ಸೊಸೆಯನ್ನು ಸಾಯಿಸಿ ಬಿಡೋವಷ್ಟು ಸಿಟ್ಟು ಬರುತ್ತೆ, ಯಾಕ್ಹೀಗೆ?
ಮಗನ ಮದುವೆಗೂ ಮುಂಚೆ ಆಕೆ ಬಗ್ಗೆ ಏನೂ ಅನಿಸುತ್ತಿರಲಿಲ್ಲ. ಆದರೆ ಮದುವೆ ಆದ ಮೇಲಿಂದ ಅವಳ ಮೇಲೆ ಅಸಹನೆ, ಸಿಟ್ಟು ಹೆಚ್ಚಾಗ್ತಿದೆ. ಅವಳಿಂದಾಗಿ ಲೈಫಲ್ಲಿ ನೆಮ್ಮದಿಯೇ ಹೋಗಿಬಿಟ್ಟಿದೆ. ಯಾಕೆ ಹೀಗಾಗ್ತಿದೆ?
ಪ್ರಶ್ನೆ: ನಾನೊಬ್ಬ ಗೃಹಿಣಿ (House wife). ವಯಸ್ಸು 54 ವರ್ಷ. ಎರಡು ವರ್ಷಗಳ ಕೆಳಗೆ ಗಂಡನನ್ನು (Husband) ಕಳೆದುಕೊಂಡೆ. ಅವರು ಹೋದಾಗಿನಿಂದ ಮಗನ ಮದುವೆಯದ್ದೇ ಚಿಂತೆ ಆಗಿತ್ತು. ಯಾಕೋ ಗೊತ್ತಿಲ್ಲ, ಯಾವ ಹುಡುಗಿಯೂ ಅವನನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಕೊನೆಗೂ ಒಬ್ಬಳು ಒಳ್ಳೆಯ ಮನೆತನದ ಹುಡುಗಿ ನನ್ನ ಮಗನನ್ನು ಒಪ್ಪಿದ್ದಾಳೆ. ಮಗನಿಗೂ ಅವಳು ಇಷ್ಟವಾಗಿದ್ದಾಳೆ. ನನಗೂ ಹುಡುಗಿ ಓಕೆ ಅನಿಸಿದ ಕಾರಣ ತಕರಾರುಗಳಿಲ್ಲದೇ ಮಗನ ಮದುವೆಯಾಗಿದೆ. ಅಲ್ಲಿಯವರೆಗೂ ಬೇರೆಯೇ ಸಮಸ್ಯೆ ಕಾಡುತ್ತಿತ್ತು. ಆದರೆ ಸೊಸೆ ಬಂದಮೇಲೆ ಬೇರೊಂದು ಸಮಸ್ಯೆ ಶುರುವಾಗಿದೆ. ಅವಳ ಜೊತೆಗೆ ಹೊಂದಾಣಿಕೆ (Compatibility) ನನಗೆ ಸಾಧ್ಯವಾಗುತ್ತಿಲ್ಲ. ಹಾಗಂತ ಅದನ್ನು ಬಾಯ್ಬಿಟ್ಟು ಹೇಳಿ ಅವಳಿಗೆ ಹರ್ಟ್ ಮಾಡೋದನ್ನೂ ನನ್ನ ಮನಸ್ಸು ಒಪ್ಪಲ್ಲ. ಮನಸ್ಸಲ್ಲಿ ಸದಾ ಕೋಲಾಹಲ, ಅಸಹನೆ, ನೋವು. ಆದರೆ ಯಾವುದನ್ನೂ ಹೊರಗೆ ತೋರಿಸಲಾಗದೇ ಒಳಗೇ ಮುಚ್ಚಿಟ್ಟಿದ್ದೇನೆ. ಅವಳ ಎದುರು ತೋರಿಸಿಲ್ಲ. ಆದರೆ ನನಗೆ ಈ ಒಳಗಿನ ಬಿರುಗಾಳಿ ಸಹಿಸೋದಕ್ಕೆ ಆಗ್ತಿಲ್ಲ. ಅವಳಿಗೂ ನನಗೂ ಜಗಳವಾಗಿಲ್ಲ. ಹಾಗಂತ ನಮ್ಮ ನಡುವೆ ಪ್ರೀತಿಯೂ ಇಲ್ಲ. ಎಷ್ಟು ಬೇಕೋ ಅಷ್ಟೇ ನಮ್ಮಿಬ್ಬರ ಸಂಬಂಧ ಇದೆ. ಈ ಸಮಸ್ಯೆಯಿಂದ ಹೇಗೆ ಹೊರ ಬರಬೇಕೋ ತಿಳೀತಿಲ್ಲ.
