Asianet Suvarna News Asianet Suvarna News

Nita Ambani: ನೀತಾ ಅಂಬಾನಿಯ ಶ್ರೀಮಂತಿಕೆಗೆ ಕಾರಣವೇ ಈ ರಹಸ್ಯ ಮಂತ್ರ! ನೀವೂ ಪಠಿಸಿ ಯಶಸ್ಸು ಗಳಿಸಿ

ನೀತಾ ಅಂಬಾನಿ ಹಾಗೂ ಆಕೆಯ ಗಂಡ ಮುಕೇಶ್ ಅಂಬಾನಿ ಈ ದೇಶದಲ್ಲೇ ಅತ್ಯಂತ ಶ್ರೀಮಂತರು. ಇವರ ಶ್ರೀಮಂತಿಕೆಯ ಹಿಂದೆ ಒಂದು ಮಂತ್ರವಿದೆಯಂತೆ. ಅದೇನು ಮಂತ್ರ? ಅದರ ಬಗ್ಗೆ ತಿಳಿಯೋಣ ಬನ್ನಿ.

 

The auspicious mantra Nita Ambani seen reciting was secret of her success
Author
First Published Aug 16, 2024, 5:00 PM IST | Last Updated Aug 17, 2024, 6:22 PM IST

ಅಂಬಾನಿ ಫ್ಯಾಮಿಲಿ ತುಂಬಾ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸ್ವಭಾವ ಹೊಂದಿದೆ ಎಂಬುದು ನಿಮಗೆ ಗೊತ್ತೇ ಇದೆ. ಸ್ವತಃ ನೀತಾ ಮತ್ತು ಮುಖೇಶ್ ಅಂಬಾನಿ ತಮ್ಮ ಮಕ್ಕಳ ಜೊತೆಗೂ ಶ್ರೀನಾಥಜಿಯಂತಹ ದೇವಾಲಯಗಳಿಗೆ ಭೇಟಿ ನೀಡುವುದನ್ನು ಕಾಣಬಹುದು. ನಾಥದ್ವಾರ ಪಟ್ಟಣ, ಗುಜರಾತ್‌ನ ದ್ವಾರಕಾಧೀಶ್ ದೇವಾಲಯ, ಉತ್ತರಾಖಂಡದ ಬದರಿನಾಥ್ ಮತ್ತು ಆಂದ್ರ ಪ್ರದೇಶದ ತಿರುಮಲ ತಿರುಪತಿ ದೇವಾಲಯಗಳಿಗೆ ಇವರು ಹೋಗುತ್ತಿರುತ್ತಾರೆ. ಆದರೆ ನೀತಾ ಅಂಬಾನಿ ಐಪಿಎಲ್ ಒಡೆತನ ಸೇರಿದಂತೆ ಎಲ್ಲದರಲ್ಲೂ ಯಶಸ್ಸು ಕಾಣುತ್ತಿರುವುದರ ಹಿಂದೆ ಒಂದು ರಹಸ್ಯ ಮಂತ್ರ ಕೆಲಸ ಮಾಡುತ್ತಿದೆಯಂತೆ.

ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ‌ಮಾಲೀಕರಾಗಿರುವ ನೀತಾ ಅಂಬಾನಿ ತಮ್ಮ ತಂಡ ಮ್ಯಾಚ್ ನಡೆಯುವ ವೇಳೆ ಗ್ಯಾಲರಿಯಲ್ಲಿ ಕುಳಿತುಕೊಂಡು ಆಗಾಗ ಏನನ್ನೋ ಪಠಿಸುವುದನ್ನು ನೀವು ನೋಡಿರಬಹುದು. ತಂಡದ ಪಂದ್ಯಗಳ ಸಮಯದಲ್ಲಿ ಆಕೆ  ಕ್ರೀಡಾಂಗಣದಲ್ಲಿ ಮಂತ್ರ ಪಠಿಸುತ್ತಿರುವ ಆಕೆಯ ಅಂತಹ ಒಂದು ವಿಡಿಯೋ ವೈರಲ್ ಆಗಿದೆ. ಇದನ್ನು ಕ್ಯಾಮರಾಗಳು ತೋರಿಸಿದ್ದವು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸುವ ಹಂತದಲ್ಲಿದ್ದ ಆಕೆಯ ತಂಡ ಮುಂಬೈ ಇಂಡಿಯನ್ಸ್ ನಂತರ ಗೆದ್ದಿತು. ಹಾಗಾದರೆ ಅವಳು ಏನನ್ನು ಪಠಿಸುತ್ತಿದ್ದಳು ಎಂದು ತಿಳಿದುಕೊಳ್ಳುವ ಕುತೂಹಲ ತುಂಬ ಮಂದಿಗೆ ಮೂಡಿತ್ತು.

