ಬ್ಯಾಂಡ್ ದುಡ್ಡು ನಾವ್ ಕೊಡಲ್ಲಪ್ಪಾ, ಮದುವೆಯೇ ಕ್ಯಾನ್ಸಲ್ ಮಾಡಿ ಹೊರಟ ಮದುಮಗ !
ಮದ್ವೆ (Marriage) ಅಂದ್ಮೇಲೆ ಸಂಭ್ರಮ ಹೆಚ್ಚಿಸೋ ಬ್ಯಾಂಡ್ (Band), ವಾದ್ಯ, ಓಲಗ ಇಲ್ಲದಿದ್ರೆ ಏನ್ ಚೆನ್ನಾಗಿರುತ್ತೆ ಅಲ್ವಾ ? ಅದ್ಕೇ ಈ ಅದ್ಧೂರಿ ಮದ್ವೆಗೆ ಬ್ಯಾಂಡ್‌ನ್ನು ತರಿಸಲಾಗಿತ್ತು. ಹುಡುಗ-ಹುಡುಗಿಯ ಸಂಬಂಧಿಕರು ಬ್ಯಾಂಡ್ ಬೀಟ್‌ಗೆ ಸಖತ್ತಾಗಿ ಸ್ಟಪ್ ಹಾಕಿದ್ದೂ ಆಗಿತ್ತು. ಆದ್ರೆ ಬ್ಯಾಂಡ್ ಸೆಟ್‌ಗೆ ದುಡ್ಡು ಕೊಡೋ ವಿಚಾರಕ್ಕೆ ಜಗಳ ನಡೆದು ಮದ್ವೆಯೇ ಕ್ಯಾನ್ಸಲ್ (Cancel) ಆಗಿದೆ.
ಮದುವೆ (Marriage) ಅನ್ನೋದು ಒಂದು ಪವಿತ್ರ ಸಂಬಂಧ. ಹೀಗಾಗಿ ಗುರು-ಹಿರಿಯರು ಎಲ್ಲರೂ ನೋಡಿ ಪರಸ್ಪರ ಒಪ್ಪಿಗೆ ಸೂಚಿಸಿ ಒಳ್ಳೆಯ ಮುಹೂರ್ತ ನೋಡಿ ಮದುವೆ ಮಾಡಿಸುತ್ತಾರೆ. ಜೋಡಿ ನೂರ್ಕಾಲ ಸುಖವಾಗಿರಲಿ ಎಂದು ಹಾರೈಸುತ್ತಾರೆ. ಆದ್ರೆ ಈ ಕಾಲದಲ್ಲಿ ಎಲ್ಲಾ ವಸ್ತುಗಳ ವ್ಯಾಲಿಡಿಟಿ ಕಮ್ಮಿಯಾಗಿರೋ ಹಾಗೆಯೇ ಮದುವೆಯ ವ್ಯಾಲಿಡಿಟಿಯೂ ಕಡಿಮೆಯಾಗಿದೆ. ಮದುವೆಯಾಗಿ ತಿಂಗಳಾಗೋ ಒಳಗೇ ಡೈವೋರ್ಸ್ (Divorce)ಗೆ ಅಪ್ಲೈ ಮಾಡುವ ದಂಪತಿಯಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ನಂತರವೂ ಮದುವೆ ಕ್ಯಾನ್ಸಲ್ (Cancel) ಮಾಡಿಕೊಳ್ಳುವುದು ಅತಿ ಸಾಮಾನ್ಯವಾಗಿದೆ.
