Asianet Suvarna News Asianet Suvarna News

ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ

ಸಮಾಜದಲ್ಲಿ ಹಿಂದಿನಿಂದಲೂ ಹಲವು ಕಟ್ಟುಪಾಡುಗಳು ಚಾಲ್ತಿಯಲ್ಲಿವೆ. ಕಾಲ ಅದೆಷ್ಟು ಬದಲಾದರೂ ಜನರ ಮನಸ್ಥತಿ ಬದಲಾಗದ ಕಾರಣ ಇಂಥಾ ಅನಿಷ್ಟ ಪದ್ಧತಿಗಳು ಇವತ್ತಿಗೂ ಜನರನ್ನು ಹೈರಾಣಾಗಿಸುತ್ತಿವೆ. ಅದರಲ್ಲೂ ಹೆಣ್ಣು ಇಂಥಾ ಅರ್ಥಹೀನ ನಿಯಮಗಳನ್ನು ಹೆಚ್ಚು ಸಹಿಸಿಕೊಳ್ಳಬೇಕಾಗಿ ಬರುತ್ತದೆ. 

In Maharashtra, Son Battles Social Stigma To Get Widowed Mother Remarried Vin
Author
First Published Jan 26, 2023, 9:46 AM IST

ಸಾಮಾನ್ಯವಾಗಿ ಮದುವೆಯಾದ ಬಳಿಕ ಹೆಂಡತಿ ಸತ್ತರೆ ಗಂಡಸರು ಒಂದು ಅಥವಾ ಎರಡು ತಿಂಗಳಲ್ಲಿ ಮರುಮದುವೆ ಮಾಡಿಕೊಳ್ಳುತ್ತಾರೆ. ಆದರೆ ಹೆಂಗಸರಿಗೆ ಸಾಮಾನ್ಯವಾಗಿ ಯಾರೂ ಮರುಮದುವೆ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಹೆಂಡತಿ ಸತ್ತರೆ ಎಲ್ಲರೂ ಗಂಡಸರ ಬಗ್ಗೆ ಅನುಕಂಪ ಪಟ್ಟುಕೊಳ್ಳುತ್ತಾರೆ. ಅವನನ್ನು, ಮಕ್ಕಳನ್ನು ನೋಡಿಕೊಳ್ಳುವವರು ಯಾರು, ಬೇಗ ಮದುವೆಯಾಗುವುದು ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ. ಅದೇ ಗಂಡ ಸತ್ತರೆ ಹೆಣ್ಣಿಗೆ ಈ ಅನುಕಂಪ ಸಿಗುವುದಿಲ್ಲ. ಮರು ಮದುವೆಯಾಗುವಂತೆ ಯಾರೂ ಅವಳಿಗೆ ಹೇಳುವುದೂ ಇಲ್ಲ. ಬದಲಿಗೆ ಮರು ಮದುವೆಯಾಗುವ ನಿರ್ಧಾರ ಮಾಡಿದರೆ ಆಕೆಯನ್ನು ತಪ್ಪಿತಸ್ಥಳಂತೆ ನೋಡಲಾಗುತ್ತದೆ. ಮಗು ಇದ್ದರೂ ಆಕೆ ಮರು ಮದುವೆಯಾಗುತ್ತಿರುವುದು ಯಾಕೆ, ಮಗುವಿನ ಬಗ್ಗೆ, ಕುಟುಂಬಕ್ಕಾಗುವ ಅವಮಾನದ ಬಗ್ಗೆ ಯೋಚಿಸಲಿಲ್ವಾ ಎಂದು ಹೀಯಾಳಿಸಲಾಗುತ್ತದೆ.

ತಾಯಿಗೆ ವರನನ್ನು ಹುಡುಕಿ ಮರು ಮದುವೆ ಮಾಡಿಸಿದ ಮಗ
ಇದೆಲ್ಲದರ ಮಧ್ಯೆ ಇಲ್ಲೊಬ್ಬ ವ್ಯಕ್ತಿ, ಸಮಾಜದ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದು ತಾನೇ ಮುಂದೆ ನಿಂತು ತನ್ನ ವಿಧವೆ ತಾಯಿಗೆ (Widow) ಮರುಮದುವೆ (Remarriage) ಮಾಡಿಸಿದ್ದಾನೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಯುವರಾಜ್ ಶೆಲೆ ಎಂಬಾತ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆ (Father)ಯನ್ನು ಕಳೆದುಕೊಂಡಿದ್ದ. ಈತನ ತಾಯಿ ಪತಿ ಸಾವಿನಿಂದ ತುಂಬಾ ನೊಂದುಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 45 ವರ್ಷ ವಯಸ್ಸಿನ ತಾಯಿಗೆ ಸಂಗಾತಿಯ ಅಗತ್ಯವನ್ನು ಅರಿತ ಯುವರಾಜ್‌ ವರನನ್ನು ಹುಡುಕಿ ತಾನೇ ಮುಂದೆ ನಿಂತು ಮರು ಮದುವೆ ಮಾಡಿಸಿದ್ದಾರೆ. 

ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

ನಾನು ಕೇವಲ 18 ವರ್ಷದವನಾಗಿದ್ದಾಗ ನನ್ನ ತಂದೆಯನ್ನು ಕಳೆದುಕೊಂಡೆ. ತಂದೆಯ ಸಾವು ನನಗೆ ಮತ್ತು ತಾಯಿಗೆ ದೊಡ್ಡ ಆಘಾತ ನೀಡಿತು. ನನ್ನ ತಾಯಿ ಒಂಟಿತನ ಎದುರಿಸಬೇಕಾಯಿತು. ಆಕೆ ಮಾನಸಿಕವಾಗಿ ತುಂಬಾ ಕುಗ್ಗಿದ್ದರು. ಜೀವನದ (Life) ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದರು. ಹೀಗಾಗಿ ನಾನು ಅವರಿಗೆ ಮರು ಮದುವೆ ಮಾಡುವ ನಿರ್ಧಾರ ಮಾಡಿದೆ ಎಂದು ಯುವರಾಜ್ ತಿಳಿಸಿದ್ದಾರೆ.

ನನ್ನ ತಾಯಿ ತನ್ನ ತಂದೆಯೊಂದಿಗೆ ಮರುಮದುವೆಯಾಗಿ ಸುಮಾರು 25 ವರ್ಷಗಳಾಗಿವೆ. ಒಬ್ಬ ಗಂಡಸು ತನ್ನ ಹೆಂಡತಿಯನ್ನು ಕಳೆದುಕೊಂಡರೆ, ಅವರು ಮರುಮದುವೆಯಾಗುವುದು ಸಹಜ. ಅದೇ ನಂಬಿಕೆಯು ಮಹಿಳೆಗೆ ಏಕೆ ಅನ್ವಯಿಸುವುದಿಲ್ಲ ಎಂಬುದು ನನ್ನ ಪ್ರಶ್ನೆಯಾಗಿತ್ತು. ನಾನು ತಾಯಿಯನ್ನು ಮರುಮದುವೆಯಾಗುವಂತೆ ಮನವೊಲಿಸಿದೆ ಎಂದು ಯುವರಾಜ್‌ ಹೇಳಿಕೊಂಡಿದ್ದಾರೆ. ಎರಡು ವಾರಗಳ ಹಿಂದೆ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಮಹೋತ್ಸವ ನಡೆದಿತ್ತು.

Relationship: ಹದಿಹರೆಯದ ಮಗಳಿರುವ ವ್ಯಕ್ತಿನ ಮದುವೆಯಾದ ಮಹಿಳೆ ಜೀವನ ಬದಲಾಯ್ತು

25 ವರ್ಷದಿಂದ ಒಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿದ ಮಗಳು !
ನವದೆಹಲಿ: ಮಗಳೇ (Daughter) ಮುಂದೆ ನಿಂತು, ತಾಯಿಗೆ (Mother) ಮದುವೆ ಮಾಡಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರಿಯಾ ಚರ್ಕವರ್ತಿ ಎಂಬವರು ಹೀಗೆ ತಾಯಿಗೆ ಮರು ಮದುವೆ ಮಾಡಿದ್ದಾರೆ. ಆಕೆ ಅಂಬೆಗಾಲಿಡಲು ಆರಂಭಿಸಿದ ಸಮಯದಲ್ಲೇ ತಂದೆ ತೀರಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ತಾಯಿ ಕಷ್ಟಪಟ್ಟು ರಿಯಾ ಚರ್ಕವರ್ತಿಯವರನ್ನು ಸಾಕಿದ್ದರು. ಒಂಟಿಯಾಗಿಯೇ ಇದ್ದು ಶಿಕ್ಷಣವನ್ನು ಕೊಡಿಸಿದ್ದರು. ಹೀಗಾಗಿ ಮಗಳೇ 25ನೇ ವರ್ಷದಿಂದ ಏಕಾಂಗಿಯಾಗಿದ್ದ ತಾಯಿಗೆ ಮರು ಮದುವೆ (Re marriage) ಮಾಡಿಸಿದ್ದು, ಹೃದಯಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ.

ಶಿಲ್ಲಾಂಗ್‌ನ ದೇಬ್ ಅರ್ತಿ, ಮಗಳು ರಿಯಾ ಚಕ್ರವರ್ತಿ ಎರಡು ವರ್ಷದವಳಾಗಿದ್ದಾಗ ಮೆದುಳಿನ ರಕ್ತಸ್ರಾವದಿಂದ ಇದ್ದಕ್ಕಿದ್ದಂತೆ ನಿಧನರಾದರು. ಅವರು ಪ್ರಸಿದ್ಧ ವೈದ್ಯರಾಗಿದ್ದರು. ಆಕೆಯ ತಾಯಿ ಮೌಶುಮಿ ಚಕ್ರವರ್ತಿ ಆ ಸಮಯದಲ್ಲಿ 25 ವರ್ಷ ವಯಸ್ಸಿನವರಾಗಿದ್ದರು. ಗಂಡ ನಿಧನರಾದ ನಂತರ ಅನೇಕ ವರ್ಷಗಳ ಕಾಲ ಆಕೆ ಒಬ್ಬಂಟಿಯಾಗಿ (Alone) ಜೀವನ ಸಾಗಿಸುತ್ತಿದ್ದರು. ಎರಡನೇ ವಿವಾಹವಾಗುವುದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಶಿಕ್ಷಕಿಯಾಗಿ (Teacher) ಕೆಲಸ ಮಾಡುತ್ತಿದ್ದ ಮೌಶುಮಿ ಪತಿ ನಿಧನದ ನಂತರ ತಾಯಿಯ ಮನೆಗೆ ತೆರಳಿದ್ದರು.

Follow Us:
Download App:
  • android
  • ios