Comparing with Others: ಹೋಲಿಸಿ ಕೊಂಡರೆ ನೆಮ್ಮದಿ ಕಳ್ಕೊಳ್ಳಬೇಕಷ್ಟೇ!
ಹೋಲಿಕೆ ಮಾಡಿಕೊಳ್ಳುವುದು ಎಂದಿಗೂ ಸಲ್ಲದು. ಅದು ವ್ಯಕ್ತಿತ್ವವನ್ನು ನಾಶ ಮಾಡಿ, ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಹೋಲಿಕೆಯಿಂದ ಏನೆಲ್ಲ ಅನಾಹುತವಾಗಬಲ್ಲದು ಗೊತ್ತೇ?
ಸಾಮಾಜಿಕ (Social) ಬದುಕಿನಲ್ಲಿ (Life) ನಿಮ್ಮನ್ನು ನೀವು ಸದಾಕಾಲ ಇತರರೊಂದಿಗೆ ಹೋಲಿಕೆ (Compare) ಮಾಡಿಕೊಳ್ಳುತ್ತೀರಾ? ಪ್ರತಿಭೆ (Talent), ವ್ಯಕ್ತಿತ್ವ (Personality) ಅಥವಾ ದೈಹಿಕ ಸೌಂದರ್ಯ, ಸದೃಢತೆಗಳ ಕುರಿತು ಹೋಲಿಸಿಕೊಂಡು ಕುಗ್ಗುತ್ತೀರಾ? ಹಾಗಿದ್ದರೆ ಈ ಸ್ವಭಾವಕ್ಕೆ ಈಗಲೇ ಬ್ರೇಕ್ (Break) ಹಾಕಿ. ಹೋಲಿಸಿಕೊಳ್ಳುವ ಗುಣ ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ತಜ್ಞರ ಪ್ರಕಾರ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದರಿಂದ ದುಃಖ ಆವರಿಸುತ್ತದೆ. ದುಃಖಕ್ಕೆ ಬೇರೆ ಕಾರಣವೇ ಬೇಕಾಗಿಲ್ಲ. ಸಾಮಾನ್ಯರಂತೆ ಖುಷಿಯಾಗಿರಲು ಸಾಧ್ಯವೇ ಆಗುವುದಿಲ್ಲ. ಸಾಮಾಜಿಕ ಪರಿಸ್ಥಿತಿಗಳಲ್ಲಿ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಸ್ವಭಾವದವರು ಕ್ರಮೇಣ ತಮ್ಮಷ್ಟಕ್ಕೇ ತಾವು ನಕಾರಾತ್ಮಕವಾಗಿ ಮಾತಾಡಿಕೊಳ್ಳಲು ಶುರು ಮಾಡುತ್ತಾರೆ. ಹಾಗೂ ತೀವ್ರ ಒತ್ತಡಕ್ಕೀಡಾಗುತ್ತಾರೆ.
ಯುವರ್ಸ್ ವೈಸ್ಲಿ (Your’sWisely) ಎನ್ನುವ ಆನ್ ಲೈನ್ (Online) ತಾಣದಲ್ಲಿ ಇತ್ತೀಚೆಗೆ ಪ್ರೇರಣಾತ್ಮಕ (Motivational) ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ನಿಮ್ಮ ಚರ್ಮ (Skin), ಬಾಹ್ಯ ರೂಪದ ಬಗ್ಗೆ ಕಂಫರ್ಟ್ (Comfort) ಆಗಿರಬೇಕೆಂಬುದನ್ನು ಈ ವಿಡಿಯೋ ತಿಳಿಸುತ್ತದೆ. ಇದರಲ್ಲಿ ಕಾಗೆಯೊಂದು ಶ್ವೇತ (White) ಬಣ್ಣದ ಹಂಸವೊಂದನ್ನು ನೀನು ಖುಷಿಯಾಗಿದ್ದೀಯಾ ಎಂದು ಕೇಳುತ್ತದೆ. ಆಗ ಹಂಸ ಸಮಾಧಾನವಿಲ್ಲದುದನ್ನು ತಿಳಿಸಿ ಪಾರಿವಾಳದ ಕಡೆಗೆ ಕೈ ತೋರುತ್ತದೆ. ಆದರೆ, ಪಾರಿವಾಳ ನವಿಲಿನ್ನು ತೋರಿಸುತ್ತದೆ. ಆದರೆ, ಆ ನವಿಲು ತನ್ನ ಸೌಂದರ್ಯದಿಂದಲೇ ಅಪಾಯ ಎದುರಿಸುತ್ತಿರುತ್ತದೆ. ಅದನ್ನು ಮಾರುಕಟ್ಟೆಗೆ ಮಾರಲಾಗುತ್ತದೆ. ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಪಾಠವಾಗಿದೆ.
ಖಿನ್ನತೆಗೆ ಪ್ರಾಣಾಯಾಮ ಬೆಸ್ಟ್ ಮದ್ದು
ಹೋಲಿಕೆಯಿಂದ ಏನೆಲ್ಲ ಅನಾಹುತ?
• ನಿಮ್ಮ ಕೆಲಸದ (Work) ಬಗ್ಗೆ ಫೋಕಸ್ (Focus) ಮಾಡುವುದು ಸಾಧ್ಯವಾಗುವುದಿಲ್ಲ. ನೀವು ಎಷ್ಟೇ ಸಮರ್ಥರಿದ್ದರೂ ಕೆಲಸದ ವಿಚಾರದಲ್ಲಿ ಹೋಲಿಕೆ ಮಾಡಿಕೊಂಡರೆ ಗುಣಮಟ್ಟದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರಗತಿ (Development) ಕುಂಠಿತವಾಗುತ್ತದೆ.
