ಪತಿಯ ಚಿಂತೆಗೆ ಕಾರಣವಾಯ್ತು ಪತ್ನಿಯ ದಿರಿಸು!
ಅಲ್ಲಾ ಸ್ವಾಮಿ,ಚಂದದ ಪತ್ನಿ ಬೇಕು ಆದ್ರೆ ಬೇರೆಯವರ ಕಣ್ಣಿಗೆ ಚಂದ ಕಾಣ್ಬಾರದು. ಹೊರಗೆ ಹೋಗುವಾಗ ಸುಂದರ ಡ್ರೆಸ್ ಧರಿಸಬಾರದು ಅಂದ್ರೆ ಹೇಗೆ? ಅಷ್ಟಕ್ಕೂ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಹೋಗುವ ಮಹಿಳೆಯರೆಲ್ಲ ಇನ್ನೊಂದು ಸಂಬಂಧ ಹೊಂದಿರ್ತಾರಾ? ಈ ಪತಿಮಹಾರಾಯನ ಗೋಳು ಕೇಳಿದ್ರೆ ನೀವೂ ಯಪ್ಪಾ ಅಂತೀರಾ.
ದಾಂಪತ್ಯದಲ್ಲಿ ಜಗಳ, ಮುನಿಸು (Anger) ಬಂದ್ರೆ ಅದನ್ನು ಸಂಭಾಳಿಸಬಹುದು. ದಾಂಪತ್ಯಕ್ಕೆ ಅನುಮಾನ (Doubt) ಎಂಬ ಭೂತ ಅಂಟಿಕೊಂಡ್ರೆ ಅದನ್ನು ತೊಲಗಿಸಲು ಸಾಧ್ಯವಿಲ್ಲ. ಇದ್ರಿಂದ ದಾಂಪತ್ಯ ಸುಖ ಸರ್ವನಾಶವಾಗುತ್ತದೆ. ಒಮ್ಮೆ ಸಂಗಾತಿ ಬಗ್ಗೆ ಮನಸ್ಸಿನಲ್ಲಿ ಅನುಮಾನ ಮೂಡಿದ್ರೆ ಇಡೀ ಜೀವನ ಹಾಳಾದಂತೆ. ಅನೇಕ ಪುರುಷರು ಸುಂದರ (Beautiful) ಹುಡುಗಿಯ ಹುಡುಕಾಟ ನಡೆಸುತ್ತಾರೆ. ಹುಡುಗಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನೂರಾರು ವಧು ಪರೀಕ್ಷೆ (Exam)ನಡೆಸಿರುತ್ತಾರೆ. ಎಲ್ಲರಿಗಿಂತ ಚೆಂದದ ಹುಡುಗಿಯನ್ನು ಮದುವೆಯಾಗಿ ಬರ್ತಾರೆ. ಆರಂಭದಲ್ಲಿ ಪತ್ನಿಯ ಉಡುಗೆ-ತೊಡುಗೆ ಚೆನ್ನಾಗಿ ಕಾಣುತ್ತೆ. ಆದ್ರೆ ದಿನ ಕಳೆದಂತೆ ಪತ್ನಿ ಸುಂದರವಾಗಿರುವುದೇ ದೊಡ್ಡ ಸಮಸ್ಯೆಯಾಗಲು ಶುರುವಾಗುತ್ತೆ. ನಮ್ಮ ಸಮಾಜದಲ್ಲಿ ಇಂಥ ಅನೇಕ ಪುರುಷರಿದ್ದಾರೆ. ವಿವಾಹದ ನಂತ್ರವೂ ಸುಂದರ ಹುಡುಗಿಯರನ್ನು ಕದ್ದು ನೋಡುವ ಅವರು ಬೇರೆಯವರ ಕಣ್ಣಿಗೆ ನನ್ನ ಹೆಂಡತಿ ಮಾತ್ರ ಚೆನ್ನಾಗಿ ಕಾಣುವಂತಿಲ್ಲ ಎಂಬ ನಿಯಮ ಮಾಡಿಕೊಂಡಿರ್ತಾರೆ. ಒಂದು ವೇಳೆ ಪತ್ನಿ ಸುಂದರವಾಗಿ ಡ್ರೆಸ್ ಮಾಡಿಕೊಂಡು ಹೊರಗೆ ಹೋದ್ರೆ ಆಕೆ ಮೇಲೆ ಅನುಮಾನ ಶುರುವಾಗುತ್ತದೆ. ಇದೇ ಕಾರಣಕ್ಕೆ ಪತ್ನಿಯನ್ನು ಹಿಂಸಿಸುವ ಅನೇಕ ಗಂಡಸರಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಪತಿಯೊಬ್ಬ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಿಷ್ಯಗಳನ್ನು ಹೇಳಿಕೊಳ್ತಿದ್ದಾರೆ. ಅದ್ರಲ್ಲಿ 31 ವರ್ಷದ ವ್ಯಕ್ತಿ ಕೂಡ ಒಬ್ಬ. ಆತನ ಸಮಸ್ಯೆ ವಿಚಿತ್ರವಾಗಿದೆ. ಆತನ ಪತ್ನಿಗೆ 30 ವರ್ಷವಂತೆ. ಪತ್ನಿ ತುಂಬಾ ಸುಂದರವಾಗಿದ್ದಾಳೆ. ಇವರಿಗೆ ಇಬ್ಬರು ಮಕ್ಕಳು. ಎರಡು ವರ್ಷದ ಮಗಳು, ನಾಲ್ಕು ವರ್ಷದ ಮಗ. ಪತಿ ಹಾಗೂ ಪತ್ನಿ ಇಬ್ಬರು ಒಟ್ಟಿಗೆ ಹೊರಗೆ ಹೋಗುವುದು ಅಪರೂಪ. ಆದ್ರೆ ಪತ್ನಿ ಸುಂದರವಾಗಿ ಡ್ರೆಸ್ ಮಾಡಿಕೊಂಡು ಹೊರಗೆ ಹೋಗುವುದೇ ಇವನ ತಲೆಯಲ್ಲಿ ಅನುಮಾನದ ಬೀಜ ಮೊಳಕೆಯೊಡೆಯಲು ಕಾರಣವಾಗಿದೆ.