ಉತ್ತರ: ಇದು ಮೇಲ್ನೋಟಕ್ಕೆ ನಿಮ್ಮೊಳಗಿನ ಇನ್ ಸೆಕ್ಯೂರಿಟಿ (Insecurity) ಫೀಲ್ ಅನಿಸುತ್ತೆ. ಈ ಅಭದ್ರತಾ ಭಾವವೇ ನಮ್ಮನ್ನು ಏನೇನದರಲ್ಲೋ ತೊಡಿಸಿಕೊಳ್ಳುವ ಹಾಗೆ ಮಾಡುತ್ತೆ. ನಿಮ್ಮ ಮಗನ ಸಂಬಂಧದ ಬಗ್ಗೆ ನೀವು ಹೇಳಿಲ್ಲ. ನಿಮ್ಮ ಮಗನ ನಡುವಿನ ಸಂಬಂಧ ಆತನ ಮದುವೆಗೆ ಮೊದಲು ಹೇಗಿತ್ತು, ಈಗ ಹೇಗಿದೆ ಅಂತ ಹೇಳಿದರೆ ನಿಮ್ಮ ಸಮಸ್ಯೆಯ ಆಳ ಗೊತ್ತಾಗುತ್ತಿತ್ತು. ಈ ಬಗ್ಗೆ ನೀವಾದರೂ ಒಮ್ಮೆ ಯೋಚಿಸಿ. ಮದುವೆ ಆದ ಮೇಲೆ ಮಗ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಅನ್ನುವ ಭಾವವೂ ನಿಮಗೆ ಸೊಸೆಯಲ್ಲಿ ಸಿಟ್ಟು ತಂದಿರಬಹುದು. ಜೊತೆಗೆ ನಿಮ್ಮ ಪತಿ ಅಗಲಿದ ಬಳಿಕ ಮನೆಯಲ್ಲಿ ನೀವು, ಮಗ ಮಾತ್ರ ಇದ್ದಿರಬೇಕು. ಆಗ ನಿಮ್ಮಿಬ್ಬರ ನಡುವೆ ಒಂದು ಹೊಂದಾಣಿಕೆ, ರ್ಯಾಪೋ ಕ್ರಿಯೇಟ್ ಆಗಿರುತ್ತೆ. ಮೂರನೆಯವರು ಬಂದಾಗ ಹಿಂದಿನ ಸ್ಥಿತಿ ಸಾಧ್ಯವಿಲ್ಲದೇ ಕಿರಿಕಿರಿ ಶುರುವಾಗಿರಬಹುದು. ಸ್ವಲ್ಪ ಆಳವಾಗಿ ಯೋಚಿಸಿದರೆ ನಿಮಗೇ ನಿಮ್ಮ ಸಮಸ್ಯೆಯ ಮೂಲ ಯಾವುದು ಅಂತ ಗೊತ್ತಾಗುತ್ತೆ. ಆದರೆ ನೀವು ಸ್ವತಂತ್ರವಾಗಿರಲು ಪ್ರಯತ್ನಿಸಿದಾಗ ಈ ಸಮಸ್ಯೆಯಿಂದ ಸ್ವಲ್ಪಮಟ್ಟಿಗೆ ಹೊರ ಬರಬಹುದು. ನಿಮ್ಮಿಷ್ಟದ ಯಾವುದಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಪ್ರಾಣಾಯಾಮ, ಧ್ಯಾನ ಮನಃಶಾಂತಿ ಹೆಚ್ಚಿಸುತ್ತದೆ. ಇನ್ನೊಂದು ಅಂದರೆ ಸೊಸೆಯ ಜೊತೆಗೆ ಮುಕ್ತವಾಗಿ ಮಾತನಾಡಿ. ನಮ್ಮ ಎಷ್ಟೋ ಸಂದೇಹ, ತಪ್ಪುತಿಳುವಳಿಕೆಗಳನ್ನು ಈ ಮಾತುಕತೆ, ಒಟ್ಟಿಗೆ ಕಳೆಯುವ ಸಮಯ ಪರಿಹರಿಸುತ್ತೆ. ಇದ್ಯಾವುದೂ ನಿಮ್ಮ ಸಮಸ್ಯೆ ನಿವಾರಿಸಿಲ್ಲ ಅಂದರೆ ಆಪ್ತ ಸಲಹೆ ಪಡೆಯುವುದು ಉತ್ತಮ.