• ಇತರರ ಜೀವನವನ್ನು ಹೆಚ್ಚಾಗಿ ಗಮನಿಸಲು ಶುರು ಮಾಡುತ್ತೇವೆ. ಪ್ರತಿಯೊಬ್ಬರಿಗೂ ತಮ್ಮ ಜೀವನಕ್ಕಿಂತ ಮುಖ್ಯವಾದುದು ಬೇರೆ ಯಾವುದೂ ಇಲ್ಲ. ಆದರೆ, ಅದಕ್ಕೆ ಪುರುಸೊತ್ತಿರದೆ ಇತರರ ಜೀವನದ ಬಗ್ಗೆ ಯೋಚಿಸುತ್ತ ನಮ್ಮ ಶಕ್ತಿ ವ್ಯಯವಾಗುತ್ತಿರುತ್ತದೆ.
• ಯಾರೊಂದಿಗಾದರೂ ನಮ್ಮನ್ನು ಹೋಲಿಕೆ ಮಾಡಿಕೊಂಡರೆ ನಾವೇನು ಅಲ್ಲವೋ ಆ ವ್ಯಕ್ತಿತ್ವದ ಮುಖವಾಡ ಧರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಇತರರ ದಟ್ಟ ಪ್ರಭಾವಕ್ಕೆ ಬಿದ್ದಾಗಲೂ ಆಗುತ್ತದೆ. ಆದರೆ, ಅದು ಸಕಾರಾತ್ಮಕವಾಗಿದ್ದಾಗ ಸರಿ. ಕೆಲವು ದಿನಗಳ ಮಟ್ಟಿಗೆ ಆ ಪ್ರಭಾವದ ಗುಂಗಿನಲ್ಲೇ ವರ್ತಿಸುತ್ತಿರುತ್ತೇವೆ. ಆದರೆ, ಹೋಲಿಕೆಯಿಂದ ಈ ಗುಣ ಬಂದರೆ ಅದು ಅಪಾಯಕಾರಿ. ಏಕೆಂದರೆ, ಈ ಗುಣ ವ್ಯಕ್ತಿತ್ವವನ್ನೇ ನಾಶ ಮಾಡುತ್ತದೆ. “ಜನರು ನಮ್ಮನ್ನು ನೋಡಿ, ಗುರುತಿಸಬೇಕು, ನಾವು ಇರುವುದಕ್ಕಿಂತ ಚೆನ್ನಾಗಿದ್ದೇವೆಂದು ಅಂದುಕೊಳ್ಳಬೇಕು. ಅವರಿಗಿಂತ ಚೆನ್ನಾಗಿರಬೇಕು, ಇವರಿಗಿಂತ ಹೆಚ್ಚು ಹಣ ಮಾಡಬೇಕು, ಆಕೆಯಂತೆಯೇ ಚಿನ್ನ ಕೊಳ್ಳಬೇಕು, ಅಂಥದ್ದೇ ಕಾರು ಕೊಳ್ಳಬೇಕುʼ ಎನ್ನುವ ಹೋಲಿಕೆಗಳಿಗೆ ಮಿತಿಯೇ ಇರುವುದಿಲ್ಲ. ಈ ಗುಣ ಕ್ರಮೇಣ ನಮ್ಮ ಉದ್ದೇಶವನ್ನೇ ಹಾಳು ಮಾಡಿ, ವ್ಯಕ್ತಿತ್ವವನ್ನೇ ನಾಶ ಮಾಡುತ್ತದೆ.
ಸಂಗಾತಿಯೊಂದಿಗಿರಲಿ ಆಧ್ಯಾತ್ಮಿಕ ಆಪ್ತತೆ
ಹೇಗೆ ಹೋಲಿಕೆ ಬಿಡಬೇಕು?
• ನೀವು ಯಾವುದಾದರೂ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದಾಗ ಅದನ್ನು ಮೆಚ್ಚಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ನಿಮ್ಮಷ್ಟಕ್ಕೇ ನೀವು ಗುರುತಿಸಿಕೊಂಡರೆ ಸಾಧ್ಯವಾಗುವುದಿಲ್ಲ. ಅದನ್ನು ಸಂಭ್ರಮಿಸಿ. ಇದರಿಂದ ನಿಮಗೆ ಇನ್ನಷ್ಟು ಪ್ರೇರಣೆ ಸಿಗುತ್ತದೆ.
• ನಿಮ್ಮ ಸಾಮರ್ಥ್ಯ (Ability) ಯಾವುದರಲ್ಲಿದೆ ಎಂದು ಗುರುತಿಸಿಕೊಳ್ಳಿ. ಪಾಲಕರ ಒತ್ತಾಯಕ್ಕೆ ಜೀವನದಲ್ಲಿ ಯಾವುದೋ ಶಿಕ್ಷಣ ಪಡೆದು, ಏನೋ ಕೆಲಸ ಮಾಡುತ್ತ ಹಳಹಳಿಸಬೇಕೆಂದಿಲ್ಲ. ನಿಮಗೆ ಖುಷಿ ಕಂಡಿದ್ದನ್ನು ಮಾಡುತ್ತ, ಅಂತಸ್ತು-ಘನತೆಗಳ ಹಂಗಿಲ್ಲದೆ ದುಡಿಯುವ ಅವಕಾಶ ನಿಮಗಿದ್ದೇ ಇದೆ. ಅದು ನೀಡುವ ಖುಷಿ (Happiness) ನಿಮ್ಮನ್ನು ಸದಾ ಜೀವಂತವಾಗಿಡುತ್ತದೆ.