ನೋಟು ಎಣಿಸಲು ಪೇಚಾಡಿದ ವರ, ಇವನೆಂಥಾ ಬೆಪ್ಪ ಅಂತ ಮದ್ವೆ ಕ್ಯಾನ್ಸಲ್ ಮಾಡಿದ ವಧು
ಇವತ್ತಿನ ದಿನಗಳಲ್ಲಿ ಮದ್ವೆ ಸಂಬಂಧ ಮುರಿಯೋಕೆ ಕಾರಣಗಳೇ ಬೇಕಿಲ್ಲ. ಸಣ್ಣ ಪುಟ್ಟ ಕಾರಣಕ್ಕೂ ಮದುವೆ ಅರ್ಧದಲ್ಲಿ ನಿಂತು ಹೋಗಿಬಿಡುತ್ತದೆ ಅಥವಾ ಡಿವೋರ್ಸ್ ಆಗುತ್ತದೆ. ಆದ್ರೆ ಇಲ್ಲೊಬ್ಬ ಯುವತಿ ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿರೋ ಕಾರಣ ತಿಳಿದ್ರೆ ನೀವು ಬೆರಗಾಗೋದು ಖಂಡಿತ.
ಫರೂಖಾಬಾದ್: ಮದ್ವೆ (Marriage) ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ (Relationship) ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್‌ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಅದೆಷ್ಟು ತಯಾರಿ ನಡೆದರೂ, ಕಾರ್ಯಗಳು ನಡೆದರೂ ತಾಳಿ ಕಟ್ಟುವ ವರೆಗೆ ಮದುವೆಯಾಯ್ತು ಎಂದು ಹೇಳುವಂತೆಯೇ ಇಲ್ಲ. ಹಾಗೆಯೇ ಇಲ್ಲೊಂದು ಮದುವೆ ಮಂಟಪದಲ್ಲಿ ಅರ್ಧದಲ್ಲೇ ನಿಂತು ಹೋಗಿದೆ. ಅದಕ್ಕೆ ಕಾರಣ ಆಗಿರೋದು ಹುಡುಗನ ವಿಚಿತ್ರ ವರ್ತನೆ. ಹೌದು, ಹುಡುಗನಿಗೆ 10 ರೂ.ಗಳ 30 ನೋಟು ಎಣಿಸೋಕೆ ಬರ್ತಿರಲಿಲ್ವಂತೆ. ಇದ್ರಿಂದ ಸಿಟ್ಟಿಗೆದ್ದ ವಧು ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾಳೆ.
ಹತ್ತು ರೂ. ನೋಟುಗಳನ್ನು ಎಣಿಸಲೇ ಆಗಲ್ಲಿಲ್ಲ..!
ಹೌದು, ಇಂಥಹದ್ದೊಂದು ವಿಲಕ್ಷಣ ಕಾರಣಕ್ಕೆ ಮದುವೆ ರದ್ದುಗೊಂಡಿರುವ ಘಟನೆ ಉತ್ತರ ಪ್ರದೇಶದ ಫರೂಖಾಬಾದ್‌ನಲ್ಲಿ ನಡೆದಿದೆ. ರೀಟಾ ಎಂಬ 21 ವರ್ಷದ ಯುವತಿಗೆ ಮದ್ವೆ ನಿಶ್ಚಯವಾಗಿತ್ತು. ಅದ್ಧೂರಿಯಾಗಿ ಅಲಂಕರಿಸಿದ್ದ ಮಂಟಪದಲ್ಲಿ ಮದುವೆಕಾರ್ಯಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಪುರೋಹಿತರು ವರ 10 ರೂಪಾಯಿ 30 ನೋಟುಗಳನ್ನು ಎಣಿಸಲು ಒದ್ದಾಡುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ವಧುವಿಗೆ ತಿಳಿಸಿದ್ದಾರೆ. ವಧು (Bride) ಸಹ ಇದನ್ನು ಗಮನಿಸಿ ತಬ್ಬಿಬ್ಬಾಗಿದ್ದಾಳೆ. ತಕ್ಷಣ ಈ ಬಗ್ಗೆ ತನ್ನ ಮನೆಯವರಿಗೆ ಮಾಹಿತಿ ನೀಡಿ, ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ.
