ದುಡಿಯುವವನೆಂದ ಕಾರಣಕ್ಕೆ ಗಂಡನಾದವ ಪತ್ನಿಯನ್ನು ನಿಕೃಷ್ಟವಾಗಿ ಕಂಡರೆ ಆತನ ಪಾಡು ಹೇಗಾಗುತ್ತದೆ ಎಂಬ ಬಗ್ಗೆ ಭಾಗ್ಯಲಕ್ಷ್ಮಿ ಫ್ಯಾನ್ಸ್​ ಹೇಳಿದ್ದಾರೆ ಕೇಳಿ... 

ಒಂದು ಸಂಸಾರಕ್ಕೆ ಗಂಡು ಎಷ್ಟು ಮುಖ್ಯನೋ, ಹೆಣ್ಣು ಕೂಡಾ ಅಷ್ಟೇ ಮುಖ್ಯ. ಗಂಡು ದುಡಿದು ತರುತ್ತೇನೆ ಎನ್ನುವ ದುರಹಂಕಾರ ದಿಂದ ದಬ್ಬಾಳಿಕೆ ಮಾಡಿದರೆ ಅದು ನೀಚತನ. ಓರ್ವ ಹೆಣ್ಣು ನಾನು ಮನೆಯ ಕೆಲ್ಸ ಮಾಡಲ್ಲ, ನಾನು ದುಡಿತಿನಿ. ನಿಮ್ಮ ನಿಮ್ಮ ಕೆಲ್ಸ ನೀವೇ ಮಾಡಿಕೊಳ್ಳಿ ಅಂದ್ರೆ ಅತ್ತೆ, ಮಾವ, ಮಕ್ಕಳು ಕೊನೆಗೆ ಗಂಡ ಎಲ್ಲರೂ ಆರೋಗ್ಯ ಕೆಟ್ಟು ಸಾಯಬೇಕು. ದುಡಿದ ದುಡ್ಡನ್ನೇ ಆಸ್ಪತ್ರೆಗೆ ಸುರಿಬೇಕು, ಗಂಡಿನ ಗುರುತು ದುಡಿಮೆ ಆಗಿರಬೇಕು. ತಪ್ಪು ಮುಚ್ಚಿಕೊಳ್ಳಲು ಟ್ರಂಪ್ ಕಾರ್ಡ್ ಆಗಬಾರದು...

ಇದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೊಮೋ ನೋಡಿದ ಅಪ್ಪು ಫ್ಯಾನ್ಸ್​ ಎನ್ನುವ ಕಮೆಂಟಿಗರು ನೀಡಿದ ಹೇಳಿಕೆ. ಈ ಹೇಳಿಕೆಯಲ್ಲಿ ಅದೆಷ್ಟು ಅರ್ಥ ಅಡಗಿದೆ ಅಲ್ಲವೆ? ಹೆಚ್ಚಿನವರು ದುಡಿಯುವ ಮಹಿಳೆ ಮತ್ತು ಗೃಹಿಣಿಯ ನಡುವೆ ವ್ಯತ್ಯಾಸ ಕಾಣುವುದು ಮಾಮೂಲು. ಗೃಹಿಣಿ ಎಂದ ಮಾತ್ರಕ್ಕೆ ಆಕೆ ಯಾವುದಕ್ಕೂ ಸಲ್ಲದವಳು, ದುಡಿಯುವುದಿಲ್ಲ ಎಂಬ ಹೀಯಾಳಿಕೆ ಮಾತು ಕೆಲವು ಮನೆಗಳಲ್ಲಿ ಕೇಳಿ ಬರುವುದು ಉಂಟು. ದುಡಿಯುವ ಮಹಿಳೆಯೂ ಕಚೇರಿ ಕೆಲಸದ ಜೊತೆಗೆ ಮನೆಗೆಲಸವನ್ನೂ ತೂಗಿಸಿಕೊಂಡು ಹೋದರೂ, ಇಬ್ಬರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಎಷ್ಟೋ ಮಹಿಳೆ ಚೆನ್ನಾಗಿ ಕಲಿತರೂ ಕುಟುಂಬ, ಮಕ್ಕಳ ಜವಾಬ್ದಾರಿ ಸೇರಿದಂತೆ ಯಾವ್ಯಾವುದೋ ಕಾರಣಗಳಿಂದ ಉದ್ಯೋಗವನ್ನು ತೊರೆಯಬೇಕಾಗಬಹುದು, ಇಲ್ಲವೇ ಉದ್ಯೋಗಕ್ಕೆ ಹೋಗುವ ಅವಕಾಶಗಳೇ ಸಿಗದೇ ಹೋಗಬಹುದು. ಹೀಗಿದ್ದರೂ ಕೆಲವೊಮ್ಮೆ ಆಕೆ ಮನೆಯವರಿಂದ ಕೆಲಸಕ್ಕೆ ಬಾರದವಳು ಎನ್ನುವ ಮಾತು ಕೇಳುವ ಸನ್ನಿವೇಶ ಬರುತ್ತದೆ. ಅದೇ ಕಾರಣಕ್ಕೆ ಈ ಕಮೆಂಟ್​ ತುಂಬಾ ಅರ್ಥಗರ್ಭಿತವಾಗಿ ಮೂಡಿಬಂದಿದೆ.

