- Home
- Life
- Relationship
- ಕಪ್‌ಗಿಂತ ಬ್ರೇಕಪ್‌ಗಳೇ ಜಾಸ್ತಿ! 26ನೇ ವರ್ಷಕ್ಕೆ ಮದುವೆಗೆ ಗುಡ್‌ಬೈ ಹೇಳಿದ ಮತ್ತೊಬ್ಬ ಟೀಮ್ ಇಂಡಿಯಾ ಕ್ರಿಕೆಟಿಗ!
ಕಪ್‌ಗಿಂತ ಬ್ರೇಕಪ್‌ಗಳೇ ಜಾಸ್ತಿ! 26ನೇ ವರ್ಷಕ್ಕೆ ಮದುವೆಗೆ ಗುಡ್‌ಬೈ ಹೇಳಿದ ಮತ್ತೊಬ್ಬ ಟೀಮ್ ಇಂಡಿಯಾ ಕ್ರಿಕೆಟಿಗ!
From Hardik to Rahul Chahar: Indian Cricketers Who Recently Divorced ಭಾರತೀಯ ಕ್ರಿಕೆಟ್‌ನಲ್ಲಿ ವಿಚ್ಛೇದನದ ಪರ್ವ ಮುಂದುವರೆದಿದೆ. ರಾಹುಲ್ ಚಹರ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಪ್ರಮುಖ ಆಟಗಾರರು ತಮ್ಮ ಪತ್ನಿಯರಿಂದ ಬೇರ್ಪಟ್ಟಿದ್ದು, ಅವರ ವೈವಾಹಿಕ ವಿವರಗಳು ಇಲ್ಲಿವೆ.

ರಾಹುಲ್ ಚಹರ್-ಇಶಾನಿ ಜೋಹರ್
ವಿಚ್ಛೇದನದ ಲಿಸ್ಟ್‌ಗೆ ಹೊಸಬರು. ಪತ್ನಿ ಇಶಾನಿ ಜೋಹರ್ ಅವರಿಂದ ವಿಚ್ಛೇದನ ಪಡೆದಿರುವುದಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದರು. ಫೆ.20 ರಂದು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. 2022ರಲ್ಲಿ ವಿವಾಹವಾಗಿದ್ದ ಈ ಜೋಡಿ 4ನೇ ವಾರ್ಷಿಕೋತ್ಸವದ ಸಮಯದಲ್ಲಿಯೇ ಈ ನಿರ್ಧಾರ ಮಾಡಿದೆ.
ಶಿಖರ್ ಧವನ್-ಆಯೇಷಾ ಮುಖರ್ಜಿ
ಆಯೇಷಾ ಮುಖರ್ಜಿ ಅವರೊಂದಿಗೆ 8 ವರ್ಷಗಳ ದಾಂಪತ್ಯದ ನಂತರ 2023 ರಲ್ಲಿ ವಿಚ್ಛೇದನ ಪಡೆದರು. ಪತ್ನಿಯಿಂದ ಮಾನಸಿಕ ಕ್ರೌರ್ಯ ನಡೆದಿದೆ ಎಂಬ ಕಾರಣ ನೀಡಿ ನ್ಯಾಯಾಲಯ ಇವರಿಗೆ ವಿಚ್ಛೇದನ ನೀಡಿತು. ಈಗ ಮತ್ತೊಂದು ಮದುವೆಗೆ ಅವರು ಸಿದ್ಧರಾಗುತ್ತಿದ್ದಾರೆ.
ಯಜುವೇಂದ್ರ ಚಹಲ್-ಧನಶ್ರೀ ವರ್ಮ
ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರ ವಿಚ್ಛೇದನ ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಸುದ್ದಿಯಾಗಿತ್ತು.
ಹಾರ್ದಿಕ್ ಪಾಂಡ್ಯ-ನಟಾಶಾ ಸ್ಟಾಂಕೋವಿಕ್
ನಟಿ ನಟಾಶಾ ಸ್ಟಾಂಕೋವಿಕ್ ಅವರೊಂದಿಗೆ ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ 2024 ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿರುವುದಾಗಿ ಘೋಷಿಸಿದರು. ಇವರಿಗೆ ಅಗಸ್ತ್ಯ ಎಂಬ ಮಗನಿದ್ದಾನೆ. ಮಾಡೆಲ್ ಜೊತೆ ಈಗ ಇವರು ರಿಲೇಷನ್‌ಷಿಪ್‌ನಲ್ಲಿದ್ದಾರೆ.
ಮೊಹಮ್ಮದ್ ಶಮಿ-ಹಸಿನ್ ಜಹಾನ್
ಪತ್ನಿ ಹಸಿನ್ ಜಹಾನ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇಬ್ಬರೂ ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

