Asianet Suvarna News Asianet Suvarna News

ಪ್ರೀತಿಯಲ್ಲಿ ಬೀಳುವ ಮುನ್ನ ಪ್ರೇಮದ ಮಂತ್ರವನ್ನು ತಿಳಿಯಿರಿ

ಸಾಧಾರಣವಾಗಿ ನಮಗೆ ಅನುಕೂಲಕರ ಹಾಗೂ ಲಾಭದಾಯಕವಾಗಿರುವ ಚೌಕಟ್ಟುಗಳೊಳಗೆ ಸಂಬಂಧಗಳನ್ನು ನಾವು ರೂಪಿಸಿಕೊಳ್ಳುತ್ತೇವೆ. ಜನರಿಗೆ ಶಾರೀರಿಕ, ಮಾನಸಿಕ, ಭಾವನಾತ್ಮಕ, ಹಣಕಾಸಿನ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸಬೇಕಾಗಿರುತ್ತದೆ. ಪ್ರೀತಿಯೂ ಕೂಡಾ ಇದಕ್ಕೆ ಹೊರತಾಗಿಲ್ಲ. 

Jaggi Vasudev talks about spiritual aspects of love
Author
Bengaluru, First Published May 21, 2019, 3:25 PM IST

ಪ್ರೇಮದ ಕುರಿತು ಏನಿದೆ? ಬೇಷರತ್ತಾದ ಪ್ರೇಮ ಅನ್ನುವುದೇನಾದರೂ ಇದೆಯೇ? ಎರಡು ವ್ಯಕ್ತಿಗಳ ಮಧ್ಯೆ ಅದು ನಿಜವಾಗಲೂ ಅಸ್ತಿತ್ವದಲ್ಲಿರಬಹುದೇ? ಇವು ಸಾಮಾನ್ಯವಾಗಿ ಪದೇಪದೇ ಕೇಳುವಂತಹ ಪ್ರಶ್ನೆಗಳು.

ಒಮ್ಮೆ ಶಂಕರನ್‌ ಪಿಳ್ಳೆ ಒಂದು ಪಾರ್ಕ್ಗೆ ಹೋದ. ಒಂದು ಬೆಂಚು ಕಲ್ಲಿನ ಮೇಲೆ ಓರ್ವ ಸುಂದರ ಸ್ತ್ರೀ ಕುಳಿತಿದ್ದಳು. ಅವನೂ ಅದೇ ಬೆಂಚಿನ ಮೇಲೆ ಕುಳಿತ. ಕೆಲವು ನಿಮಿಷಗಳ ನಂತರ ಸ್ವಲ್ಪ ಅವಳ ಕಡೆಗೆ ಸರಿದ. ಅವಳು ಸ್ವಲ್ಪ ದೂರ ಸರಿದಳು. ಅವನು ಪುನಃ ಅದೇ ರೀತಿ ವರ್ತಿಸಿದಾಗ ಅವಳು ಬೆಂಚಿನ ತುದಿಗೆ ಸರಿದಳು.

ಸನ್‌ಸ್ಕ್ರೀನ್ ಕಂಪನಿಗಳು ಹೆದರಿಸುವಷ್ಟು ಸೂರ್ಯರಶ್ಮಿ ಕೆಟ್ಟದ್ದೇ?

ಅವನು ಅವಳಿಗೆ ಬಹಳ ಸಮೀಪವಾಗಿ ತನ್ನ ತೋಳುಗಳಿಂದ ಅವಳನ್ನು ಬಳಸಿದ. ಅವಳು ಅವನನ್ನು ತಳ್ಳಿದಳು. ಆಗ ಅವನು ಅವಳೆದುರು ಮಂಡಿಯೂರಿ, ಒಂದು ಹೂವನ್ನು ಕಿತ್ತು ಅವಳಿಗೆ ನೀಡುತ್ತಾ, ‘ನನ್ನ ಬದುಕಿನಲ್ಲಿ ಯಾರನ್ನೂ ಎಂದಿಗೂ ಪ್ರೀತಿಸದೇ ಇರುವಷ್ಟುನಿನ್ನನ್ನು ಪ್ರೀತಿಸುತ್ತೇನೆ’ ಎಂದನು.