ಇವತ್ತಿನ ಕಾಲದ ಮದುವೆಗಳು ಹೇಗಂದರೆ ಮದುವೆ ಶಾಸ್ತ್ರಗಳು ಸಂಪೂರ್ಣವಾಗಿ ಮುಗಿದು ಜೋಡಿ ಜೊತೆಯಾಗಿ ಹೋಗುವ ವರೆಗೂ ಮದುವೆ ಆಯ್ತು ಅಂತ ಹೇಳುವಂತಿಲ್ಲ. ಯಾಕೆಂದರೆ ಕೊನೆಯ ಕ್ಷಣದಲ್ಲೂ ಮದುವೆ ಕ್ಯಾನ್ಸಲ್ ಆಗಿ ಬಿಡುತ್ತದೆ. ಇವತ್ತಿನ ಕಾಲದಲ್ಲಿ ಹುಡುಗ-ಹುಡುಗಿಯರಿಗೆ ಮದುವೆ ಕ್ಯಾನ್ಸಲ್ ಮಾಡಲು ದೊಡ್ಡ ಕಾರಣವೂ ಬೇಕಿಲ್ಲ. ಸೀರೆ ಇಷ್ಟವಾಗಿಲ್ಲ. ಮದುವೆ ಡೆಕೊರೇಷನ್ ಚೆನ್ನಾಗಿಲ್ಲ. ಊಟ ಚೆನ್ನಾಗಿಲ್ಲ, ಹುಡುಗಿಗೆ ಚಿನ್ನ ಜಾಸ್ತಿ ಹಾಕಿಲ್ಲ. ಹೀಗೆ ಸಣ್ಣಪುಟ್ಟ ಕಾರಣಕ್ಕೆಲ್ಲಾ ಮದ್ವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಇಲ್ಲಿ ಕೂಡಾ ಅಂಥಹದ್ದೇ ಘಟನೆ ನಡ್ದಿದೆ. ಕ್ಷುಲಕ ಕಾರಣಕ್ಕೆ ಸಿಟ್ಟುಗೊಂಡ ವರ (Groom) ಮದುವೆ ಮಂಟಪ ಬಿಟ್ಟು ನಡೆದಿದ್ದಾನೆ. ಇಷ್ಟಕ್ಕೂ ಮದ್ವೆ ಕ್ಯಾನ್ಸಲ್ ಆಗಿದ್ಯಾಕೆ ?
ಪುರೋಹಿತ ಗಟ್ಟಿಮೇಳ..ಗಟ್ಟಿಮೇಳ ಎನ್ನುವಾಗ, ವಧುವಿನ ಲವ್ವರ್ ಎಂಟ್ರಿಕೊಟ್ಟಾಗ..!
ಮದುವೆ ಅಂದ್ಮೇಲೆ ಮಂಟಪ, ವಾಲಗ, ಬ್ಯಾಂಡ್, ಡ್ಯಾನ್ಸ್ ಬೇಕೇ ಬೇಕು. ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಡೆಯುತ್ತಿದ್ದ ಈ ಮದುವೆಗೂ ಬ್ಯಾಂಡ್ ತರಿಸಲಾಗಿತ್ತು. ಹುಡುಗ-ಹುಡುಗಿಯ ಸಂಬಂಧಿಕರು ಬ್ಯಾಂಡ್ ಬೀಟ್‌ಗೆ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೂ ಆಯ್ತು. ಅಲ್ಲೇ ಶುರುವಾಗಿದ್ದು ಸಮಸ್ಯೆ. ಬ್ಯಾಂಡ್ ಶುಲ್ಕವನ್ನು ಯಾರು ಪಾವತಿಸುತ್ತಾರೆ ಎಂಬುದರ ಕುರಿತು ಎರಡೂ ಕುಟುಂಬದ ಮಧ್ಯೆ ವಿವಾದ ನಡ್ದಿದೆ. ಮದುವೆಯ ವಿಧಿ ವಿಧಾನಗಳು ನಡೆಯುತ್ತಿದ್ದಂತೆ, ತಂಡವು ವರನ ಕಡೆಯಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದೆ. ಆದರೆ ಅವರು ಪಾವತಿಸಲು ನಿರಾಕರಿಸಿದರು. ಬದಲಾಗಿ ವಧುವಿನ ಕಡೆಯವರು ಬ್ಯಾಂಡ್ (Band) ಹಣವನ್ನು ಪಾವತಿಸಬೇಕೆಂದು ಹೇಳಿದರು. ಇದಕ್ಕೆ ವಧುವಿನ ಕಡೆಯವರು ಒಪ್ಪದ ಕಾರಣ ವರ ಮದುವೆಯನ್ನು ಬಿಟ್ಟು ಹೊರನಡೆದಿದ್ದಾನೆ.
