ಮಳೆಗಾಲದಲ್ಲಿ ಸ್ಟೈಲ್ ಹೆಚ್ಚಿಸುತ್ತೆ ಈ ಫ್ಯಾಷನ್ ಐಟಂಗಳು!

ರೈನಿ ಸೀಸನ್ ಆದ್ರೇನು ಎಲ್ಲಾ ಕಾಲದಲ್ಲೂ ಸ್ಟೈಲಿಶ್ ಆಗಿ ಕಾಣಿಸಬೇಕು ಎಂದು ಅಂದುಕೊಳ್ಳೋರಿಗೆ ಇಲ್ಲಿದೆ ರೈನಿ ಫ್ಯಾಷನ್ ಟಿಪ್ಸ್. ಇದನ್ನ ನೀವು ತಿಳ್ಕೊಂಡ್ರೆ ಫ್ಯಾಷನ್ ಟ್ರೆಂಡ್‌ನಲ್ಲಿ ನೀವೂ ಮಿಂಚಬಹುದು. ಇನ್ನೇನು ಸ್ವಲ್ಪ ದಿನದಲ್ಲಿ ಮಳೆಗಾಲ ಆರಂಭವಾಗುತ್ತದೆ. ಫ್ಯಾಷನ್ ಕೂಡ ಬದಲಾಗುತ್ತದೆ. ಫ್ಯಾಷನ್  ಟ್ರೆಂಡ್ ಫಾಲೋ ಮಾಡುವವರಿಗೆ ಈ ಮಳೆಗಾಲ ಆರಂಭವಾಗುವ ಮುನ್ನ ನಿಮ್ಮ ವಾರ್ಡ್ ರೋಬ್ ಅಪ್ ಡೇಟ್ ಮಾಡಿ. ಅದಕ್ಕಾಗಿ ಈ ಒಂದಿಷ್ಟು ಫ್ಯಾಷನ್ ಆಕ್ಸೆಸರಿಗಳನ್ನು ಸೇರಿಸಿ ಮಳೆಗಾಲದಲ್ಲಿ ಬೋಲ್ಡ್ ಆಗಿ ಕಾಣಿ... 

Top fashion trends for the rainy Season

ಕಲರ್‌ಫುಲ್ ಹ್ಯಾಂಡ್ ಬ್ಯಾಗ್: ಬ್ರೈಟ್ ವೈಬ್ರೆನ್ಟ್ ಹ್ಯಾಂಡ್ ಬ್ಯಾಗ್ ಮಳೆಗಾಲದಲ್ಲಿ ನಿಮ್ಮ ಬಳಿ ಇರಲಿ. ಈ ಬ್ರೈಟ್ ಕಲರ್ ಮಳೆಗಾಲದಲ್ಲಿ ನಿಮ್ಮ ಸ್ಟೈಲ್ ಹೆಚ್ಚಿಸುತ್ತದೆ. 

ಟ್ರೈಬಲ್ ನೆಕ್‌ಲೆಸ್: ಈ ಸೀಸನ್‌ನಲ್ಲಿ ದೊಡ್ಡ ಸೈಜಿನ ನೆಕ್‌ಲೆಸ್, ಹೆವಿ ಆರ್ಟಿಸ್ಟಿಕ್ ಚೈನ್ ಚೆನ್ನಾಗಿ ಕಾಣಿಸುತ್ತದೆ. ಅದರಲ್ಲೂ ಮುಖ್ಯವಾಗಿ ಟ್ರೈಬಲ್ ಡಿಸೈನ್ ಹೊಂದಿರುವ ನೆಕ್ ಲೆಸ್, ಇಯರಿಂಗ್ ಹೆಚ್ಚು ಆಕರ್ಷಕವಾಗಿರುತ್ತದೆ. 

