ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ ಮಕ್ಕಳಿಲ್ಲದ ದಂಪತಿ
ಹರಿಯಾಣದ ಗುರುಗ್ರಾಮದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಮಕ್ಕಳಿಲ್ಲದ ದಂಪತಿ ತಮ್ಮ ಹೆಣ್ಣು ಶ್ವಾನಕ್ಕೆ ಪಕ್ಕದ ಮನೆಯ ಶ್ವಾನದೊಂದಿಗೆ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಗುರುಗ್ರಾಮ್: ಹರಿಯಾಣದ ಗುರುಗ್ರಾಮದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಮಕ್ಕಳಿಲ್ಲದ ದಂಪತಿ ತಮ್ಮ ಹೆಣ್ಣು ಶ್ವಾನಕ್ಕೆ ಪಕ್ಕದ ಮನೆಯ ಶ್ವಾನದೊಂದಿಗೆ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಗುರುಗ್ರಾಮದ ಪಲ್ಲಂ ವಿಹಾರ್ ಎಕ್ಸ್‌ಟೆನ್ಶನ್‌ನಲ್ಲಿ ಈ ವಿವಾಹವನ್ನು ಆಯೋಜಿಸಲಾಗಿತ್ತು. ಎರಡು ಮನೆಯವರು ಸೇರಿ ತಮ್ಮ ಹೆಣ್ಣು ಹಾಗೂ ಗಂಡು ಶ್ವಾನಕ್ಕೆ ಮದುವೆ ನಿಗದಿ ಮಾಡಿ ಮದುವೆ ಮಾಡಿಸಿದ್ದಾರೆ. ನವೆಂಬರ್ 13 ಅಂದರೆ ನಿನ್ನೆ ರಾತ್ರಿ 8:30 ಕ್ಕೆ ಗಂಡು ಶ್ವಾನ ಶೇರು ಜೊತೆ ಹೆಣ್ಣು ಶ್ವಾನ ಸ್ವೀಟಿ ಸಪ್ತಪದಿ ತುಳಿದಿದೆ. ಶನಿವಾರದಂದು ಈ ಶ್ವಾನ ಜೋಡಿಯ ಮೆಹೆಂದಿ ಸಮಾರಂಭವನ್ನು ನಡೆಸಲಾಗಿತ್ತು ಎಂದು ಮದುವೆಯನ್ನು ಆಯೋಜಿಸಿದವರು ತಿಳಿಸಿದ್ದಾರೆ. ಹಾಗಂತ ಕೇವಲ ಎರಡು ಕುಟುಂಬದವರು ಮಾತ್ರ ಸೇರಿ ಈ ವಿವಾಹ ನಡೆಸಿಲ್ಲ. ತಮ್ಮ ಸ್ವಂತ ಮಕ್ಕಳ ಮದುವೆ ಮಾಡುವಂತೆ ಇವರು ತಮ್ಮ ಶ್ವಾನದ ವಿವಾಹಕ್ಕೆ (wedding) ನೂರು ಆಹ್ವಾನ ಪತ್ರಿಕೆಗಳನ್ನು (Invitation) ಕೂಡ ಸಿದ್ಧಪಡಿಸಿ ಹಂಚಿದ್ದಾರೆ.
ಹೆಣ್ಣು ಶ್ವಾನ ಪ್ರೀತಿ ಬಗ್ಗೆ ಮಾತನಾಡಿದ ಅದರ ಮಾಲಕಿ ರಾಣಿ, ತಮಗೆ ಮಕ್ಕಳಿಲ್ಲದ ಕಾರಣ ನಮ್ಮ ಪತಿ ಸಮೀಪದ ದೇಗುಲದಿಂದ ಶ್ವಾನವನ್ನು ಕರೆ ತಂದಿದ್ದರು. ಮದುವೆಯಾದ ನಂತರ ನಮಗೆ ಮಕ್ಕಳಾಗಿರಲಿಲ್ಲ. ಇದರಿಂದ ಒಂಟಿತನ ಕಾಡುತ್ತಿತ್ತು. ಈ ಒಂಟಿತನವನ್ನು ನಿವಾರಿಸಲು ನನ್ನ ಪತಿ ಮೂರು ವರ್ಷಗಳ ಹಿಂದೆ ಸಮೀಪದ ದೇಗುಲದಿಂದ (temple) ಶ್ವಾನವನ್ನು ತಂದರು. ಆಗಿನಿಂದಲೂ ಈ ಶ್ವಾನ ಸ್ವೀಟಿಯನ್ನು (sweety) ನಾನು ನನ್ನ ಮಗುವಿನಂತೆ ಸಲಹುತ್ತಿದ್ದೇನೆ ಎಂದು ರಾಣಿ (Rani) ಹೇಳಿದರು.
ಇದು ಪಾಕಿಸ್ತಾನದ ದಿಲ್ ಚಾಹ್ತಾ ಹೈ.. 70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ!
ಈ ಮದುವೆಯ ಕಾರಣದಿಂದಾಗಿ ನಮಗೆ ಕನ್ಯಾದಾನದ ಯೋಗ ಲಭ್ಯವಾಯಿತು. ಹಿಂದೂ ಧರ್ಮಗ್ರಂಥಗಳಲ್ಲಿ ಕನ್ಯಾದಾನಕ್ಕೆ (Kanyadaan) ಬಹಳ ಮಹತ್ವವಿದೆ. ಮೋಕ್ಷವನ್ನು ಸಾಧಿಸಲು ಕುಟುಂಬವು ಮನೆ ಮಗಳನ್ನು ಕನ್ಯಾದಾನ ಮಾಡಿ ವರನ ಕುಟುಂಬಕ್ಕೆ ನೀಡುವ ಪವಿತ್ರ ಆಚರಣೆ ಇದಾಗಿದೆ ಎಂದು ಅವರು ಹೇಳಿದರು. ಇತ್ತ ಬೀದಿನಾಯಿಯಾಗಿದ್ದ ಗಂಡು ಶ್ವಾನ ಶೇರುವನ್ನು (Sheru) ಕೂಡ ಆತನ ಕುಟುಂಬದವರು ದತ್ತು ಪಡೆದು ಸಾಕುತ್ತಿದ್ದರು. ಎಂಟು ವರ್ಷದ ಶೇರು ಆ ಮನೆಯವರ ಮಕ್ಕಳೊಂದಿಗೆ ಆಟವಾಡುತ್ತಾ ಬೆಳೆದು ದೊಡ್ಡವನಾಗಿತ್ತು.
ಅಮೆರಿಕಾ ವಧು, ವಿಜಯಪುರದ ವರ: ವಿಜಯಪುರದಲ್ಲಿ ಅಪರೂಪದ ಮದುವೆ!