ಮದ್ವೆ ದಿನವೂ ಮೂವಿ ಹೆಂಡ್ತಿ ಫೋಟೋ ಹಾಕಿ ಅಭಿಮಾನಿಗಳನ್ನು ಕನ್​ಫ್ಯೂಸ್​ ಮಾಡಿದ ಪ್ರಥಮ್!

ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್​ ಈಗ ಒಂದು ಪ್ರಮುಖ ಘಟ್ಟ ತಲುಪಿದೆ. ಸೊಸೆ ಭಾಗ್ಯಳ ಮೇಲೆ ಕೈ ಮಾಡಿದ ಕಾರಣಕ್ಕೆ, ತಾಂಡವ್​ ತಾಯಿ ಕುಸುಮ ಮಗನ ಕೈಗೆ ಬರೆ ಇಟ್ಟಿದ್ದಾಳೆ. ಇದರಿಂದ ಕೋಪಗೊಂಡಿರುವ ತಾಂಡವ್​ ಮನೆಬಿಟ್ಟು ಹೋಗಿದ್ದಾರೆ. ಎಷ್ಟೆಂದರೂ ಹೆಣ್ಣು ಕ್ಷಮಯಾಧರಿತ್ರಿಯೇ ಸರಿ. ಆದ್ದರಿಂದ ತನ್ನ ಕೆನ್ನೆಗೆ ಪತಿ ಬಲವಾಗಿ ಹೊಡೆದರೂ ಪತಿ ಮನೆ ಬಿಟ್ಟು ಹೋಗಿರುವುದನ್ನು ಸಹಿಸದ ಭಾಗ್ಯ ಆತನಿಗೆ ಅನೇಕ ಸಲ ಕಾಲ್​ ಮಾಡುತ್ತಿದ್ದಾಳೆ. ಆದರೆ ಸೊಕ್ಕಿನ ಮದದಿಂದ ಹಾಗೂ ತಾಯಿ ಮಾಡಿರುವ ಅಪಮಾನದಿಂದ ರೊಚ್ಚಿಗೆದ್ದಿರುವ ತಾಂಡವ್​ ಪತ್ನಿಯ ಫೋನ್​ ಅನ್ನು ಪಿಕ್​ ಮಾಡುವುದಿಲ್ಲ. ಬದಲಿಗೆ ನಾನು ದುಡಿದು ಸಾಕುವವ. ನನಗೇ ಇಷ್ಟು ಅವಮಾನ ಮಾಡಿದ್ದಾರೆ ಎಂದು ಹೇಳುತ್ತಾನೆ. ತಾನು ಗಂಡಸು, ಮನೆಯವರನ್ನು ಸಾಕುವವ, ಹೊರಗೆ ಹೋಗಿ ದುಡಿಯುವವ ಎನ್ನುವ ಕೊಬ್ಬಿದ ಮಾತು ತಾಂಡವನದ್ದು. 

ಇದೇ ಕಾರಣಕ್ಕೆ ಹಲವಾರು ರೀತಿಯ ಕಮೆಂಟ್​ಗಳು ಬಂದಿವೆ. ತಾಂಡವ್​ಗೆ ತಕ್ಕ ಶಾಸ್ತಿಯಾಗಿದೆ ಎಂದು ಹಲವರು ಹೇಳಿದರೆ, ಇಂಥ ಮಗನನ್ನು ಹೆತ್ತ ತಾಯಿ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ. ಪ್ರತಿಯೊಬ್ಬರೂ ತಮ್ಮ ಗಂಡು ಮಕ್ಕಳಿಗೂ ಸಂಸ್ಕಾರ ಕಲಿಸಬೇಕು, ಪತ್ನಿಯನ್ನು ಕೇವಲವಾಗಿ ತಿಳಿಯುವವರಿಗೆ ಇದೇ ರೀತಿ ಶಿಕ್ಷೆ ಕೊಡಬೇಕು ಎನ್ನುತ್ತಿದ್ದಾರೆ.

ಒದ್ದೆ ಕೂದಲಲ್ಲಿ ಬಂದು ಗಂಡನಿಗೆ ಟೀ ಕುಡಿಸಿ ನೋಡಿ... ಕೌನ್​ ಬನೇಗಾ ಕರೋರ್​ಪತಿಯಲ್ಲಿ ಅಮಿತಾಭ್​ ಸಲಹೆ!

View post on Instagram