COMPARING WITH OTHERS: ಹೋಲಿಸಿ ಕೊಂಡರೆ ನೆಮ್ಮದಿ ಕಳ್ಕೊಳ್ಳಬೇಕಷ್ಟೇ!
ಹೆಂಡತಿ ಸುಂದರವಾಗಿ ಕಾಣೋದೇ ಸಮಸ್ಯೆ : ಆತನ ಪ್ರಕಾರ ಆತನ ಪತ್ನಿ ಎಂದೂ ಮಕ್ಕಳ ಜೊತೆ ಶಾಪಿಂಗ್ ಗೆ ಹೋಗಿಲ್ಲವಂತೆ. ಮಕ್ಕಳನ್ನು ಶಾಪಿಂಗ್ ಗೆ ಅಥವಾ ಹೊರಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಈತನದು. ಆಕೆ ಫ್ರೆಂಡ್ಸ್ ಜೊತೆ ಸುತ್ತಾಡಲು ಹೋಗ್ತಾಳಂತೆ. ಫ್ರೆಂಡ್ಸ್ ಜೊತೆ ಹೋಗುವ ವೇಳೆ ಸುಂದರ ಡ್ರೆಸ್ ಅಥವಾ ಮಾಡರ್ನ್ ಡ್ರೆಸ್ ಧರಿಸಿ ಹೋಗ್ತಾಳಂತೆ. ಆಗ ಪತ್ನಿ ತುಂಬಾ ಅಂದವಾಗಿ ಕಾಣ್ತಾಳೆ ಎನ್ನುತ್ತಾನೆ ಪತಿ. ಪತ್ನಿ ಚಂದ ಕಾಣ್ತಾಳೆ ಎಂಬ ಖುಷಿ ಆತನಿಗಿಲ್ಲ. ಹೊರಗೆ ಹೋಗುವಾಗ ಇಷ್ಟು ಸುಂದರವಾಗಿ ಡ್ರೆಸ್ ಮಾಡಿಕೊಂಡು ಹೋಗುವ ಪತ್ನಿಗೆ ಇನ್ನೊಂದು ಅಫೇರ್ ಇದೆ ಎಂಬುದೇ ಅನುಮಾನ.
ಆಕೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂಬ ಅನುಮಾನ ನನಗೆ ಶುರುವಾಗಿದೆ. ಆಕೆ ನನ್ನ ಜೊತೆ ಹೊರಗೆ ಬರುವುದಿಲ್ಲ. ಸ್ನೇಹಿತರ ಜೊತೆ ಸದಾ ಸುತ್ತಾಡುತ್ತಾಳೆ. ಆದ್ರೆ ಆ ಸ್ನೇಹಿತರು ಯಾರು ಎಂಬ ಅನುಮಾನ ನನಗಿದೆ. ಬೇರೆ ಸಂಬಂಧ ಹೊಂದಿರುವ ಪತ್ನಿ, ಆತನನ್ನು ಸೆಳೆಯಲು ಇಷ್ಟು ಸುಂದರವಾಗಿ ಅಲಂಕಾರ ಮಾಡಿಕೊಳ್ತಾಳಾ ಎಂಬ ಪ್ರಶ್ನೆ ಆತನಿಗಿದೆಯಂತೆ.
ಸೊಸೆಯನ್ನು ಸಾಯಿಸಿ ಬಿಡೋವಷ್ಟು ಸಿಟ್ಟು ಬರುತ್ತೆ, ಯಾಕ್ಹೀಗೆ?
ತಜ್ಞರ ಸಲಹೆ : ಪತ್ನಿ ಸುಂದರವಾಗಿ ಡ್ರೆಸ್ ಮಾಡಿಕೊಳ್ತಾಳೆ ಎಂಬ ಕಾರಣಕ್ಕೆ ಆಕೆಯನ್ನು ಅನುಮಾನಿಸುವುದು ಮೂರ್ಖತನ ಎನ್ನುತ್ತಾರೆ ತಜ್ಞರು. ಆಕೆ ಸ್ನೇಹಿತೆಯರ ಮುಂದೆ ಮಿಂಚಲು ಅಥವಾ ಪತಿಯ ಗಮನ ಸೆಳೆಯಲು ಒಳ್ಳೆಯ ಡ್ರೆಸ್ ಧರಿಸಿರಬಹುದು. ಇಲ್ಲವೆ ಕೆಲ ಮಹಿಳೆಯರಿಗೆ ಅಲಂಕಾರ ಇಷ್ಟ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಪತ್ನಿ ಡ್ರೆಸ್ ಗೆ ಹೆಚ್ಚು ಆದ್ಯತೆ ನೀಡ್ಬಹುದು. ಮೊದಲು ಅನುಮಾನ ತೆಗೆದುಹಾಕಿ ಆಕೆಗೆ ಸಮಯ ನೀಡಿ, ಆಕೆ ಜೊತೆ ನೀವು ನೈಟ್ಔಟ್ ಹೋಗಿ ಪತ್ನಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ ಎನ್ನುತ್ತಾರೆ ತಜ್ಞರು.