ಪ್ರಶ್ನೆ: ನನ್ನ ಗೆಳತಿ ಯಾವಾಗಲೂ ಹಸ್ತಮೈಥುನ ಮಾಡಿಕೊಳ್ಳುತ್ತಾಳೆ. ಆದರೆ ಅದರಿಂದಾಗಿ ತನ್ನ ಸ್ತನಗಳು ಗಾತ್ರದಲ್ಲಿ ಹಿಗ್ಗಿವೆ ಎಂದು ಆಕೆಗೆ ಚಿಂತೆ. ಇದೆ ಸಾಧ್ಯವೇ?

ಉತ್ತರ: ಇದು ಸಾಧ್ಯವಿಲ್ಲ. ಹಸ್ತಮೈಥುನದಿಂದ ಸ್ತನ ಹಿಗ್ಗೋದಕ್ಕೆ ಆಕೆಯ ಯೋನಿಯೇನು ಏರ್‌ ಪಂಪಾ?

ಪ್ರಶ್ನೆ: ಒಂದು ವೇಳೆ, ಇಬ್ಬರು ಪುರುಷರು ಒಬ್ಬಾಕೆ ಮಹಿಳೆಯಲ್ಲಿ ವೀರ್ಯಸ್ಖಲನ ಮಾಡಿದರೆ, ಅದರಿಂದ ಆಕೆ ಗರ್ಭಿಣಿಯಾದರೆ, ಆ ಮಗುವಿನ ತಂದೆ ಯಾರು ಅಂತ ನಿರ್ಣಯಿಸುವುದು ಹೇಗೆ?

ಉತ್ತರ: ನೀವು ಈ ಪತ್ರಿಕೆಯ ಸಂಪಾದಕರಿಗೆ ಒಂದು ಅರ್ಜಿ ಸಲ್ಲಿಸಿ, ಅವರ ಪತ್ರಿಕೆಯಲ್ಲಿ ಪಝಲ್ ಬರೆಯುವವರ ಜಾಗ ಖಾಲಿ ಇದೆಯಾ ಅಂತ!

ಇದು ಮುಂಬಯಿಯ ಡಾ. ಮಹೇಂದ್ರ ವತ್ಸ ಎಂಬ ಸೆಕ್ಸ್‌ಪರ್ಟ್ ಅರ್ಥಾತ್ ಲೈಂಗಿಕ ತಜ್ಞರು ಒಂದು ಲೈಂಗಿಕ ಸಮಸ್ಯೆಯ ಪ್ರಶ್ನೆಗೆ ಕೊಟ್ಟ ಉತ್ತರ. ಅವರ ಹೆಚ್ಚಿನ ಉತ್ತರಗಳು ಹೀಗೇ ಇರುತ್ತಿದ್ದವು. ಅವರು ಈ ದೇಶದ ಪ್ರಸಿದ್ಧ ಹಾಗೂ ಬಹು ಬೇಡಿಕೆಯ ಲೈಂಗಿಕ ತಜ್ಞರಾಗಿದ್ದರು. ಹಲವು ಪತ್ರಿಕೆಗಳಲ್ಲಿ ಅವರು ಆಸ್ಕ್ ದಿ ಸೆಕ್ಸ್‌ಪರ್ಟ್ ಕಾಲಂಗಳು ಬರುತ್ತಿದ್ದವು. ಮುಂಬಯಿ ಮಿರರ್‌ ಹಾಗೂ ಬೆಂಗಳೂರು ಮಿರರ್ ಪತ್ರಿಕೆಗಳು ಅವನ್ನು ಪ್ರಕಟಿಸುತ್ತಿದ್ದವು. ಸಾವಿರಾರು ಮಂದಿ ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಅವರಿಗೆ ಪ್ರಶ್ನೆ ಬರೆದು ಉತ್ತರ ಪಡೆಯುತ್ತಿದ್ದರು. ಅವರು ಉತ್ತರಗಳು ಮಾಹಿತಿಪೂರ್ಣವೂ ಮಜರಂಜನೀಯವೂ ಆಗಿರುತ್ತಿದ್ದವು. ಕೆಲವೊಮ್ಮೆ ವಿಸ್ತಾರವಾಗಿ, ಕೆಲವೊಮ್ಮೆ ಚುರುಕಾಗಿ ಹಾಸ್ಯದ ಧಾಟಿಯಲ್ಲಿ, ಕೆಲವೊಮ್ಮೆ ಕಟುವಾಗಿ ಆದರೆ ಹಾಸ್ಯಭರಿತವಾಗಿ ಅವರ ಉತ್ತರಗಳು ಇರುತ್ತಿದ್ದವು. ಇತ್ತೀಚಿನವರೆಗೂ ಅವರು ಕಳೆಕಳೆಯಾಗಿ ಆರೋಗ್ಯವಾಗಿ ಪೇಷೆಂಟ್‌ಗಳನ್ನೂ ಅಟೆಂಡ್ ಮಾಡುತ್ತಾ, ಪತ್ರಿಕೆಗಳಲ್ಲಿ ಕಾಲಂ ಬರೆಯುತ್ತಾ ಬದುಕಿದ್ದರು. ತಮ್ಮ ತೊಂಬತ್ತೆರಡನೇ ವಯಸ್ಸಿನಲ್ಲಿ ಅವರು ತೀರಿಕೊಂಡರು.