ನೀತಾ ಆಪ್ತರು ಹೇಳಿರುವ ಪ್ರಕಾರ ಆಕೆ ಓದುತ್ತಾ ಇದ್ದುದು 'ಚಂಡಿ ಪಾಠ'. ಇದನ್ನೇ 'ದುರ್ಗಾ ಸಪ್ತಶತಿ' ಎಂದು ನಮ್ಮಲ್ಲಿ ಕರೆಯುತ್ತಾರೆ. 'ದೇವಿ ಮಾಹಾತ್ಮ್ಯಂ' ಎಂದೂ ಕರೆಯಲ್ಪಡುತ್ತದೆ. ಇದು ಪ್ರಮುಖ ಹದಿನೆಂಟು ಪುರಾಣಗಳಲ್ಲಿ ಒಂದಾದ ಪ್ರಮುಖವಾದ ಮಾರ್ಕಂಡೇಯ ಪುರಾಣದ ಒಂದು ಭಾಗ. ಈ ಚಂಡಿ ಪಾಠದಲ್ಲಿ 700 ಶ್ಲೋಕಗಳಿವೆ. 13 ಅಧ್ಯಾಯಗಳಾಗಿ ವಿಂಗಡಿಸಲಾಗಿದೆ ಇದರಲ್ಲಿ ಏನಿದೆ? ಇದು ದುರ್ಗಾ ದೇವಿ ಹಾಗೂ ಮಹಿಷಾಸುರ ನಡುವೆ ನಡೆದ ಯುದ್ಧದ ಕಥೆಯನ್ನು ವಿವರಿಸುತ್ತದೆ. ದೇವಿಯ ಗೆಲುವಿನ ಈ ಕಥೆ ಭಕ್ತನ ಜೀವನದಲ್ಲಿ ಕೇಳಿದ ಆಸೆಗಳನ್ನು ಪೂರೈಸುವ ಶಕ್ತಿಯನ್ನು ಹೊಂದಿದೆಯಂತೆ.

ಈ ಚಂಡಿ ಪಾಠವು ದೇವಿಯ ಶಕ್ತಿಯನ್ನು ವೈಭವೀಕರಿಸುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆಯದು ಗೆಲುವು ಸಾಧಿಸುತ್ತದೆ ಎಂದು ಸಾಬೀತುಪಡಿಸುತ್ತದೆ. ಹಿಂದೂಗಳ ಪ್ರಮುಖ ಹಬ್ಬವಾದ ನವರಾತ್ರಿಯಲ್ಲಿ ಇದನ್ನು ಹೆಚ್ಚಾಗಿ ಪಠಿಸಲಾಗುತ್ತದೆ. ದುರ್ಗಾ ದೇವಿಯ ಆರಾಧನೆಗೆ ಇದನ್ನು ಸಮರ್ಪಿಸಲಾಗಿದೆ. ಹಾಗೆಯೇ ಇತರ ಮಂಗಳಕರ ಸಮಯಗಳಲ್ಲಿ ಕೆಟ್ಟ ಶಕ್ತಿಗಳಿಂದ ರಕ್ಷಣೆ, ದೇವತಾ ಶಕ್ತಿಗಳ ಆಶೀರ್ವಾದವನ್ನು ಪಡೆಯಲು, ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಇದನ್ನು ಮನನ ಮಾಡಲಾಗುತ್ತದೆ. ಚಂಡಿ ಪಾಠವನ್ನು ಪಠಿಸುವುದು ಅಥವಾ ಕೇಳುವುದು ಆಧ್ಯಾತ್ಮಿಕ ಶುದ್ಧಿಯನ್ನು ತರುತ್ತದೆ ಎಂದು ನಂಬುತ್ತಾರೆ. 

