2024ರ ಸಾಲಿನಲ್ಲಿ ಮುಕೇಶ್ ಅಂಬಾನಿ ಪಡೆದ ಸ್ಯಾಲರಿ ಎಷ್ಟು, ಇದು ಅಚ್ಚರಿಯಾದರೂ ಸತ್ಯ!
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪ್ರತಿ ತಿಂಗಳ ವೇತನ ಎಷ್ಟು? ನೀತಾ ಅಂಬಾನಿ ಪಡೆಯುತ್ತಿರುವ ಸ್ಯಾಲರಿ ಕುರಿತು ಹಲವು ಊಹಾಪೋಹಗಳಿವೆ. ಈ ಪೈಕಿ ಮುಕೇಶ್ ಅಂಬಾನಿ ಸ್ಯಾಲರಿ ಕೇಳಿದರೆ ಅಚ್ಚರಿಯಾಗುವುದು ಖಚಿತ.
ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ರಿಲಯನ್ಸ್ ಸಾಮ್ರಾಜ್ಯವನ್ನು ವಿಸ್ತರಿಸಿ ಬಹುಕೇಕ ವಲಯದಲ್ಲಿ ವ್ಯವಹಾರ ನಡೆಸುತ್ತಿರುವ ಮುಕೇಶ್ ಅಂಬಾನಿ ಹಾಗೂ ಪತ್ನಿ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಸ್ಯಾಲರಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಅಂಬಾನಿ ಕುಟುಂಬದ ಒಟ್ಟು ಆಸ್ತಿ 9 ಲಕ್ಷ ಕೋಟಿ ರೂಪಾಯಿ. ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಗ್ರೂಪ್( RIL) ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳು ಕೋಟಿ ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ.
RIL ಚೇರ್ಮೆನ್, ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ ತಿಂಗಳ ಸ್ಯಾಲರಿ ಶೂನ್ಯ. ಹೌದು ಮುಕೇಶ್ ಅಂಬಾನಿ ಯಾವುದೇ ಸ್ಯಾಲರಿ ಪಡೆಯುತ್ತಿಲ್ಲ.
ಕೋವಿಡ್ ಮಹಾಮಾರಿಯಿಂದ ಮುಕೇಶ್ ಅಂಬಾನಿ ಸ್ಯಾಲರಿ ಮಾತ್ರವಲ್ಲ, ಯಾವುದೇ ಭತ್ಯೆ ಸೇರಿದಂತೆ ಯಾವ ಮೊತ್ತವನ್ನು ಪಡೆಯುತ್ತಿಲ್ಲ. ಕಳೆ ನಾಲ್ಕು ವರ್ಷಗಳಿಂದ ಅಂಬಾನಿ ಈ ನಡೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕೋವಿಡ್ ಸಂದರ್ಭದಲ್ಲಿನ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸ್ಯಾಲರಿ ಬೇಡ ಎಂದು ನಿರ್ಧರಿಸಿದ ಅಂಬಾನಿ, ಈಗಲೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಮುಕೇಶ್ ಅಂಬಾನಿ ಪ್ರತಿ ದಿನ ಕಚೇರಿಗೆ ತೆರಳುತ್ತಾರೆ. ತಮ್ಮ ಕೆಲಸಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಮಾಡುತ್ತಾರೆ. ಕೆಲಸದ ನಡುವ ವಿಶ್ರಾಂತಿ ಪಡೆಯುವ ಜಾಯಮಾನ ಮುಕೇಶ್ ಅಂಬಾನಿಗಿಲ್ಲ.
RILನಲ್ಲಿ ಅಂಬಾನಿ ಕುಟುಂಬ ಶೇಕಡಾ 50.53 ಸ್ಟೇಕ್ ಹೊಂದಿದೆ. 2023-24ರ ಸಾಲಿನಲ್ಲಿ ಇದರ ಡಿವಿಡೆಂಟ್ ಮೊತ್ತ ಬರೋಬ್ಬರಿ 3,222.7 ಕೋಟಿ ರೂಪಾಯಿ.
ಆಗಸ್ಟ್ 2023ರ ವರೆಗೆ RILನ ನಾನ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿದ್ದ ನೀತಾ ಅಂಬಾನಿ 2023-24ರ ಆರ್ಥಿಕ ವರ್ಷದಲ್ಲಿ 2 ಲಕ್ಷ ರೂಪಾಯಿ ಸಿಟ್ಟಿಂಗ್ ಫೀಸ್, 97 ಲಕ್ಷ ರೂಪಾಯಿ ಕಮಿಷನ್ ರೂಪದಲ್ಲಿ ಪಡೆದಿದ್ದಾರೆ.