ಬ್ಯಾಂಡ್ ದುಡ್ಡು ನಾವ್ ಕೊಡಲ್ಲಪ್ಪಾ, ಮದುವೆಯೇ ಕ್ಯಾನ್ಸಲ್ ಮಾಡಿ ಹೊರಟ ಮದುಮಗ !
ಸಿಟ್ಟಿಗೆದ್ದ ಮದುವೆ ಕ್ಯಾನ್ಸಲ್ ಮಾಡಿದ ವಧು
ಮದುವೆಯ ವಿಧಿವಿಧಾನಗಳ ವೇಳೆ ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ. ಪುರೋಹಿತರು ಹುಡುಗನ ವರ್ತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಯುವಿತಿಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಧುವಿನ ಕುಟುಂಬಸ್ಥರು ವರನಿಗೆ 10 ರೂಪಾಯಿಯ 30 ಕರೆನ್ಸಿ ನೋಟುಗಳನ್ನು ನೀಡಿದ್ದರು. ಆ ವೇಳೆ ಆತನಿಗೆ ನೋಟುಗಳ ಲೆಕ್ಕ ಮಾಡೋದಕ್ಕೆ ಬರುತ್ತಿರಲ್ಲಿಲ್ಲ. ಸಿಟ್ಟಿಗೆದ್ದ ವಧು ತಕ್ಷಣ ಮಂಟಪದಿಂದ ಹೊರನಡೆದರು. ಇದು ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಕೊನೆಗೆ ವಧುವಿನ ಕುಟುಂಬಸ್ಥರು ಮದುವೆಯನ್ನು ಸಂಪೂರ್ಣವಾಗಿ ನಿರಾಕರಿಸಿದ ಕಾರಣ ಮದ್ವೆ ಕ್ಯಾನ್ಸಲ್ ಮಾಡಲಾಯಿತು.
ಈ ಬಗ್ಗೆ ವಧುವಿನ ಸಹೋದರ ಮೋಹಿತ್ ಮಾತನಾಡಿ ವರನ ಕಡೆಯ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. 'ಮದುವೆಗಳು ಸಾಮಾನ್ಯವಾಗಿ ನಂಬಿಕೆಯಿಂದ ನಡೆಯುತ್ತವೆ. ಹುಡುಗ ನಮ್ಮ ನಿಕಟ ಸಂಬಂಧಿಯಾಗಿದ್ದ. ಹೀಗಾಗಿ ನಾವು ಅತಿಯಾದ ನಂಬಿಕೆಯಿಂದಲೇ ಈ ವೈವಾಹಿಕ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದೆವು. ಆದರೆ ಮಂಟಪದಲ್ಲಿ ಹುಡುಗನ ವಿಚಿತ್ರ ವರ್ತನೆಯ ಬಗ್ಗೆ ಪುರೋಹಿತರು ನಮಗೆ ತಿಳಿಸಿದರು. ನಾವು ತಕ್ಷಣ ಈ ಬಗ್ಗೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆವು, ಮತ್ತು ವರನಿಗೆ ಎಣಿಸಲು 10 ರೂಪಾಯಿಯ 30 ಕರೆನ್ಸಿ ನೋಟುಗಳನ್ನು ನೀಡಿದೆವು. ಈ ಸಂದರ್ಭದಲ್ಲಿ ಆತನಿಗೆ ನೋಟುಗಳನ್ನು ಎಣಿಸಲು ಸಹ ಬರುವುದಿಲ್ಲ ಎಂಬುದು ಗೊತ್ತಾಯಿತು' ಎಂದಿದ್ದಾರೆ. ಹುಡುಗನ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದ ನಂತರ ರೀಟಾ ಸಿಂಗ್ ಮದುವೆ ನಿರಾಕರಿಸಿದಳು.
ಮದುವೆ ದಿನ ವರನ ಸ್ನೇಹಿತರ ಕಿತಾಪತಿ... ಮ್ಯಾರೇಜ್ ಕ್ಯಾನ್ಸಲ್!
ಎರಡು ಕುಟುಂಬಗಳ ನಡುವೆ ತೀವ್ರ ವಾಗ್ವಾದ ಪ್ರಾರಂಭವಾಯಿತು. ಹುಡುಗನಿಗೆ ಮೊದಲೇ ಮಾನಸಿಕ ಅಸ್ವಸ್ಥತೆ ಇತ್ತು. ಆದರೆ ಹುಡುಗನ ಮನೆಯವರು ಈ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ವಧುವಿನ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ.