Relationship: ಹದಿಹರೆಯದ ಮಗಳಿರುವ ವ್ಯಕ್ತಿನ ಮದುವೆಯಾದ ಮಹಿಳೆ ಜೀವನ ಬದಲಾಯ್ತು
ಮದುವೆ ನಂತ್ರ ಎಲ್ಲವೂ ಬದಲಾಗುತ್ತದೆ. ಅದ್ರಲ್ಲೂ ಈಗಾಗಲೇ ಮಕ್ಕಳಿರುವ ವ್ಯಕ್ತಿ ಮದುವೆಯಾದಾಗ ಜವಾಬ್ದಾರಿ ಜೊತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಯಿ ಕಳೆದುಕೊಂಡ 13 ವರ್ಷದ ಹುಡುಗಿಯೊಬ್ಬಳನ್ನು ಒಪ್ಪಿಸಿ, ಆಕೆಯ ತಾಯಿ ಸ್ಥಾನದಲ್ಲಿ ನಿಲ್ಲೋದು ಸವಾಲಿನ ಕೆಲಸ
ಮದುವೆ ಇಬ್ಬರು ಮೆಚ್ಚಿ ಆಗುವಂತಹದ್ದು. ಆದ್ರೆ ಇಲ್ಲಿ ಎರಡು ಪರಿವಾರಗಳು ಕೂಡ ಮುಖ್ಯವಾಗುತ್ತವೆ. ಒಬ್ಬರಿಗೆ ಇದು ಎರಡನೇ ಮದುವೆಯಾಗಿದ್ದು, ಇನ್ನೊಬ್ಬರಿಗೆ ಮೊದಲ ಮದುವೆಯಾಗಿದ್ರೆ ಅದ್ರಲ್ಲೂ ಮಕ್ಕಳಿರುವ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದ್ರೆ ಮುಂದಿನ ಜೀವನದ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ. ಒಂದು ಮಗುವನ್ನು ನನ್ನ ಮಗು ಎಂದು ಸಾಕುವುದು ಸುಲಭವಲ್ಲ. ಹಾಗೆಯೇ ಮಕ್ಕಳ ಮನಸ್ಸಿನಲ್ಲಿ ಸ್ಥಾನ ಪಡೆಯುವುದು ಕೂಡ ಹೇಳಿದಷ್ಟು ಸರಳ ಕೆಲಸವಲ್ಲ. ಈ ಮಹಿಳೆ ಕೂಡ 13 ವರ್ಷದ ಮಗಳಿರುವ ಸಿಂಗಲ್ ವ್ಯಕ್ತಿ ಜೊತೆ ಮದುವೆಯಾಗಿದ್ದು. ಏನೆಲ್ಲ ಆಯ್ತು ಎಂಬುದನ್ನು ವಿವರಿಸಿದ್ದಾಳೆ.
ಮಹಿಳೆ (Woman ) ಕಥೆ ಏನು? : ಈ ಮಹಿಳೆಗೆ ಮದುವೆ (Marriage) ಯಾಗಿ ಮೂರು ವರ್ಷ ಕಳೆದಿದೆ. 37 ವರ್ಷದ ಮಹಿಳೆ ಮದುವೆಯಾಗದಿರುವ ನಿರ್ಧಾರ ತೆಗೆದುಕೊಂಡಿದ್ದಳಂತೆ. ಆದ್ರೆ ಒಂದು ಅಂಗಡಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬ ಆಕೆ ಬಾಳಿನ ದಾರಿ ಬದಲಿಸಿದ್ದನಂತೆ. ಅಂಗಡಿಯಲ್ಲಿದ್ದ ವ್ಯಕ್ತಿ ಸ್ಯಾನಿಟರಿ (Sanitary) ಪ್ಯಾಡ್ ತೆಗೆದುಕೊಳ್ಳಲು ಕಷ್ಟಪಡ್ತಿದ್ದನಂತೆ. ಆತನಿಗೆ ಮಹಿಳೆ ಸ್ಯಾನಿಟರಿ ಪ್ಯಾಡ್ ತೆಗೆದುಕೊಳ್ಳಲು ಸಹಾಯ ಮಾಡಿದ್ದಳಂತೆ.