ವಿಭಿನ್ನ ಶೂ : ವಿಭಿನ್ನವಾದ ಶೂ ಧರಿಸಿ ನಿಮ್ಮ ಅಂದ, ಸ್ಟೈಲ್ ಹೆಚ್ಚಿಸಿಕೊಳ್ಳಬಹುದು. ಇಲ್ಲೀವರೆಗೆ ಧರಿಸಿಯೇ ಇಲ್ಲದ ಕಾಮನ್ ಅಲ್ಲದ ಶೂ ಟ್ರೈ ಮಾಡಿ. ರೆಡ್, ಕೊರಲ್, ಮೆಟಾಲಿಕ್ ಶೇಡ್ಸ್ ಹೊಂದಿರುವ ಜೊತೆಗೆ ಕಪ್ಪು, ಬಿಳಿ ಅಥವಾ ಗ್ರೇ ಬಣ್ಣದ ಶೂ ಅಥವಾ ಫ್ಲಾಟ್ ಚಪ್ಪಲ್ ಧರಿಸಿ. ಆದರೆ ಧರಿಸುವ ಮುನ್ನ ಇವೆಲ್ಲವೂ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ. 

ಮಲ್ಟಿ ಫಿಂಗರ್ ರಿಂಗ್: ಬೆರಳುಗಳಿಗೆ ದೊಡ್ಡ ಕಾಕ್ ಟೈಲರಿಂಗ್ ಅಥವಾ ಹಲವು ಸಣ್ಣ ಸಣ್ಣ ಉಂಗುರ ಧರಿಸಿ. ಅಥವಾ ಜೊತೆಯಾಗಿ ಬರುವಂಥ ಮಲ್ಟಿ ಫಿಂಗರ್ ರಿಂಗ್ ಧರಿಸಿ. 

ದುಬಾರಿ ಕಾಂಜೀವರಂ ಸೀರೆ ಕೇರ್ ಹೀಗಿರಲಿ....

ವಿವಿಧ ಬಣ್ಣದ ಸ್ಕಾರ್ಫ್: ಅದು ಸ್ವಲ್ಪ ಬಿಸಿಯಾದ ಟೆಂಪರೇಚರ್ ಇರಬಹುದು ಅಥವಾ ಮಳೆ ಬರುತ್ತಿರಬಹುದು ನಿಮ್ಮ ಬಳಿ ಯಾವಾಗಲೂ ಕಲರ್‌ಫುಲ್ ಆಗಿರುವ ವಿವಿಧ ಸ್ಕಾರ್ಫ್‌ಗಳಿರಲಿ. ಈ ಸ್ಕಾರ್ಫ್‌ಗಳು ಯಾವುದೇ ಡ್ರೆಸ್ ಮೇಲೆ ಚೆನ್ನಾಗಿ ಕಾಣಿಸುತ್ತದೆ. 

ಛತ್ರಿ: ಮಳೆಗಾಲ ಎಂದ ಮೇಲೆ ಛತ್ರಿ ಇರದಿದ್ದರೆ ಹೇಗೆ? ಸ್ಟೈಲಿಶ್ ಛತ್ರಿ ಆಯ್ಕೆ ಮಾಡಿದರೆ ಸ್ಟೈಲ್ ಹೆಚ್ಚುತ್ತದೆ. ಅದಕ್ಕಾಗಿ ಉದ್ದ ಛತ್ರಿ, ಥ್ರೀ ಫೋಲ್ಡರ್ ಛತ್ರಿ ಖರೀದಿಸಿ. ಇದ್ರಲ್ಲಿ ಟ್ರಾನ್ಸಪರೆಂಟ್, ಫ್ಲೋರಲ್ ವರ್ಕ್ ಅಥವಾ ಪೆಟ್ ವರ್ಕ್ ಇರುವಂತಹ ಛತ್ರಿ ಖರೀದಿಸಿದರೆ ಚೆಂದ.

ಬೇಸಿಗೆಗೆ ಮ್ಯಾಕ್ಸಿ ಡ್ರೆಸ್‌ ಸೊಗಸು!

Latest Videos
Follow Us:
Download App:
  • android
  • ios