ: ನಾವು ಬಾಹ್ಯವಾಗಿ ಸ್ಟ್ರಾಂಗ್ ಆಗಿದ್ದರಷ್ಟೇ ಸಾಲದು. ಆಂತರಿಕ ವ್ಯಕ್ತಿತ್ವ ಹೆಚ್ಚು ಸ್ಟ್ರಾಂಗ್ ಆಗಿರಬೇಕು. ಆತ್ಮಹತ್ಯೆ ಕುರಿತು ಚರ್ಚಿಸುವಾಗ ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆಯನ್ನು ಚರ್ಚಿಸಬೇಕು. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕಾಲಾನಂತರದಲ್ಲಿ ಅದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಆಂತರಿಕ ವ್ಯಕ್ತಿತ್ವ ವೀಕ್ ಇರುವವರು ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ. ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆಗೆ ಚಿಕಿತ್ಸೆ ನೀಡದಿದ್ದರೆ ಇಂಥವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.