ಮದುವೆ ದಿನ ವರನ ಸ್ನೇಹಿತರ ಕಿತಾಪತಿ... ಮ್ಯಾರೇಜ್ ಕ್ಯಾನ್ಸಲ್!
ವಿಚಿತ್ರ ಕಾರಣಕ್ಕೆ ಮುರಿದುಬಿದ್ದ ಮದುವೆ/ ವರನ ಸ್ನೇಹಿತರು ವಧುವನ್ನು ಬಲವಂತವಾಗಿ ಡ್ಯಾನ್ಸ್ ಮಾಡಲು ಕರೆದುಕೊಂಡು ಹೋಗಿದ್ದೆ ಕಾರಣ/ ಮದುವೆ ಮಂಟಪದಿಂದ ನೇರವಾಗಿ ಹೊರನಡೆದ ಮದುಮಗಳು
ಬರೇಲಿ(ಡಿ. 14) ಒಂದು ವಿಚಿತ್ರ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಿದೆ. ತನಗೆ ಸರಿಯಾದ ಮರ್ಯಾದೆ ಸಿಕ್ಕಿಲ್ಲ.. ಅವಮಾನ ಮಾಡಲಾಗಿದೆ ಎಂದು ನೊಂದ ವಧು ನೇರವಾಗಿ ಮದುವೆ ಮಂಟಪದಿಂದ ಮನೆಗೆ ಹೆಜ್ಜೆ ಹಾಕಿದ್ದಾಳೆ.
ತನಗೆ ಗೌರವ ನೀಡಲು ಸಾಧ್ಯವಿಲ್ಲದ ವ್ಯಕ್ತಿಯೊಂದಿಗೆ ಜೀವನ ಮಾಡಲಾರೆ ಎಂದು ತೀರ್ಮಾನ ಮಾಡಿದ್ದಾರೆ. ಮದುವೆ ಸಂಭ್ರ,ಮದಲ್ಲಿದ್ದ ವೇಳೆ ವರನ ಸ್ನೇಹಿತರು ವಧುವನ್ನು ಬಲವಂತವಾಗಿ ನೃತ್ಯಕ್ಕೆ ಆಹ್ವಾನಿಸಿದ್ದು ಅಲ್ಲದೆರ ಎಳೆದುಕೊಂಡು ಹೋದರು.
ಡೇಟ್ ಮಾಡಿ ಮದುವೆ ಬೇಡ ಎಂದ..ಯುವತಿ ಮಾಡಿದ ದಿಟ್ಟ ಕೆಲಸ
ಬರೇಲಿ ಜಿಲ್ಲೆಯ ವರ ಮತ್ತು ಕನ್ನೌಜ್ ಜಿಲ್ಲೆಯ ವಧು ಮದುವೆಗೆ ಸಿದ್ಧವಾಗಿದ್ದರು. . ಇಬ್ಬರೂ ಸ್ನಾತಕೋತ್ತರ ಪದವೀಧರರು. ಶುಕ್ರವಾರ, ವಧು ಮತ್ತು ಅವರ ಕುಟುಂಬವು ವಿವಾಹ ಸಮಾರಂಭಕ್ಕಾಗಿ ಬರೇಲಿಗೆ ಆಗಮಿಸಿತು. ವರನ ಕೆಲವು ಸ್ನೇಹಿತರು ವಧುವನ್ನು ಬಲವಂತವಾಗಿ ನೃತ್ಯ ಮಾಡಲು ಎಳೆದುಕೊಂಡು ಹೋಗಿದ್ದು ಗೊಂದಲ ಸೃಷ್ಟಿಸಿತು.
ವಧು ತೆರಳಿದ ನಂತರ ಮದುವೆ ಕ್ಯಾನ್ಸಲ್ ಆಯಿತು. ಇನ್ನೊಂದು ಕಡೆ ವಧುವಿನ ಕುಟುಂಬದವರು ವರನ ಫ್ಯಾಮಿಲಿ ಮೇಲೆ ವರದಕ್ಷಿಣೆ ಕೇಸ್ ಹಾಕಲು ಮುಂದಾದರು. ವರನ ಕುಟುಂಬವು 6.5 ಲಕ್ಷ ರೂ. ಪಾವತಿಸಲು ಒಪ್ಪಿದ ನಂತರ ಮಾತುಕತೆ ಮೂಲಕ ಬಗೆಹರಿಯಿತು.
ಮದುವೆಯನ್ನು ನಿಲ್ಲಿಸಲಾಗಿದೆ. ಮಹಿಳೆಯ ಕುಟುಂಬ ವರದಕ್ಷಿಣೆ ದೂರು ನೀಡಿತ್ತು. ಇದು ಎರಡು ಕುಟುಂಬಗಳ ನಡುವಿನ ಸಮಸ್ಯೆಯಾಗಿರುವುದರಿಂದ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಒಪ್ಪಂದ ಮಾಡಿಕೊಂಡು ಬಗೆಹರಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ಮತ್ತೆ ಭಾನುವಾರ, ವರನ ಕುಟುಂಬವು ವಧುವಿನ ಕುಟುಂಬದ ಮನ ಒಲಿಸಿ ವಧುವನ್ನು ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದರೂ ಯುವತಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.