Kerala Couple: ಭಾರತೀಯ ಸೇನೆಗೆ ಲಗ್ನಪತ್ರಿಕೆ ಕಳಿಸಿದ ಕೇರಳದ ವಧುವರರು
ಮದುವೆ, ಜೀವನದ ಪ್ರಮುಖ ಘಟ್ಟ. ಹೀಗಾಗಿಯೇ ಈ ಶುಭ ಸಂದರ್ಭದಲ್ಲಿ ತಮ್ಮ ಆತ್ಮೀಯರೆಲ್ಲರೂ ಭಾಗಿಯಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇದೆಲ್ಲಕ್ಕಿಂತಲೂ ವಿಶಿಷ್ಟವಾಗಿ ಕೇರಳದ ದಂಪತಿಗಳು ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಂಡಿಯನ್ ಆರ್ಮಿ ಶುಭಹಾರೈಕೆ ಕಳುಹಿಸಿದ್ದು, ಇದು ಎಲ್ಲೆಡೆ ವೈರಲ್ ಆಗ್ತಿದೆ.
ಎಲ್ಲರ ಜೀವನದಲ್ಲಿಯೂ ಮದುವೆ (Marriage) ತುಂಬಾ ಮುಖ್ಯ. ಹೀಗಾಗಿಯೇ ಈ ಖುಷಿಯ ಕ್ಷಣಗಳಲ್ಲಿ ಕುಟುಂಬ (Family), ಸ್ನೇಹಿತರು, ಆತ್ಮೀಯರು, ಸಂಬಂಧಿಕರು ಜೊತೆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಇದೆಲ್ಲಕ್ಕಿಂತ ವಿಭಿನ್ನವಾಗಿ ಕೇರಳದ ದಂಪತಿಗಳು ತಮ್ಮ ಮದುವೆಗೆ ಭಾರತೀಯ ಸೇನೆಯ (Indian Army) ಸೈನಿಕರನ್ನು ಆಹ್ವಾನಿಸಿದ್ದಾರೆ. ಮದುವೆಯ ಆಮಂತ್ರಣದ (Wedding Invitation) ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೇರಳದ ರಾಹುಲ್ ಮತ್ತು ಕಾರ್ತಿಕಾ ದಂಪತಿ ಇಂಡಿಯನ್ ಆರ್ಮಿಯನ್ನು ಮದ್ವೆಗೆ ಆಹ್ವಾನಿಸಿದ್ದಾರೆ. 'ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ ಶ್ರಮದಿಂದಾಗಿ ನಾವು ಪ್ರತೀ ದಿನ ನೆಮ್ಮದಿಯಿಂದ ಮಲಗುತ್ತೇವೆ. ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ದಿನ ಕಳೆಯುತ್ತೇವೆ. ದಯವಿಟ್ಟು ನಮ್ಮ ಮದುವೆಗೆ ಬನ್ನಿ' ಎಂದು ಮನವಿ ಮಾಡಿದ್ದಾರೆ.
ಭಾರತೀಯ ಸೇನೆಗೆ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸಿದ ಜೋಡಿ
ಜೀವನದ ಯಾವುದೇ ಶುಭಸಂದರ್ಭದಲ್ಲಿ ಶುಭ ಹಾರೈಕೆಗಳು (Best Wishes) ತುಂಬಾ ಮುಖ್ಯ. ಇಂಥಾ ಹಾರೈಕೆಗಳು ಖುಷಿಯನ್ನು ಇಮ್ಮಡಿಗೊಳಿಸುತ್ತವೆ. ಹೀಗಾಗಿಯೇ ಕೇರಳದ ರಾಹುಲ್-ಕಾರ್ತಿಕಾ ಜೋಡಿ, ತಮ್ಮ ಮದುವೆಗೆ ದೇಶ ಕಾಯಲು ಜೀವವನ್ನೇ ಮುಡಿಪಾಗಿಡುವ ಭಾರತೀಯ ಸೇನೆಯನ್ನು ಆಹ್ವಾನಿಸಿದರೆ ಹೇಗೆ ಎಂಬ ಆಲೋಚ ಮಾಡಿದ್ದಾರೆ. ಅದರಂತೆ ಅವರು ಸೇನೆಗೆ ಆಹ್ವಾನ ಪತ್ರಿಕೆ ಕಳಿಸಿದ್ದಾರೆ.
ಚಿಕಾಗೋದಲ್ಲಿ ಭಾರತೀಯ ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷರು!
