ನನ್ನ ಜೊತೆ ಯಾರೂ ಇಲ್ಲ, ಪೋಷಕರ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಕಣ್ಣೀರಿಟ್ಟ 4 ವರ್ಷದ ಬಾಲಕ!
ನನ್ನ ಜೊತೆ ಯಾರೂ ಇಲ್ಲ, ಮನೆಯಲ್ಲಿ ನಾನೊಬ್ಬನೇ ಆಟವಾಡುತ್ತೇನೆ. ತಂದೆ ಎಂದರೆ ನನಗೆ ಭಯ, ಪ್ರೀತಿಯಿಂದ ಮಾತಾಡಿಲ್ಲ, ತಾಯಿಗೆ ನಾನು ಇಷ್ಟವಿಲ್ಲ ಎಂದು ಕಣ್ಣೀರಿಟ್ಟ ಬಾಲಕನ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಎಂತವಹರ ಮನಸ್ಸು ಕರಗಿಸುತ್ತದೆ.
ಸೌತ್ ಕೊರಿಯಾ(ನ.27) ಆದುನಿಕ ಯುಗದಲ್ಲಿ ಪತಿ-ಪತ್ನಿ ಇಬ್ಬರೂ ಉದ್ಯೋಗ ಮಾಡಬೇಕಾದ ಅನಿವಾರ್ಯತೆ. ಆದರೆ ಮಕ್ಕಳಿಗೆ ಒಂದಿಷ್ಟು ಮೌಲ್ಯಯುತ ಸಮಯ ನೀಡಲು ಸಾಧ್ಯವಾಗದ ಪರಿಸ್ಥಿತಿ. ಕೆಲದ ಸಮಯ, ಒತ್ತಡದ ನಡುವೆ ಮಕ್ಕಳು ಪೋಷಕರಿದ್ದರು ಅನಾಥವಾಗಿಬಿಡುವ ಹಲವು ಘಟನೆಗಳು ವರದಿಯಾಗಿದೆ. ಇದೀಗ ದಕ್ಷಿಣ ಕೊರಿಯಾದ 4ವರ್ಷದ ಬಾಲಕ ವಿಡಿಯೋ ಒಂದು ಬಾರಿ ವೈರಲ್ ಆಗಿದೆ. ಈ ಬಾಲಕನ ಮಾತುಗಳು ಎಂತ ಕಲ್ಲು ಮನಸ್ಸನ್ನು ಕರಗಿಸುತ್ತದೆ. ಈ ಬಾಲಕನ ಪೋಷಕರು ವಿಡಿಯೋ ನೋಡಿದರೆ ಮನಸ್ಸು ಬದಲಾಯಿಸುವ ಸಾಧ್ಯತೆ ಇದೆ. ನನ್ನನ್ನು ತಂದೆ ಪ್ರೀತಿಯಿಂದ ಕರೆದಿಲ್ಲ. ತಾಯಿಗೆ ನಾನು ಇಷ್ಟವಿಲ್ಲ. ಮನೆಯಲ್ಲಿ ಒಬ್ಬನೆ ಆಟವಾಡುತ್ತೇನೆ ಎಂದು ಹೇಳುತ್ತಾ ದುಃಖ ತಡೆಯಲಾಗದೆ ಕಣ್ಣೀರಿಟ್ಟ 4 ವರ್ಷದ ಬಾಲಕನ ವಿಡಿಯೋ ನೋಡಲೇಬೇಕು.
ಮಕ್ಕಳ ಬಾಲ್ಯದಲ್ಲಿ ಅವರ ಜೊತೆ ಸೂಕ್ತ ಸಮಯ ಕಳೆಯದಿದ್ದರೆ ಪರಿಣಾಮ ಅತೀ ಘೋರ ಅನ್ನೋದು ಈ ವಿಡಿಯೋ ಸಾರಿ ಸಾರಿ ಹೇಳುತ್ತಿದೆ. ಇದು ದಕ್ಷಿಣ ಕೊರಿಯಾದಲ್ಲಿ ಖಾಸಗಿ ಟಿವಿ ವಾಹನಿ ನಡೆಸುವ ಮಕ್ಕಳ ಕಾರ್ಯಕ್ರಮಲ್ಲಿ ಪ್ರಸಾರವಾದ ವಿಡಿಯೋ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕೆ ಸೇರಿದಂತೆ ಹಲವು ಅಡೆ ತಡೆಗಳ ನಡುವೆ ಬೆಳೆಯುವ ಮಕ್ಕಳ ಕುರಿತ ಕಾರ್ಯಕ್ರಮ ಇದು. ಮೈ ಗೋಲ್ಡನ್ ಕಿಡ್ಸ್ ಅನ್ನೋ ಈ ಕಾರ್ಯಕ್ರಮದಲ್ಲಿ ವಿವಿಧ ಭಾಗದ ಮಕ್ಕಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 4 ವರ್ಷದ ಸಾಂಗ್ ಇಯೋ ಜುನ್ ಅನ್ನೋ ಪುಟ್ಟ ಬಾಲಕ ಕೂಡ ಪಾಲ್ಗೊಂಡಿದ್ದ.
ಮನೆಗೆ ಬೆಂಕಿ ಹಚ್ಚಿದ್ದ ಹಮಾಸ್ ಉಗ್ರರು, ಕಿಟಕಿಯಲ್ಲಿ ಮಗು ಮಲಗಿಸಿ ಬದುಕಳಿದ ಇಸ್ರೇಲ್ ಕುಟುಂಬ!