ಈ ವೇಳೆ ಸುನಿಲ್ (Sunil) ತನ್ನ ನೋವನ್ನು ಮಹಿಳೆಗೆ ಹೇಳಿದ್ದನಂತೆ. ಪತ್ನಿ ಕಳೆದುಕೊಂಡು ಕೆಲವೇ ತಿಂಗಳು ಕಳೆದಿದೆ. ಮಗಳಿಗೆ 13 ವರ್ಷ. ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇನೆ ಎಂದು ಆತ ಹೇಳಿದ್ದನಂತೆ. ಸುನಿಲ್ ಗೆ ಸಮಾಧಾನ ಹೇಳಿದ್ದ ಮಹಿಳೆ ನಿಧಾನವಾಗಿ ಆತನ ಸ್ನೇಹ (Friendship) ಗಳಿಸಿದ್ದಳಂತೆ.
ಇಬ್ಬರು ಹೆಚ್ಚು ಆಪ್ತರಾಗ್ತಾ ಹೋಗಿದ್ದರಂತೆ. ಸ್ನೇಹ ಪ್ರೀತಿಗೆ ತಿರುಗಲು ಶುರುವಾಗಿತ್ತಂತೆ. ಇಬ್ಬರ ಮನಸ್ಥಿತಿ ಒಂದೇ ರೀತಿ ಇತ್ತಂತೆ. ಇಬ್ಬರು ಒಂದೇ ಧಾರಾವಾಹಿ ಇಷ್ಟಪಡ್ತಿದ್ದರಂತೆ. ಆಗಾಗ ಭೇಟಿಯಾಗಿ ಮಾತನಾಡ್ತಿದ್ದ ಸುನಿಲ್ ಮೇಲೆ ನನಗೆ ಮನಸ್ಸಾಗಿತ್ತು ಎನ್ನುತ್ತಾಳೆ ಮಹಿಳೆ. ಇಬ್ಬರು ಪ್ರೀತಿಸುತ್ತಿದ್ದೇವೆ ಎಂಬುದನ್ನು ಅರಿತಿದ್ದೆವು ಎನ್ನುತ್ತಾಳೆ. ಅಪರೂಪಕ್ಕೆ ಸುನಿಲ್ ಮಗಳನ್ನು ಕೂಡ ಮಹಿಳೆ ಭೇಟಿಯಾಗ್ತಿದ್ದಳಂತೆ. ಆದ್ರೆ ಮಗಳಿಗೆ ಮಹಿಳೆ ಇಷ್ಟವಾಗ್ತಿರಲಿಲ್ಲವಂತೆ. ಹದಿಹರೆಯಲ್ಲಿರುವ ಮಕ್ಕಳ ಸ್ವಭಾವ ಗೊತ್ತಿರುವ ಕಾರಣ ಅದನ್ನು ಎದುರಿಸಲು ನಾನು ಸಿದ್ಧವಾಗಿದ್ದೆ ಎನ್ನುತ್ತಾಳೆ ಮಹಿಳೆ.
ಲೈಂಗಿಕ ಕ್ರಿಯೆಯೂ ತಲೆ ನೋವು ತಂದು ಬಿಟ್ಟರೆ? ಇದ್ಯಾಕೆ ಹೀಗಾಗುತ್ತೆ?
ಮಗಳ ಮನವರಿಕೆ : ಸ್ನೇಹ ಪ್ರೀತಿಗೆ ತಿರುಗಿ ಒಂದು ವರ್ಷವಾದ್ಮೇಲೆ ಇಬ್ಬರೂ ಮದುವೆ ನಿರ್ಧಾರಕ್ಕೆ ಬಂದಿದ್ದರಂತೆ. ಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿತ್ತಂತೆ. ಆದ್ರೆ ಮದುವೆ ಎಂಬ ಶಬ್ಧ ಕೇಳ್ತಿದ್ದಂತೆ ಸುನಿಲ್ ಮಗಳು ಕೋಪಗೊಳ್ಳುತ್ತಿದ್ದಳಂತೆ. ಒಂದು ದಿನ ಸುನಿಲ್ ಮಗಳ ಜೊತೆ ಮಾತನಾಡುವ ನಿರ್ಧಾರಕ್ಕೆ ಬಂದ ಮಹಿಳೆ, ನಿನಗೆ ಏನು ಸಮಸ್ಯೆಯಾಗ್ತಿದೆ ಎಂದು ನೇರವಾಗಿ ಕೇಳಿದ್ದಳಂತೆ.
ಭಯ ಎಂಬ ಉತ್ತರವನ್ನು ನೀಡಿದ್ದ ಮಗಳು, ತಂದೆ ನನ್ನ ತಾಯಿಯನ್ನು ಮರೆಯುತ್ತಿದ್ದಾನೆ ಎಂಬ ಭಯ ಶುರುವಾಗಿದೆ ಎಂದಿದ್ದಳಂತೆ. ತಂದೆ ತಾಯಿಯನ್ನು ಮರೆತಿಲ್ಲ ಎಂಬುದನ್ನು ಅರ್ಥ ಮಾಡಿಸುವುದು ನನ್ನ ಕರ್ತವ್ಯವಾಗಿತ್ತು ಎನ್ನುವ ಮಹಿಳೆ, ಆಕೆಗೆ ತಿಳುವಳಿಕೆ ಹೇಳಿದ್ದಳಂತೆ. ಮೂವರು ಒಟ್ಟಿಗೆ ಇರುವಾಗ, ಕಳೆದು ಹೋದ ತಾಯಿ ಬಗ್ಗೆಯೇ ಹೆಚ್ಚು ಮಾತನಾಡ್ತಿದ್ದರಂತೆ. ಇದ್ರಿಂದ ಖುಷಿಯಾಗಿದ್ದ ಮಗಳು ಮದುವೆಗೆ ಒಪ್ಪಿಗೆ ನೀಡಿದ್ದಳಂತೆ.
ಲೈಂಗಿಕ ಜೀವನ ಚೆನ್ನಾಗಿರ್ಲಿ ಅಂತ ಮಹಿಳೆಯರು ವಯಾಗ್ರ ಸೇವಿಸಬಹುದಾ ?
ಮದುವೆ ನಂತ್ರ ಬದಲಾಯ್ತಾ ಜೀವನ ? : ಮದುವೆ ನಂತ್ರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎನ್ನುತ್ತಾಳೆ ಮಹಿಳೆ. ಈಗ ನಮ್ಮದು ಸುಂದರ ಸಂಸಾರ. ಮಗಳು ನನ್ನನ್ನು ಅರ್ಥ ಮಾಡಿಕೊಂಡಿದ್ದಾಳೆ. ನಾವಿಬ್ಬರು ಸ್ನೇಹಿತರಂತೆ ಇದ್ದೆವೆ. ಮಲತಾಯಿ ಎನ್ನುವ ಭಾವನೆ ಎಲ್ಲಿಯೂ ನುಸುಳಿಲ್ಲ. ಆಕೆ ನನ್ನ ಯಾವುದೇ ಕೆಲಸಕ್ಕೆ ಅಡ್ಡಿಯಾಗಿಲ್ಲ. ಮೃದು ಸ್ವಭಾವದ, ಬುದ್ಧಿವಂತ ಮಗಳನ್ನು ನಾನು ಪಡೆದಿದ್ದೇನೆ ಎಂದು ಮಹಿಳೆ ಗರ್ವದಿಂದ ಹೇಳ್ತಾಳೆ.