ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ. ಪತ್ನಿಯ ಇನ್‌ಸ್ಟಾಗ್ರಾಂ ಸಂದೇಶಗಳನ್ನು ನೋಡಿದ ಪತಿ, ಈ ಕೊಲೆ ಸಂಚನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೈದರಾಬಾದ್‌: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ರಸ್ತೆ ಅಪಘಾತದಲ್ಲಿ ಪತಿಯನ್ನು ಕೊಲ್ಲಲು ಸಂಚು ಹೂಡಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನೇ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ

ಮಹಬೂಬಾಬಾದ್ ಜಿಲ್ಲೆಯ ಚಿಲಕೋಡು ಗ್ರಾಮದ ಗಾಡೆ ರಾಜೇಶ್ವರ ರಾವ್ ಎಂಬುವವರು ತಮ್ಮ ಪತ್ನಿ ಭವಾನಿಯ ಮೊಬೈಲ್ ಪರೀಕ್ಷಿಸಿದಾಗ ಈ ಭೀಕರ ಸಂಚು ಬಯಲಾಗಿದೆ. ಪತ್ನಿ ಕೋರಿಯರ್ ಡೆಲಿವರ್ ಏಜೆಂಟ್‌ ಆಗಿರುವ ತನ್ನ ಪ್ರಿಯಕರ ಸೈದುಲು ಎಂಬಾತನಿಗೆ ‘ನನ್ನ ಗಂಡನನ್ನು ಕೊಲ್ಲು. ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಕೊಲೆ ನಂತರ ಇಬ್ಬರೂ ಇದನ್ನು ಅಪಘಾತ ಎಂದು ಬಿಂಬಿಸಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಳೆದ ವರ್ಷ ಗರ್ಭಿಣಿಯಾಗಿದ್ದಾಗಲೇ ಅಕ್ರಮ ಸಂಬಂಧ ಇಟ್ಕೊಂಡು ಸಿಕ್ಕಿಬಿದ್ದ ಗಂಡ: ಒಂದೇ ವರ್ಷದಲ್ಲಿ ಸಾಧಿಸಿದ ನಟಿ

ರಕ್ಷಣೆ ಕೇಳಿದ ಗಂಡ 

ಸಂಚು ತಿಳಿಯುತ್ತಿದ್ದಂತೆಯೇ ರಾಜೇಶ್ವರ ರಾವ್ ಪೊಲೀಸರನ್ನು ಸಂಪರ್ಕಿಸಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಕೊ*ಲೆ ಯತ್ನ ಹಾಗೂ ಸಂಚಿನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ: ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು?