ಆಫೀಸಲ್ಲಿ ಮೀಟಿಂಗ್‌ನಲ್ಲಿದ್ದಾಗಲೇ ನಿಮಿರುವಿಕೆ, ಇಂಥ ಸಮಸ್ಯೆಗೇನು ಪರಿಹಾರ?
ಆಫೀಸ್‌ನಲ್ಲಿ ಸೀರಿಯಸ್ ಮೀಟಿಂಗ್ ಒಬ್ಬ ಉದ್ಯೋಗಿ ಮಾತ್ರ ಚಡಪಡಿಸುತ್ತಿದ್ದ. ಸಡನ್ನಾದ ನಿಮಿರುವಿಕೆ ಆತನನ್ನು ಮುಜುಗರಕ್ಕೆ ದೂಡಿತ್ತು.
ಆಫೀಸ್‌ನಲ್ಲಿ ಬಾಸ್ ಜೊತೆ ವಿಶೇಷ ಮೀಟಿಂಗ್. ಎಲ್ಲಾ ಉದ್ಯೋಗಿಗಳೂ ಮೀಟಿಂಗ್‌ಗೆ ಹಾಜರಾಗ್ತಾರೆ. ಆಗಷ್ಟೇ ಎಜುಕೇಶನ್ ಮುಗಿಸಿ ಕ್ಯಾಂಪಸ್‌ನಲ್ಲಿ ಸೆಲೆಕ್ಟ್ ಆದ ಹುಡುಗನೂ ಬಾಸ್ ಕರೆಯ ಮೇರೆಗೆ ಮೀಟಿಂಗ್‌ಗೆ ಬರ್ತಾನೆ. ಟಾರ್ಗೆಟ್, ಕಾಂಪಿಟೀಶನ್ ಬಗೆಗೆಲ್ಲ ಬಾಸ್ ಸೀರಿಯಸ್ ಆಗಿ ಮಾತನಾಡಲು ಶುರು ಮಾಡ್ತಾರೆ. ಶುರುವಲ್ಲಿ ಸರಿಯೇ ಇದ್ದ ಆ ಹೊಸ ಎಂಪ್ಲಾಯಿ ಚಡಪಡಿಸಲು ಶುರು ಮಾಡ್ತಾನೆ. ಬಾಸ್ ಹೇಳಿದ ಯಾವೊಂದು ಮಾತೂ ಒಳಗೆ ಇಳಿಯುತ್ತಿಲ್ಲ. ಅಲ್ಲೇ ಕೂರುವ ಹಾಗೂ ಇಲ್ಲ, ಎದ್ದು ಹೋಗುವ ಹಾಗೂ ಇಲ್ಲ. ಎಂದೂ ಇಲ್ಲದ ಹೊಸ ಸಮಸ್ಯೆಯೊಂದು ಆತನನ್ನು ಹೈರಾಣು ಮಾಡುತ್ತೆ. ಮೀಟಿಂಗ್‌ನಲ್ಲಿ ಈತನ ಒದ್ದಾಟ ಬಾಸ್ ಗಮನಕ್ಕೂ ಬರುತ್ತೆ. ಅವರು ಈತನಿಗೆ ಏಕಾಗ್ರತೆಯ ಕೊರತೆ ಅಂತ ಭಾವಿಸ್ತಾರೆ. ಸೀನಿಯರ್ಸ್ ಸಹ ಸಿಕ್ಕಿದ್ದೇ ಚಾನ್ಸ್ ಅಂತ ಗಂಟೆಗಟ್ಟಲೆ ಶಿಸ್ತಿನ ಬಗ್ಗೆ ಪಾಠ ಮಾಡ್ತಾರೆ. ಆದರೆ ಆ ಯುವಕನಿಗೆ ಆಗಿದ್ದೇ ಬೇರೆ.
ಶಿಶ್ನದ ನಿಮಿರುವಿಕೆ (Eractile) ಎಷ್ಟೋ ಜನರಿಗೆ ಸೀಕ್ರೇಟಾಗಿ ಟಾರ್ಚರ್ ಕೊಡೋ ಸಂಗತಿ. ಎಷ್ಟೋ ಜನರಿಗೆ ಶಿಶ್ನ ನಿಮಿರದೇ ಸಮಸ್ಯೆ ಆದರೆ, ಮತ್ತೊಂದಿಷ್ಟು ಜನರಿಗೆ ಹೊತ್ತಲ್ಲದ ಹೊತ್ತಲ್ಲಿ ಶಿಶ್ನ ನಿಮಿರುವಿಕೆಯಿಂದ ಏನೇನೋ ಸಮಸ್ಯೆಗಳಾಗುತ್ತವೆ. ಎಲ್ಲಿ ಹೆಣ್ಣು ಮಕ್ಕಳ ಕಣ್ಣಿಗೆ ಬೀಳ್ತೀವೋ ಅಂತ ಬಹಳ ಮುಜುಗರ ಪಟ್ಟುಕೊಳ್ಳಬೇಕಾದ ಸನ್ನಿವೇಶ. ಇದಕ್ಕೆ ಕಾರಣ ಏನು ಅಂದರೆ ಸರಿಯಾದ ರೀಸನ್ ಆ ಕ್ಷಣ ಗೊತ್ತಾಗೋದಿಲ್ಲ. ಕೆಲವೊಮ್ಮೆ ಅನಿರೀಕ್ಷಿತವಾಗಿ ಅಥವಾ ಇದ್ದಕ್ಕಿದ್ದಂತೆ ನಿಮಿರುವಿಕೆ ಉಂಟಾಗಬಹುದು. ಇದಕ್ಕೆ ಕಾರಣ ಏನು ಎನ್ನುವುದು ತಿಳಿಯುವುದಿಲ್ಲ. ಅಲ್ಲದೆ ಇದರ ಬಗ್ಗೆ ತಜ್ಞರಿಂದ ಸಲಹೆ ಪಡೆಯಲು ಮುಜುಗರ. ಹುಡುಗರು ಒಂದು ವಯಸ್ಸಿಗೆ ಬಂದ ಮೇಲೆ ಈ ನಿಮಿರುವಿಕೆ ಸಾಮಾನ್ಯ. ಕಾಲೇಜು, ಕೆಲಸ ಎಲ್ಲೋ ಇರುವಾಗ ಈ ರೀತಿ ಆಗುವುದರಿಂದ ಹಿಂಸೆಯಾಗಬಹುದು. ಇದನ್ನು ನಿಯಂತ್ರಿಸುವುದು ಹೇಗೆ, ಹೋಗಲಾಡಿಸುವುದು ಹೇಗೆ ಎಂದು ತಲೆ ಕೆಡುತ್ತದೆ. ನಿಮಿರುವಿಕೆ ನೈಸರ್ಗಿಕವಾದರೂ, ಕಾಲಾ ನಂತರದಲ್ಲಿ ಇದು ಸರಿಯಾಗುತ್ತದೆಯಾದರೂ ಈ ವಿಚಾರದಲ್ಲಿ ಗೌಪ್ಯತೆ ಸಾಧಿಸಲು ಸಾಧ್ಯವಾಗದೇ ಇದ್ದಾಗ ಇದನ್ನು ನಿಯಂತ್ರಿಸಲು ಅಥವಾ ನಿಲ್ಲಿಸಲು ಮಾರ್ಗಗಳನ್ನು ಹುಡುಕುವುದು ಸಹಜ.
ಪಿರಿಯಡ್ಸ್ ಆಗೋ ಮುನ್ನ ನಿಮಗೂ ಕಾಮಾಸಕ್ತಿ ಹೆಚ್ಚಾಗುತ್ತಾ? ಯಾಕೀಗಾಗುತ್ತೆ?
