ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ದಾಂಪತ್ಯ ಜೀವನವೇ ಹಾಳಾಗುತ್ತಂತೆ!
ಸರಿಯಾಗಿ ನಿದ್ರೆ ಮಾಡಿಲ್ಲಾಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ನಿಮಗೆ ಗೊತ್ತೆ ಇದೆ. ಆದರೆ ನಿದ್ರೆಯ ಕೊರತೆಯು ಸಂಬಂಧಗಳನ್ನು ಮುರಿಯುವಂತೆ ಮಾಡಬಹುದು ಅನ್ನೋದು ಗೊತ್ತಾ?
ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ಆರಾಮವಾಗಿರಲು ಎಂಟು ಗಂಟೆಗಳ ಸುಖ ನಿದ್ದೆ ಬೇಕೇ ಬೇಕು. ನೀವು ರಾತ್ರಿ ಉತ್ತಮ ನಿದ್ರೆ (good sleep) ಪಡೆಯದಿದ್ದರೆ, ಅದು ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀರುತ್ತೆ ಅನ್ನೋದು ಗೊತ್ತು. ಆದರೆ ಸರಿಯಾಗಿ ನಿದ್ರೆ ಮಾಡದೇ ಇದ್ದರೆ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಅನ್ನೋದು ಗೊತ್ತಾ?. ಹೌದು ನಿದ್ರೆಯ ಕೊರತೆಯು ನಿಮ್ಮ ಸಂಬಂಧದಲ್ಲಿ (relationship) ಒತ್ತಡವನ್ನು ಹೇಗೆ ಹೆಚ್ಚಿಸುತ್ತದೆ ಎಂದು ತಿಳಿಯೋಣ.
ಕೋಪ ಹೆಚ್ಚಾಗುತ್ತದೆ: ನಿದ್ರೆಯ ಕೊರತೆಯು ನಿಮ್ಮ ಕೋಪವನ್ನು (angry) ಹೆಚ್ಚಿಸುತ್ತದೆ ಎಂದು ಹೊಸ ಸಂಶೋಧನೆ ಸೂಚಿಸುತ್ತದೆ. ಹೌದು ಸರಿಯಾಗಿ ನಿದ್ರೆ ಮಾಡಿಲ್ಲ, ಅಂದ್ರೆ ಬೆಳಗ್ಗೆ ಎದ್ದೇಳುವಾಗ ಮೂಡ್ ಚೆನ್ನಾಗಿರೋದಿಲ್ಲ. ಮೂಡ್ ಚೆನ್ನಾಗಿಲ್ಲ ಅಂದ್ರೆ ಕೋಪ ಬಂದೇ ಬರುತ್ತೆ.
ಇದು ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ: ಕೋಪ ಮತ್ತು ನಕಾರಾತ್ಮಕ ಮನಸ್ಥಿತಿ (negative mood) ಸಂಬಂಧದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಸರಿಯಾಗಿ ನಿದ್ರೆ ಮಾಡದೇ ಬೆಳಗ್ಗೆ ಮೂಡ್ ಸರಿ ಇಲ್ಲದಾಗ, ಸಂಗಾತಿ ಜೊತೆ ಮಾತಿಗೆ ಮಾತು ಬೆಳೆದು ಜಗಳವಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.
ಸಂಶೋಧನೆ ಏನು ಹೇಳಿದೆ?: 700 ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಸಂಶೋಧನೆಯು ನಿದ್ರೆಯ ಕೊರತೆಯು ಸಂಬಂಧದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ. ಎಲ್ಲಾದಕ್ಕೂ ಜಗಳ ಮಾಡುತ್ತಲೇ ಇದ್ರೆ ಕ್ವಾಲಿಟಿ ಲೈಫ್ ಎಲ್ಲಿರುತ್ತೆ?
ರೊಮ್ಯಾನ್ಸ್ ಕಡಿಮೆಯಾಗುತ್ತದೆ: ಸಾಕಷ್ಟು ನಿದ್ರೆ ಪಡೆಯದ ಜನರು ತಾಜಾ ಮನಸ್ಥಿತಿಯಲ್ಲಿ ಉಳಿಯುವುದಿಲ್ಲ , ಅವರ ಮೂಡ್ ಸ್ವಿಂಗ್ (mood swing) ಆಗುತ್ತಲೇ ಇರುತ್ತೆ. ಯಾವುದೇ ವಿಷಯದಲ್ಲಿ ಆಸಕ್ತಿ ಇಲ್ಲದೇ ಇದ್ದರೆ ಜೋಡಿಗಳ ನಡುವೆ ರೊಮ್ಯಾನ್ಸ್ ಹೆಚ್ಚಾಗೋದಾದ್ರೂ ಹೇಗೆ?
ಸಂಗಾತಿಯ ಮೇಲೆ ಪರಿಣಾಮ ಬೀರುತ್ತದೆ: ನಿದ್ರೆಯ ಕೊರತೆಯಿಂದಾಗಿ, (sleeplessness) ನಕಾರಾತ್ಮಕ ಭಾವನೆಗಳು ಪ್ರಾಬಲ್ಯ ಸಾಧಿಸಲು ಪ್ರಾರಂಭಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ನಿಮ್ಮ ಮನಸ್ಥಿತಿಯು ನೀವು ಮಾತನಾಡುವ ವಿಧಾನದಲ್ಲಿ ಪ್ರತಿಫಲಿಸುತ್ತದೆ, ಇದು ಸಂಗಾತಿಯ ಮೇಲೆ ಪರಿಣಾಮ ಬೀರುತ್ತದೆ.
ನಿದ್ರೆಯ ಕೊರತೆಯಿಂದಾಗಿ ಏನೇನು ಆಗುತ್ತೆ?: ಇನ್ನು ನಿದ್ರೆ ಕೊರತೆಯಿಂದಾಗಿ ಹಲವಾರು ಸಮಸ್ಯೆಗಳು ಸಹ ಕಾಡುತ್ತವೆ. ಅವುಗಳಲ್ಲಿ ನವಜಾತ ಶಿಶು, ಒತ್ತಡ ಅಥವಾ ಖಿನ್ನತೆ ಕೂಡ ಇವೆ. ಈ ಎಲ್ಲಾ ಸಮಸ್ಯೆಗಳು ಕಾಡಿದರೆ, ಸಂಸಾರ ಚೆನ್ನಾಗಿರಲು ಸಾಧ್ಯವಿಲ್ಲ.
ಹೇಗೆ ಸುಧಾರಿಸುವುದು?: ಉತ್ತಮ ನಿದ್ರೆಗಾಗಿ, ಆರೋಗ್ಯಕರ ಆಹಾರವನ್ನು (healthy food) ತೆಗೆದುಕೊಳ್ಳಿ, ಕೆಫೀನ್ ಪ್ರಮಾಣವನ್ನು ಕಡಿಮೆ ಮಾಡಿ, ವ್ಯಾಯಾಮ ಮಾಡಿ. ಅಷ್ಟೇ ಅಲ್ಲ ಸಮಸ್ಯೆಯನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಸಂಬಂಧವು ಹಾಳಾಗಿ ಹೋಗುವ ಸಾಧ್ಯತೆ ಹೆಚ್ಚಾಗಿದೆ.