ಈ ಕಾರ್ಯಕ್ರಮದಲ್ಲಿ ತೀರ್ಪುಗಾರರು, ಆತಿಥಿಗಳು ಮಕ್ಕಳಲ್ಲಿ ಕೆಲ ಸಾಮಾನ್ಯ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗೆ ಸಾಂಗ್ ಇಯೋ ಜುನ್‌ಗೂ ಕೇಳಿದ್ದಾರೆ. ಮೊದಲ ಪ್ರಶ್ನೆಯಾಗಿ ಪೋಷಕರ ಪೈಕಿ ಯಾರನ್ನು ಅತೀಯಾಗಿ ಇಷ್ಟಪಡುತ್ತೀಯಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಬಾಲಕ, ನನಗೆ ಗೊತ್ತಿಲ್ಲ, ನಾನು ಮನೆಯಲ್ಲಿ ಒಬ್ಬನೆ, ನನ್ನ ಜೊತೆ ಯಾರೂ ಆಟವಾಡುವುದಿಲ್ಲ ಎಂದಿದ್ದಾನೆ. ಇದೇ ವೇಳೆ ಈ ಪುಟ್ಟ ಬಾಲಕ ಮನೆಯಲ್ಲಿ ಆಡವಾಡುವ ಕೆಲ ವಿಡಿಯೋಗಳನ್ನು ತೋರಿಸಲಾಗಿದೆ.
ನಿನ್ನ ತಂದೆಯ ಕುರಿತು ಹೇಳು, ತಂದೆ ಎಂದರೆ ನನಗೆ ಭಯ ಎಂದಿದ್ದಾನೆ. ನಿನ್ನ ತಂದೆಯಿಂದ ನೀನು ಏನು ಬಯಸುತ್ತಿದ್ದಿ? ಈ ಪ್ರಶ್ನೆಗೆ ಅಷ್ಟೇ ಪ್ರಬುದ್ಧ ಉತ್ತರ ನೀಡಿದ್ದಾನೆ. ನನ್ನನ್ನು ಪೀತಿಯಿಂದ ಕರೆಯುವ, ಮಾನಾಡಿಸಬೇಕು, ಹೇಗೆಂದರೆ ಜುನಾ ಎಂದು ಕರೆಯಬೇಕು ಎಂದಿದ್ದಾನೆ. ನಿನ್ನ ತಾಯಿ ಕುರಿತು ಪ್ರಶ್ನೆಗೆ, ತಾಯಿಗೆ ನನ್ನ ಇಷ್ಟವಿಲ್ಲ ಎಂದು ದುಃಖ ನಿಯಂತ್ರಿಸಲು ಸಾಧ್ಯವಾಗದೆ ಅತ್ತಿದ್ದಾನೆ. ಇದೇ ವೇಳೆ ಒಂದು ನಿಮಿಷ ಎಂದು ಹೇಳಿ ಅತ್ತಿದ್ದಾನೆ. ಪೋಷಕರಿಂದ ಏನು ಬಯಸುತ್ತಿ ಎಂಬ ಪ್ರಶ್ನೆಗೆ ನನ್ನ ಜೊತೆ ಆಟವಾಡಬೇಕು, ನನ್ನ ಜೊತೆ ಹೆಚ್ಚಿನ ಸಮಯ ಕಳೆಯಬೇಕು ಎಂದಿದ್ದಾನೆ. ಈ ವಿಡಿಯೋ ನೋಡಿದ ಹಲವರ ಕಣ್ಣಾಲಿ ತೇಲಿಬಂದಿದೆ.
ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು
ಈ ಕಾರ್ಯಕ್ರಮದಲ್ಲಿ ಪೋಷಕರನ್ನು ಕರೆಸಲಾಗಿದೆ. ಇವರಿಗೆ ಇಬ್ಬರು ಮಕ್ಕಳು. ಮತ್ತೊಬ್ಬಳು 6 ತಿಂಗಳ ಪುಟಾಣಿ ಮಗು. ಹೀಗಾಗಿ ಕೆಲಸ ಹಾಗೂ ಮಕ್ಕಳ ಪಾಲನೆ ಕಷ್ಟವಾಗುತ್ತಿದೆ. 6 ತಿಂಗಳ ಮಗುವಾಗಿರುವ ಕಾರಣ ಹೆಚ್ಚಿನ ಸಮಯೆ ಮಗುವಿನ ಆರೈಕೆಯಲ್ಲಿ ಹೋಗುತ್ತಿದೆ. ಇನ್ನು ಉದ್ಯೋಗ, ಮನೆಗೆಲಸದಿಂದ 4 ವರ್ಷದ ಮಗನ ಜೊತೆ ಕಾಲಕಳೆಯಲು ಸಮಯ ಸಿಗುತ್ತಿಲ್ಲ. ತನ್ನ ಜೊತೆ ಸಮಯ ಕಳೆಯುತ್ತಿಲ್ಲ, ಸರಿಯಾಗಿ ಮಾತನಾಡುತ್ತಿಲ್ಲ ಅನ್ನೋ ಕಾರಣಕ್ಕೆ ಈ ಪುಟ್ಟ, ಪೋಷಕರಿಗೆ ನನ್ನ ಇಷ್ಟವಿಲ್ಲ ಎಂದು ಭಾವಿಸಿದೆ. ಈತನ ಉತ್ತರ ನೋಡಿದ ಪೋಷಕರ ಕಣ್ಮೀರಿಟ್ಟಿದ್ದಾರೆ. ಇಬ್ಬರ ಜೊತೆಗೂ ಹೆಚ್ಚಿನ ಸಮಯ ಕಳೆಯುವುದಾಗಿ ಭರವಸೆ ನೀಡಿದ್ದಾರೆ.