Vishnu Solanki: ಮಗಳ ಸಾವು, ಅಪ್ಪನ ಸಾವುಗಳ ನಡುವೆಯೂ ಶತಕ ಸಿಡಿಸಿದ ಕ್ರಿಕೆಟ್ ಆಟಗಾರ!
ಪ್ರಶ್ನೆ: ನನ್ನ ವಯಸ್ಸು 55. ಕಳೆದ ವರ್ಷ ಗಂಡನಿಂದ ದೂರಾಗಿದ್ದೇನೆ. ನನಗೆ ಸ್ವತಂತ್ರವಾಗಿ ಬದುಕೋದು ಇಷ್ಟ. ಆದರೆ ಮಕ್ಕಳು ಇದಕ್ಕೆ ಒಪ್ಪುತ್ತಿಲ್ಲ. ನೀನು ನಮ್ಮ ಮನೆಗೆ ಬಂದಿರು ಅಂತಾರೆ, ಇಲ್ಲಾಂದರೆ ನಾವೇ ಬಂದು ನಿನ್ನ ಜೊತೆಗಿರುತ್ತೇವೆ ಎನ್ನುತ್ತಾರೆ. ಆದರೆ ಅವರ ಬಳಿ ನಾನು ಒಂಟಿಯಾಗಿರಬೇಕು ಅನ್ನೋದನ್ನು ಹೇಳೋಕೆ ಆಗ್ತಿಲ್ಲ. ಅವರೆಲ್ಲಾದರೂ ತಪ್ಪು ತಿಳಿದುಕೊಂಡರೆ ಅಂತ ಭಯ. ನನಗೆ ನನ್ನ ಪಾಡಿಗೆ ಬದುಕೋಕೆ ಆಗ್ತಿಲ್ಲ. ಇಲ್ಲೀವರೆಗೆ ಗಂಡ, ಮಕ್ಕಳು ಅಂತ ಒದ್ದಾಡಿದ್ದಾಯ್ತು, ಇನ್ನಾದರೂ ನಾನು ನನಗೆ ಬೇಕಾದಂತೆ ಬದುಕಬೇಕಲ್ವಾ?
ಉತ್ತರ: ಇದನ್ನು ನಿಮ್ಮ ಮಕ್ಕಳಿಗೆ ಮನದಟ್ಟು ಮಾಡೋದು ನಿಮ್ಮ ಕೈಯಲ್ಲೇ ಇದೆ. ನಿಮ್ಮ ಮನದಿಂಗಿತವನ್ನು ಅವರ ಬಳಿ ಹಂಚಿಕೊಳ್ಳಿ. ಸಾಧ್ಯವಾಗದಿದ್ದರೆ ಆಪ್ತರಿಂದ ಹೇಳಿಸಿ. ನಿಮ್ಮ ನಿರ್ಧಾರದಲ್ಲಿ ದೃಢತೆ ಇದ್ದರೆ ಯಾರೇನೂ ಮಾಡಲಾಗುವುದಿಲ್ಲ ಅನ್ನೋದು ಗೊತ್ತಿರಲಿ.
Extra Marital Affairs: ಗಂಡನಿಗೆ ಅನೈತಿಕ ಸಂಬಂಧ ಇದ್ರೆ ಗೊತ್ತಾಗೋದು ಹೇಗೆ ?