ಬಂಡೆಕಲ್ಲಿಗೆ ಮುತ್ತಿಕ್ಕಿದರೆ ಮದುವೆ,ಬೆತ್ತಲಾಗಿ ಓಡಿದರೆ ರ‍್ಯಾಂಕ್: ಈ ದೇಶದಲ್ಲಿದೆ ವಿಚಿತ್ರ ನಂಬಿಕೆ!

ಹಾಗೆಯೇ ಇದು ಭಕ್ತರ ಆಸೆಗಳನ್ನೂ ಪೂರೈಸುತ್ತದೆ. ಅಂಬಾನಿಯ ಮನೆತನದ ಪುರೋಹಿತ ಚಂದ್ರಶೇಖರ್ ಶರ್ಮಾ ಹೇಳುವಂತೆ ಅಂಬಾನಿ ಮನೆಯಲ್ಲಿ ಪ್ರತಿ ಐಪಿಎಲ್ ಪಂದ್ಯಕ್ಕೂ ಮುಂಚಿತವಾಗಿ ಹಾಗೂ ಯಾವುದೇ ಶುಭ ಕಾರ್ಯದ ಮೊದಲಿಗೆ ಚಂಡಿ ಪಾಠ ಓದಲಾಗುತ್ತದೆ. ಇದು ಭಗವತಿ ದುರ್ಗೆಯ ಕಥೆ. ಕೇಳಿದ ಅಥವಾ ಓದಿದ ಭಕ್ತರ ಅದೃಷ್ಟವನ್ನು ಹೆಚ್ಚಿಸುತ್ತದೆ. ಕೆಲಸ ಮುಂದುವರಿಸಿ ಯಶಸ್ಸು ಗಳಿಸುವ ಶಕ್ತಿಯನ್ನು ನೀಡುತ್ತದೆ. 

ಚಂಡಿ ಪಾಠವನ್ನು ಪಠಿಸುವುದು ಅಥವಾ ಕೇಳುವುದು ದೇವಿಯ ಆಶೀರ್ವಾದ ಮತ್ತು ರಕ್ಷಣೆಯನ್ನು ತರುತ್ತದೆ. ದುರ್ಗಾ ದೇವಿಯು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಆಂತರಿಕ ರೂಪಾಂತರವನ್ನು ಉತ್ತೇಜಿಸುವ ತಾಯಿ. ಈ ಪವಿತ್ರ ಗ್ರಂಥ,
ದುರ್ಗಾ ಮತ್ತು ಮಹಿಷಾಸುರರ ನಡುವಿನ ಯುದ್ಧವನ್ನು ವಿವರಿಸಿ ದುರ್ಗೆಯ ವಿಜಯವನ್ನು ಸಂಕೇತಿಸುತ್ತದೆ. ಭಕ್ತರ ಹಾದಿಯಲ್ಲಿ ಅಡೆತಡೆಗಳನ್ನು ತೊಡೆದುಹಾಕುತ್ತದೆ. ಆಸೆಗಳನ್ನು ಪೂರೈಸುತ್ತದೆ. ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ. ಆರೋಗ್ಯದಲ್ಲಿ ಯೋಗಕ್ಷೇಮವನ್ನು ಖಚಿತಪಡಿಸುತ್ತದೆ. ಉತ್ತೇಜಿಸುವ ಸಾಮರ್ಥ್ಯ ಹೊಂದಿದೆ. 

Astrology Tips: ನಿಮ್ಮ ಅಜ್ಜ- ಅಜ್ಜಿ ಹೇಳಿಕೊಂಡ ಹರಕೆ ತೀರಿಸದಿದ್ದರೆ ನಿಮ್ಮನ್ನೂ ಕಾಡಬಹುದು! ಪರಿಹಾರವೇನು?
 

Latest Videos
Follow Us:
Download App:
  • android
  • ios