ಜೋಡಿ ತಾವು ಕಳುಹಿಸಿದ ಆಹ್ವಾನ ಪತ್ರಿಕೆಯಲ್ಲಿ 'ದೇಶ ಕಾಯುವ ಮೂಲಕ ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ಕೃತಜ್ಞತರಾಗಿದ್ದೇವೆ. ನಿಮ್ಮಿಂದ ನಾವು ಶಾಂತಿಯುತವಾಗಿ ಮಲಗಿದ್ದೇವೆ. ನಮ್ಮ ಪ್ರೀತಿಪಾತ್ರರ ಜೊತೆ ನಮಗೆ ಸಂತೋಷದ ದಿನ (Happy days)ಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ನಾವು ನಮ್ಮ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ತುಂಬಾ ಸಂತೋಷವಾಗಿದೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ. ನಮ್ಮನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು." ಎಂದು ತಿಳಿಸಿದ್ದಾರೆ. ಈ ಆಹ್ವಾನಕ್ಕೆ ಪ್ರತಿಯಾಗಿ ಕೈಬರಹದಲ್ಲಿ (Hand written) ಸೇನೆಯು ನವದಂಪತಿಗೆ ಶುಭಕೋರಿ ಹಾರೈಸಿದೆ. ನೆಟ್ಟಿಗರು ಇದನ್ನು ಬಹುವಾಗಿ ಮೆಚ್ಚುತ್ತಿದ್ದಾರೆ.
ಕೈಬರಹದಲ್ಲಿ ನವದಂಪತಿಗೆ ಶುಭಕೋರಿದ ಸೇನೆ
ಭಾರತೀಯ ಸೇನೆಯು ಮದುವೆಯ ಆಮಂತ್ರಣವನ್ನು Instagram ನಲ್ಲಿ ಪೋಸ್ಟ್ ಮಾಡಿದೆ, "'ಬೆಸ್ಟ್ ವಿಶಸ್' #IndianArmy ಮದುವೆಯ ಆಹ್ವಾನಕ್ಕಾಗಿ ರಾಹುಲ್ ಮತ್ತು ಕಾರ್ತಿಕಾ ಅವರಿಗೆ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸುತ್ತದೆ ಮತ್ತು ದಂಪತಿಗಳಿಗೆ ಬಹಳ ಸಂತೋಷದಾಯಕ ಮತ್ತು ಆನಂದದಾಯಕ ವಿವಾಹದ ಜೀವನವನ್ನು ಹಾರೈಸುತ್ತದೆ." ಎಂದು ಶುಭ ಹಾರೈಸಿದೆ. ಈ ಪೋಸ್ಟ್ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 84,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಳಿಸಿದೆ.
ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ ಮಕ್ಕಳಿಲ್ಲದ ದಂಪತಿ
ಹಲವಾರು ರೀತಿಯ ಕಮೆಂಟ್‌ನ್ನು ಸಹ ಗಳಿಸಿದೆ. ಒಬ್ಬ ಬಳಕೆದಾರರು, 'ನಮ್ಮ ನಿಜವಾದ ಹೀರೋಗಳ ಬಗ್ಗೆ ನಾವು ನಮ್ಮ ಹೃದಯದಲ್ಲಿರುವ ಪ್ರೀತಿ (Love)ಯನ್ನು ವ್ಯಕ್ತಪಡಿಸಲು ಇದು ಉತ್ತಮ ಮಾರ್ಗವಾಗಿದೆ' ಎಂದು ಒಬ್ಬರು ಬರೆದಿದ್ದಾರೆ, ಇನ್ನೊಬ್ಬರು 'ಇದು ಅತ್ಯುತ್ತಮ ಮದುವೆಯ ಆಹ್ವಾನವಾಗಿದೆ. ನಮ್ಮ ನಿಜವಾದ ಹೀರೋಗಳಿಗೆ ಜೈ ಹಿಂದ್' ಎಂದು ತಿಳಿಸಿದ್ದಾರೆ. ನವೆಂಬರ್ 10, 2022 ರಂದು ವಿವಾಹವಾದ ರಾಹುಲ್ ಮತ್ತು ಕಾರ್ತಿಕಾ ಮದುವೆಯಾಗಿದ್ದಾರೆ. ಅದೇನೆ ಇರ್ಲಿ, ಮದುವೆಯ ಸಂದರ್ಭದಲ್ಲಿ ಜೋಡಿ ದೇಶ ಕಾಯುವ ಸೈನಿಕರನ್ನು ನೆನಪಿಸಿಕೊಂಡಿದ್ದು ಖುಷಿಯ ವಿಚಾರವೇ ಸರಿ.
ಗಂಡಿನ ಮನೆಯವರು ತಂದ ಲೆಹೆಂಗಾ ಮೆಚ್ಚದ ವಧು: ನಿಂತ ಮದುವೆ