ಲೆಗ್-ಸ್ಪಿನ್ನರ್ ರಾಹುಲ್ ಚಾಹರ್ ದಾಂಪತ್ಯ ಜೀವನ ಮುರಿದು ಬಿದ್ದಿದೆ. 23ನೇ ವಯಸ್ಸಿಗೆ ಮದುವೆಯಾಗಿದ್ದ ರಾಹುಲ್ ಇಶಾನಿ ಜೋಹರ್ ಗೆ ಡಿವೋರ್ಸ್ ನೀಡಿದ್ದಾರೆ. ತಮ್ಮ ಇನ್ಸ್ಟಾದಲ್ಲಿ ಈ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಟಿ -20 ವಿಶ್ವಕಪ್ ಮಧ್ಯೆ ಭಾರತೀಯ ತಂಡದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಭಾರತದ ಸ್ಟಾರ್ ಸ್ಪಿನ್ನರ್ ರಾಹುಲ್ ಚಾಹರ್, ವಿಚ್ಛೇದನ ಪಡೆದಿದ್ದಾರೆ. ಇಶಾನಿ ಜೋಹರ್ ಜೊತೆ ರಾಹುಲ್ ಮಾರ್ಚ್ 9, 2022 ರಂದು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಕಾನೂನು ಪ್ರಕ್ರಿಯೆಯ ನಂತರ ತಮ್ಮ ಪತ್ನಿಯಿಂದ ಅಧಿಕೃತವಾಗಿ ಬೇರ್ಪಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ರಾಹುಲ್ ಚಾಹರ್ ಡಿವೋರ್ಸ್
ರಾಹುಲ್ ಚಾಹರ್ ನಾಲ್ಕು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ರಾಹುಲ್ ಚಾಹರ್ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದೆ. ಆ ಸಮಯದಲ್ಲಿ ಸ್ವಂತ ಸಾಮರ್ಥ್ಯ ಮತ್ತು ಜೀವನದ ಆಯ್ಕೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ನಂತರದ ವರ್ಷಗಳು ನಿರೀಕ್ಷಿಸದ ಪಾಠಗಳನ್ನು ಕಲಿಸಿವೆ ಎಂದು ಚಾಹರ್ ಹೇಳಿದ್ದಾರೆ. ಕಳೆದ 15 ತಿಂಗಳುಗಳು ನ್ಯಾಯಾಲಯಕ್ಕೆ ಹೋಗುವುದು, ತಾಳ್ಮೆಯನ್ನು ಕಾಪಾಡಿಕೊಳ್ಳುವುದು, ತೊಂದರೆಗಳನ್ನು ಎದುರಿಸುವುದು ಮತ್ತು ಸತ್ಯದ ಶಕ್ತಿಯನ್ನು ಗುರುತಿಸೋದ್ರಲ್ಲಿ ಕಳೆದಿವೆ ಎಂದು ರಾಹುಲ್ ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೆಮಿಫೈಲ್ ಟ್ವಿಸ್ಟ್
ರಾಹುಲ್ ಚಾಹರ್ ಇಂದು, ಶುಕ್ರವಾರ, ಫೆಬ್ರವರಿ 20 ರಂದು ಜೀವನದ ಆ ಭಾಗ ಅಧಿಕೃತವಾಗಿ ಕೊನೆಗೊಂಡಿದೆ ಎಂದು ಬರೆದಿದ್ದಾರೆ. ಈ ಅಧ್ಯಾಯವನ್ನು ಕೋಪ ಅಥವಾ ವಿಷಾದವಿಲ್ಲದೆ, ಹೊಸ ದೃಷ್ಟಿಕೋನದಿಂದ ಮುಗಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕೆಲವು ಸಂಬಂಧಗಳು ಶಾಶ್ವತವಾಗಿ ಉಳಿಯೋದಿಲ್ಲ. ಅವು ನಮಗೆ ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಲು, ನಮಗೆ ಏನನ್ನಾದರೂ ಕಲಿಸಲು ಮತ್ತು ನಮ್ಮನ್ನು ಬದಲಾಯಿಸುತ್ತವೆ ಎಂದು ಚಾಹಲ್ ಬರೆದಿದ್ದಾರೆ. ಈಗ ಮೊದಲಿಗಿಂತ ಹೆಚ್ಚು ಬುದ್ಧಿವಂತ ಮತ್ತು ಜಾಗೃತರಾಗಿರೋದಾಗಿ ಹೇಳಿಕೊಂಡಿದ್ದಾರೆ. ಇದು ಅಂತ್ಯವಲ್ಲ, ಆದರೆ ಹೊಸ ಆರಂಭ ಎಂದಿದ್ದಾರೆ. ರಾಹುಲ್ ಮತ್ತು ಇಶಾನಿ ಡಿಸೆಂಬರ್ 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಮದುವೆಯನ್ನು ಮುಂದೂಡಲಾಯಿತು.
ಸಂಜು ಸ್ಯಾಮ್ಸನ್ ಬೇಡವೇ ಬೇಡ, ಅಭಿಷೇಕ್ ಶರ್ಮಾ ಇರಲಿ! ಆತ ಡಕ್ ಆದ್ರೂ ಪರವಾಗಿಲ್ಲ ಎಂದ ಮಾಜಿ ಕ್ರಿಕೆಟಿಗ
ಇಂಡಿಯಾ ಟೀಂನಲ್ಲಿ ರಾಹುಲ್
ರಾಹುಲ್ ಚಾಹರ್ 1999 ರಲ್ಲಿ ರಾಜಸ್ಥಾನದ ಭರತ್ಪುರದಲ್ಲಿ ಜನಿಸಿದ್ದಾರೆ. ರಾಹುಲ್ ಚಾಹರ್ ಗೆ ಈಗ 26 ವರ್ಷ. ರಾಹುಲ್ ಚಾಹರ್ ಇದುವರೆಗೆ ಭಾರತ ತಂಡದ ಪರ ಒಂದು ಏಕದಿನ ಮತ್ತು ಆರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 18 ಸರಾಸರಿಯಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 23.85 ಸರಾಸರಿಯಲ್ಲಿ ಏಳು ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ಕೊನೆಯ ಬಾರಿಗೆ ಭಾರತ ಪರ 2021 ರ ಟಿ20 ವಿಶ್ವಕಪ್ನಲ್ಲಿ ಆಡಿದ್ದಾರೆ.
ರಾಹುಲ್ ಚಾಹರ್ ಹಲವಾರು ಐಪಿಎಲ್ ತಂಡಗಳ ಭಾಗವಾಗಿದ್ದಾರೆ. ರಾಹುಲ್ ಚಾಹರ್ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಐಪಿಎಲ್ 2026 ರ ಆಟಗಾರರ ಹರಾಜಿನಲ್ಲಿ ಸಿಎಸ್ಕೆ ಅವರನ್ನು 5.20 ಕೋಟಿಗೆ ಖರೀದಿಸಿದೆ. ಅವರು ಈ ಹಿಂದೆ ರೈಸಿಂಗ್ ಪುಣೆ ಸೂಪರ್ಜೈಂಟ್ (ಆರ್ಪಿಎಸ್), ಮುಂಬೈ ಇಂಡಿಯನ್ಸ್ (ಎಂಐ), ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಪರ ಆಡಿದ್ದಾರೆ. ಅವರು 79 ಐಪಿಎಲ್ ಪಂದ್ಯಗಳಲ್ಲಿ 28.66 ಸರಾಸರಿಯಲ್ಲಿ 75 ವಿಕೆಟ್ಗಳನ್ನು ಕಬಳಿಸಿದ್ದಾರೆ.


