Asianet Suvarna News Asianet Suvarna News

ಎಲ್ಲಿ ಮುಟ್ಟಿದರೆ ಓಕೆ, ಮತ್ತೆಲ್ಲಿ ಮುಟ್ಟಿದರೆ ತಪ್ಪು, ಮಕ್ಕಳಲ್ಲಿ ಅರಿವು ಮೂಡಿಸೋದು ಹೇಗೆ?

ಮಕ್ಕಳನ್ನು ಬೆಳೆಸುವಲ್ಲಿ ಪಾಲಕರ ಹೊಣೆ ಹೆಚ್ಚಿರುತ್ತದೆ. ಸಣ್ಣಪುಟ್ಟ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮಕ್ಕಳಿಗೆ ಅವರ ದೇಹದ ಅಂಗಗಳ ಬಗ್ಗೆ ಸರಿಯಾದ ಜ್ಞಾನವಿದ್ದಲ್ಲಿ, ಆಪತ್ತಿನ ಸಮಯದಲ್ಲಿ ಏನು ಮಾಡ್ಬೇಕು ಎಂಬುದು ಗೊತ್ತಿದ್ದಲ್ಲಿ ಅವರ ರಕ್ಷಣೆ ಸುಲಭವಾಗುತ್ತದೆ.
 

How To Educate Children About Private Parts roo
Author
First Published Nov 29, 2023, 4:51 PM IST

ಮಕ್ಕಳಿಗೆ ಪ್ರತಿಯೊಂದು ವಿಷ್ಯವನ್ನು ಹಂತ ಹಂತವಾಗಿ ಕಲಿಸುವ ಅಗತ್ಯವಿರುತ್ತದೆ. ದೊಡ್ಡವರ ವಿಷ್ಯವನ್ನು ಮಕ್ಕಳ ಮುಂದೆ ಹೇಳಿದ್ರೆ ಅವರಿಗೆ ಅರ್ಥವಾಗೋದಿಲ್ಲ. ಅವರ ದೇಹದ ಅಂಗಗಳ ಬಗ್ಗೆ ಅವರಿಗೆ ಸರಿಯಾದ ಜ್ಞಾನ ಇರೋದಿಲ್ಲ. ಪಾಲಕರು ಮಕ್ಕಳಿಗೆ ಆಹಾರ ತಿನ್ನೋದು, ದೇವರಿಗೆ ನಮಸ್ಕಾರ ಮಾಡೋದು, ಹಿರಿಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ತಿಳಿಸಿದಂತೆ ದೇಹದ ಭಾಗಗಳ ಬಗ್ಗೆಯೂ ಸರಿಯಾಗಿ ತಿಳಿಸಬೇಕು. 

ಅನೇಕ ಪಾಲಕರು (Parents) ಮಕ್ಕಳ ಕಣ್ಣು, ಕಿವಿ, ಮೂಗು ಸೇರಿದಂತೆ ಎಲ್ಲ ಭಾಗದ ಬಗ್ಗೆ ಮಾಹಿತಿ ನೀಡಿದ್ರೂ ಖಾಸಗಿ ಅಂಗ (Private part) ವನ್ನು ಬಿಡ್ತಾರೆ. ಅದರ ಬಗ್ಗೆ ಮಕ್ಕಳಿಗೆ ಹೇಳಬಾರದು ಎಂದು ಭಾವಿಸ್ತಾರೆ. ಮತ್ತೆ ಕೆಲವರು ಕಿವಿಗೆ ಕಿವಿ, ಮೂಗಿಗೆ ಮೂಗು ಅಂತಾ ಮಕ್ಕಳಿಗೆ ತಿಳಿಸಿ ಖಾಸಗಿ ಅಂಗವನ್ನು ಮಾತ್ರ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದು ಮಕ್ಕಳಿಗೆ ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ. ಎಲ್ಲ ಅಂಗದಂತೆ ಖಾಸಗಿ ಅಂಗವೂ ನಮ್ಮ ದೇಹದ ಭಾಗವೇ ಆಗಿರುವ ಕಾರಣ ನಾವು ಮಕ್ಕಳಿಗೆ ಚಿಕ್ಕವರಿರುವಾಗ್ಲೇ ಅದರ ಹೆಸರು ಹೇಳಿ ಪರಿಚಯಿಸುವುದು ಒಳ್ಳೆಯದು.

ನನ್ನ ಜೊತೆ ಯಾರೂ ಇಲ್ಲ, ಪೋಷಕರ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಕಣ್ಣೀರಿಟ್ಟ 4 ವರ್ಷದ ಬಾಲಕ!

ಮಕ್ಕಳಿಗೆ ಖಾಸಗಿ ಅಂಗದ ಬಗ್ಗೆ ಹೀಗೆ ತಿಳಿಸಿ : ಮಗು ತುಂಬಾ ಚಿಕ್ಕದಿರುವಾಗ ಅಂದ್ರೆ ಒಂದುವರೆ ಎರಡು ವರ್ಷದಲ್ಲಿರುವಾ ಅದಕ್ಕೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ನೀವು ಪ್ರತಿಯೊಂದು ದೇಹದ ಭಾಗವನ್ನು ಹೆಸರಿಸ್ತಾ ಸ್ನಾನ ಮಾಡಿಸಿ. ಇದು ತೋಳು, ಇದು ಹೊಟ್ಟೆ ಹೀಗೆ ಪ್ರತಿಯೊಂದು ದೇಹದ ಭಾಗವನ್ನು ಹೆಸರಿಸುವ ಸಂದರ್ಭದಲ್ಲಿ ಖಾಸಗಿ ಅಂಗದ ಭಾಗವನ್ನೂ ಹೇಳಿ. ಅದಕ್ಕೆ ಸುಸ್ಸು ಮಾಡುವ ಜಾಗವೆಂದೋ ಶೇಮ್ ಶೇಮ್ ಜಾಗವೆಂದೂ ಹೇಳುವ ಬದಲು ಪೆನಸ್, ಬಮ್, ವಜೈನಾ ಎಂದು ನೀವು ಅವರಿಗೆ ನಿಜವಾದ ಹೆಸರನ್ನು ತಿಳಿಸಬೇಕು. 

ನೀವು ಮಕ್ಕಳಿಗೆ ಯಾವುದು ಖಾಸಗಿ ಅಂಗಗಳು ಎಂಬುದನ್ನು ತಿಳಿಸುವುದು ಮುಖ್ಯವಾಗುತ್ತದೆ. ಬಮ್, ಪೆನಸ್, ವಜೈನಾ ಎಲ್ಲವೂ ಖಾಸಗಿ ಅಂಗವಾಗಿದ್ದು ಅದನ್ನು ನೀವು ಸ್ವಿಮ್ ಸೂಟ್ ಮಾದರಿಯಲ್ಲಿ ಕಲಿಸಬಹುದು. ಸ್ವಿಮ್ ಸೂಟ್ ಕವರ್ ಮಾಡುವ ದೇಹದ ಎಲ್ಲ ಭಾಗಗಳು ಖಾಸಗಿ ಅಂಗವೆಂದು ಸುಲಭವಾಗಿ ನೀವು ಮಕ್ಕಳಿಗೆ ಹೇಳಬಹುದು.

ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ದಾಂಪತ್ಯ ಜೀವನವೇ ಹಾಳಾಗುತ್ತಂತೆ!

ಖಾಸಗಿ ಅಂಗವನ್ನು (Private parts) ಯಾರು ಟಚ್ ಮಾಡಬಹುದು ಮತ್ತೆ ಯಾವಾಗ ಎನ್ನುವ ಮಾಹಿತಿಯನ್ನು ಮಕ್ಕಳಿಗೆ ನೀಡುವುದು ಬಹಳ ಮುಖ್ಯವಾಗುತ್ತದೆ. ತಂದೆ – ತಾಯಿ ಹೊರತುಪಡಿಸಿ ಯಾರೂ ಖಾಸಗಿ ಅಂಗವನ್ನು ಟಚ್ ಮಾಡಲು ಅನುಮತಿ ನೀಡಬೇಡಿ ಎಂದು ಮಕ್ಕಳಿಗೆ ಹೇಳಬೇಕು. ತಂದೆ – ತಾಯಿ ಕೂಡ ಸ್ನಾನ ಮಾಡಿಸುವಾಗ ಅಥವಾ ಕ್ಲೀನಿಂಗ್ ಸಮಯದಲ್ಲಿ ಮಾತ್ರ ಟಚ್ ಮಾಡ್ಬಹುದು ಎಂಬುದನ್ನು ಕೂಡ ಮಕ್ಕಳಿಗೆ ತಿಳಿಸಿ. 

ಇಷ್ಟೆ ಅಲ್ಲದೆ ವೈದ್ಯರು ನಿಮ್ಮ ಖಾಸಗಿ ಅಂಗವನ್ನು ಪರೀಕ್ಷೆ ಮಾಡುವ ವೇಳೆ ಮಾತ್ರ ಟಚ್ ಮಾಡಬಹುದು ಎಂಬುದನ್ನು ನೀವು ಮಕ್ಕಳಿಗೆ ತಿಳಿಸಿ ಹೇಳಬೇಕು.  ಒಂದ್ವೇಳೆ ಬೇರೆಯವರು ಟಚ್ ಮಾಡಿದ್ರೆ ಏನು ಮಾಡ್ಬೇಕು ಎಂಬ ತಿಳುವಳಿಕೆಯನ್ನು ನೀವು ಮಕ್ಕಳಿಗೆ ನೀಡಬೇಕಾಗುತ್ತದೆ. ಯಾವುದೇ ವ್ಯಕ್ತಿ ನಿಮ್ಮ ಖಾಸಗಿ ಅಂಗವನ್ನು ಸ್ಪರ್ಶಿಸಿದಾಗ ನೀವು ಅವರ ಕೈ ದೂರ ತಳ್ಳಿ. ನನ್ನ ಖಾಸಗಿ ಅಂಗವನ್ನು ಟಚ್ ಮಾಡ್ಬೇಡಿ ಎಂದು ಜೋರಾದ ಧ್ವನಿಯಲ್ಲಿ ಹೇಳಿ. ಆಗ ಸುತ್ತಮುತ್ತಲಿನವರ ಗಮನ ನಿಮ್ಮ ಮೇಲೆ ಬೀಳುತ್ತದೆ ಎಂಬುದನ್ನು ಮಕ್ಕಳಿಗೆ ಹೇಳಬೇಕು. ಹಾಗೆಯೇ ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಪಾಲಕರ ಬಳಿ ಬಂದು ಇದನ್ನು ಧೈರ್ಯವಾಗಿ ಹೇಳ್ಬೇಕು ಎಂಬ ಜ್ಞಾನವನ್ನು ಮಕ್ಕಳಿಗೆ ನೀಡಿ.

Latest Videos
Follow Us:
Download App:
  • android
  • ios