ಭಾರತದಂಥ ದೇಶದಲ್ಲಿ ಲೈಂಗಿಕ ಸಮಸ್ಯೆಗಳಿಗೆ ಉತ್ತರ ನೀಡುವುದು ಬಹಳ ಕಷ್ಟ. ಯಾಕೆಂದರೆ ಇಲ್ಲಿ ಸೆಕ್ಸ್ ಬಗ್ಗೆ ತಪ್ಪು ಕಲ್ಪನೆಗಳೇ ಹೆಚ್ಚು. ಹಸ್ತಮೈಥುನ ಅಪಾಯಕಾರಿಯಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದರ ಬಗ್ಗೆ ಕೊರಗುವವರು ಇದ್ದೇ ಇರುತ್ತಾರೆ. ಇಲ್ಲಿ ತಮ್ಮ ಆರೋಗ್ಯದ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವವರು, ಅದರಿಂದ ಮುಕ್ತಿ ಪಡೆಯಬಯಸುವವರು ವಿರಳ. ಹಾಗೇ ಪತ್ರಿಕೆಗಳು ಇಂಥ ಮಾಹಿತಿಪೂರ್ಣವಾದ, ಆರೋಗ್ಯಕರವಾದ ಕಾಲಂ ಪ್ರಕಟಿಸುತ್ತೇವೆ ಎಂದರೆ ಮಡಿವಂತರು ಗಲಾಟೆ ಮಾಡುತ್ತಾರೆ. ಸುವರ್ಣ ನ್ಯೂಸ್.ಕಾಮ್ ಪ್ರಕಟಿಸುತ್ತಿರುವ 'ಫೀಲ್ ಫ್ರೀ' ಕಾಲಂಗೂ ಕೆಲವು ಮಡಿವಂತರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು. ಈ ದೇಶದಲ್ಲಿ ಆರೋಗ್ಯಕರ ಲೈಂಗಿಕ ಮಾಹಿತಿ ಯಾರಿಗೂ ಬೇಕಿಲ್ಲ. ಆದರೆ ಒಳಗಿಂದೊಳಗೇ ವಿಕೃತಿಗಳನ್ನು ಹೊತ್ತುಕೊಂಡು ನರಳುತ್ತಿರುತ್ತಾರೆ. ಅತಿ ಹೆಚ್ಚು ಲೈಂಗಿಕ ಅಭದ್ರತೆ, ಕೀಳರಿಮೆ ಹೊಂದಿರುವವರೇ ಇಂಥ ಕಾಲಂಗಳಿಗೆ ಆಕ್ಷೇಪ ವ್ಯಕ್ತಪಡಿಸುವುದು ಎಂದು ಡಾ.ಮಹೇಂದ್ರ ವತ್ಸ ಹೇಳುತ್ತಿದ್ದರು.

ಅವರಿಗೆ ಬಂದ ಕೆಲವು ವಿಶಿಷ್ಟ ಪ್ರಶ್ನೆಗಳು ಹಾಗೂ ಅವರು ನೀಡಿದ ಕೆಲವು ಫನ್ನೀ ಉತ್ತರಗಳು ಇಲ್ಲಿವೆ:

#Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ? ...

ಪ್ರಶ್ನೆ: ನನಗಂತ ಹದಿನೈದು ವರ್ಷ ದೊಡ್ಡವರಾದ ನೆರೆಮನೆಯ ಮಹಿಳೆಯೊಬ್ಬರು ನನ್ನನ್ನು ಆಗಾಗ ದಿಟ್ಟಿಸಿ ನೋಡುತ್ತಿರುತ್ತಾರೆ. ಆಕೆಯ ಕಡೆಗೆ ನನಗೆ ಸೆಕ್ಸ್ ಆಕರ್ಷಣೆ ಮೂಡುತ್ತಿದೆ. ನಾನು ಮುಂದುವರಿಯಬಹುದಾ?