ಧರ್ಮೇಂದ್ರ ಎಂಬಾತ ಫರೂಕಾಬಾದ್‌ನ ಕಂಪಿಲ್‌ನಿಂದ ಸಹರಾನ್‌ಪುರದ ಮಿರ್ಜಾಪುರಕ್ಕೆ ತನ್ನ ಮದುವೆಯ ಮೆರವಣಿಗೆಯನ್ನು ಅನ್ನು ತಂದಿದ್ದ ಎಂದು ಮಿರ್ಜಾಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅರವಿಂದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲೇ ಕುಸಿದು ಬಿದ್ದ ವಧು, ಮದುಮಗಳ ಅಸಲಿ ಕಥೆ ಇಲ್ಲಿದೆ
ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದಂತೆ, ಬ್ಯಾಂಡ್ ತಂಡವು ವರನ ಕಡೆಯಿಂದ ಹಣಕ್ಕಾಗಿ ಬೇಡಿಕೆಯಿಟ್ಟಿತು, ಆದರೆ ಅವರು ವಧುವಿನ ಕಡೆಯಿಂದ ಪಾವತಿಸಬೇಕೆಂದು ಹೇಳಿ ಹಣ ನೀಡಲು ನಿರಾಕರಿಸಿದರು. ಇದು ಜಗಳಕ್ಕೆ ಕಾರಣವಾಯಿತು. ವರ ಹೂವಿನ ಹಾರವನ್ನು ಕಿತ್ತೆಸೆದು ಮದುವೆ ಮಂಟಪದಿಂದ ವಾಪಾಸ್ ಹೊರಟನು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ವಧುವಿನ ಕಡೆಯವರು ವರನ ಕುಟುಂಬದೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿಗೆ ಬರೇಲಿಯಲ್ಲೂ ಇಂಥಹದ್ದೇ ಒಂದು ವಿಚಿತ್ರ ಕಾರಣಕ್ಕೆ ಮದ್ವೆ ಕ್ಯಾನ್ಸಲ್ ಆಗಿತ್ತು. ಬರೇಲಿ ಜಿಲ್ಲೆಯ ವರ ಮತ್ತು ಕನ್ನೌಜ್ ಜಿಲ್ಲೆಯ ವಧು ಮದುವೆಗೆ ಸಿದ್ಧವಾಗಿದ್ದರು. . ಇಬ್ಬರೂ ಸ್ನಾತಕೋತ್ತರ ಪದವೀಧರರು. ಶುಕ್ರವಾರ, ವಧು ಮತ್ತು ಅವರ ಕುಟುಂಬವು ವಿವಾಹ ಸಮಾರಂಭಕ್ಕಾಗಿ ಬರೇಲಿಗೆ ಆಗಮಿಸಿತು. ವರನ ಕೆಲವು ಸ್ನೇಹಿತರು ವಧುವನ್ನು ಬಲವಂತವಾಗಿ ನೃತ್ಯ ಮಾಡಲು ಎಳೆದುಕೊಂಡು ಹೋಗಿದ್ದು ಗೊಂದಲ ಸೃಷ್ಟಿಸಿತು. ವಧು ತೆರಳಿದ ನಂತರ ಮದುವೆ ಕ್ಯಾನ್ಸಲ್ ಆಯಿತು. ಇನ್ನೊಂದು ಕಡೆ ವಧುವಿನ ಕುಟುಂಬದವರು ವರನ ಫ್ಯಾಮಿಲಿ ಮೇಲೆ ವರದಕ್ಷಿಣೆ ಕೇಸ್ ಹಾಕಲು ಮುಂದಾದರು. ವರನ ಕುಟುಂಬವು 6.5 ಲಕ್ಷ ರೂ. ಪಾವತಿಸಲು ಒಪ್ಪಿದ ನಂತರ ಮಾತುಕತೆ ಮೂಲಕ ಬಗೆಹರಿಯಿತು.