ಸೂರ್ಯಾಸ್ತವಾಗುತ್ತಿತ್ತು. ಅವನ ಕೈಯ್ಯಲ್ಲಿ ಒಂದು ಹೂವಿತ್ತು. ಕರಗಿಹೋಗುವಂತಹ ದೃಷ್ಟಿಯಲ್ಲಿ ಆ ಸ್ತ್ರೀಯನ್ನು ನೋಡಿದ. ಅದೂ ಅಲ್ಲದೆ ಸುತ್ತಲಿನ ವಾತಾವರಣವು ಸೂಕ್ತವಾಗಿತ್ತು. ಅವಳೂ ಕರಗಿ ಹೋದಳು. ಪ್ರಕೃತಿಯ ಕೈ ಮೇಲಾಯಿತು. ಅವರಿಬ್ಬರು ತಮ್ಮ ‘ಪ್ರೇಮ’ದಲ್ಲಿ ತೊಡಗಿದರು. ಮುಸ್ಸಂಜೆ ಕಳೆದು ಕತ್ತಲು ಆವರಿಸಿತು. ಶಂಕರನ್‌ ಪಿಳ್ಳೆ ಕೂಡಲೇ ಜಿಗಿದೆದ್ದು ನಿಂತ. ‘ಈಗ ಎಂಟು ಗಂಟೆ, ನಾನು ಹೋಗಲೇ ಬೇಕು.’

ತೂಕ ಕಮ್ಮಿಗೂ ಟೀ ಎಂಬ ಬೆಸ್ಟ್ ಮದ್ದು...

ಅವಳು ‘ಏನು? ಈಗಲೇ? ಎಲ್ಲರಿಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುವೆ ಎಂದೆಯಲ್ಲಾ?’ ಎಂದಳು. ‘ಹೌದು, ಹೌದು, ಆದರೆ ನನ್ನ ಹೆಂಡತಿ ನನಗಾಗಿ ಕಾಯುತ್ತಿರುತ್ತಾಳೆ’ ಎಂದ.

ಸಾಧಾರಣವಾಗಿ ನಮಗೆ ಅನುಕೂಲಕರ ಹಾಗೂ ಲಾಭದಾಯಕವಾಗಿರುವ ಚೌಕಟ್ಟುಗಳೊಳಗೆ ಸಂಬಂಧಗಳನ್ನು ನಾವು ರೂಪಿಸಿಕೊಳ್ಳುತ್ತೇವೆ. ಜನರಿಗೆ ಶಾರೀರಿಕ, ಮಾನಸಿಕ, ಭಾವನಾತ್ಮಕ, ಹಣಕಾಸಿನ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸಬೇಕಾಗಿರುತ್ತದೆ.

ಈ ಅಗತ್ಯಗಳನ್ನು ಪೂರೈಸಲು ಅತ್ಯುತ್ತಮ ಮಾರ್ಗವೆಂದರೆ, ಯಾರಿಗಾದರು, ‘ನಾನು ನಿನ್ನನ್ನು ಪ್ರೀತಿಸುವೆನು’ ಎಂದು ಹೇಳುವುದು. ಈ ‘ಐ ಲವ್‌ ಯು’ ಎನ್ನುವುದು ‘ಬಾಗಿಲು ತೆಗೆಯೇ ಸೇಸಮ್ಮ’ ಮಂತ್ರದಂತೆ ಆಗಿದೆ. ಅದನ್ನು ಹೇಳಿ ನೀವು ನಿಮಗೆ ಬೇಕಾದುದನ್ನು ಪಡೆಯಬಹುದು.

ಮದ್ವೆಯಾದ ಕೂಡಲೇ ಲೈಫೇ ಮುಗೀತು ಅಂತಿರೋ ಹೆಣ್ಮಕ್ಕಳಿಗೆ ಮಾತ್ರ!

