Husband wife Relationship: ಗಂಡ-ಹೆಂಡತಿ ನಡುವೆ ಪ್ರೀತಿ ಕಡಿಮೆಯಾದರೆ, ಅದು ಒಟ್ಟಾರೆಯಾಗಿ ಅವರ ದಾಂಪತ್ಯದ ಮೇಲೂ ಪರಿಣಾಮ ಬೀರುತ್ತದೆ. ಒಂದು ವೇಳೆ ಅವರಿಬ್ಬರು ದೈಹಿಕವಾಗಿ ದೂರವಾದರೆ, ಅದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೆಲ್ಲಾ ಸಮಸ್ಯೆಗಳು ಬರಬಹುದು ಎಂಬುದು ನಿಮಗೆ ತಿಳಿದಿದೆಯೇ?
ಗಂಡ-ಹೆಂಡತಿ ಮಧ್ಯೆ (ಕನಿಷ್ಠ 50 ವರ್ಷ ವಯಸ್ಸಿನವರೆಗೆ) ದೈಹಿಕ ಸಂಬಂಧ ತೀರಾ ಕಡಿಮೆಯಾದರೆ ಏನಾಗುತ್ತೆ ಗೊತ್ತಾ?
ಹಾಗಾದರೆ ಏನೇನು ಸಮಸ್ಯೆ ಆಗಲಿವೆ?
1. ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹೆಚ್ಚು ತಿನ್ನುವ ಅಭ್ಯಾಸ ಶುರುವಾಗಬಹುದು. ಇದಕ್ಕೂ ಅದಕ್ಕೂ ಏನು ಸಂಬಂಧ ಅಂತ ಹಲವರು ಕೇಳಬಹುದು. ಆದರೆ, ಇದರಿಂದ ಬಿಪಿ, ಫ್ಯಾಟಿ ಲಿವರ್, ಶುಗರ್, ಮತ್ತು ಹೃದಯದ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗುತ್ತದೆ.
2. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕೂಡ ದೊಡ್ಡದಾಗಿ, ಕೊನೆಗೆ ಡೈವೋರ್ಸ್‌ವರೆಗೆ ಹೋಗಬಹುದು. ಹೆಚ್ಚಿನ ವಿಚ್ಛೇದನ ಪ್ರಕರಣಗಳಿಗೆ ದಾಂಪತ್ಯದಲ್ಲಿ ಸಖ್ಯತೆ ಇಲ್ಲದಿರುವುದೇ ಮುಖ್ಯ ಕಾರಣ. ದೈಹಿಕ ಅನ್ಯೋನ್ಯತೆ ಚೆನ್ನಾಗಿದ್ದರೆ, ಸಣ್ಣಪುಟ್ಟ ಜಗಳಗಳು ಗಾಳಿಯಲ್ಲಿ ತೂರಿಹೋಗುತ್ತವೆ. ಅದು ಇಲ್ಲದಿದ್ದರೆ, ಚಿಕ್ಕ ಸಮಸ್ಯೆಗಳೂ ಬೆಟ್ಟದಂತೆ ಕಾಣಿಸುತ್ತವೆ.
3. ಮಾನಸಿಕ ಒತ್ತಡ (Stress) ಹೆಚ್ಚಾಗುತ್ತದೆ.
4. ದೇಹದ ರೋಗನಿರೋಧಕ ಶಕ್ತಿ (Immunity) ದುರ್ಬಲವಾಗುತ್ತದೆ.
5. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ.
6. ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮದುವೆಯೇ ಬೇಡ ಎನ್ನುವವರನ್ನು ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ. ಇದು ಪ್ರಕೃತಿಯ ನಿಯಮ, ಮನುಷ್ಯ ಅದನ್ನು ಪಾಲಿಸಲೇಬೇಕು. (ಲಕ್ಷಕ್ಕೆ ಒಬ್ಬಿಬ್ಬರಿಗೆ ಇದು ಅನ್ವಯಿಸದೇ ಇರಬಹುದು).
ಇಲ್ಲವಾದರೆ, ಜೀವನದಲ್ಲಿ ಎಲ್ಲವೂ ಏರುಪೇರಾಗುವುದು ಗ್ಯಾರಂಟಿ!