ಹೊತ್ತಲ್ಲದ ಹೊತ್ತಲ್ಲಿ ನಿಮಿರುವಿಕೆ ಕಾಣಿಸಿಕೊಂಡರೆ ಗಮನವನ್ನು ಬೇರೆಡೆಗೆ ಸೆಳೆಯಿರಿ. ವಾಕಿಂಗ್ (Walking) ಮಾಡುವುದು, ಸ್ನಾಯುಗಳ ಚಲನೆ, ಧ್ಯಾನ (Meditation) ಮಾಡುವುದು, ಮೂತ್ರ ವಿಸರ್ಜನೆ (Passing Urine) ಇತ್ಯಾದಿಗಳ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು. ಮೀಟಿಂಗಲ್ಲೋ, ಪಬ್ಲಿಕ್ ಪ್ಲೇಸ್‌ನಲ್ಲೋ ಇದ್ದಾಗ ಫೈಲ್, ಜಾಕೆಟ್ (Jocket) , ಸ್ವೆಟ್‌ಶರ್ಟ್ ಮುಚ್ಚಿಕೊಳ್ಳುವ ಮೂಲಕ ಮರೆ ಮಾಡಬಹುದು. ಕೈಗಳನ್ನು ಜೇಬಿನಲ್ಲಿ ಇರಿಸುವ ಮೂಲಕ ನಿಮಿರುವಿಕೆ ತೋರದಂತೆ ಮಾಡಬಹುದು.
ಮಾತಿನಲ್ಲಿ ತೊಡಗುವುದು, ಟಿವಿ ಮೊಬೈಲ್ ನತ್ತ ಗಮನಹರಿಸುವುದು ಇತ್ಯಾದಿ ಬೇರೆ ವಿಚಾರಗಳತ್ತ ಗಮನ ಹರಿಸುವುದು ಉತ್ತಮ.
ಸ್ನಾಯುಗಳ ಚಲನೆ ಅಥವಾ ವಾಕಿಂಗ್ ಮಾಡಬಹುದು. ಏನಾದರೂ ಒಂದು ಕಾರಣ ಹೇಳಿ ಕೆಲ ಹೊತ್ತು ಹೊರಗಡೆ ಓಡಾಡಬಹುದು. ಇಂಥಾ ಓಡಾಟ ಆರಂಭಿಸಿದಾಗ ರಕ್ತವು ದೇಹದ ಇತರ ಭಾಗಗಳಿಗೆ ಹರಿಯುತ್ತದೆ ಮತ್ತು ನಿಮಿರುವಿಕೆ ನಿಯಂತ್ರಣವಾಗುತ್ತದೆ. ಒಂದು ವೇಳೆ ವಾಕಿಂಗ್ ಸಾಧ್ಯವಿಲ್ಲ ಎಂದರೆ ಕುಳಿತಲ್ಲೇ ಮಾಡುವ ಲಘು ವ್ಯಾಯಾಮಗಳತ್ತ ಗಮನ ಹರಿಸಿ.
ಟಾಯ್ಲೆಟ್‌ಗೆ ತೆರಳಿ ಮೂತ್ರ ವಿಸರ್ಜಿಸಿ. ಮೂತ್ರ ವಿಸರ್ಜಿಸುವುದರಿಂದ ನಿಮಿರುವಿಕೆ ಕಡಿಮೆಯಾಗುತ್ತದೆ. ಮೂತ್ರ (urine) ವಿಸರ್ಜಿಸಲು ಸಾಧ್ಯವಾಗದೇ ಇದ್ದರೆ, ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಧ್ಯಾನ (meditation) ಹಾಗೂ ಲಘು ವ್ಯಾಯಾಮ ನಿಮಿರುವಿಕೆಯನ್ನು ಆ ಕ್ಷಣದಲ್ಲಿ ನಿಯಂತ್ರಿಸಲು ಉತ್ತಮ ವಿಧಾನ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳ ಮೇಲೆ ಗಮನ ನೀಡಿ. ಧ್ಯಾನ ಮತ್ತು ಉಸಿರಾಟವು ನಿಮ್ಮ ನರಗಳನ್ನು ಶಾಂತಗೊಳಿಸುತ್ತದೆ ಇದು ನೇರವಾಗಿ ನಿಮಿರುವಿಕೆಯನ್ನು ಸರಿಪಡಿಸುವುದಿಲ್ಲ. ಇದು ರಕ್ತದೊತ್ತಡವನ್ನು (blood pressure) ಕಡಿಮೆ ಮಾಡುತ್ತದೆ. ಆಗ ನಿಮಿರುವಿಕೆ ತಾನಾಗಿಯೇ ಕಡಿಮೆಯಾಗುತ್ತದೆ.
ಇಷ್ಟೆಲ್ಲ ಮಾಡಿಯೂ ನಿಲ್ಲದೇ ಹೋದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.