Studio One Golden Icon Awards: ಜೀವನದಲ್ಲಿ ಎದುರಾದ ಕಷ್ಟಗಳ ನಡುವೆಯೂ ಛಲ ಬಿಡದೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದಕ್ಕೆ ತಮಿಳು ನಟಿ, ಮೇಕಪ್ ಆರ್ಟಿಸ್ಟ್ ಅಷ್ಮಿತಾ ಅವರ ಪಯಣವೇ ಸಾಕ್ಷಿ
Makeup Artist Asmitha | Studio One Golden Icon Awards: ಜೀವನದಲ್ಲಿ ಎದುರಾದ ಕಷ್ಟಗಳ ನಡುವೆಯೂ ಛಲ ಬಿಡದೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದಕ್ಕೆ ತಮಿಳು ನಟಿ, ಮೇಕಪ್ ಆರ್ಟಿಸ್ಟ್ ಅಷ್ಮಿತಾ ಅವರ ಪಯಣವೇ ಸಾಕ್ಷಿ. ವೈಯಕ್ತಿಕ ಜೀವನದಲ್ಲಿ ಎದುರಾದ ಸವಾಲುಗಳ ನಡುವೆಯೂ ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ ಅಸ್ಮಿತಾ, ಇದೀಗ ಪ್ರತಿಷ್ಠಿತ Studio One Golden Icon Award ಸ್ವೀಕರಿಸಿ ಸಂಭ್ರಮಿಸಿದ್ದಾರೆ.
ಮೇಕಪ್ ಹಾಗೂ ಬ್ಯೂಟಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಸ್ಮಿತಾ, ಈ ವಿಶೇಷ ಪ್ರಶಸ್ತಿ ತಮ್ಮ ವೃತ್ತಿಜೀವನದ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಸಂತಸವನ್ನು ಹಂಚಿಕೊಂಡಿರುವ ಅವರು, ತಮ್ಮ ಯಶಸ್ಸಿನ ಹಿಂದೆ ನಿಂತ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಅಸ್ಮಿತಾ ಅವರ ಪಯಣ ಅಷ್ಟು ಸುಲಭವಾಗಿರಲಿಲ್ಲ. ವೈಯಕ್ತಿಕ ಜೀವನದಲ್ಲಿ ಎದುರಾದ ಕಷ್ಟಗಳು ಮತ್ತು ಸವಾಲುಗಳ ನಡುವೆಯೂ ಅವರು ತಮ್ಮ ವೃತ್ತಿಯನ್ನು ಮುಂದುವರಿಸಿದರು. ವಿಶೇಷವಾಗಿ ಅಸ್ಮಿತಾ ಅವರ ಜೀವನದಲ್ಲಿ ಅತ್ಯಂತ ಕಠಿಣ ಸಮಯ ಎದುರಾಗಿದ್ದು, ಅವರು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎನ್ನಲಾಗಿದೆ. ಆ ಸಮಯದಲ್ಲಿ ಪತಿ ವಿಷ್ಣು ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದುಬಂದಿದ್ದು, ಇದು ಅಸ್ಮಿತಾ ಅವರಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಆಗಾ ಅಷ್ಮಿತಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡು “ನನ್ನ ರಕ್ತ, ಬೆವರಿನ ಶ್ರಮ, ಅವಿರತ ಪರಿಶ್ರಮದಿಂದ ಕಟ್ಟಿಕೊಂಡಿರುವ ನನ್ನ ಬ್ರಾಂಡ್‌ನ ರಕ್ಷಣೆಗಾಗಿ, ಸುತ್ತಮುತ್ತಲಿನ ಘಟನೆಗಳ ವಿರುದ್ಧ ಈಗ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಇದು ಸಹಾನುಭೂತಿಗಾಗಲೀ ಅಥವಾ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಾಗಲೀ ಅಲ್ಲ. ಇದು ನಾನು ವರ್ಷಗಳಿಂದ ಕಟ್ಟಿಕೊಂಡಿರುವುದನ್ನು ರಕ್ಷಿಸಿಕೊಳ್ಳುವುದರ ಕುರಿತು ಈ ಪೋಸ್ಟ್ ಹಂಚಿಕೊಳ್ತಿದ್ದೇನೆ” ಎಂದಿದ್ದರು.
ಈಗ ಒಂದೆಡೆ ಗರ್ಭಾವಸ್ಥೆ, ಮತ್ತೊಂದೆಡೆ ವೈಯಕ್ತಿಕ ಬದುಕಿನಲ್ಲಿನ ನೋವು—ಈ ಎರಡನ್ನೂ ಎದುರಿಸುತ್ತಲೇ ಅವರು ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು.ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ತಮ್ಮ ಕನಸುಗಳನ್ನು ಬಿಟ್ಟುಕೊಡಬಾರದು ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇವರು 10,000ಕ್ಕೂ ಹೆಚ್ಚು ಜನರಿಗೆ ಮೇಕಪ್ ತರಬೇತಿ ನೀಡಿದ್ದಾರೆ. ಇದೀಗ Studio One Golden Icon Award ದೊರೆತಿರುವುದು ಅಸ್ಮಿತಾ ಅವರ ವೃತ್ತಿಜೀವನಕ್ಕೆ ಮತ್ತೊಂದು ದೊಡ್ಡ ಗೌರವವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮ್ಮನ್ನು ಬೆಂಬಲಿಸಿದ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬ್ಯೂಟಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿರುವ ಅಸ್ಮಿತಾ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಈ ಪ್ರಶಸ್ತಿ ತಮ್ಮ ಕೆಲಸಕ್ಕೆ ಸಿಕ್ಕಿರುವ ವಿಶೇಷ ಮನ್ನಣೆ ಎಂದು ಭಾವುಕರಾಗಿದ್ದಾರೆ.
ವೈಯಕ್ತಿಕ ಬದುಕಿನ ಸವಾಲುಗಳನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು ವೃತ್ತಿಜೀವನದಲ್ಲಿ ಮುನ್ನಡೆದ ಅಸ್ಮಿತಾ ಅವರ ಕಥೆ ಇದೀಗ ಅನೇಕರಿಗೆ ಸ್ಫೂರ್ತಿಯಾಗಿದೆ. ಒಂದೇ ವರ್ಷದಲ್ಲಿ ವೈಯಕ್ತಿಕ ನೋವಿನ ನಡುವೆಯೂ ವೃತ್ತಿಯಲ್ಲಿ ಸಾಧನೆ ಮಾಡಿ ಪ್ರಶಸ್ತಿ ಗೆದ್ದಿರುವ ಅಸ್ಮಿತಾ, ಕಷ್ಟದ ಸಮಯದಲ್ಲೂ ಕನಸುಗಳನ್ನು ಬೆನ್ನಟ್ಟುವವರಿಗೆ ಮಾದರಿಯಾಗಿದ್ದಾರೆ. ಇಂದು ಅಸ್ಮಿತಾ ಅವರು ಪಡೆದಿರುವ Studio One Golden Icon Award ಕೇವಲ ಒಂದು ಪ್ರಶಸ್ತಿಯಲ್ಲ; ಹಲವು ಸವಾಲುಗಳನ್ನು ಎದುರಿಸಿ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅವರ ಪರಿಶ್ರಮ ಮತ್ತು ಬದ್ಧತೆಗೆ ಸಿಕ್ಕಿರುವ ಗೌರವವಾಗಿದೆ.