ಪ್ರೀತಿಯು ಒಂದು ಗುಣ, ಯಾರೊಡನೆಯಾದರೂ ಏನೋ ಮಾಡುವಂತಹುದಲ್ಲ. ನಾವು ಮಾಡುವ ಪ್ರತಿಯೊಂದು ಕಾರ್ಯವೂ ನಿರ್ದಿಷ್ಟಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ಆಗಿದೆ. ಇದನ್ನು ಗಮನಿಸಿದಾಗ ನೀವು ನಿಮ್ಮ ಸಹಜ ಗುಣದಂತೆ ಪ್ರೀತಿಯಾಗಿ ವೃದ್ಧಿಗೊಳ್ಳುವ ಸಾಧ್ಯತೆ ಇದೆ ಎಂದು ವೇದ್ಯವಾಗುತ್ತದೆ.

ಆದರೆ ಅನುಕೂಲಕ್ಕಾಗಿ, ಸೌಖ್ಯಕ್ಕಾಗಿ, ಕ್ಷೇಮಕ್ಕಾಗಿ ಮಾಡಿರುವ ಸಂಬಂಧಗಳನ್ನು ನೀವು ಪ್ರೀತಿ ಎಂಬುದಾಗಿ ನಂಬುತ್ತಾ ನಿಮ್ಮನ್ನೇ ನೀವು ಮೂರ್ಖರಾಗಿಸಿಕೊಳ್ಳುತ್ತಿರುವಿರಿ. ಆದರೆ, ಎಲ್ಲ ಒಡನಾಟಗಳಲ್ಲಿ ಪ್ರೀತಿ ಇಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ, ಕೆಲವು ನಿರ್ದಿಷ್ಟಮಿತಿಗಳೊಳಗಿವೆ.

ನೀವು ಎಷ್ಟೇ ಬಾರಿಯಾದರೂ ನಿಜವಾದ ಪ್ರೀತಿಯನ್ನು ಘೋಷಿಸಿದರೂ ಕೆಲವು ನಿರೀಕ್ಷೆಗಳು ಮತ್ತು ಅಗತ್ಯಗಳು ಪೂರೈಸದೆ ಇದ್ದಾಗ, ಸಂಬಂಧಗಳು ತುಂಡರಿಸಿ ಹೋಗುತ್ತವೆ. ಇದು ಖಂಡಿತವಾಗಿಯೂ ಒಂದು ಪರಸ್ಪರ ಪ್ರಯೋಜನದ ಯೋಜನೆ.

ನಿರ್ಬಂಧ(ಷರತ್ತಿನ) ಪ್ರೀತಿ ಮತ್ತು ಅನಿರ್ಬಂಧಿತ (ಬೇಷರತ್ತಿನ) ಪ್ರೀತಿ ಎನ್ನುವುದಂತಹುದೇನೂ ಇಲ್ಲ. ಅಲ್ಲಿ ನಿರ್ಬಂಧನೆಗಳಿವೆ ಮತ್ತು ಪ್ರೀತಿಯೂ ಇದೆ. ನೀವು ಪ್ರೀತಿಯ ಕುರಿತು ಮಾತನಾಡುವಾಗ ಅದು ಬೇಷರತ್ತಿನದಾಗಿರಬೇಕು. ಅಲ್ಲಿ ನಿರ್ಬಂಧನೆಗಳಿದ್ದರೆ ಆ ಕ್ಷಣದಿಂದಲೇ ಅದು ಒಂದು ವ್ಯವಹಾರದಂತಾಗುತ್ತದೆ.

ಒಂದು ಅನುಕೂಲಕರ ವ್ಯವಹಾರ ಆಗಿರಬಹುದು, ಒಂದು ಒಳ್ಳೆಯ ವ್ಯವಸ್ಥೆಯಾಗಿರಬಹುದು. ಆದರೆ ನಿಮ್ಮನ್ನು ಸಫಲಗೊಳಿಸುವುದಿಲ್ಲ ಅಥವಾ ನಿಮ್ಮನ್ನು ಮತ್ತೊಂದು ಆಯಾಮಕ್ಕೂ ಕೊಂಡೊಯ್ಯುವುದಿಲ್ಲ. ಅದು ಅನುಕೂಲತೆಯಷ್ಟೆ. ಪ್ರೀತಿಯು ಅನುಕೂಲಕರವಾಗಿರಬೇಕೆಂಬ ಅಗತ್ಯವೇನೂ ಇಲ್ಲ. ಹೆಚ್ಚಿನ ಸಮಯದಲ್ಲಿ ಅದು ಹಾಗಿರುವುದಿಲ್ಲ ಅದು ಜೀವಿತವನ್ನೇ ತೆಗೆದುಕೊಳ್ಳುತ್ತವೆ. ನೀವು ನಿಮ್ಮನ್ನೇ ಅದರಲ್ಲಿ ಅರ್ಪಿಸಿಕೊಳ್ಳಬೇಕು.

ನೀವು ಪ್ರೀತಿಯಲ್ಲಿ ಇರಬೇಕೆಂದರೆ, ‘ನೀವು’ ಎಂಬುದು ಅಲ್ಲಿರಬಾರದು- ಇಂಗ್ಲಿಷ್‌ನಲ್ಲಿ ಹೇಳುವ, ‘ಊa್ಝ್ಝಜ್ಞಿಜ ಜ್ಞಿ ಔಟvಛಿ’​ ​​​​- ‘ಪ್ರೀತಿಯಲ್ಲಿ ಬೀಳುವುದು’ ಬಹಳ ಮಹತ್ವದ್ದಾಗಿದೆ. ನೀವು ಪ್ರೀತಿಯಲ್ಲಿ ಹತ್ತುವುದಿಲ್ಲ, ನಿಲ್ಲುವುದಿಲ್ಲ, ಹಾರುವುದಿಲ್ಲ, ಆದರೆ ಪ್ರೀತಿಯಲ್ಲಿ ಬೀಳುವಿರಿ.

ಮಳೆಗಾಲದಲ್ಲಿ ಸ್ಟೈಲ್ ಹೆಚ್ಚಿಸುತ್ತೆ ಈ ಫ್ಯಾಷನ್ ಐಟಂಗಳು!

ಬೇರೆಯವರಿಗೆ ‘ನಿಮ್ಮೊಳಗೆ’ ಅವಕಾಶ ಒದಗಿಸಬೇಕಾದರೆ, ನಿಮ್ಮಲ್ಲಿನ ಏನೋ ಒಂದು ಕೆಳಗೆ ಬೀಳಬೇಕು ಅಥವಾ ಕರಗಿ ಹೋಗಬೇಕು. ಒಂದು ವ್ಯವಹಾರಕ್ಕೂ ಮತ್ತು ಪ್ರೀತಿಯ ವ್ಯವಹಾರಕ್ಕೂ ವ್ಯತ್ಯಾಸವಿದೆ. ಪ್ರೀತಿಯ ವ್ಯವಹಾರ ಒಬ್ಬ ನಿರ್ದಿಷ್ಟವ್ಯಕ್ತಿಯೊಂದಿಗೇ ಆಗಬೇಕೆಂದೇನೂ ಇಲ್ಲ. ನೀವು ಬದುಕಿನೊಂದಿಗೇ ಅತ್ಯದ್ಭುತವಾದ ಪ್ರೀತಿಯ ವ್ಯವಹಾರವನ್ನು ಹೊಂದಿರಬಹುದು.

ನೀವು ಏನು ಮಾಡುವಿರಿ ಅಥವಾ ಏನು ಮಾಡದೇ ಇರುವಿರಿ ಎನ್ನುವುದು ನೀವಿರುವ ಸನ್ನಿವೇಶಗಳಿಗೆ ಬೇಡಿಕೆಗೆ ತಕ್ಕಂತೆ ರೂಪುಗೊಂಡಿರುತ್ತದೆ. ಆದರೆ, ಪ್ರೀತಿಯು ಒಂದು ಆಂತರ್ಯದ ಸ್ಥಿತಿಯಾಗಿದೆ ಮತ್ತು ನಿಮ್ಮ ಆಂತರ್ಯದೊಳಗೆ ನೀವು ಹೇಗಿರುವಿರಿ ಎನ್ನುವುದು ಖಂಡಿತವಾಗಿಯೂ ಅನಿರ್ಬಂಧಿತವಾಗಿರುತ್ತದೆ.

ಕಾಲಾನುಕ್ರಮದಲ್ಲಿ ಪ್ರೀತಿಯ ಚಟುವಟಿಕೆಗಳು ತುಂಬಾ ಶ್ರಮದಾಯಕ ಮತ್ತು ಒತ್ತಡದಿಂದ ಕೂಡಿರುವಂತಾಗಬಹುದು. ಪ್ರೀತಿಯೆಂದರೆ ಯಾವುದನ್ನೋ ನೀವು ಮಾಡುವುದಲ್ಲ. ಪ್ರೀತಿಯು ನೀವಿರುವ ರೀತಿಯಾಗಿದೆ.

ಪ್ರೀತಿಯು ಎಂದಿಗೂ ಇಬ್ಬರು ವ್ಯಕ್ತಿಗಳ ನಡುವೆ ಇರುವುದಲ್ಲ. ಅದು ನಿಮ್ಮ ಆಂತರ್ಯದಲ್ಲಿ ಆಗುವಂತಹುದು ಮತ್ತು ನಿಮ್ಮ ಆಂತರ್ಯವನ್ನು ಯಾರಿಗಾದರೂ ಅಥವಾ ಯಾವುದಕ್ಕಾದರೂ ಅಡಿಯಾಳಾಗಿಸಿಕೊಳ್ಳುವ ಅಗತ್ಯವಿಲ್ಲ. ಇದನ್ನು 15 ನಿಮಿಷಗಳವರೆಗೆ ಮಾಡಿ, ನಿಮಗೆ ಏನೂ ಅಲ್ಲದವರ ಬಳಿ ಹೋಗಿ ಕುಳಿತುಕೊಳ್ಳಿ.

ಒಂದು ವೃಕ್ಷ, ಒಂದು ಕಲ್ಲು, ಒಂದು ಹುಳು, ಅಥವಾ ಒಂದು ಕೀಟ ಹೀಗೆ. ಕೆಲವು ದಿನಗಳವರೆಗೆ ಇದನ್ನು ತಪ್ಪದೆ ಮಾಡಿ. ಕೆಲ ಸಮಯದ ನಂತರ, ನೀವು ನಿಮ್ಮ ಪತ್ನಿ ಅಥವಾ ಪತಿ ಅಥವಾ ತಾಯಿ ಅಥವಾ ಮಗು ಇವರುಗಳ ಮೇಲೆ ಎಷ್ಟುಪ್ರೀತಿ ತೋರಿಸುವಿರೋ, ಅವುಗಳ ಮೇಲೂ ಅಷ್ಟೇ ಪ್ರೀತಿಯನ್ನು ತೋರಿಸುತ್ತಿರುವುದು ನಿಮಗೇ ಅರಿವಾಗುತ್ತದೆ.

ಹುಳುವಿಗೆ ಈ ವಿಷಯವು ತಿಳಿಯದೇ ಇರಬಹುದು. ಪರವಾಗಿಲ್ಲ ನೀವು ಎಲ್ಲವನ್ನೂ ಪ್ರೀತಿಯಿಂದ ಕಂಡಾಗ, ಸಮಸ್ತ ಪ್ರಪಂಚವೇ ನಿಮ್ಮ ಅನುಭವದಲ್ಲಿ ಬಹಳ ಸುಂದರವಾಗೆ ಕಾಣುವುದು.

- ಸದ್ಗುರು 

Follow Us:
Download App:
  • android
  • ios