ಉತ್ತರ: ಕೆಲವೊಮ್ಮೆ ಸನ್ನಿವೇಶಗಳು ನೀವು ಊಹಿಸಿದಂತೆ ಇರುವುದಿಲ್ಲ. ನಿಮ್ಮ ಕಪಾಳಕ್ಕೆ ಒಂದು ಬಿದ್ದಾಗ ಪರಿಸ್ಥಿತಿಯ ಅರಿವಾಗಬಹುದು. ನಿಮ್ಮ ಸುತ್ತ ಒಂದು ಆತ್ಮನಿಯಂತ್ರಣದ ಕವಚ ಕಟ್ಟಿಕೊಳ್ಳುವುದು ಒಳ್ಳೆಯದು.

ಪ್ರಶ್ನೆ: ನಾನು ಇಪ್ಪತ್ತೆರಡು ವರ್ಷದ ಯುವಕ. ನನ್ನ ದೂರದ ಸಂಬಂಧಿ ಮಹಿಳೆಯೊಬ್ಬರಿಗೆ ನಲುವತ್ತು ವರ್ಷ. ಆಕೆಯನ್ನು ನಾನು ಭೇಟಿಯಾದಾಗ ಕೆಲವೊಮ್ಮೆ ಆಕೆ ಮಾದಕವಾದ ನಗೆ ಚೆಲ್ಲುತ್ತಾರೆ. ನಾನು ಆಕೆಯ ಕಡೆಗೆ ಲೈಂಗಿಕ ಆಕರ್ಷಣೆ ಹೊಂದಿದ್ದೇನೆ. ಇದಕ್ಕೆ ಆಕೆ ಗ್ರೀನ್ ಸಿಗ್ನಲ್ ನೀಡಿದ್ದೂ ಉಂಟು. ಮುಂದೇನು ಮಾಡಲಿ?

ಉತ್ತರ: ರೆಡ್ ಸಿಗ್ನಲ್ ಬೀಳುವವರೆಗೂ ಕಾಯಿರಿ ಮತ್ತು ಮನೆಗೆ ಹೋಗಿ.

ಪ್ರಶ್ನೆ: ನಾನು ಮತ್ತು ನನ್ನ ಗೆಳತಿ ಸೆಕ್ಸ್ ನಡೆಸಿದ್ದೇವೆ. ಅನವಶ್ಯಕ ಪ್ರಗ್ನೆನ್ಸಿ ತಡೆಗಟ್ಟಲು ಐ-ಪಿಲ್ ಖರೀದಿಸಿದ್ದೆವು. ಆದರೆ ಸನ್ನಿವೇಶದ ಗಡಿಬಿಡಿಯಲ್ಲಿ. ಅದನ್ನು ಆಕೆಯ ಬದಲು ನಾನು ನುಂಗಿಬಿಟ್ಟೆ. ಇದರಿಂದ ಸೈಡ್ ಎಫೆಕ್ಟ್ ಏನಾದರೂ ಇದೆಯಾ?

ಉತ್ತರ: ಏನಿಲ್ಲ. ಮುಂದಿನ ಸಲ ಕಾಂಡೋಮ್ ಬಳಸಿ. ಅದನ್ನೂ ನುಂಗದಂತೆ ಜಾಗರೂಕರಾಗಿರಿ.

#Feelfree: ಗೊಂಬೆ ಜೊತೆಗೇ ಮೂಡ್ ಬರುತ್ತೆ, ಹೆಂಡ್ತಿ ಬೇಡ ಅನ್ಸುತ್ತೆ! ...

ಪ್ರಶ್ನೆ: ನಾನು ಮೂವತ್ತಾರು ವರ್ಷದ ಗಂಡಸು. ನಾನು ಮೊದಲ ಬಾರಿಗೆ ಗೆಳತಿಯೊಂದಿಗೆ ಸಂಭೋಗಿಸಿದಾಗ, ಯೋನಿಯಲ್ಲಿ 220 ಬಾರಿ ಘರ್ಷಿಸಿದ್ದೆ. ಆದರೆ ಈ ಪ್ರಮಾಣ ಈಗ 180ಕ್ಕೆ ಇಳಿದಿದೆ. ನನಗೆ ಚಿಂತೆಯಾಗುತ್ತಿದೆ.

ಉತ್ತರ: ನೀವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುವುದು ಒಳ್ಳೆಯದು. ನೀವು ಅಥ್ಲೀಟ್ ಇರುವಂತೆ ಕಾಣುತ್ತದೆ. ರತಿಕೇಳಿಯನ್ನು ಆನಂದಿಸಿ, ಇಂಥ ಲೆಕ್ಕಾಚಾರ ಬಿಟ್ಟುಬಿಡಿ. ಸಂಗಾತಿಗೆ ತೃಪ್ತಿಯಾಗುತ್ತಿದೆಯೇ ಕೇಳಿ.

ಪ್ರಶ್ನೆ: ಒಬ್ಬ ಗಂಡಸು ಮತ್ತು ಒಬ್ಬ ಹೆಣ್ಣು, ಪರಸ್ಪರರ ಬಗ್ಗೆ ಚಿಂತಿಸುತ್ತಾ ಹಸ್ತಮೈಥುನ ಮಾಡಿಕೊಂಡರೆ, ಅದರಿಂದ ಆಕೆ ಪ್ರೆಗ್ನೆಂಟ್ ಆಗೋ ಚಾನ್ಸ್ ಇದೆಯಾ?

ಉತ್ತರ: ಗಂಡಸಿನ ವೀರ್ಯವನ್ನು ಹಾಗೆ ಕೊಂಡೊಯ್ದು ಸ್ತ್ರೀಯ ಯೋನಿಯಲ್ಲಿ ಹಾಕುವಂಥ ಏಂಜೆಲ್‌ಗಳು ಎಲ್ಲೂ ಇಲ್ಲ. ಇದರಿಂದ ಗರ್ಭಿಣಿಯಾಗುವುದಿಲ್ಲ.

ಪ್ರಶ್ನೆ: ನಾನು ಇಪ್ಪತ್ತಾರು ವರ್ಷಗಳ ಗಂಡಸು. ನಾಲ್ಕು ವರ್ಷಗಳ ಹಿಂದೆ ಒಬ್ಬಾಕೆ ಹೆಣ್ಣಿನೊಂದಿಗೆ ಕೂಡಿದ್ದೆ. ನಂತರ ಅವಳ ಸಂಪರ್ಕವಿಲ್ಲ. ಇತ್ತೀಚೆಗೆ ಆಕೆಯ ಭೇಟಿಯಾಗಿದೆ. ಈ ನಾಲ್ಕು ವರ್ಷದಲ್ಲಿ ಆಕೆ ಬೇರೆ ಯಾರಾದರೂ ಗಂಡಸಿನ ಸಂಪರ್ಕ ಮಾಡಿರಬಹುದಾ ಅಂತ ಪತ್ತೆ ಹಚ್ಚುವುದು ಹೇಗೆ?

ಉತ್ತರ: ಸಿಬಿಐ ಟ್ರೇನಿಂಗ್ ತಗೊಳ್ಳಿ.

#Feelfree: ನಂಗೆ ಗರ್ಲ್‌ಫ್ರೆಂಡ್ ಇಲ್ಲವಲ್ಲ, ಏನ್ ಮಾಡಲಿ? ...

ಪ್ರಶ್ನೆ: ಆಸಿಡ್‌ನ ಅಂಶ ಸೇರಿದರೆ ಪ್ರಗ್ನೆನ್ಸಿ ಅವಾಯ್ಡ್ ಆಗುತ್ತದೆ ಅಂತ ಹೇಳುವುದು ಕೇಳಿದ್ದೇನೆ. ಸೆಕ್ಸ್ ಬಳಿಕ ಗೆಳತಿಯ ಯೋನಿಗೆ ಒಂದೆರಡು ಹನಿ ಲೆಮನ್ ಜ್ಯೂಸ್ ಹಾಕಿದರೆ ಪ್ರಗ್ನೆನ್ಸಿ ತಡೆಯಬಹುದಾ?

ಉತ್ತರ: ನೀವೇನು ಭೇಲ್‌ಪುರಿ ಗಾಡಿ ಇಟ್ಕೊಂಡಿದ್ದೀರಾ? ಇಂಥ ವಿಚಿತ್ರ ಖಯಾಲಿ ಬೇಡ. ಕಾಂಡೋಮ್ ಬಳಸಿ.

ಪ್ರಶ್ನೆ: ನಾನು ಇಪ್ಪತ್ತು ವರ್ಷದ ಯುವತಿ. ಪೋರ್ನ್ ವಿಡಿಯೋ ನೋಡಿದರೆ ಗರ್ಭಿಣಿ ಆಗೋ ಚಾನ್ಸ್ ಇದೆಯಾ?

ಉತ್ತರ: ಹಾಗಾಗುವಂತಿದ್ದರೆ ಗಂಡಸರೆಲ್ಲ ಎಲ್ಲಿ ಹೋಗಬೇಕು?